I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಶಿವಮೊಗ್ಗ: ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಅಂಗವಾಗಿ ಮಂಗಳವಾರ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಪತ್ರಕರ್ತರ ತಂಡದ ನಡುವೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಶಿವಮೊಗ್ಗ ಮಾಧ್ಯಮ ತಂಡ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸ್ ತಂಡ ನಿಗದಿತ 7 ಓವರ್‌ಗಳಲ್ಲಿ 59 ರನ್ ಕಲೆ ಹಾಕಿತು. ಪತ್ರಕರ್ತರ ತಂಡದ ಪರ ವೀರೇಶ್, ವಿನಯ್ ತೇಕ್ಲೆ ಹಾಗೂ ಎಚ್.ಎಸ್.ರಾಕೇಶ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ವೀರೇಶ್ 3 ವಿಕೆಟ್ ಮತ್ತು ವಿನಯ್ ಪುರದಾಳ್ 2 ವಿಕೆಟ್ ಪಡೆದರೆ, ರಾಕೇಶ್ 1 ವಿಕೆಟ್ ಕಬಳಿಸಿ ಪೊಲೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಪೊಲೀಸ್ ತಂಡ ನೀಡಿದ 59 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಪತ್ರಕರ್ತರ ತಂಡಕ್ಕೆ ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ಗಣೇಶ್ ತಮ್ಮಡಿಹಳ್ಳಿ ಹಾಗೂ ಸತೀಶ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸತೀಶ್ 20 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರೆ, ಬಳಿಕ ಕ್ರಿಸ್‌ಗೆ ಬಂದ ಶರತ್ ಪುರದಾಳ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ವೈಯಕ್ತಿಯವಾಗಿ 20 ರನ್ ಕಲೆ ಹಾಕಿದ ಅವರು ಕೊನೆಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಇನ್ನು ಆರಂಭದಿಂದಲೂ ಜವಬ್ದಾರಿ ಆಟಕ್ಕೆ ಮೊರೆ ಹೋಗಿದ್ದ ನಾಯಕ ಗಣೇಶ್ ತಮ್ಮಡಿಹಳ್ಳಿ ಔಟ್ ಆಗದೆ ಮೂರು ಸಿಕ್ಸರ್ ಸಹಿತ 21 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪೊಲೀಸ್ ತಂಡದ ವಿರುದ್ಧ ರೋಚಕ ಹೋರಾಟ ನಡೆಸಿದ ಶಿವಮೊಗ್ಗ ಮಾಧ್ಯಮ ತಂಡ ಗೆಲುವು ದಾಖಲಿಸುವ ಮೂಲಕ ಸಂಭ್ರಮಿಸಿತು.