ನಗರದಲ್ಲಿ I ನಗರ ಮಟ್ಟದ ದೇಶಭಕ್ತಿ ಗಾಯನ I ಕೆಇ ಕಾಂತೇಶ್
ನಗರದಲ್ಲಿ I ನಗರ ಮಟ್ಟದ ದೇಶಭಕ್ತಿ ಗಾಯನ I ಕೆಇ ಕಾಂತೇಶ್
ಶಿವಮೊಗ್ಗ : ಶ್ರೀ ಗಂಧ ಸಾಂಸ್ಕೃತಿಕ ಸಂಸ್ಥೆ ಹಾಗು ಮಂಥನ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯದ ಸಂಘರ್ಷಮಯ ಹೋರಾಟದ 50ವರ್ಷಗಳ ನೆನಪಿಗಾಗಿ ಶಿವಮೊಗ್ಗ ನಗರದ ಪದವಿಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ನಗರ ಮಟ್ಟದ ದೇಶಭಕ್ತಿ ಗೀತೆಯ ಸಮೂಹ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಬರುವ ಜುಲೈ 25ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಪ್ರಥಮ, ದ್ವೀತಿಯ ಹಾಗು ತೃತೀಯ ಶ್ರೇಣಿಯಲ್ಲಿ ನಗದು ಬಹುಮಾನಗಳನ್ನು ನೀಡಲಾಗುವುದು .
ಇದೇ ಸಂದರ್ಭದಲ್ಲಿ ತುರ್ತುಪರಿಸ್ಥಿಯ ಸಮಯದಲ್ಲಿ ಮೀಸಾ (MISA) ಕಾಯ್ದೆಯಡಿ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಿದ ಶಿವಮೊಗ್ಗ ನಗರದ ಹಿರಿಯರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು .
ದೇಶಭಕ್ತಿ ಗೀತೆಯ ಸಮೂಹ ಗಾಯನದಲ್ಲಿ ಭಾಗವಹಿಸುವ ಕಾಲೇಜು ವಿಧ್ಯಾರ್ಥಿಗಳು ಶ್ರೀ. ಉಮೇಶ್ ಆರಾಧ್ಯ (98861 77311) , ಶ್ರೀ ಹರೀಶ್ ಕಾರ್ಣಿಕ್ (94481 06690) ಅಥವಾ ಶ್ರೀ ವಿನಯ್ ಶಿವಮೊಗ್ಗ (8310876277) ಇವರನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಬಹುದು ಎಂದು ತಿಳಿಸಿದ್ದಾರೆ
ನಿಬಂಧನೆಗಳು-
1.ಒಂದು ತಂಡದಲ್ಲಿ ಕನಿಷ್ಠ 6 ಹಾಗು ಗರಿಷ್ಠ 10 ವಿದ್ಯಾರ್ಥಿಗಳಿರಬಹುದು. 2.ಒಂದು ಕಾಲೇಜಿನಿಂದ 2 ತಂಡಗಳು ಭಾಗವಹಿಸಬಹುದು. 3.ಸಿನಿಮಾ ಗೀತೆಯನ್ನು ಹಾಡುವಂತಿಲ್ಲ ಹಾಗು ಕರೋಕೆ ಬಳಸುವಂತಿಲ್ಲ . 4. ದೇಶ ಭಕ್ತಿ ಗೀತೆಯನ್ನು ಮಾತ್ರ ಹಾಡಬೇಕು . 5. ತೀರ್ಪುಗಾರರ ನಿರ್ಣಯವೇ ಅಂತಿಮ. 6. ಹೆಸರು ನೋಂದಾಯಿಸಲು 14/07/2025 ಅಂತಿಮ ದಿನಮಾಗಿರುತ್ತದೆ . 7. ಸಾಮೂಹಿಕ ದೇಶಭಕ್ತಿಗೀತೆ ಗಾಯನ ಸ್ಪರ್ಧೆ 19/07/2025ರ ಶನಿವಾರದಂದು ನಡೆಯಲಿದೆ . ಸ್ಪರ್ಧೆ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಪತ್ರಿಕಾ ಗೋಷ್ಟಿಯಲ್ಲಿ ಅವರು ವಿವರಿಸಿದ್ದಾರೆ.