Thursday, 17 September 2026 Suryagagana — Edition

Suryagagana

My WordPress Blog

Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden Uncategorized betmica casino: meaningful distinctions versus popular player myths Uncategorized retrobet casino practical player guide Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden Uncategorized betmica casino: meaningful distinctions versus popular player myths Uncategorized retrobet casino practical player guide
ಸೂರ್ಯಗಗನ

I ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು I 5 ವರ್ಷದೊಳಗೆ 493 ಕೋಟಿ ರೂ. ಬಿಡುಗಡೆ I ಎನ್.ಚಲುವರಾಯಸ್ವಾಮಿ I

I ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು I 5 ವರ್ಷದೊಳಗೆ 493 ಕೋಟಿ ರೂ. ಬಿಡುಗಡೆ I ಎನ್.ಚಲುವರಾಯಸ್ವಾಮಿ I ಬೆಂಗಳೂರು, : ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ…

I ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು I 5 ವರ್ಷದೊಳಗೆ 493 ಕೋಟಿ ರೂ. ಬಿಡುಗಡೆ I ಎನ್.ಚಲುವರಾಯಸ್ವಾಮಿ I

ಬೆಂಗಳೂರು, : ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸುವÀ ಗುರಿ ಹೊಂದಿದ್ದು, 5 ವರ್ಷಗಳವರೆಗೆ ಇದಕ್ಕೆ ಒಟ್ಟು 493 ಕೋಟಿರೂ. ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೆಪೆಕ್ ಕೃಷಿ ಇಲಾಖೆ ಅಧೀನದಲ್ಲಿರುವ ಒಂದು ಪ್ರತಿಷ್ಠಿತ ಅಂಗ ಸಂಸ್ಥೆಯಾಗಿದ್ದು, ಕೃಷಿಕರು, ಕೃಷಿಕರ ಮಕ್ಕಳನ್ನು, ಜನ ಸಾಮಾನ್ಯರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸುವುದು ಇದರ ಗುರಿಯಾಗಿದೆ ಎಂದರು.

ಪಿ.ಎಂ.ಎಫ್.ಎಂ.ಇ. ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು ಅಸಂಘಟಿತ ವಲಯದಲ್ಲಿರುವ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪೆÇ್ರೀತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯು ವೈಯಕ್ತಿಕ ಆಹಾರ ಸಂಸ್ಕರಣಾ ಉದ್ಯಮಿಗಳು ಮತ್ತು ರೈತರ ಗುಂಪುಗಳು /ಎಫ್.ಪಿ.ಒ ಗಳಿಗೆ ಶೇ. 35 ರಷ್ಟು (60:40, ಅನುಪಾತ) ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ರಾಜ್ಯದ ಫಲಾನುಭವಿಗಳಿಗೆ ಹೆಚ್ಚು ಆಕರ್ಷಕವಾಗಿಸಲು ಕರ್ನಾಟಕ ಸರ್ಕಾರವು ಶೇ.15 ರಷ್ಟು ಹೆಚ್ಚುವರಿ ಟಾಪ್ ಅಪ್ ಸಬ್ಸಿಡಿಯನ್ನು ಒದಗಿಸಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,698 ಅರ್ಜಿಗಳಿಗೆ ಸಾಲ ಮಂಜೂರಾಗಿರುತ್ತದೆ. ಇದಕ್ಕೆ ಒಟ್ಟು ರೂ. 785.48 ಕೋಟಿಯಷ್ಟು ಬಂಡವಾಳ ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿರುತ್ತದೆ. 162.50 ಕೋಟಿ ರೂಪಾಯಿಗಳ ಸಹಾಯಧನವನ್ನು (60:40 ಅನುಪಾತದೊಂದಿಗೆ ಶೇ.35 ರಷ್ಟು) 4,489 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಮತ್ತು ಹೆಚ್ಚುವರಿ ಶೇ.15 ರಷ್ಟು ಟಾಪ್ ಅಪ್ ಸಬ್ಸಿಡಿಯನ್ನು 59.48 ರೂಪಾಯಿಗಳನ್ನು 3770 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಈ ಯೋಜನೆಯಡಿಯಲ್ಲಿ ಪ್ರಮುಖವಾಗಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರಸ್ಡ್ ಆಯಿಲ್, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕೋಳಿ ಮತ್ತು ಸಮುದ್ರ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಘಟಕಗಳ ಸ್ಥಾಪನೆಗಾಗಿ ಸಾಲವನ್ನು ಮಂಜೂರು ಮಾಡಲಾಗಿದೆ.

ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ:
ರಾಜ್ಯದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇ. 60 ರಷ್ಟು ಬಿತ್ತನೆಯಾಗಿದ್ದು, ಈವರೆಗೆ 80 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಆಗಸ್ಟ್‍ನಲ್ಲಿ ಕೆಲವು ಕಡೆ ಬಿತ್ತನೆಯಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ್, ಕೆಪೆಕ್ ಅಧ್ಯಕ್ಷರಾದ ಹರೀಶ್ ಉಪಸ್ಥಿತರಿದ್ದರು.

Gara Srinivas

Gara Srinivas

Leave a comment

error: Content is protected !!