Monday, 23 November 2026 — Suryagagana
12:14 PM
ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಸೂರ್ಯಗಗನ

I ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ I ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಶಿವಮೊಗ್ಗ ಪೂರಕ I ಎಸ್ಪಿ ನಿಖಿಲ್ I

  I ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ I ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಶಿವಮೊಗ್ಗ ಪೂರಕ I ಎಸ್ಪಿ ನಿಖಿಲ್ I   ಶಿವಮೊಗ್ಗ: ಸುಸಜ್ಜಿತವಾದ ಸ್ಟೇಡಿಯಂ, ಮೂಲಸೌಕರ್ಯಗಳ ವಿಸ್ತರಣೆ, ರಾಷ್ಟç ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳ…

  I ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ I ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಶಿವಮೊಗ್ಗ ಪೂರಕ I ಎಸ್ಪಿ ನಿಖಿಲ್ I

 

ಶಿವಮೊಗ್ಗ: ಸುಸಜ್ಜಿತವಾದ ಸ್ಟೇಡಿಯಂ, ಮೂಲಸೌಕರ್ಯಗಳ ವಿಸ್ತರಣೆ, ರಾಷ್ಟç ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳ ಆಯೋಜನೆ, ಪ್ರತಿಭೆಗಳಿಗೆ ಪ್ರೋತ್ಸಾಹ, ಕ್ರಿಕೆಟ್ ಪ್ರೇಮಿಗಳ ಬೆಂಬದಿAದಾಗಿ ಶಿವಮೊಗ್ಗವು ಕರ್ನಾಟಕದ ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಅತ್ಯಂತ ಪೂರಕವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ, ಕ್ರಿಕೆಟ್ ಪಟು ನಿಖಿಲ್ ಬಿ. ಅಭಿಪ್ರಾಯಿಸಿದರು.

 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟಿçÃಯ ಕ್ರಿಕೆಟ್ ಪಂದ್ಯಾವಳಿಯ ‘ಸಿ’ ಗುಂಪಿನ ಪಂದ್ಯಗಳು ನ. 14ರಿಂದ ಡಿಸೆಂಬರ್ 8ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯನ್ನು ಇಂದು ಶನಿವಾರ ಬೆಳಿಗ್ಗೆ ಇಲ್ಲಿನ ನವಿಲೆಯ ಕೆಎಸ್‌ಸಿಎ ಮೈದಾನ-1ರಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಭವಿಷ್ಯದ ಕ್ರಿಕೆಟ್ ತಾರೆಗಳನ್ನು ಗುರುತಿಸಿ, ಯುವ ಆಟಗಾರರಿಗೆ ರಾಷ್ಟಿçÃಯ ಮಟ್ಟದಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಯುವ ಕ್ರಿಕೆಟಿಗರಿಗೆ ಉನ್ನತ ಮಟ್ಟದ ಕ್ರಿಕೆಟ್ ಅನುಭವ ಪಡೆಯಲು ಉತ್ತಮ ವೇದಿಕೆ ದೊರೆಯಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಬೆಂಗಳೂರಿಗೆ ಸೀಮಿತವಾಗಿದ್ದ ಕ್ರಿಕೆಟ್ ಚಟುವಟಿಕೆಗಳನ್ನು ವಲಯ ಕೇಂದ್ರಗಳಿಗೆ ವಿಸ್ತರಿಸುವ ಕೆಎಸ್‌ಸಿಎ ಯೋಜನೆಯಡಿ ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಮಲೆನಾಡು ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಕೆಎಸ್‌ಸಿಎ ವಿಶೇಷ ತರಬೇತಿ ಶಿಬಿರಗಳನ್ನು ನಡೆಸುತ್ತಿದೆಯಲ್ಲದೆ, ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಅಕಾಡೆಮಿಗಳು ಯುವ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿವೆ ಎಂದರು.

ಮಹಾರಾಜ ಟ್ರೋಫಿ ಟಿ20 ಮತ್ತು ಮಹಾರಾಣಿ ಟ್ರೋಫಿಯಂತಹ ರಾಜ್ಯಮಟ್ಟದ ಪ್ರತಿಷ್ಠಿತ ಲೀಗ್‌ಗಳಲ್ಲಿ ಶಿವಮೊಗ್ಗ ತಂಡ ಭಾಗವಹಿಸುತ್ತಿರುವುದು ಸ್ಥಳೀಯ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರೇರಣೆ ದೊರೆಯುತ್ತಿದೆ. ಪ್ರತಿಭೆ, ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಉತ್ತಮ ಪ್ರತಿಫಲ ದೊರೆಯುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜಂಟಿ ಕಾರ್ಯದರ್ಶಿ ಬಿ.ಕೆ. ರವಿ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ, ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ವಲಯ ಉಸ್ತುವಾರಿ ಆರ್.ಬಿ. ನಾಗರಾಜ್, ಗೋಪಾಲಕೃಷ್ಣ ಜಿ. (ಐಡಿಯಲ್ ಗೋಪಿ), ವಲಯ ಮಾಜಿ ಸಂಚಾಲಕ ಸದಾನಂದ್, ವಲಯದ ಮಾಜಿ ಸಂಚಾಲಕ ಸುಕುಮಾರ ಪಟೇಲ್, ಬಿಸಿಸಿಐನ ಮೇಘನ್ ಪಡ್ನೇಕರ್ ಮತ್ತಿತರರು ಉಪಸ್ಥಿತರಿದ್ದರು.

Gara

Gara

Leave a comment

error: Content is protected !!