I ಕನ್ನಡ ಚೆನ್ನಾಗಿ ಬೆಳಗಲು ಚೆನ್ನಾಗಿ ಬಳಸಬೇಕು I ಅಪರ ಜಿಲ್ಲಾಧಿಕಾರಿ ಅಭಿಷೇಕ್ I
I ಕನ್ನಡ ಚೆನ್ನಾಗಿ ಬೆಳಗಲು ಚೆನ್ನಾಗಿ ಬಳಸಬೇಕು I ಅಪರ ಜಿಲ್ಲಾಧಿಕಾರಿ ಅಭಿಷೇಕ್ I
ಶಿವಮೊಗ್ಗ : ರಾಜ್ಯೋತ್ಸವ ಸಂಭ್ರಮ ಕಂಡು ಸಂತೋಷವಾಗುತ್ತಿದೆ. ಕನ್ನಡ ಚೆನ್ನಾಗಿ ಬೆಳೆಯಬೇಕಾದರೆ ಚೆನ್ನಾಗಿ ಬಳಸಬೇಕು. ಸಮರ್ಪಕವಾಗಿ ಎಲ್ಲಾ ಸ್ಥರಗಳಲ್ಲೂ ಕನ್ನಡ ಸಂವೃದ್ಧವಾಗಿಸುವ ಜವಾಬ್ದಾರಿ ಎಲ್ಲರದಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ. ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿಯು ೭೦ ನೆಯ ಕನ್ನಡ ರಾಜ್ಯೋತ್ಸವ, ನಾಡಗೀತೆಗೆ ನೂರರ ನೆನಪು ಕುರಿತು ನವೆಂಬರ್ ೨೪ ರಿಂದ ೩೦ ರ ವರೆಗೆ ಒಂದು ವಾರದ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮವನ್ನು ೨೪ ರ ಸಂಜೆ ಸಾಹಿತ್ಯ ಗ್ರಾಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಶಸ್ತಿ ಪುರಸ್ಕೃತರಾದ ಪ್ರೊ ರಾಜೇಂದ್ರ ಚನ್ನಿ, ಮಾಜಿ ಶಾಸಕರು, ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ, ರಂಗಕರ್ಮಿ ಡಾ. ಸಾಸ್ವೇಹಳ್ಳಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಪರ ಹೋರಾಟ ಗಾರರು ಕನ್ನಡ ನಾಡು ನುಡಿ ಸಂಬಂಧಿಸಿದ ಕನಸು ಎಲ್ಲವೂ ಈಡೇರಿಲ್ಲ. ಅವುಗಳನ್ನು ಪಡೆಯಲು ನಿರಂತರ ಜವಾಬ್ದಾರಿ, ಕರ್ತವ್ಯ ನಿರ್ವಹಿಸುವ ಸಂಕಲ್ಪ ನಮ್ಮದಾಗಬೇಕು ಎಂದು ಪ್ರೊ. ರಾಜೇಂದ್ರ ಚನ್ನಿ ಹಿತನುಡಿದರು.
ಒಂದು ಭಾಷೆ ಉಳಿದು ಬೆಳೆಯಲು ಒಂದು ತಲೆಮಾರಿನಿಂದ ಮಾತ್ರ ಆಗದು. ಅದು ನಿರಂತರ ಪ್ರಕ್ರಿಯೆಯಾಗಿದೆ. ಅಂದು ಹೋರಾಡಿದ ಹೋರಾಟದ ನೆನಪು ಮಾಹಿತಿ ಇವತ್ತಿನವರಿಗಿಲ್ಲ. ಅದನ್ನು ನೆನಪು ಮಾಡಿಕೊಡು ಅಗತ್ಯ ಎಲ್ಲಾ ಕಾಲಕ್ಕೂ ಮುಂದುವರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ ನಮ್ಮ ಮೂರು ಸಂಸ್ಥೆಗಳು ಜೊತೆಯಾಗಿ ಏಳು ತಾಲ್ಲೂಕು ಕೇಂದ್ರಗಳಲ್ಲಿ ಏಳು ದಿನಗಳ ರಾಜ್ಯೋತ್ಸವ ಸಪ್ತಾಹ ಹಮ್ಮಿಕೊಂಡಿದ್ದೇವೆ. ಹಲವು ಕಂಠಗಳು ಸೇರಿ ನಾಡಗೀತೆ, ರೈತಗೀತೆ, ಹಚ್ಚೇವು ಕನ್ನಡದ ದೀಪ ಹಾಡು, ವಿದ್ಯಾರ್ಥಿಗಳು ಜನಪದ ಹಾಡಿಗೆ ನೃತ್ಯ, ಕವಿತೆ, ಕಥೆ ಜೊತೆಯಲ್ಲಿ ಕನ್ನಡ ನಾಡು, ನುಡಿ ಕುರಿತು ಚಿಂತನೆ, ಕಸಾಪ ಮುಂದೇನು ಎನ್ನುವ ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಉದ್ಘಾಟನೆ ಆಗಿದೆ ಎಂದು ವಿವರಿಸಿದರು.
ನೇತ್ರಾವತಿ ಕಥೆಹೇಳಿ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದರು. ಕವಿಗಳಾದ ಎಂ. ನವೀನ್ ಕುಮಾರ್, ಅನುಪಮ ಕವನ ವಾಚಿಸಿದರು.ರಾಮಕೃಷ್ಣ ವಿದ್ಯಾನಿಕೇತನ, ಅನನ್ಯ ಶಿಕ್ಷಣ ಸಂಸ್ಥೆ, ಸನ್ ಸಿಟಿ ಶಿಕ್ಷಣ ಸಂಸ್ಥೆ, ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್, ಶಿವಮೊಗ್ಗ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಸಾಹಿತ್ಯ, ಜನಪದ, ಐತಿಹಾಸಿಕ ಮಹತ್ವದ ಸಮೂಹ ನೃತ್ಯ ಆಕರ್ಷಕವಾಗಿತ್ತು. ಎಂ. ಎಂ. ಸ್ವಾಮಿ ಸ್ವಾಗತಿಸಿದರು. ಡಿ. ಗಣೇಶ್ ವಂದಿಸಿದರು. ಮಹಾದೇವಿ ನಿರೂಪಿಸಿದರು. ಗಾಯಕರಾದ ಲಕ್ಷ್ಮೀ ಮಹೇಶ್, ನಳಿನಾಕ್ಷಿ, ಸುಶೀಲಾ ಷಣ್ಮುಗಂ ನೂರು ಗಾಯಕರಿಗೆ ಗಾಯನ ತರಬೇತಿ ನೀಡಿದ್ದರು.
