Saturday, 7 November 2026 — Suryagagana
10:35 AM
ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I
ಸೂರ್ಯಗಗನ

I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I

I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಶಿವಮೊಗ್ಗ: ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ತೋಟದ ಬೆಳೆಗಳ ರಕ್ಷಣೆಗಾಗಿ ಭದ್ರಾ ಎಡ, ಬಲ ಹಾಗೂ ಗೊಂದಿ ನಾಲೆಗಳಿಗೆ…

I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I

ಶಿವಮೊಗ್ಗ: ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ತೋಟದ ಬೆಳೆಗಳ ರಕ್ಷಣೆಗಾಗಿ ಭದ್ರಾ ಎಡ, ಬಲ ಹಾಗೂ ಗೊಂದಿ ನಾಲೆಗಳಿಗೆ ತಕ್ಷಣ 10 ದಿನ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯುವುದನ್ನು ರೈತರು ತ್ಯಾಗ ಮಾಡಿದ್ದಾರೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದ ನೀರನ್ನು ಕಾಯ್ದಿರಿಸುವ ಸರ್ಕಾರದ ನಿರ್ಧಾರಕ್ಕೆ ರೈತರು ಸಹಕರಿಸಿದ್ದಾರೆ ಎಂದರು.

ಪ್ರಸ್ತುತ ಭದ್ರಾ ಜಲಾಶಯದಲ್ಲಿ 172 ಅಡಿ 7 ಇಂಚು ನೀರಿದ್ದು, 55.734 ಟಿಎಂಸಿ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್, ಕುಡಿಯುವ ನೀರಿನ ಬಳಕೆ ಹಾಗೂ ಆವಿಯಾಗುವ ಪ್ರಮಾಣವನ್ನು ಹೊರತುಪಡಿಸಿದರೆ ಸುಮಾರು 33 ಟಿಎಂಸಿ ನೀರು ಲಭ್ಯವಿದೆ. ಇದನ್ನು ಸಮರ್ಪಕವಾಗಿ ಬಳಸಿದರೆ ಎಡ, ಬಲ ಹಾಗೂ ಗೊಂದಿ ನಾಲೆಗಳಿಗೆ 110 ದಿನ ನೀರು ಹರಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯದ ಜತೆಗೆ ಈಗಾಗಲೇ ಬೆಳೆದು ನಿಂತಿರುವ ತೋಟದ ಬೆಳೆಗಳನ್ನು ಉಳಿಸುವುದು ಮುಖ್ಯವಾಗಿದೆ. ಹೀಗಾಗಿ ತಕ್ಷಣ 10 ದಿನ ನೀರು ಹರಿಸಬೇಕು. 2026-27ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ನೀರು ಹಂಚಿಕೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತ ಬೆಳೆಯಲು ಅನುಕೂಲವಾಗುವಂತೆ 100 ದಿನ ನೀರು ಹರಿಸಬೇಕು. ಇದರಿಂದ ಭತ್ತದ ಬೆಳೆಯ ಜತೆಗೆ ಜಾನುವಾರುಗಳಿಗೆ ಮೇವು ಲಭ್ಯವಾಗಲಿದೆ. ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ತಕ್ಷಣ ನೀರು ಹರಿಸದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ, ಹಿಟ್ಟೂರು ರಾಜು, ಎಂ. ಚಂದ್ರಪ್ಪ, ಪಿ. ಶೇಖರಪ್ಪ, ಎಂ. ಮಹಾದೇವಪ್ಪ, ಸಿ. ಚಂದ್ರಪ್ಪ ಇದ್ದರು.

Gara

Gara

Leave a comment

error: Content is protected !!