Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಂಪಾದಕೀಯ

ವಿಲ್ಸನ್ ಗಾರ್ಡನ್ ನಾಗನ ಸಿಂಡಿಕೇಟ್ಗೆ ಬೆಸ್ತು ಬಿದ್ದವರೂ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್ ವಿಲ್ಸನ್ ಗಾರ್ಡನ್ ನಾಗನ ಸಿಂಡಿಕೇಟ್ಗೆ ಬೆಸ್ತು ಬಿದ್ದವರೂ… ಪಾತಕ ಲೋಕದೊಳು ಯಾರು ಮುಖ್ಯರಲ್ಲ ಯಾರೂ ಅಮುಖ್ಯರು ಅಲ್ಲ, ಎನ್ನುವ ಮಾತು ಆಗಾಗ್ಗೆ ಎಡತಾಕುತ್ತಲೇ ಇರುತ್ತದೆ, ಸೈಲೆಂಟ್ ಸುನೀಲನೇ ಬೆಂಗಳೂರಿನ ಪಾರುಪಥ್ಯ ನಡೆಸಲು ಸಾಧ್ಯವೇ..? ಹೀಗೊಂದು ಕಲರ್ ಕಟ್ಟಿ ಕೊಟ್ಟಿದ್ದು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ವಿಲ್ಸನ್ ಗಾರ್ಡನ್ ನಾಗನ ಸಿಂಡಿಕೇಟ್ಗೆ ಬೆಸ್ತು ಬಿದ್ದವರೂ…

ಪಾತಕ ಲೋಕದೊಳು ಯಾರು ಮುಖ್ಯರಲ್ಲ ಯಾರೂ ಅಮುಖ್ಯರು ಅಲ್ಲ, ಎನ್ನುವ ಮಾತು ಆಗಾಗ್ಗೆ ಎಡತಾಕುತ್ತಲೇ ಇರುತ್ತದೆ, ಸೈಲೆಂಟ್ ಸುನೀಲನೇ ಬೆಂಗಳೂರಿನ ಪಾರುಪಥ್ಯ ನಡೆಸಲು ಸಾಧ್ಯವೇ..? ಹೀಗೊಂದು ಕಲರ್ ಕಟ್ಟಿ ಕೊಟ್ಟಿದ್ದು ಒಂದಷ್ಟು ಮಾಧ್ಯಮಗಳೇ ಹೊರತು ಬೇರಾರು ಅಲ್ಲವಾಗಿದೆ, ಹೌದು ಬೆಂಗಳೂರು ಯಾರ ಪಿತ್ರಾರ್ಜಿತವಲ್ಲ, ಅದನ್ನು ಹಿಡಿತದಲ್ಲಿಟ್ಟುಕೊಂಡು ಭೂಗತ ಜಗತ್ತಿನ ಏಕಾಧಿಪತ್ಯ ಸಾಧಿಸುವುದಕ್ಕೆ ಎನ್ನುವುದು ಈ ಹೊತ್ತಿನ ವಾಸ್ತವವಾಗಿದೆ, ಹೀಗಾಗಿ ಕಳೆದ ದಶಕಗಳ ಹಿಂದಷ್ಟೆ ಮಾಮೂಲಿ ಕೆಲಸ ಮಾಡಿಕೊಂಡು ಓಡಾಡಿಕೊಂಡು, ಇದೇ ಸೈಲೆಂಟ್ ಸುನೀಲನಿಗೆ ಸಾತ್ ಕೊಟ್ಟು ಕ್ರೈಂ ಲೋಕದಲ್ಲಿ ದಾಪುಗಾಲಿಟ್ಟಿದ್ದವನು ಇಂದು ಸುನೀಲನಿಂದ ಹೊರಗುಳಿದು ತನ್ನದೇ ಆದ ಸಿಂಡಿಕೇಟ್ ಸೃಷ್ಠಿಸಿಕೊಂಡಿರುವ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗನ ನೇಮ್ ಸದ್ದು ಮಾಡುತ್ತಿದೆ.

 

೨೦೧೭ರ ಸಾಲು ಅಂದು ಎಂದಿನಂತೆ ಯಲಹಂಕದ ಹಾದಿಯಲ್ಲಿ ಸಾಗುತ್ತಿದ್ದ ಎಪಿಎಂಸಿ ಸದಸ್ಯ ಕಡಬಗೆರೆ ಶ್ರೀನಿವಾಸನ ಮೇಲೆ ದಾಳಿ ನಡೆಸಲಾಗಿತ್ತು ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಕಂಟ್ರಿಮೇಡ್ ಗನ್‌ನಿಂದ ಗುಂಡು ಹಾರಿಸಿದ್ದರು, ಕಾರದ ಪುಡಿ ಎರಚಿದ್ದರು, ಮಚ್ಚಿನಿಂದ ಹಲ್ಲೆಯೂ ಮಾಡಿದ್ದರು ಆದರೂ ಆತ ಬದುಕುಳಿದ, ಈ ನಂತರ ನಡೆದಿದ್ದನ್ನು ಸುನೀಲನ ಕುರಿತಾಗಿ ಬರೆದಿರುವುದಲ್ಲಿ ವಿವರಿಸಿದ್ದೇನೆ, ಇದೇ ಘಟನೆಯೇ ಸೈಲೆಂಟ್‌ಗೂ ಹಾಗೂ ವಿಲ್ಸನ್ ಗಾರ್ಡನ್ ನಾಗನ ನಡುವಣದಲ್ಲಿ ಗೊತ್ತಿಲ್ಲದಂತೆ ಬಿರುಕು ಬಿಡುವುದಕ್ಕೆ ಕಾರಣವಾಗುತ್ತೇ ಎನ್ನುವ ಸಣ್ಣದೊಂದು ಸುಳಿವು ಕೂಡ ಇಬ್ಬರಿಗೂ ಇರಲಿಲ್ಲ, ಈ ಅಟ್ಯಾಕ್ ನಂತರ ಜೈಲು ಸೇರಿದ್ದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಒಂಟೆ ರೋಹಿತ ಮತ್ತಹಲವರು ಜಾಮೀನಿನ ಮೇಲೆ ಹೊರ ಬಂದವರು ಗುಂಡು ಪಾರ್ಟಿಯಲ್ಲಿ ಸೇರಿಕೊಂಡಿದ್ದರು, ಪಾರ್ಟಿಯಲ್ಲಿ ಪಾನಮತ್ತರಾಗಿದ್ದ ಶಾಂತಿನಗರದ ಲಿಂಗ ಹಾಗೂ ವಿಲ್ಸನ್ ಗಾರ್ಡನ್ ನಾಗನ ಮಧ್ಯೆ ಕಿರಿಕ್ ಶುರುವಾಗಿತ್ತು ಅದಾಗ ಇಬ್ಬರಿಗೂ ಇದೇ ಸೈಲೆಂಟ್ ಸುನೀಲ ಒಮ್ಮೆಲೆ ಮಾತಾಡಿ ಸರಿ ಮಾಡಿದ್ದಿದ್ದರೆ ಸರಿ ಹೋಗುತಿತ್ತೇನೋ..? ಆದರೆ ಈ ಕೆಲಸ ಸೈಲೆಂಟ್ ಮಾಡಲೇ ಇಲ್ಲ ಬದಲಿಗೆ ಶಾಂತಿನಗರದ ಲಿಂಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಲ್ಸನ್ ಗಾರ್ಡನ್ ನಾಗನ ಮೇಲೆ ಕಣ್ಣು ಬಿಟ್ಟಿದ್ದ ಇದು ಮತ್ತೊಂದು ಲೆವೆಲ್ಗೆ ಬದಲುಗೊಂಡಿತ್ತು, ಇದು ಮುಂದುವರೆದಂತೆ ಲಿಂಗನ ಉಪಟಳ ಹಾಗೂ ನಾಗನ ಮೇಲಿನ ಜಿದ್ದಿಗೆ ಡಿಸೈಡ್ ಮಾಡಿಕೊಂಡ ವಿಲ್ಸನ್ ಗಾರ್ಡನ್ ನಾಗ ಪ್ರತ್ಯೇಕವಾಗಿ ಇಂಡಿಪೆಂಡಿಂಟ್ ಸಿಂಡಿಕೇಟ್ ಮಾಡಿಕೊಂಡು ಸುನೀಲನಿಗೆ ಗುಡ್ ಬೈ ಹೇಳಿದ್ದ,

ಹೀಗೊಂದು ಮುನ್ಸೂಚನೆಯಿಂದಲೇ ನಾಗನ ವೇಗ, ಆತನ ಜಿಲ್ ನೋಡಿಯೇ ದೂರವಿಡಲು ಲಿಂಗನ ಜಗಳದ ಕಾರಣವೂ ಆತನಿಗೆ ಬೇಕಿತ್ತು ಆನಿಸುತ್ತೇ, ಬೇರೆಯಾದ ಮೇಲೆ ವಿಲ್ಸನ್ ಗಾರ್ಡನ್ ನಾಗ ಲಿಂಗನನ್ನು ಬಿಡಬಾರದು ಆತನನ್ನು ಮುಗಿಸಿದರೆ ಮಾತ್ರ ಫೀಲ್ಡ್‌ನಲ್ಲಿ ಖದರ್ ಉಳಿಸಿಕೊಳ್ಳಲು ಸಾಧ್ಯವೆಂದೇ ಬೆಂಗಳೂರು ಬಿಟ್ಟು ಹಾಸನ ಜಿಲ್ಲೆಯ ಹಿರೆಸಾವೆಯ ತೋಟದಲ್ಲಿ ಕಂಠಪೂರ್ತಿ ಕುಡಿದು ಪೋನಾಯಿಸಿಕೊಂಡು ಕೂತಿದ್ದವನನ್ನು ಹಾಗೆಯೇ ಪರಲೋಕಕ್ಕೆ ಕಳುಹಿಸಿ ಜೈಲುಹಕ್ಕಿಯಾಗಿದ್ದ ವಿಲ್ಸನ್ ಗಾರ್ಡನ್ ನಾಗನಿಗೆ ಫೈನಾನ್ಸ್ ಮಾಡುತ್ತಿದ್ದವನೇ ಮದನ್ ಊಹಿಸಿಕೊಂಡಿದ್ದ ಎಂದು ಸೈಲೆಂಟ್ ಗ್ಯಾಂಗ್‌ನಿಂದ ಬನಶಂಕರಿ ಬಳಿ ಲಿಂಗನ ಹತ್ಯೆಯ ಪ್ರತಿಕಾರವಾಗಿ ಮದನ್ ಹತ್ಯೆಯಾಗುತ್ತದೆ ಈ ಹತ್ಯೆಯಲ್ಲಿ ಮಹೇಶ್ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಬಬ್ಲಿ ಮುಖ್ಯಪಾತ್ರವಿತ್ತು ಎನ್ನುವುದು ವಿಲ್ಸನ್ ಗಾರ್ಡನ್ ನಾಗನಿಗೆ ವಿಷಯ ಮುಟ್ಟುತ್ತದೆ.
ಒಂದೆಡೆ ಸೈಲೆಂಟ್ ಇನ್ನೊಂದೆಡೆ ಈ ಗ್ಯಾಂಗಿನ ಮಹೇಶ್ ಮತ್ತು ಬಬ್ಲಿ ನಟೋರಿಯಸ್ ಅಟ್ಯಾಕರ್ ಹೇಗಾದ್ರೂ ಮುಗಿಸಿಯೇ ಬಿಡಬೇಕೆನ್ನುವ ಸೈಲೆಂಟ್ ಹಾಗೂ ವಿಲ್ಸನ್ ಗಾರ್ಡನ್ ಕಾಳಗದ ಸೇಡಿಗೆ ಮದನ್ ಹತ್ಯೆಯಾದ ಹದಿನೈದು ದಿನದೊಳಗೆ ಬಬ್ಲಿಯನ್ನು ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಕೊಚ್ಚಿ ಹಾಕಲಾಗುತ್ತದೆ ಇದು ಸ್ನೇಹಿತ ಮದನ್ ಕೊಲೆಗೆ ಮೊದಲ ಹೆಡೆ ಎಂದೇ ಪೊಲೀಸರು ಭಾವಿಸುತ್ತಾರೆ. ಇತ್ತಕಡೆ ನಾಗನನ್ನು ಮುಗಿಸಲು ಶಪಥ ಮಾಡಿದ್ದ ಮಹೇಶ ಜೈಲು ಸೇರಿಕೊಂಡಿದ್ದ ಅಲ್ಲಿಂದಲೇ ಗುಟುರು ಹಾಕುತ್ತಿರುವುದು ಭೂಗತ ಲೋಕದಲ್ಲಿ ಚರ್ಚೆಯಾಗ ತೊಡಗುತ್ತದೆ.

ಇದರಿಂದ ಮತ್ತಷ್ಟು ಸೇಡಿಗೆ ಬಿದ್ದವನು ಕಾದು ಕೂತಿದ್ದ ಅನಿಸುತ್ತೆ ಅದಾಗಲೇ ಆರ್‌ಟಿ ನಗರದ ಕಫಿಲ್ ಹತ್ಯೆ ನಡೆದು ಹೋಗುತ್ತದೆ ಇದರಲ್ಲೂ ಮಹೇಶನ ಕರಿನೆರಳಿದೆ ಎಂದು ಖಾತ್ರಿ ಮಾಡಿಕೊಂಡಿದ್ದಲ್ಲದೆ ತನ್ನ ಕೊಲೆಗೂ ಸಂಚು ರೂಪಿಸಿಕೊಂಡಿರುವುದು ಗೊತ್ತು ಮಾಡಿಕೊಂಡು ಜೈಲು ಬಾಗಿಲಿನಿಂದ ಹೊರಬರುವದನ್ನೇ ಎದುರು ನೋಡುತ್ತಿರುವ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗಿಗೆ ಇನ್ನೇನು ಮಹೇಶ ಜಾಮೀನಿನ ಮೇಲೆ ಹೊರ ಬರುತ್ತಿದ್ದಾನೆ ಎನ್ನುವ ಸಂಗತಿ ತಿಳಿಯುತ್ತದೆ. ಹೀಗಾಗಿ ಮಹೇಶನ ಮರ್ಡರ್‌ಗೆ ಮಹೂರ್ತ ಫಿಕ್ಸ್ ಮಾಡಿಕೊಂಡಿದ್ದ ದಿನವೂ ಎದುರಾಗುತ್ತದೆ ಅಂದು ಪರಪ್ಪನ ಅಗ್ರಹಾರ ಜೈಲಿನ ಕೂಗಳತೆ ದೂರದಲ್ಲಿರುವ ಜಂಕ್ಷನ್‌ನ ಹಂಪ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಮಹೇಶ್ ಮೇಲೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುತ್ತಾರೆ ಇದು ಭೂಗತವೇ ತಲ್ಲಣಿಸಿ ಬಿಡುತ್ತದೆ.

ಹೌದು ಸೈಲೆಂಟ್ ಸುನೀಲನಿಗೆ ಯಾಕೆ ಬೇಕಿತ್ತು ವಿಲ್ಸನ್ ಗಾರ್ಡನ್ ನಾಗನನ್ನು ದೂಡವಿಟ್ಟಿದ್ದು ಅನಿಸಿರಬೇಕು, ಆದರೆ ಇದೀಗ ಪೂರ್ವಾಲೋಕನಕ್ಕೂ ದಾರಿ ಮುಚ್ಚಿ ಹೋಗಿದೆ. ವಿಲ್ಸನ್ ಗಾರ್ಡನ್ ನಾಗ ಊಹಿಸಲಾರದಷ್ಟು ಭೂಗತ ಲೋಕದಲ್ಲಿ ಹವಾ ಸೃಷ್ಟಿ ಮಾಡಿಕೊಂಡಿದ್ದಾನೆ, ತನ್ನದೇ ಆದ ಸಿಂಡಿಕೇಟ್ ಗಟ್ಟಿ ಮಾಡಿಕೊಂಡಿದ್ದಾನೆ, ಫೀಲ್ಡ್‌ನಲ್ಲಿ ಸಾವಿರಾರು ಹುಡುಗರನ್ನು ಸೆಳೆದುಕೊಂಡಿರುವುದಲ್ಲದೆ ಅನ್ಯ ಜಿಲ್ಲೆಗಳಲ್ಲಿಯೂ ನಾಗನ ಹುಡುಗರು ಇದ್ದಾರೆ ಎನ್ನುವುದು ಪೊಲೀಸರಿಗೆ ತಿಳಿದು ಬಂದಿರುವುದರಿಂದಲೇ ಇದನ್ನು ಹೆಡೆಮುರಿ ಕಟ್ಟಲು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಫ್ಯಾನ್ ಫಾಲ್ಹೋರ್‍ಸ್ ಹೊಂದಿರುವ ವಿಲ್ಸನ್ ಗಾರ್ಡನ್ ನಾಗನ ಪೇಜ್‌ಗಳ ಮೇಲೆ ಅತೀವ ನಿಗಾವಹಿಸಿ ಎಚ್ಚರಿಕೆಯು ನೀಡಿದ್ದಾರೆ.

ಈ ಎಚ್ಚರಿಕೆಗೆ ನಾಗನ ಬೆಂಬಲಿತ ಹುಡುಗರು ಕಾಸಿನ ಕಿಮ್ಮತ್ ಹಾಕದೆ ಇರುವುದು ಇದೇ ಮೊದಲು, ಓರ್ವ ಭೂಗತ ಪಾತಕಿ ಅದರಲ್ಲೂ ೨೩ ಕೇಸುಗಳ ರೂವಾರಿ ೮ ಮರ್ಡರ್ ಕೇಸುಗಳಲ್ಲಿ ಎ-ಒನ್ ಆಗಿರುವ ವಿಲ್ಸನ್ ಗಾರ್ಡನ್ ನಾಗನ ಹಿಂದೆ ಸಾವಿರಾರು ಹುಡುಗರ ದಂಡು ಮುಗಿ ಬೀಳುತ್ತಿರುವುದು, ಇಂತಹದೊಂದು ಹವಾ ಸೃಷ್ಠಿಸಿರುವ ವಿಲ್ಸನ್ ಗಾರ್ಡನ್ ನಾಗ ರಾಜಧಾನಿ ಬೆಂಗಳೂರಿಗೆ ಹೊಸ ಹಸ್ತಾಕ್ಷರ ಹಾಕಿರುವುದು ಸೈಲೆಂಟ್ ಸುನೀಲನಿಗೆ ನುಂಗಲಾರದ ತುತ್ತಾಗಿದ್ದರು ಆದ ಬದಲಾವಣೆಯ ಗಾಳಿಯಲ್ಲಿ ಎಲ್ಲವೂ ಬಿಟ್ಟು ರಾಜಕೀಯ ಮಾಡಲೊರಟಿದ್ದಾನೋ..? ಅಥವಾ ಒಳಗೊಳಗೆ ವಿಲ್ಸನ್ ಗಾರ್ಡನ್ ನಾಗನ ಮೇಲೆ ಹಗೆ ಸಾಧಿಸಿ ಮತ್ತೊಂದು ಎಡವಟ್ಟು ಮಾಡಿಕೊಳ್ಳುತ್ತಾನೋ ಗೊತ್ತಿಲ್ಲ..? ಸಧ್ಯಕ್ಕೆ ಭೂದಿ ಮುಚ್ಚಿದ ಕೆಂಡದಂತಿರುವ ಇವರಿಬ್ಬರ ನಡುವಣದ ಸೇಡು ಯಾರ ಹಂತ್ಯದಲ್ಲಿ ಮುಗಿಯುತ್ತದೋ ಅಥವಾ ಕೈ ಮಿಲಾಯಿಸಿಕೊಂಡು ರಾಜಕೀಯಕ್ಕೆ ಇಳಿಯುತ್ತಾರೋ ಎಲ್ಲವೂ ಪ್ರಶ್ನಾರ್ಥಕವಾಗಿದೆ, ಏಕೆಂದರೆ ಸುನೀಲ ಹೀಗಾಗಲೇ ಬಿಜೆಪಿಯ ಹೊಸ್ತಿಲಲ್ಲಿರುವುದು ಬಹಿರಂಗವಾಗಿತ್ತು ಹಾಗೆಯೇ ವಿಲ್ಸನ್ ಗಾರ್ಡನ್ ನಾಗ ಸಚಿವ ಸೋಮಣ್ಣನವರ ಕಛೇರಿಗೆ ಬೇಟಿ ನೀಡಿ ಪೊಲಿಟಿಕಲ್ ಹೆಜ್ಜೆಯ ಸುಳಿವು ನೀಡಿದ್ದ, ಇದೀಗ ಆತ ಜೈಲಿನಲ್ಲಿರುವುದರಿಂದ ಈ ಸುಳಿವು ಹಾಗೆಯೇ ತಟಸ್ಥವಾಗಿದೆ,

ಇನ್ನೂ ಜೈಲಿನಲ್ಲಿಯೂ ನಟ ದರ್ಶನ್ ಜೊತೆಗೆ ಕೈ-ಮಿಲಾಯಿಸಿ ಮಾತಾಡಿರುವುದು ಕೂಡ ಹೊಸತೊಂದು ಅಲೆ ರಾಜ್ಯದಲ್ಲಿ ಬುಗಿಲೆದ್ದಿದೆ, ಸೈಲೆಂಟ್ ಸುನೀಲನ ಮೇಲೆ ಹೇಗೆ ಕೇಸುಗಳಿವಿಯೋ.. ಹಾಗೆಯೇ ವಿಲ್ಸನ್ ಗಾರ್ಡನ್ ನಾಗನ ಮೇಲಿದೆ, ರಾಜಕೀಯ ಬಯಸಿ ಮುಖ್ಯವಾಹಿನಿಗೆ ಇಬ್ಬರು ಬಂದರೂ ಅದನ್ನು ಆಸ್ವಾದಿಸುವ ಮನಸು ಪೊಲೀಸ್ ಇಲಾಖೆಗಿರಲಿ, ಏಕೆಂದರೆ ಪರಸ್ಪರ ಒಡೆದಾಟ, ಸೇಡು ಕೊಲೆಗಳಿಂದ ಏನು ಮಾಡಲಾಗದು, ನಟ ದರ್ಶನ್ ತೂಗುದೀಪರವರು ನಾಗನನ್ನು ಮಾತಾಡಿಸಿದ್ದು ತಪ್ಪು ಎನ್ನುವುದು ಸಂವಿಧಾನವೂ ಹೇಳುವುದಿಲ್ಲ, ಇದನ್ನೆ ತಪ್ಪು ಆತನ ಮೇಲೆ ಕೇಸುಗಳಿವೆ ಎಂದು ಬೊಬ್ಬಿಡುತ್ತಾ ಮಾತಾಡಿಸಿದ್ದೇ ತಪ್ಪು ಎನ್ನುವಂತೆ ಬಿತ್ತರಗೊಳಿಸಿ ಬೆತ್ತಲಾಗಿದ್ದು ಕೂಡ ಸಾರ್ವಜನಿಕವಾಗಿದೆ.

ಒಟ್ಟಿನಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ವಿಲ್ಸನ್ ಗಾರ್ಡನ್ ನಾಗನ ಹೆಸರು ನಾಗರಹಾವು ಸಿನಿಮಾದ ಟೈಟಲ್ ಹಾಡಿನಂತಿದೆ, ನಾಗ ಬದಲಾಗಿ ಮುಖ್ಯವಾಹಿನಿಗೆ ಮರಳಿ ರಾಜಕೀಯ ಗದ್ದುಗೆ ಹಿಡಿಯುವುದು ನಿಶ್ಚಿತವಾದರೆ ಈ ನಿಲುವುನ್ನು ಸೂರ್ಯಗಗನ – ಇತ್ಯಾದಿ ಪತ್ರಿಕೆ ಸ್ವಾಗತಿಸುತ್ತದೆ.

Gara Srinivas

Gara Srinivas

Leave a comment

error: Content is protected !!