Sunday, 22 November 2026 — Suryagagana
10:01 AM
ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಸೂರ್ಯಗಗನ

 ರೈಲ್ವೆ I ಟಿಕೆಟ್ ದರ ಏರಿಕೆ I ಹಿಂಪಡೆಯಲು I  ರೇಖಾ ರಂಗನಾಥ್ I ಆಗ್ರಹ

ರೈಲ್ವೆ ಟಿಕೆಟ್ ದರ ಏರಿಕೆ ಹಿಂಪಡೆಯಲು ರೇಖಾ ರಂಗನಾಥ್ ಆಗ್ರಹ ಶಿವಮೊಗ್ಗ :  ಸಾಮಾನ್ಯ ಜನರ ಸಾರಿಗೆ ಎಂದೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ…

ರೈಲ್ವೆ ಟಿಕೆಟ್ ದರ ಏರಿಕೆ ಹಿಂಪಡೆಯಲು ರೇಖಾ ರಂಗನಾಥ್ ಆಗ್ರಹ

ಶಿವಮೊಗ್ಗ :  ಸಾಮಾನ್ಯ ಜನರ ಸಾರಿಗೆ ಎಂದೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ

ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ ಎಂದು ತಿಳಿಸಿದ್ದಾರೆ

ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದು, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಯಾಣಿಕರು ಸಂಚರಿಸುವ ಈ ಸಾರಿಗೆ ವ್ಯವಸ್ಥೆ ಈಗಲೂ ಲಾಭದಾಯಕವಾಗಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಬಜೆಟ್ ಮಂಡನೆಯ ಪದ್ಧತಿಯನ್ನು ನರೇಂದ್ರ ಮೋದಿ ಸರ್ಕಾರ ಕೈಬಿಟ್ಟಿರುವ ಕಾರಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೊದಲು ಇಲಾಖೆಯ ಕಾರ್ಯ ನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ದೇಶದ ಜನತೆಯ ಮುಂದಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ

*ಕೇಂದ್ರ ಬಿಜೆಪಿ ಸರ್ಕಾರ ತತ್ತಕ್ಷಣದಲ್ಲಿ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದಲ್ಲಿ ಜನಸಾಮಾನ್ಯರು ರಸ್ತೆಗೆಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ*

Gara

Gara

Leave a comment

error: Content is protected !!