Monday, 23 November 2026 — Suryagagana
12:05 PM
ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಸೂರ್ಯಗಗನ

I ಆಶಾ ಕಾರ್ಯಕರ್ತೆಯರಿಗೆ  I ₹15 ಸಾವಿರ ವೇತನಕ್ಕೆ ಆಗ್ರಹಿಸಿ  I ನ.17ರಿಂದ ಅನಿರ್ದಿಷ್ಟ ಹೋರಾಟ I ತಿಪ್ಪೇಸ್ವಾಮಿ ಅಣಬೇರು I

I ಆಶಾ ಕಾರ್ಯಕರ್ತೆಯರಿಗೆ  I ₹15 ಸಾವಿರ ವೇತನಕ್ಕೆ ಆಗ್ರಹಿಸಿ  I ನ.17ರಿಂದ ಅನಿರ್ದಿಷ್ಟ ಹೋರಾಟ I ತಿಪ್ಪೇಸ್ವಾಮಿ ಅಣಬೇರು I ಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಗದಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ…

I ಆಶಾ ಕಾರ್ಯಕರ್ತೆಯರಿಗೆ  I ₹15 ಸಾವಿರ ವೇತನಕ್ಕೆ ಆಗ್ರಹಿಸಿ  I ನ.17ರಿಂದ ಅನಿರ್ದಿಷ್ಟ ಹೋರಾಟ I ತಿಪ್ಪೇಸ್ವಾಮಿ ಅಣಬೇರು I

ಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಗದಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಅಣಬೇರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ದಿನಕ್ಕೆ ಎರಡು ಗಂಟೆಗಳ ಕೆಲಸಕ್ಕಾಗಿ ನೇಮಕಗೊಂಡ ಆಶಾ ಕಾರ್ಯಕರ್ತೆಯರು ಈಗ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮತ್ತು ಶಿಶು ಮರಣ ತಡೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಮರ್ಪಕ ಗೌರವಧನ ದೊರೆಯುತ್ತಿಲ್ಲ ಎಂದರು.

2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ನಾಲ್ಕು ದಿನಗಳ ಹೋರಾಟದ ವೇಳೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆರನೇ ಗ್ಯಾರಂಟಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಆದರೆ ಈಡೇರಿಸಿಲ್ಲ. ಪ್ರಸ್ತುತ ₹5 ಸಾವಿರ ನಿಗದಿತ ಗೌರವಧನ ಹಾಗೂ ₹2 ಸಾವಿರ ಎಂಸಿಟಿಎಸ್ ಮೊತ್ತ ಸೇರಿ ಒಟ್ಟು ₹7 ಸಾವಿರ ಮಾತ್ರ ದೊರೆಯುತ್ತಿದೆ. ಉಳಿದ ಪ್ರೋತ್ಸಾಹಧನ ಪಾವತಿಯೂ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕರ ಕನಿಷ್ಠ ವೇತನ ₹19 ಸಾವಿರವಾಗಿದ್ದರೂ ಆಶಾ ಕಾರ್ಯಕರ್ತೆಯರು ₹15 ಸಾವಿರ ಗೌರವಧನಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದನ್ನಾದರೂ ಸರ್ಕಾರ ಜಾರಿಗೊಳಿಸಬೇಕು. ನಿವೃತ್ತ ಕಾರ್ಯಕರ್ತೆಯರಿಗೆ ₹5 ಲಕ್ಷ ಇಡಿಗಂಟು ನೀಡಬೇಕು. ಸುಗಮಕಾರರನ್ನು ಮರುನೇಮಕ ಮಾಡಿಕೊಳ್ಳಬೇಕು. ಆರೋಗ್ಯ ಭದ್ರತೆ ಒದಗಿಸಬೇಕು ಹಾಗೂ ಕೇಂದ್ರ ಘೋಷಿಸಿರುವ ₹1,500 ಹೆಚ್ಚುವರಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಭದ್ರಾವತಿ ತಾಲ್ಲೂಕು ಅಧ್ಯಕ್ಷೆ ಶಿಲ್ಪಕಲಾ, ಶಿವಮೊಗ್ಗ ತಾಲ್ಲೂಕು ಕಾರ್ಯದರ್ಶಿ ರೇಖಾ ಇದ್ದರು.

Gara

Gara

Leave a comment

error: Content is protected !!