Saturday, August 1, 2026
HomeಸಂಪಾದಕೀಯI ಗಾರಾ ಎನ್ನುವ I ಎದೆ ಬೆವರಿನ ಹಾದಿಗಳೂ...I

I ಗಾರಾ ಎನ್ನುವ I ಎದೆ ಬೆವರಿನ ಹಾದಿಗಳೂ…I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗಾರಾ ಎನ್ನುವ I ಎದೆ ಬೆವರಿನ ಹಾದಿಗಳೂ…I

“ಮನೆಯೇ ಮೊದಲ ಪಾಠಶಾಲೆ,” ತಂದೆಯೇ ಮೊದಲ ಗುರು, ತಾಯಿಯೇ ಮೊದಲ ಜಗತ್ತು, ಹೀಗೆ ಅರಿವಿಗೆ ಬರುವ ಹೊತ್ತಿಗೆ ಹೆತ್ತವರು ಮಗುವಾಗಿದ್ದರು ಅವರ ಪ್ರತಿ ಮಾತು, ಕಾಳಜಿ, ತೋರಿಸುತ್ತಿದ್ದ ಪ್ರೀತಿಗೆ ಪ್ರತಿಯಾಗಿ ಭಾವದಿ ಅವರುಗಳ ಪಾದಗಳನ್ನೊಮ್ಮೆ ಹಣೆಗೆ ಮುಟ್ಟಿಸಿ ನಮಸ್ಕರಿಸಿ ಎದೆಕಣ್ಣೀರನ್ನು ತುಂಬಿಸಿಕೊಳ್ಳುವ ಅದೆಷ್ಟೋ ಭಾರಿ ಅವಕಾಶಗಳು ಬರುತ್ತಿತ್ತು, ಹೀಗೊಮ್ಮೆ ಸಂಸ್ಕಾರಗಳ ಉಣಬಡಿಸಿ ತನ್ನ ಬದುಕಿನ ಶ್ರೇಷ್ಟ ಬೆವರನಿಗಳ ಕಾಯಕ- ಜೀವಕ್ಕೆ ವಿದಾಯ ಹೇಳಿದ ಗಾಜನೂರು ರಾಮಚಂದ್ರಪ್ಪ ನಮ್ಮ‌ ಕುಟುಂಬಕ್ಕೆ ಶಾಸನವಾಗಿದ್ದಾರೆ,

ಹೀಗೊಂದು ಬರಹದ ವಿಸ್ತೃತವಾದ ಸಂಗತಿಯನ್ನು ಉಲ್ಲೇಖಿಸಿ ಪತ್ರಿಕಾ ದಿನಾಚರಣೆಯ ಈ ಹೊತ್ತಿಗೆ ಹೆತ್ತವರ ನೆನೆವು, ಅವರು ಈ ಹಾದಿಯಲ್ಲಿ ಸೂಕ್ಷ್ಮವಾಗಿ ನಡೆದು ಸಾಗು, ನಂಬಿದ ದೇವರು ನಿನಗೆ ಒಳಿತು ಮಾಡುತ್ತಾನೆ ಎನ್ನುವ ಆತ್ಮ ನಂಬಿಕೆಯ ಬುತ್ತಿ ಕಟ್ಟಿ ಕೊಟ್ಟಿದ್ದ ಬೆವರಿನ ದನಿಗಳು ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಕ್ಲಿಷ್ಟಕರ ಸಂದರ್ಭಗಳು ಎದುರಾದಾಗಲೆಲ್ಲಾ ಅವರ ನಂಬುಗೆಯ ಬುತ್ತಿ, ದರ್ಶಿಸಿಕೊಳ್ಳುತ್ತೇನೆ, ಅದಾಗ ಅದು ಇನ್ನೂ ಹಸಿಯಾಗಿಯೇ ಇದೆ, ಎನ್ನುವ ಭಾವ ಸುಳಿಯುತ್ತದೆ, ಬಹುಷ್ಯಃ ಈ ಭಾವವೇ ಪತ್ರಿಕಾ ಜಗದ ಜಗಲಿಯಲ್ಲಿ 21 ವರ್ಷದ ಪಥದತ್ತ ಮುಂದಾಗಿದ್ದೇನೆ, ಇದಕ್ಕೆ ಸಂತಸವಿದೆ, ಹಾಗೆಯೇ ಸಹೋದ್ಯೋಗಿಗಳು ಜೊತೆಯಾಗಿ, ಯಾವುದೇ ಕುಹಕ, ಕುತ್ಸಿತ ವಿಕೃತವಿಲ್ಲದೆ, ನಿರುಮ್ಮಳವಾಗಿ ನಿಂತವರ ಪಡೆಗೆ ಈ ಸಂದರ್ಭದಲ್ಲಿ ಕೃತಜ್ಞೆತಗಳ ತಿಳಿಸುವೆ,

ಈ ಟಿಪ್ಪಣಿಯೊಂದಿಗೆ, ಪತ್ರಿಕಾ ಮಿತ್ರರೆಲ್ಲರಿಗೂ ಶುಭಾಶಯ ತಿಳಿಸುತ್ತಾ, ಒಂದಷ್ಟು ನನ್ನ ಜೀವನದ ಮಜಲುಗಳನ್ನು ತಿಳಿಸಲಿಚ್ಚಿಸುವೆ, ನೋಡಿ ಗಾರಾ (ಗಾಜನೂರು ರಾಮಚಂದ್ರಪ್ಪ) ಎನ್ನುವ ಹೆಸರು ನಮ್ಮಗಳ ಹೆಸರಿನ ಮುಂದೆ ಸೇರಿದೆ, ಮಕ್ಕಳ ಹೆಸರಿನಲ್ಲೂ Family Sir Name ಆಗಿ ಸೇರಿಕೊಂಡಿದೆ* ಇದು ಗಾರಾ.ಹೆಸರಿನ ಹಿಂದಿರುವ ತ್ಯಾಗದ ಪ್ರತೀಕವಾಗಿದೆ ಎಂದು ಇಲ್ಲಿ ಉವಾಚಿಸುವೆ.

*ಇಂತಹದೊಂದು ಸಮಗ್ರತೆಯಲ್ಲಿ ಒಂದಿಷ್ಟು ಹೇಳಿಕೊಳ್ಳೋಣ ಎಂದು ಬರೆಯುತ್ತಿದ್ದೇನೆ” ಎಂದು ಉವಾಚಿಸಿ ಈ ಲೇಖನದ ಮೂಲಕ್ಕೆ ಬರುತ್ತೇನೆ,
ಗಾಜನೂರಿನಿಂದ ನಮ್ಮ ತಂದೆಯ ಒಟ್ಟು ಕುಟುಂಬ ಬಂದಿದ್ದು ಶಿವಮೊಗ್ಗ ನಗರದ ಮಾರ್ನಾಮಿಬೈಲಿಗೆ, ಅಲ್ಲಿ ಕರಿಹೆಂಚಿನ ದಪ್ಪದಾದ ನೆರಿಕೆಗೋಡೆಯ ಮನೆ, ಅಗಾಗ್ಗೆ ಉದುರಿ ಹೋಗುತ್ತಿದ್ದ ಕೆಳಗೋಡೆಯ ಚಕ್ಕಳ ಮೆತ್ತಿ ಒಣಗಿದ ಮ್ಯಾಲೆ ಅಲ್ಲೆ ಬಳಿ ಇದ್ದ ಸುಣ್ಣಗಾರ ಸಂಗಣ್ಣನವರಿಂದ ಸುಣ್ಣ ತಂದು ಅದನ್ನು ನೆನೆಸಿ ನೀರು ಮಾಡಿ ಕುಚ್ಚುಮೊಟ್ಟೆಯಿಂದ ಬಳಿದು ಬೆಳ್ಳಗಾಯಿಸುತ್ತಿದ್ರು ನಮ್ಮಪ್ಪ,

ಹೀಗೆ ಸಗಣಿ ಸಾರಿಸಿದ ನಡುಮನೆಯ ಮಧ್ಯೆ ಅಡ್ಡಗೋಡೆ ಇತ್ತು ಅದರ ಮ್ಯಾಲೆ *ಚಿಮುಣಿ ಬುಡ್ಡಿ ದೀಪ ಇಟ್ರೇ* ಮಂದ ಬೆಳಕು ಅತ್ತಕಡೆ, ಇತ್ತಕಡೆ ವಾಲಾಡುತ್ತಿತ್ತು ಅದರಲ್ಲೆ ನಮ್ಮವ್ವ ರತ್ನಮ್ಮ ನೀರುಒಲೆಯಲ್ಲಿ ಅಡುಗೆ ಮಾಡುತ್ತಿದ್ದರು, ನಾವು ನಾಲ್ಕು ಜನ ಮಕ್ಕಳು ಮೊದಲನೆಯವಳು ವರಮಹಾಲಕ್ಷ್ಮಿ, ಎರಡನೆಯವಳು ಸರಸ್ವತಿ, ಮೂರನೆಯವನು ನಾನು, ನಾಲ್ಕನೆಯವನು ಗಾರಾ.ನಾಗರಾಜ್,

‌ ಒಟ್ಟಾಗಿ ಬೆಳೆದ ರುಧೀರದನಿಗಳ ಬಳ್ಳಿಗಳು ನಾವು, ಎಂದಿಗೂ ಯಾವ ಕಾರಣಕ್ಕೂ ಮುನಿಸಿಕೊಂಡವರೇ ಅಲ್ಲ, ಅಂತಹದೊಂದು ಸಂಸ್ಕಾರ, ಶ್ರದ್ದೆ, ಭಕ್ತಿ ಹಾಕಿಕೊಟ್ಟಿದ್ದರು, ವಿಶೇಷವಾಗಿ ಅಡ್ಡಗೋಡೆಯ ದೀಪದ ಬೆಳಕು ನಮ್ಮೊಳಗೆ ಗಾಡಾಂಧಕಾರವನ್ನು ದೂಡುತ್ತಿತ್ತು, ಅದೆಷ್ಟೆ ನೋವುಗಳಿದ್ದರು ಹೆತ್ತವರು ಒಂದಿಷ್ಟು ತೋರಿಸಿಕೊಳ್ಳದೆ ಸುಖ- ಸಂತಸವ ಬಿತ್ತಿ ಬೆಳೆವ ಕೃಷಿಕರಾಗಿದ್ದರು,

*ಗುಂಡುಮನೆ ಒಡ್ಡಿನಬೈಲು ನಾಗಪ್ಪ ಅಡಕೆ ಮಂಡಿಯ ಹಮಾಲಿ ಕಾಯಕ* ಮಾಡಿ ಸಂಜೆಗಳಿಯುತ್ತಲೇ ನಮ್ಮಪ್ಪ ಬರುವುದನ್ನೇ ನಾವು ಸ್ಕೂಲು ಮುಗಿಸಿಕೊಂಡು ರಸ್ತೆ ಮುಂದಡಿ ಕಾಯುತ್ತಿದ್ವಿ ಏನಾದ್ರೂ ತಿಂಡಿ ಪೊಟ್ಣ ಅವರು ತರುತ್ತಿದ್ರು ಅದನ್ನು ಖುಷಿಯಾಗಿ ತಿನ್ನುವುದೇ ಆತ್ಮದ ಭಾವ ಸಂತೋಷ ದೊಡ್ಡವರಾದ ಮೇಲೆ , ಅದ್ರಲ್ಲೂ ತ್ಯಾಗಜೀವಿ ತಂದೆ ಕಣ್ಮುಚ್ಚಿದ ಮೇಲೆ ಈ ಸಂತಸ ಮರುಕಳಿಸಲೇ ಇಲ್ಲ, ಇರಲಿ ಅದೆಷ್ಟೆ ಅಯಾಸವಾಗಿದ್ದರು ಸಂಸಾರದ ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ನನ್ನಪ್ಪ ಸಂಜೆ ನಮಗೂ ತಿಂಡಿಕೊಟ್ಟು ಒಂದಿಷ್ಟು ಮಾತಾಡಿ ಮತ್ತೇ ಶುಭ್ರನಾಗಿ *ಕೋಟೆ ಹನುಮಪ್ಪ* ನ ದೇವಳಕ್ಕೆ ಹೋಗಿ ಗಂಟೆಗಟ್ಟಲೇ ಕೂತು ಆತನೊಂದಿಗೆ ಭಕ್ತಿಯ ಒಡನಾಟ ಬೆಳೆಸಿಕೊಂಡಿದ್ದರು,

ಪ್ರತಿ ಶನಿವಾರ ಅವರ ಕೈಯಲ್ಲಿ ಗೆಜ್ಜೆತಾಳ ಇರುತ್ತಿತ್ತು, ಅಲ್ಲಿನ ತಡರಾತ್ರಿಯವರೆಗಿನ ರಾಮಭಜನೆಯಲ್ಲಿ ಮುಳುಗುತ್ತಿದ್ದರು, ಒಮ್ಮೊಮ್ಮೆ ನಾನು ಅವರೊಂದಿಗೆ ಹೋಗುತ್ತಿದ್ದೆ ನಂತರ ನಾನೇ ಪ್ರತಿ ಶನಿವಾರ ಹನುಮಪ್ಪನ ದರ್ಶನ ಪಡೆದು ಬರೊಬ್ಬರಿ ಒಂದು ಲೋಟ ಅಭಿಷೇಕದ ಹಾಲು ಕುಡಿದು ಬರುತ್ತಿದ್ದೆ. ಯಾವ ಬೇದಗಳಿಲ್ಲದೆ ನನ್ನ ಪ್ರೀತಿಸುವ ಆ ಮನೆ ಇಂದಿಗೂ ನಾ ಆರಾಧಿಸುವ ಮನೆಯೇ ಆಗಿದೆ.

ಇನ್ನೂ ಅಪ್ಪ ತೋರಿಸಿದ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ, ಗಾಂಧಿ ಸೀಟು ಕೈಯಲ್ಲೊಂದು ಪಾಪ್ಕರನ್ ತಿನ್ಕೊಂಡು ಸಿನಿಮಾ ನೋಡಿದ್ದು, ಸಂಗೊಳ್ಳಿ ರಾಯಣ್ಞ, ಫೊಸ್ಟ್ ಮಾಸ್ಟರ್, ಸಂಗ್ಯಾ ಬಾಳ್ಯ, ಹೀಗೆ ಒಂದಿಷ್ಟು ನಾಟಕಗಳ ಸಾಲು ನೋಡಿ ಬರುವಾಗ ಚಡ್ಡಿ, ಹಾಕ್ಕೊಂಡು ಸೈಕಲ್ ಹಿಂಬದಿ ಸ್ಟ್ಯಾಂಡ್ ಮೇಲೆ ಚಕ್ಲಬಕ್ಲಾ, ಹಾಕ್ಕೊಂಡು ಮೆಲಕು ಹಾಕುತ್ತಲಿ ಮನೆ ಕಡೆ ಬರುವ ಹೊತ್ತಿಗೆ ಅಪ್ಪ-ಮಗನ ಮಾತು ಇದೀಗ ನೆನೆಪು ಮಾಡಿಕೊಂಡ ಮನಸು ಸಂಭ್ರಮಿಸುತ್ತದೆ

*ಯಾಕೆ ಇಷ್ಟೆಲ್ಲಾ ಹೇಳುವ ಪ್ರಮೇಯವೇನಿತ್ತು..?* ಎಂದು ಭಾಸವಾಗಬಹುದು ಓರ್ವ ಶ್ರಮಜೀವಿ ತಂದೆ, ಸಂಸ್ಕಾರಗಳ ಕಲಿಸಿದ ತಾಯಿ, ಇದ್ದೊಡೆ ಬೆಳೆವ ಮಕ್ಕಳಿಗೆ ಬದುಕಿನ ದೂರದೃಷ್ಟಿ ಆವರಿಸಿಕೊಳ್ಖುತ್ತದೆ ಎನ್ನುವುದಕ್ಕೆ ಇಲ್ಲಿ ವಿಸ್ತೃತಗೊಳಿಸಿದ್ದೇನೆ. ನಿಮಗೂ ನಿಮ್ಮ ಬದುಕಿನಲ್ಲಿ ಇಂತಹದೊಂದು ಅನ್ಯ ಅನುಭವ ಅನುಭೂತಿಯಾಗದೇ ಇರಲಾರದು ಅಂದುಕೊಳ್ಳುವೆ.

*ಅಡಕೆ ಮಂಡಿಯಲ್ಲಿ ನೂರಾರು ಮೂಟೆಗಳೊತ್ತು* ಬೆವರನಿಗಳ ಲೇಪಿಸಿಕೊಂಡು ಸೈಕಲ್ ತುಳಿದು ಬರುತ್ತಿದ್ದ ನಮ್ಮಪ್ಪನಿಗೆ ನಿತ್ಯದ ಅಯಾಸವೇ ಇರಲಿಲ್ಲ,ಇದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ, ಅವರಿಗೆ ನೋವುಗಳ ನುಂಗಿ ಪ್ರೀತಿ ತುಂಬುವುದಕ್ಕೆ ಸಮಯವಿರುತ್ತಿತ್ತು, ಸಂಸ್ಕಾರಗಳನ್ನು ಕಲಿಸುವುದಕ್ಕೆ ಸಮಯವಿರುತ್ತಿತ್ತು, ಭಕ್ತಿ, ಶ್ರದ್ದೆಗಳು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು, ಎಂದಿಗೂ ಆತ್ಮವಂಚನೆ ಮಾಡಿಕೊಂಡವರೇ ಅಲ್ಲ, ದುಡಿದ ದುಡಿಮೆಗೆ ಎದೆಯೊಡ್ಡಿದ್ದರೆ ವಿನಃ ಯಾರನ್ನು ವಂಚಿಸುವ ಧೈರ್ಯವೇ ಇರಲಿಲ್ಲ, ಅಪಮಾನಿಸುವವರನ್ನು ಕೂಡ ಕೈ ಮುಗಿದು ನಮಸ್ಕರಿಸುವ ಮನಸು ಅವರದಾಗಿತ್ತು, ಹೀಗೆ ಹೇಳುವ ಹಲವು ಸಂಗತಿಗಳನ್ನು ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಅವಲೋಕಿಸುತ್ತಲೇ ಸಾಗುವ ನನ್ನ ಬದುಕು ಕೂಡ ಯಾರನ್ನು ವ್ಯಥಾ ಟೀಕಿಸದು, ವಂಚನೆ ಮಾಡದು, *ಮೀತಿ ಮೀರಿದ ಎದುರಾಳಿಗಳ ದುರ್ವರ್ತನೆಗೆ ಪ್ರತ್ಯುತ್ತರ* ಮಾತ್ರ ಕೊಡದೇ ಇರುವ ಮನಸು ಮಾತ್ರ ನನ್ನದಲ್ಲ.

ಇನ್ನೂ ತಾಯಿ ರತ್ನಮ್ಮ ಚಂದಮಾಮನ ತೋರಿಸಿ ಅಂಗಳದ ಚಾಪೆಯಲ್ಲಿ ಮಲಗಿಸುವಾಗ *ದಿನಕ್ಕೊಂದು ಕತೆ ಕಟ್ಟಿ ಹೇಳುತ್ತಿದ್ದಳು* ಆ ಕತೆ ನಮ್ಮ ಕಣ್ಣೆದುರಿಗೆ ನಡೆಯುತ್ತಿದೆ ಎನ್ನುವಷ್ಟು ಆಳವಾಗಿರುತ್ತಿತ್ತು, ಸಂದೇಶಾತ್ಮಕವಾಗಿರುತಿತ್ತು, ಅದ್ಯಾಗೆ ಕಲ್ಪಿಸಿಕೊಳ್ಖುತ್ತಿದ್ಲು, ಆಕೆಗೆ ಓದಿಲ್ಲದಿದ್ದರೂ ಕತೆ, ಹಾಡು ಕಟ್ಟುವ ಜ್ಞಾನ ಮಾತ್ರ ಆ ಸಾಗರದ ಆಳವನ್ನು ಮೀರಿಸುವಂತಿತ್ತು, ಮುಂದೊಂದು ದಿನ *ನಾನು ಲೇಖಕನಾಗಿ, ಪತ್ರಕರ್ತನಾಗುತ್ತೇನೆ* ಎನ್ನುವ ಸುಳಿವು ಕೂಡ ಇರಲಿಲ್ಲ, ಬಹುಷ್ಯಃ ಆಕೆ ತನ್ನ ಜ್ಞಾನವನ್ನು ನನಗೆ ಧಾರೆಯರೆದಿದ್ದಾಳೆ ಎಂದು ಇದೀಗ ದೃಡವಾಗುತ್ತಿದೆ.

ನಾನೊಮ್ಮೆ ಈ ಕುರಿತು ಪಧ್ಯ ಬರೆದು ಅದರ ಶೀರ್ಷಿಕೆಗೆ *ನನ್ನವ್ವ ಲೇಖಕಿ* ಎಂದು ಕರೆದು ಬಿತ್ತರಗೊಳಿಸಿದ್ದೆ ಸಾಕಷ್ಟು ಓದುಗರು ಈ ಬಗ್ಗೆ ಮಾತಾಡಿ ಅಭಿಪ್ರಾಯಗಳು ವ್ಯಕ್ತಪಡಿಸಿದಾಗ *ನನ್ನವ್ವ* ಮತ್ತಷ್ಟು ಮೈಲಿಗಲ್ಲಾದಳು,

ಅವ್ವ ತಟ್ಟುತ್ತಿದ್ದ ಸಗಣಿ ಕುಳ್ಖು, ನಾನು ತಟ್ಟಿ ನೆರಿಕೆ ಗೋಡೆಯ ಹಿಂಬದಿ ತೂರುತ್ತಿದ್ದೆ ಅದು ಹಾಗೇ ಅಂಟಿಕೊಳ್ಳುತ್ತಿತ್ತು, *ರಂಗೋಲಿ* ಹಾಕುತ್ತಿದ್ದನ್ನು ನೋಡಿ ಅದರಂತೆ ರಂಗೋಲಿ ಹಾಕುವ ಪ್ರಯತ್ನ ಮಾಡುತ್ತಿದ್ದೆ, ಇದೀಗಲೂ *ಮಲ್ಲಿಗೆ ಹೂ* ಕಟ್ಟುವ ವೇಗವಿದೆ, ಇಂತಹದೊಂದು ಅಭ್ಯಾಸ, ಹವ್ಯಾಸಗಳ ಜತೆಗೆ ಬದುಕು ಹೆಣೆದುಕೊಟ್ಟ ನನ್ನವ್ವನ ಮಡಿಲು ಅದೆಂತಹ ನೋವುಗಳ ಘಾಸಿಯನ್ನು‌ ಇಂದಿಗೂ ವಾಸಿಮಾಡುವ ಶಮನಕಾರಿಯಾಗಿದೆ.

*ಇಂತಿವುಗಳ ನೆನವಿನೊಂದಿಗೆ ಎಲ್ಲರೊಳಂದಾಗುವ ಪ್ರಯತ್ನ, ಪ್ರಾಮಾಣಿಕತೆ, ಕಾಯಕದಲ್ಲಿ ಶ್ರದ್ದೆ, ಅಯಾಸವಿಲ್ಲದೆ ಕೆಲಸ, ಅಪಮಾನಿಸುವವರನ್ನು, ದಾಳಿ ಮಾಡಿ ಕುತಂತ್ರಿಸಿದವರನ್ಜು ಒಂದು ಹಂತದವರೆಗೆ ಅಪ್ಪುವ -ಒಪ್ಪುವ ಮನಸ್ಥಿತಿ ಮತ್ತಷ್ಟು ಗಟ್ಟಿಯಾಗಿದೆ. ಸಂಘಟಿತ ಮನೋಭಾವ ಯಾವುದೇ ಹಂತಕ್ಕೆ ಬೆಳೆದರು ತಳಸ್ಪರ್ಶಿ ಅನುಭವಗಳ ಮೆಟ್ಟಿಲ ಮೇಲೆ ನಿಂತಿದ್ದೇನೆ ಎನ್ನುವ ಅರಿವು ಶಾಶ್ವತವಾಗಿರುತ್ತದೆ, ನಂಬಿದ ಯಾವ ಸ್ನೇಹವಾಗಲಿ, ಕುಟುಂಬದ ಕೊಂಡಿಗಳಾಗಲಿ ಅದು ಲಾಭದಾಯಕವಲ್ಲದ ನಿಷ್ಕಲ್ಮಶ ಸಾಂಗತ್ಯವಾಗಿರಿಸಿಕೊಳ್ಳುತ್ತೇನೆ
*ಇದು ಮೇಲಿನ ತಲೆಬರಹದಂತೆ ಲಗತ್ತಿಸಿರುವ ಸಾಲುಗಳು* ಎನ್ನುವುದು ನನ್ನಯ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I