Monday, 23 November 2026 — Suryagagana
11:13 AM
ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಸೂರ್ಯಗಗನ

I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I

I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ ಹಾಗೂ ಮೌಲ್ಯಮಾಪನ ಲೋಪ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು…

I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ ಹಾಗೂ ಮೌಲ್ಯಮಾಪನ ಲೋಪ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಖಂಡಿಸಿ ನ. 30ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆಡಳಿತಾತ್ಮಕ ಲೋಪಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದರು.

ಎನ್‌ಇಪಿ ಜಾರಿಯಾದ ನಂತರ ಅಂಕಪಟ್ಟಿ ವಿತರಣೆಯಲ್ಲಿ ಗಂಭೀರ ಗೊಂದಲ ಉಂಟಾಗಿದೆ. 2023-24ನೇ ಸಾಲಿನ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ನ ಅಂಕಪಟ್ಟಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಆನ್‌ಲೈನ್‌ನಲ್ಲಿ ಪ್ರಕಟವಾಗುವ ತಾತ್ಕಾಲಿಕ ಅಂಕಪಟ್ಟಿಯಲ್ಲಿ ಉತ್ತೀರ್ಣರೆಂದು ನಮೂದಾಗಿದ್ದರೂ, ಮೂಲ ಅಂಕಪಟ್ಟಿಯಲ್ಲಿ ಅನುತ್ತೀರ್ಣರೆಂದು ನಮೂದಿಸಿರುವ ಪ್ರಕರಣಗಳಿವೆ. ಇದರಿಂದ ಉದ್ಯೋಗ ಪಡೆದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ಆಂತರಿಕ ಅಂಕಗಳ ದಾಖಲಾತಿಯಲ್ಲಿಯೂ ಗೊಂದಲಗಳಿವೆ. ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಸಮನ್ವಯದ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎನ್‌ಇಪಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ವಿತರಿಸಿಲ್ಲ. ಹಣ ಪಾವತಿಸಿದ್ದರೂ ಪ್ರಮಾಣಪತ್ರ ನೀಡದಿರುವುದು ಖಂಡನೀಯ ಎಂದರು.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ರಾಜ್ಯಪಾಲರ ಗಮನ ಸೆಳೆಯುವವರೆಗೂ ಹೋರಾಟ ಮುಂದುವರಿಸಲಾಗುವುದು. ಸಮಸ್ಯೆಗಳನ್ನು ಸಂಗ್ರಹಿಸಲು ಯುವ ಮೋರ್ಚಾ ವತಿಯಿಂದ ಗೂಗಲ್ ಫಾರ್ಮ್ ಸಿದ್ಧಪಡಿಸಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳು ತಮ್ಮ ದೂರು ದಾಖಲಿಸಬಹುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಪ್ರಮುಖರಾದ ಚಂದ್ರಶೇಖರ್ ಎಸ್., ಮಂಜುನಾಥ್ ಎನ್., ಸಂಜಯ್, ಯಶಸ್ವಿ ಕಡ್ತುರ್, ಪ್ರವೀಣ್, ಯುವರಾಜ್ ಹಾಗೂ ವಿವೇಕ್, ಅಜಯ್ ಉಪಸ್ಥಿತರಿದ್ದರು.

Gara

Gara

Leave a comment

error: Content is protected !!