Wednesday, September 16, 2026
HomeಅಂಕಣI ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I

I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I

I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I

ಶಿವಮೊಗ್ಗದಲ್ಲಿದೆ ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ ದೋಖಾ ಸ್ಕೀಮ್‌ಗಳೂ, ಎನ್ನುವ ಶೀರ್ಷಿಕೆಯೇ ಕೋಟ್ಯಾಂತರ ಲೆಕ್ಕದಲ್ಲಿ ನಾಗರೀಕರನ್ನು ಮುಂಡಾಯಿಸುವ ರಾತ್ರೋ ರಾತ್ರಿ ಕನ್ಸ್‌ಟ್ರಕ್ಷನ್ ಸ್ಕೀಮ್ ಕಛೇರಿಗಳು ತಲೆ ಎತ್ತಿವೆ, ಈ ನಡುವೆ ಅಪಾರ್ಟ್ಮೆಂಟ್, ಫ್ಲಾಟ್ ಹೆಸರಿನಲ್ಲಿ ಕೂಡ ಸ್ಕೀಮ್ ಸೆಂಟರ್‌ಗಳು ಓಸಿ ದಂಧೆಯಂತೆ ಪೋಸ್ಟರ್ ಆಗಿದೆ, ಈಗಾಗಲೇ ಆರ್ಶಿರಾಜ್ ಡೆವಲಪರ್‍ಸ್ ದೋಖಾ ಕಥಾನಕವು ಶಿವಮೊಗ್ಗದಂತಹ ವ್ಯಾಪ್ತಿಯಲ್ಲಿ ಅಷ್ಟೇ ಅನಾಹುತಕಾರಿ ಕೋಟಿ ಟೈಟಲ್ ಮೀರಿಸಿದೆ, ಇನ್ನೂ ರೆಡಿ ಫರ್ನಿಷಿಂಗ್ ಹೌಸ್ ನಿರ್ಮಿಸಿ ಕೊಡುತ್ತೇವೆ, ಎನ್ನುವ ರಿಯಾಯಿತಿ ಸ್ಕೀಮ್‌ಗಳ ಡಿಜಿಟಲ್ ಪ್ರಮೋಷನ್‌ಗಳು ಸೋಷಿಯಲ್ ಮೀಡಿಯಾದಲ್ಲಿ ದಾಂಗುಡಿಯಿಕ್ಕಿರುವ ಒಂದಷ್ಟು ಕನ್ಸ್‌ಟ್ರಕ್ಷನ್ ಸ್ಕೀಮ್ ಪೇಜಸ್‌ಗಳು ಬ್ರೋಕಿಂಗ್ ಮೂಲಕ, ಕಮಿಷನ್ ಏಜೆಂಟರ ಮೂಲಕ ನಾಗರೀಕರನ್ನು ಸೆಳೆಯಲಾಗುತ್ತಿದೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾ ಇಲಾಖೆ, ಗುಪ್ತದಳ ಈ ಕುರಿತಂತೆ ತನಿಖಿಸಿ ಕಡಿವಾಣ ಹಾಕದೇ ಹೋದರೆ ಲ್ಯಾಂಡ್ ಆಟೋ ಕ್ಯಾಡ್ ತ್ರೀಡಿ ಸ್ಕೀಮ್ ಹೆಸರಿನಲ್ಲಿ ಕೋಟಿ, ಕೋಟಿ ವಂಚನೆಯ ಪ್ರಕರಣ ದಾಖಲಾಗಿ ಸಂಘಟನೆಗಳು ಪ್ರತಿಭಟನೆಗಿಳಿವ ಅವಸರಗಳು ದೂರವಿಲ್ಲವಾಗಿದೆ, ಎಲ್ಲಿ ಡಿರಿಲೇಷನ್ ಡ್ಯೂಟಿಗಳೋ ಅಲ್ಲಿ ಇಂತಹ ಹೈಪ್ರೋಪೈಲ್ ದೋಖಾ ದಂಧೆಗಳು ಡೇ-ಲೈಟ್‌ನಲ್ಲಿರುತ್ತವೆ ಎನ್ನುವುದಕ್ಕೆ ಶಿವಮೊಗ್ಗದ ಈ ಹೊತ್ತಿನ ಸ್ಥಿತಿ ಸಾಮಾನ್ಯವಾಗಿದೆ,

ಇಂತಹ ಸ್ಪೇಸ್ ಜಿಲ್ಲಾಡಳಿತ ಹಾಗೂ ನಾಗರೀಕರ ನಡುವೆ ಬ್ರೇಕ್ ಆಗುವ ಎಲ್ಲಾ ಸಾಂದರ್ಭಿಕತೆಗಳು ಓಡಾಡಿಕೊಂಡು ಇರುತ್ತದೆ, ಅಚ್ಚರಿ ಎಂದರೆ ಕನ್ಸ್‌ಟ್ರಕ್ಷನ್ ಸ್ಕೀಮ್ ಕಛೇರಿಗಳ ಏಜೆಂಟರ್‌ಗಳು ಈಗಾಗಲೇ ಲ್ಯಾಪ್ ಟಾಪ್ ಹಾಗೂ ತಮಗೆ ಸಂಬಂಧವಿಲ್ಲದ ಲೇ-ಔಟ್‌ಗಳ ಸೈಟ್‌ಗಳಿಗೆ ತೆರಳಿ ಅಳತೆಯ ಟೇಪ್ ಹಿಡಿಯುತ್ತಿದೆ, ಅಲ್ಲದೆ ಆಪ್ ಕೋಟಿನಲ್ಲಿ ಹೌಸ್ ನಿರ್ಮಿಸಿ ಕೊಡುತ್ತೇವೆ ಎಂದು ಜಾಹಿರಾತುಗಳಿಟ್ಟಿದೆ, ಇನ್ನೇನು ಒಂದೆರೆಡು ತಿಂಗಳಲ್ಲಿ ಕನಿಷ್ಟ ಐವತ್ತು ಕೋಟಿಗೆ ಜನರಿಗೆ ಸ್ಕೀಮ್ ಇಟ್ಟಿರುವ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ ಮ್ಯಾಲೆ ತನಿಖಿಸುವ ಮೊದಲು ಪ್ರಾಥಮಿಕ ಹಂತದಲ್ಲಿಯೇ ಇಂತಹ ಸಂಗತಿಗಳಿಗೆ ಬೇಲಿ ಹಾಕುವ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ,

ಈ ಸಂಚಿಕೆಯಲ್ಲಿ ಮೊದಲು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, ರಿಯಲ್ ಎಸ್ಟೇಟ್ ರೆಗ್ಯೂಲೇಷನ್ ಅಂಡ್ ಡೆವಲಪ್ಮೆಂಟ್ ಕರ್ನಾಟಕ ಮಾಲೀಕತ್ವ ಫ್ಲಾಟ್‌ಗಳ ಕಾಯ್ದೆ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋದನೆ, ಭೂ ಪರಿವರ್ತನಾ ಅನುಮತಿ, ಎನ್‌ಜಿಟಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪರವಾನಿಗೆ, ಪಬ್ಲಿಕ್ ಎನ್‌ಓಸಿ, ಹಾಗೂ ಮಹಾನಗರ ಪಾಲಿಕೆಯ ಅಧಿನಿಯಮಗಳು ಉಲ್ಲಂಘನೆಗಳ ಕುರಿತಾಗಿ ಚಿತ್ತವರಿಸಬೇಕಾದ ಅತೀ ಜರೂರತ್ತಿದೆ, ಈಗಾಗಲೇ ಇದನ್ನು ಇತ್ಯಾದಿ ಪತ್ರಿಕೆ ಸಾರ್ವಜನಿಕವಾಗಿ ವೈಡನ್ ಮಾಡಿದ್ದರೂ ಜಿಲ್ಲಾಡಳಿತ ಯಾವುದೇ ಪರಿವೇ ಇಲ್ಲದೆ ಮೌನದಿ ಕಂಬಳಿ ಹೊದ್ದು ಮಲಗಿದೆ, ಹೀಗಾಗಿ ನಾಗರೀಕ ನ್ಯಾಯಕ್ಕಾಗಿ ಸೂರ್ಯಗಗನ ಡಾಟ್ ಕಾಂ ಎನ್ನುವ ಈ ವೆಬ್‌ಸೈಟ್ ಮೂಲಕವೂ ಜಾಗೃತ ಬರಹವನ್ನು ಅಭಿವ್ಯಕ್ತಿಸುತ್ತಿದ್ದೇನೆ,

ಕಟ್ಟಡ ನಿರ್ಮಾಣದ ಮೊದಲೇ ಅಪಾರ್ಟ್ಮೆಂಟ್, ಫ್ಲಾಟ್ ಹೆಸರಿನಲ್ಲಿ ಎಂ.ಎಲ್.ಎಂ ( ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಿಸ್ಟಮ್) ಎನ್ನುವ ಹೈ ಪ್ರೋಪೈಲ್ ದಂಧೆ, ಇದೊಂದು ಪಕ್ಕಾ ಕಮಿಷನ್ ಏಜೆಂಟ್‌ಗಳನ್ನು ನೇಮಿಸಿ ಪ್ಲಾಟ್ ಖರೀದಿದಾರ ಗ್ರಾಹಕರನ್ನು ಬಗೆ, ಬಗೆಯ ಪ್ಲಾನ್‌ಗಳನ್ನು, ಸ್ಕೀಮ್‌ಗಳನ್ನು ಲೆಕ್ಚರಿಂಗ್ ಮಾಡಿ ಸೆಳೆದುಕೊಂಡು ೧,ಬಿಹೆಚ್‌ಕೆ. ೨.ಬಿಹೆಚ್‌ಕೆ. ೩.ಬಿಹೆಚ್‌ಕೆ ಗಳ ಆಯಾ ಗ್ರಾಹಕರ ಆಸಕ್ತಿಯ ಮೇಲೆ ಒಟ್ಟು ಮೌಲ್ಯದ ಶೇಕಡಾ ೫೦% ನಿಂದ ೮೦% ವರೆಗೆ ಖಾಸಗಿ ಬಿಲ್ಟರ್, ಡೆವಲಪರ್‍ಸ್‌ಗಳು ಕರಾರು ಯಾನೆ ಒಪ್ಪಂದ ಪತ್ರ ಮಾಡಿಕೊಟ್ಟು ಕರೆನ್ಸಿ ವಸೂಲಾತಿ ನಡೆಸುವುದು, ಅಗತ್ಯವಿರುವ ಪ್ಲಾಟ್‌ಗಳಿಗಿಂತಲೂ ದುಪ್ಪಟ್ಟು ಗ್ರಾಹಕರೊಂದಿಗೆ ಪ್ಲಾಟ್ ವಹಿವಾಟು ನಡೆಸುವುದು, ಇದೊಂದು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ ಹಾಗೂ ರೇರಾ (ರಿಯಲ್ ಎಸ್ಟೇಟ್ ರೆಗ್ಯೂಲೇಷನ್ ಅಂಡ್ ಡೆವಲಪ್ಮೆಂಟ್) ಎನ್ನುವ ನಿಯಮಗಳ ಉಲ್ಲಂಘನೆಯಾಗಿದ್ದು ಇಂತಹ ಖಾಸಗಿ ಬಿಲ್ಡರ್, ಡೆವಲಪ್ಮೆಂಟ್ ಐಷಾರಾಮಿ ಕಛೇರಿಗಳನ್ನು ಶಿವಮೊಗ್ಗದಲ್ಲಿ ಉದ್ಘಾಟಿತವಾಗಿದೆ,

ಇಂತಹದೊಂದು ಟಿಪ್ಪಣಿಯೊಂದಿಗೆ ಯಾವುದೇ ಬಿಲ್ಡರ್, ಡೆವಲಪರ್ ಹೆಸರಿನ ಖಾಸಗಿ ಸಂಸ್ಥೆಗಳ ಮೇಲೆ ನಿಗಾಮಡಗಿ ತನಿಖಿಸಬೇಕಾದ ಜರೂರತ್ತು ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾರಕ್ಷಣಾಧಿಕಾರಿಗಳವರ ಮುಂದಡಿ ಇದೆ. ಏಕೆಂದರೆ ಕಳೆದ ಪ್ರಕರಣದಲ್ಲಿ ಮಾ ಡೆವಲಪರ್‍ಸ್ ಎಂಬುವ ಖಾಸಗಿ ಸಂಸ್ಥೆಯ ಜೆವಿನಲ್ಲಿ ಕೆಲ ರಿಯಲ್ ಎಸ್ಟೇಟ್ ದಂಧೆಕೋರರು ಸೇರಿಕೊಂಡು ಪ್ಲಾಟ್‌ಗಾಗಿ ಕರಾರು ಮಾಡಿಕೊಂಡ ಬಹುತೇಕರಿಗೆ ಹೇಳಿದ ಸಮಯಕ್ಕೆ ಪ್ಲಾಟ್ ಸಿಗದೆ, ಹಣವು ವಾಪಾಸ್ಸಾಗದೆ ವಂಚನೆಗೊಳಗಾಗಿರುವ ಪ್ರಕರಣ ಜೆ.ಹೆಚ್ ಪಟೇಲ್ ಬಡಾವಣೆಯ ಅಪಾರ್ಟ್ಮೆಂಟ್ ನಡೆದು, ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಇನ್ನೂ ಹಸಿಯಾಗಿಯೇ ಇದ್ದು, ಈ ನಡುವೆ ಮತ್ತಷ್ಟು ಖಾಸಗಿ ಡೆವಲಪರ್ ಸಂಸ್ಥೆಗಳು ನಮ್ಮಲ್ಲಿ ಸುಸಜ್ಜಿತವಾದ ಪ್ಲಾಟ್‌ಗಳು ಸಿಗುತ್ತವೆ ಎನ್ನುವ ಭಾರಿ ಓಪನಿಂಗ್ ಹಾಗೂ ಜಾಹಿರಾತುಗಳ ಹೋಲ್ಡಿಂಗ್‌ಗಳಲ್ಲಿ ದರ್ಶಿಸಿಕೊಂಡು ಗ್ರಾಹಕರನ್ನು ಯಾಮಾರಿಸಲು ತೊಡಗಿದೆ,

ಅಪಾರ್ಟ್‌ಮೆಂಟ್‌ಗಳು ಎಲ್ಲೆಲ್ಲಿ ತಲೆಎತ್ತಿವೆ : ಶಿವಮೊಗ್ಗದ ವಿನೋಬಾನಗರ, ವಿದ್ಯಾನಗರ, ಕಾಶೀಪುರ, ನವುಲೆ, ಗಾಡಿಕೊಪ್ಪ, ನ್ಯೂ ಮಂಡ್ಲಿ, ಡಾಲರ್‍ಸ್ ಕಾಲೋನಿ, ಆರ್.ಎಂ.ಎಲ್ ನಗರ, ಕೀರ್ತಿನಗರ ಇನ್ನೂ ಮುಂತಾದೆಡೆ ಇಪ್ಪತ್ತಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ತಲೆಎತ್ತಿದ್ದು ಕೆಲವು ಅಪಾರ್ಟ್‌ಮೆಂಟ್‌ಗಳು ಇನ್ನೂ ಕಟ್ಟಡ ನಿರ್ಮಾಣದ ಹಂತದಲ್ಲಿದೆ, ಅತೀ ಮುಖ್ಯವಾಗಿ ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, ರಿಯಲ್ ಎಸ್ಟೇಟ್ ರೆಗ್ಯೂಲೇಷನ್ ಅಂಡ್ ಡೆವಲಪ್ಮೆಂಟ್ ಕರ್ನಾಟಕ ಮಾಲೀಕತ್ವ ಫ್ಲಾಟ್‌ಗಳ ಕಾಯ್ದೆ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋದನೆ, ಭೂ ಪರಿವರ್ತನಾ ಅನುಮತಿ, ಎನ್‌ಜಿಟಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪರವಾನಿಗೆ, ಪಬ್ಲಿಕ್ ಎನ್‌ಓಸಿ, ಹಾಗೂ ಮಹಾನಗರ ಪಾಲಿಕೆಯ ಅಧಿನಿಯಮಗಳು ಇಂತಿವುಗಳನ್ನು ಇನ್ನೂ ಪೂರ್ಣಗೊಳ್ಳದೆ ಅದ್ಯಾಗೆ ಇಂತಿವರು ಈ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್ ವಹಿವಾಟು ನಡೆಸುತ್ತಿದೆ..?! ಎನ್ನುವುದು ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾರಕ್ಷಣಾಧಿಕಾರಿಗಳಿಗೆ ಗೊತ್ತಿದಿಯಾ..?!

ಈಗಾಗಲೇ ಇಂತಹ ಅನುಮತಿಗಳು, ಪರವಾನಿಗೆಗಳು ಪಡೆಯದೆ ಪೂರ್ವಾನುಮತಿ ಪಡೆಯದೆ ಪ್ಲಾಟ್‌ಗಳು ಲಭ್ಯತೆಯಿದೆ, ಅದು ಮುಂದಿನ ವರುಷಗಳು ಪೂರ್ಣಗೊಂಡು ಹಸ್ತಾಂತರ ಮಾಡುತ್ತೇವೆ, ಇದೀಗ ಶೇಕಡಾ ೫೦%, ೮೦% ಹಣ ಪಾವತಿಸಿ ಕೊಟ್ಟಿರುವ ಹಣಕ್ಕೆ ಡೆವಲಪರ್ ಸಂಸ್ಥೆಯಿಂದ ಕರಾರು ಒಪ್ಪಂದ ಮಾಡಿಕೊಡಲಾಗುತ್ತದೆ ಎನ್ನುವ ನಿಯಮಗಳ ಉಲ್ಲಂಘನೆಯು ಸಂಪೂರ್ಣ ಕಾನೂನುಬಾಹಿರವಾಗಿದೆ, ನೊಂದಣಿ ರಹಿತ ಮಾರಾಟ, ಸುಳ್ಳು ಮಾಹಿತಿ, ಅನುಮೋದಿತ ನಕ್ಷೆ ಬದಲಾವಣೆ, ಹಸ್ತಾಂತರದಲ್ಲಿ ವಿಳಂಬ, ಮತ್ತು ಅಕ್ರಮ ಅಡಮಾನಗಳು ಇವೆ ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತನಿಖಾ ತಂಡ ರಚಿಸಿ ದಾಳಿ ಮಾಡಿದರೆ ಅಕ್ಷರಶಃ ಎಲ್ಲಾ ಅಕ್ರಮಗಳು ಬೆತ್ತಲಾಗುತ್ತದೆ ಅಲ್ಲದೆ ಈಗಾಗಲೇ ಪ್ಲಾಟ್ ನಿರ್ಮಾಣದ ಪೂರ್ವ ಪಾವತಿಸಿಕೊಂಡಿರುವ ಕೋಟ್ಯಾಂತರ ಹಣದ ಹಗರಣ ಬಹಿರಂಗವಾಗುತ್ತದೆ, ಆದರೆ ಇದು ಸಾಧ್ಯವಾ..? ಶಿವಮೊಗ್ಗದ ಇಂತಹ ಬಿಡಾಡಿ ಡೆವಲಪರ್ ಸಂಸ್ಥೆಗಳ ಐಷಾರಾಮಿ ಕಚೇರಿ ಉದ್ಘಾಟನೆಗೆ ಊರು ತುಂಬೆಲ್ಲಾ ಪ್ಲೆಕ್ಸಿಗಳಲ್ಲಿ ಕಾಣಿಸಿಕೊಂಡು ಹೋಗಿ ಬಂದಿದ್ದು ಯಾವ ಕರ್ಮಕ್ಕೋ..? ಅಥವಾ ನಾಗರೀಕ ದುರಂತವೋ ತಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಅಪಾರ್ಟ್‌ಮೆಂಟ್ ಪ್ಲಾಟ್ ದಂಧೆ ಸ್ಕೀಂ ಆಗಿ ಹೋಗಿದೆ : ಅಪಾರ್ಟ್‌ಮೆಂಟ್ ದಂಧೆಗಳು ಈ ಹೊತ್ತಿನ ಐಷಾರಾಮಿ ದಂಧೆಗಳಾಗಿ ಪರಿವರ್ತಿತವಾಗಿದೆ ಹೀಗಾಗಿ ಆಯಾ ರಾಜ್ಯ ಸರ್ಕಾರಗಳು ಇಂತಹದೊಂದು ರೇರಾ ಕಾಯಿದೆಯನ್ನು ಜಾರಿಗೆ ತಂದರೂ ಇದನ್ನು ಬಿಲ್ಡರ್‌ಗಳು ಹಾಗೂ ಡೆವಲಪರ್‍ಸ್ ಸಂಸ್ಥೆಗಳು ಪಾಲಿಸುತ್ತಿದಿಯಾ..? ಎನ್ನುವು ಮಿಲಿಯನ್ ಪ್ರಶ್ನೆಯಾಗಿದೆ, ಏಕೆಂದರೆ ರೇರಾ ಕಾಯಿದೆ ಬಂದ ಮೇಲೆಯೋ ನಾಗರೀಕ ವಲಯವನ್ನು ಅತಿರಂಜನೆಗೊಳಿಸಿ ವಂಚಿಸುತ್ತಿರುವುದು, ವಂಚಿಸಿರುವುದು ಎಲ್ಲೆಡೆ ನಡೆದಂತೆ ಶಿವಮೊಗ್ಗದಲ್ಲಿಯು ವಂಚಿತವಾಗಿ ಸಿವಿಲ್ ಪ್ರಕರಣಗಳಾಗಿ ಜನರನ್ನು ಕಾಡುತ್ತಿರುವುದಕ್ಕೆ ಜಿಲ್ಲಾಡಳಿತವು ನೇರ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ, ಅಸಲಿಗೆ ರಿಯಲ್ ಎಸ್ಟೇಟ್ ದಂಧೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆಯ ನಿಯಂತ್ರಣಕ್ಕೆ ಜಾರಿಗೆ ತರಲಾದ ರೇರಾ ಕಾಯಿದೆ ಕೂಡ ಇದ್ದರೂ ಯಾವುದೇ ಪ್ರಯೋಜನವಿಲ್ಲ ಈ ಕಾಯಿದೆಯನ್ನು ಕಟ್ಟುನಿಟ್ಟು ಗೊಳಿಸಬೇಕಾದ ಜಿಲ್ಲಾಡಳಿತ ಹಾಗೂ ರೆವಿನ್ಯೂ ವಿಭಾಗ ಕೂತು ಉಂಡು ಮೌನವಾದೊಡೆ ನಾಗರೀಕ ನ್ಯಾಯ ಎಲ್ಲಿ ಸಿಗುತ್ತದೆ..? ಅಪಾರ್ಟ್‌ಮೆಂಟ್ ಎನ್ನುವ ಪ್ಲಾಟ್ ಸ್ಕೀಂ ದಂಧೆಗೆ ಇನ್ನೆಲ್ಲಿ ಕಡಿವಾಣ ಹಾಕಬಹುದಾಗಿದೆ..? ಖರೀದಿದಾರ ನಾಗರೀಕ, ಮುಂಗಡ ಹಣ ಪಾವತಿಸಿ ಭವಿಷ್ಯದಲ್ಲಿ ಸಿಗಬಹುದಾದ ಪ್ಲಾಟ್ ಕನಸಿಗೆ ಬಗ್ನ ಉಂಟಾದರೆ ಅಥವಾ ವಿಳಂಭವಾದರೆ ಇದಕ್ಕೆ ಹೊಣೆಗಾರಿಕೆಯನ್ನು ಯಾರು ವಹಿಸಿಕೊಳ್ಳಬೇಕು, ಇಂತಹ ವಂಚನೆಯ ಡೆವಲಪರ್ ಸಂಸ್ಥೆಗಳ ಕಛೇರಿಗಳೋ..?! ಅಥವಾ ಎಲ್ಲಾ ನಿಯಮಗಳನ್ನು ಅಕ್ಷರಶಃ ಜಾರಿಗೆ ತರಲಾಗದ ಜಿಲ್ಲಾಡಳಿತವೋ..? ಸಾರ್ವಜನಿಕ ಆಸ್ತಿ-ಪಾಸ್ತಿ, ರಕ್ಷಣೆ ನೆಮ್ಮದಿಗೆ ಕಾರಣವಾಗಬೇಕಾದ ಜಿಲ್ಲಾರಕ್ಷಣಾ ಇಲಾಖೆಯೋ..? ಎನ್ನುವುದು ಸಾರ್ವಜನಿಕ ಸಂಘಟಕರು ಇಂದು ತರ್ಕಿಸಿಕೊಳ್ಳಬೇಕಾದ ಹೊತ್ತಾಗಿದೆ, ಮುಂಗಡ ಕೊಟ್ಟಿರುವ ಹಣಕ್ಕೆ ಡೆವಲಪರ್ ಸಂಸ್ಥೆಗಳು ಮಾಡಿಕೊಟ್ಟ ಕರಾರು ಒಪ್ಪಂದ ಪತ್ರವೇ ನಂಬಿಕೆಯಾಗಿ ಉಳಿಯುತ್ತದೆ ಇಲ್ಲಿ ಮೋಸ ಆದೋಡೆ ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋಗಿ ನ್ಯಾಯ ಪಡೆಯಬೇಕಾಗುವುದರೊಳಗೆ ಪಾವತಿಸಿಕೊಂಡ ಡೆವಲಪರ್ ಕಂಪನಿಗಳು ಸಂಪೂರ್ಣ ಮುಳುಗಿ ಹೋಗಿರುತ್ತದೆ ಎನ್ನುವುದು ವಾಸ್ತವವಾಗಿದೆ.

ಅಪಾರ್ಟ್‌ಮೆಂಟ್‌ನ ಪ್ರಚಾರ, ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ವರ್ಗಾವಣೆ ಏಜೆಂಟ್‌ಗಳಿಗೆ ಗೊತ್ತಿರಲೇಬೇಕು : ಯಾವ ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡು ಅಪಾರ್ಟ್‌ಮೆಂಟ್‌ನ ಪ್ರಚುರತೆ ಹಾಗೂ ಜಾಹಿರಾತು ಮಾಡುತ್ತಾರೆಯೋ..? ಇಂತಹ ಏಜೆಂಟ್‌ಗಳು ನೊಂದಾಯಿತರಾಗಿರಬೇಕು ಹಾಗೂ ಯಾವ ಬಿಲ್ಡರ್ ಅಥವಾ ಡೆವಲಪರ್ ಸಂಸ್ಥೆಯ ಪೂರ್ವಾಪರಗಳನ್ನು ಗೊತ್ತು ಮಾಡಿಕೊಂಡಿರಬೇಕು ಇದಲ್ಲದೆ ಮುಖ್ಯವಾಗಿ ಪೂರ್ವಯೋಜಿತವಾಗಿದಿಯೋ..? ನಿರ್ಮಾಣ ಹಂತದಲ್ಲಿಯೋ..? ಅಥವಾ ತ್ರೀಡಿ ಪ್ಲಾನ್ ಪ್ರಾಜೆಕ್ಟ್ ವೋಚರ್‍ಸ್‌ಗಳಲ್ಲಿದಿಯೋ..? ಪೂರ್ಣಗೊಂಡಿರುವ ಕಟ್ಟಡಗಳೋ..? ಇವೆಲ್ಲವುದರ ಮಾಹಿತಿಗಳಿರಬೇಕು, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ, ರಿಯಲ್ ಎಸ್ಟೇಟ್ ರೆಗ್ಯೂಲೇಷನ್ ಅಂಡ್ ಡೆವಲಪ್ಮೆಂಟ್ ಕರ್ನಾಟಕ ಮಾಲೀಕತ್ವ ಫ್ಲಾಟ್‌ಗಳ ಕಾಯ್ದೆ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋದನೆ, ಭೂ ಪರಿವರ್ತನಾ ಅನುಮತಿ, ಎನ್‌ಜಿಟಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಪರವಾನಿಗೆ ಪಬ್ಲಿಕ್ ಎನ್‌ಓಸಿ ಹಾಗೂ ಮಹಾನಗರ ಪಾಲಿಕೆಯ ಅಧಿನಿಯಮಗಳು ಧೃಡಿಕೃತ ಪ್ರತಿಗಳಿರಬೇಕು, ಇದಲ್ಲದೆ ಸಂಸ್ಥೆಗಳು ಯಾವುದೇ ರೀತಿಯಲ್ಲಿಯು ತಮ್ಮ ಅಪಾರ್ಟ್‌ಮೆಂಟ್ ಭೂ ಪ್ರದೇಶವಾಗಲಿ ಪ್ಲಾಟ್‌ಗಳಲ್ಲಾಗಲಿ ಆರ್ಥಿಕ ಸೌಲಭ್ಯಕ್ಕಾಗಿ ಅಡಮಾನ ಹೊಂದಿರಬಾರದು, ಹೀಗೆನಾದರೂ ಅಡಮಾನ ಹೊಂದಿರುವ ಮಾಹಿತಿಗಳಿದ್ದರೆ ಮುಚ್ಚಿಡುವಂತಿಲ್ಲ, ಇಂತಿವುಗಳನ್ನು ಖರೀದಿದಾರ ನಾಗರೀಕರಿಗೆ ತಿಳಿಸಬೇಕಾದ ಜರೂರಿಗಳಿದ್ದರು ನಿಜಕ್ಕೂ ನೇಮಕಗೊಂಡಿರುವ ಏಜೆಂಟ್‌ಗಳು ಅನುಸರಿಸುತ್ತಾರೆಯೇ..? ಯಾವುದೇ ಕಾರಣಕ್ಕೂ ಇಲ್ಲವಾಗಿದೆ ಈ ಮಾತ್ರದಿಂದಲೇ ಶಿವಮೊಗ್ಗದಲ್ಲಿ ಪ್ಲಾಟ್ ಬಯಸಿ ಹಣ ಪಾವತಿಸಿರುವ ಸಂಖ್ಯೆ ಇನ್ನೂರಕ್ಕೂ ಹೆಚ್ಚು ಹಾಗೂ ನೂರು ಕೋಟಿಗೂ ಅಧಿಕ ಹಣ ಇಂತಹ ಏಜೆಂಟ್‌ಗಳ ಮೂಲಕ ಕಮೀಷನ್ ಬೇಸ್‌ನಲ್ಲಿ ಅಕ್ರಮವಾಗಿ ಪಾವತಿಸಿಕೊಂಡಿರುವ ವರಾತಗಳಿವೆ.

ಅಪಾರ್ಟ್‌ಮೆಂಟ್ ಪ್ಲಾಟ್ ಹೆಸರಿನಲ್ಲಿ ಬಿಲ್ಡರ್ ಹಾಗೂ ಡೆವಲಪರ್‌ಗಳ ಮೇಲೆ ಸಾವಿರಕ್ಕೂ ಹೆಚ್ಚು ಸಿವಿಲ್ ಪ್ರಕರಣಗಳು ರಾಜ್ಯದಲ್ಲಿದೆ : ಹೌದು ಪ್ರಾಜೆಕ್ಟ್ ಪೂರ್ವದಲ್ಲಿಯೇ ಅತಿರಂಜನೆಯಿಂದ ನಾಗರೀಕ ಖರೀದಿದಾರರ ಬಳಿ ಕೋಟ್ಯಾಂತರ ಹಣ ಕಬಳಿಸಿ ಯಾವುದೇ ನಿಯಮಗಳು, ಕಾಯಿದೆಗಳನ್ನು ಪಾಲಿಸದೆ ವಂಚಿಸಿರುವ ಐಷಾರಾಮಿ ಅಕ್ರಮ ದಂಧೆಗಳು ಮತ್ತೊಂದು ಹೈಟೆಕ್ ರೂಪಪಡೆದುಕೊಂಡಿದೆ, ಅಪಾರ್ಟ್‌ಮೆಂಟ್ ಪ್ಲಾಟ್‌ಗಳು ಇದಕ್ಕೆ ಹೊಂದಿಕೊಂಡಂತೆ ಇರುವ ಐಷಾರಾಮಿ ವ್ಯವಸ್ಥೆಗಳೆಲ್ಲವೂ ತ್ರೀಡಿ ವಿನ್ಯಾಸಗಳಲ್ಲಿ ತೋರಿಸಿ, ಯಾಮಾರಿಸಿರುವ ಅಪಾರ್ಟ್‌ಮೆಂಟ್ ಪ್ರಕರಣಗಳು ಸಾವಿರಕ್ಕೂ ಹೆಚ್ಚು ಇದೆ ಎನ್ನುವುದು ಗೊತ್ತು ಮಾಡಿಕೊಂಡು ಶಿವಮೊಗ್ಗ ಜಿಲ್ಲಾಡಳಿತ ಇಲ್ಲಿವರೆಗೂ ಇಂತಹ ದಂಧೆಗಳತ್ತ ಚಿತ್ತವರಿಸದೆ ಇರುವುದು ನೋಡಿದರೆ ಯಾವ ಪುರುಷಾರ್ಥಕ್ಕೆ ನಿಯಮಗಳು, ಕಾಯಿದೆಗಳು ಎನ್ನುವುದಾಗಿದೆ, ಇನ್ನೂ ಮುಂದಾದರೂ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಲಕಟ್ಟಿಯವರು ಹಾಗೂ ಜಿಲ್ಲಾರಕ್ಷಣಾಧಿಕಾರಿಗಳಾದ ನಿಖಿಲ್‌ರವರು ತ್ವರಿತಗತಿಯಲ್ಲಿ ತಂಡ ರಚಿಸಿ ತನಿಖಿಸಿದೊದ್ದಡೆ ಶಿವಮೊಗ್ಗದಲ್ಲಿ ಈ ಹಿಂದೆ ಆಗಿರುವ ಅಪಾರ್ಟ್‌ಮೆಂಟ್ ಪ್ರಕರಣವನ್ನು ಹತ್ತು ಪಟ್ಟು ಮೀರಿಸುವ ಕೋಟ್ಯಾಂತರ ರೂ ವಂಚನೆಯ ಪ್ರಕರಣ ಎದುರುಗೊಳ್ಳುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ.

ಇನ್ನೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿಯಮಾವಳಿಗಳು ಶಿವಮೊಗ್ಗದಲ್ಲಿ ಯಾವುದೇ ಅಪಾರ್ಟ್‌ಮೆಂಟ್‌ಗಳು ಅನುಸರಿಸದೆ ಘನ ತ್ಯಾಜ್ಯಗಳ ವಿಲೆವಾರಿ, ಯುಜಿಡಿ ಕನೆಕ್ಟಿಂಗ್ ನಿರ್ವಹಣೆ, ಪರಿಸರ ಸಂರಕ್ಷಣೆ ನೈಸರ್ಗಿಕವಾದ ಸಂಪನ್ಮೂಲಗಳಿಗೆ ವಿವಾದಿತವಾಗಿರುವ ಸಂಪೂರ್ಣ ಅಪಾರ್ಟ್‌ ಮೆಂಟ್‌ಗಳನ್ನು ಖುದ್ದು ತನಿಖಿಸಬೇಕಾದ ಅತೀ ಅಗತ್ಯತೆಗಳಿದೆ, ಏಕೆಂದರೆ ಬೆಳೆಯುತ್ತಿರುವ ನಗರಿಯಲ್ಲಿ ರಾಜಕಾಲುವೆಗಳಿಗೆ ನೇರವಾಗಿ ಭಾರಿ ಯುಜಿಡಿ ಕನೆಕ್ಟ್ ಮಾಡುವುದು ಕೂಡ ಅಪರಾಧವಾಗಿದೆ ಎನ್ನುವುದು ಮಹಾನಗರ ಪಾಲಿಕೆಯು ಅರ್ಥೈಸಿಕೊಂಡು ಪರಿಶೀಲಿಸಲಿ ಎನ್ನುವುದು ಈ ವರದಿಯ ಉದ್ದೇಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news