Sunday, August 2, 2026
HomeಸಂಪಾದಕೀಯI"ಸ್ಟಾಲಿನ್ ಅಂಕಲ್ ಗೆ ಸೋಲಿಸಿ ಸಿಳ್ಳೆ ಹೊಡೆದ I ನಟ ವಿಜಯ್ ರವರ ರಾಜಕೀಯ ಕ್ರಾಂತಿ...

I”ಸ್ಟಾಲಿನ್ ಅಂಕಲ್ ಗೆ ಸೋಲಿಸಿ ಸಿಳ್ಳೆ ಹೊಡೆದ I ನಟ ವಿಜಯ್ ರವರ ರಾಜಕೀಯ ಕ್ರಾಂತಿ ಹೆಜ್ಜೆಗಳಿಗೆ ಅಭಿನಂದನೆಗಳು.”I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I”ಸ್ಟಾಲಿನ್ ಅಂಕಲ್ ಗೆ ಸೋಲಿಸಿ ಸಿಳ್ಳೆ ಹೊಡೆದ I ನಟ ವಿಜಯ್ ರವರ ರಾಜಕೀಯ ಕ್ರಾಂತಿ ಹೆಜ್ಜೆಗಳಿಗೆ ಅಭಿನಂದನೆಗಳು.”I

ಕರ್ನಾಟಕದಲ್ಲಿ ಬ್ಯಾಲೆನ್ಸ್ ಮಾಡುವ ರಾಜಕೀಯ ನಾಯಕರುಗಳೇ ಹೆಚ್ಚು, ತೆಲುಗಿನಲಿ ಒಂದು ಮಾತಿದೆ “ಅಂದರಿಕಿ ಮಂಚಿವಾಳು ಅನಂತರಾಮುಡು” ಇಂತಹದೊಂದು ಕಾರಣಕ್ಕಾಗಿಯೇ ಈ ಹೊತ್ತಿನ ರಾಜಕೀಯ ಹಳ್ಳ‌ ಹಿಡಿದಿದೆ, ಈ ನಡುವೆ ಜಾತಿಯತೆಯ ವಿಷವರ್ತುಲದ ಆಧಾರದ ಮೇಲೆ, ಅಭ್ಯರ್ಥಿಗಳು ಇತ್ಯರ್ಥವಾಗುತ್ತಾರೆ, ಈ ಮೂಲಕ ರಾಜಕಾರಣದ ಅಖಾಡ ಸಿದ್ಧವಾಗುತ್ತದೆ, ಇದು ರಾಜ್ಯದ ಎಲ್ಲಾ ಪಕ್ಷಗಳಿಗಂಟಿದ ರೋಗವಾಗಿದೆ,

ಮುಂದಾದರು ನಟ ವಿಜಯ್ ರವರ ಶ್ರೀ ಸಾಮಾನ್ಯರ ನಾಯಕತ್ವದ ಕಟಿಬದ್ದತೆ ಅರ್ಥಮಾಡಿಕೊಳ್ಳಲಿ ಇದೊಂದು ಪಾಠ ಕೂಡ, ಯಾವುದೇ ಮುಲಾಜಿಲ್ಲದೆ ಓರ್ವ ಡ್ರೈವರ್ ಮಗನನ್ನು ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿ ಗೆಲ್ಲಿಸಿದ್ದಾರೆ, ಇದು ನಿಜವಾದ ಪ್ರಜಾಪ್ರಭುತ್ವ, ಎಲ್ಲಿ ತುಷ್ಟೀಕರಣ ತಾಂಡವವಾಡುತ್ತದೋ..?! ಸಮಾನತೆಗಳು ಇಲ್ಲದೆ ಜಾತಿಯ ವಾದಗಳು ಮೇಲುಗೈ ಸಾಧಿಸುತ್ತದೋ..?! ಅಲ್ಲಿ ರಾಜಕೀಯ ಕ್ರಾಂತಿ ಇಲ್ಲದಾಗುತ್ತದೆ ಸಮಾನತೆಯ ನ್ಯಾಯ ಕೊಲೆಯಾಗುತ್ತದೆ, ಇಂತಹ ಕೇಡು ರಾಜಕೀಯದಲ್ಲಿ ಕರ್ನಾಟಕದ ಪಕ್ಷಗಳಿವೆ, ಇದನ್ನು ಸಹಿಸಿಕೊಳ್ಳುವ, ಅರಾಧಿಸುವ ಕನ್ನಡಿಗರು ಮೊದಲು ಈ ಕೇಡು ರಾಜಕೀಯವನ್ನು ಹತ್ತಿಕ್ಕಿ ಸೋಲಿಸುವತ್ತ ಒಂದಾಗಲಿ, ಏಕತೆಯ ಪ್ರಾದೇಶಿಕತೆಯ ನ್ಯಾಯಕ್ಕಾಗಿ ದನಿಯಾಗಲಿ,

ನಟ ವಿಜಯ್ ರವರೇ ನಿಮಗೆ ಅಭಿನಂದನೆಗಳು, ನೀವು ಎಲ್ಲಾ ರಾಜಕಾರಣಿಗಳಿಗೂ, ರಾಜಕೀಯ ಪಕ್ಷಗಳಿಗೂ ಮುಜುಗರ ತರಿಸಿ, ಎಲ್ಲವನ್ನು ಮೀರಿ ಮಾದರಿಯಾಗಿ ಕ್ರಾಂತಿ ಎಬ್ಬಿಸಿ ಸಿಳ್ಳೆ ಹೊಡೆದಿದ್ದೀರಿ, ತಮಿಳುನಾಡಿನ ಅಂಕಲ್ ಸ್ಟಾಲೀನ್ ಪರ್ವಕ್ಕೆ ಸಮಾಧಿ ಕಟ್ಟಿದ್ದೀರಿ, ಜನಸಮಾನ್ಯರನ್ನು ಗೆದ್ದಿದ್ದೀರಿ..all the best.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I