Thursday, 17 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

ಸುದ್ದಿ ಸಂಗ್ರಹದಲ್ಲಿಯೇ I ಇರುವ ಪತ್ರಕರ್ತರಿಗೆ I ಆರೋಗ್ಯ ಸಂಪತ್ತು I ಬಹುಮುಖ್ಯವಾಗಿ ಬೇಕಿದೆ I ಬಲ್ಕಿಷ್ ಬಾನು I

ಸುದ್ದಿ ಸಂಗ್ರಹದಲ್ಲಿಯೇ I ಇರುವ ಪತ್ರಕರ್ತರಿಗೆ I ಆರೋಗ್ಯ ಸಂಪತ್ತು I ಬಹುಮುಖ್ಯವಾಗಿ ಬೇಕಿದೆ I ಬಲ್ಕಿಷ್ ಬಾನು I ಶಿವಮೊಗ್ಗ : ನಗರದ ವಿವಿಧ ಪ್ರತಿಷ್ಟಿತ ಆಸ್ಪತ್ರೆಗಳಾದ ಮೆಟ್ರೋ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲಿನಿಕ್, ಕ್ರಿಷ್…

ಸುದ್ದಿ ಸಂಗ್ರಹದಲ್ಲಿಯೇ I ಇರುವ ಪತ್ರಕರ್ತರಿಗೆ I ಆರೋಗ್ಯ ಸಂಪತ್ತು I ಬಹುಮುಖ್ಯವಾಗಿ ಬೇಕಿದೆ I ಬಲ್ಕಿಷ್ ಬಾನು I

ಶಿವಮೊಗ್ಗ : ನಗರದ ವಿವಿಧ ಪ್ರತಿಷ್ಟಿತ ಆಸ್ಪತ್ರೆಗಳಾದ ಮೆಟ್ರೋ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲಿನಿಕ್, ಕ್ರಿಷ್ ಕಿಡ್ನಿ ಸೆಂಟರ್‌ರವರುಗಳ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು,

ಶಿಬಿರವನ್ನು ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನುರವರು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ವಲಯದಲ್ಲಿ ವೈದ್ಯರು, ವಕೀಲರು, ರಾಜಕಾರಣಿಗಳು, ಪತ್ರಕರ್ತರು, ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ, ಪತ್ರಕರ್ತರಿಗಾಗಿ ಆರೋಗ್ಯ ತಪಾಸಣೆ ಅಗತ್ಯತೆ ಇದೆ, ಸುದ್ದಿ ಸಂಗ್ರಹದಲ್ಲಿಯೇ ಇರುವ ಪತ್ರಕರ್ತರಿಗೆ ಆರೋಗ್ಯ ಸಂಪತ್ತು ಬಹುಮುಖ್ಯವಾಗಿ ಬೇಕಿದೆ, ಇದಕ್ಕಾಗಿ ಈ ಶಿಬಿರಗಳು ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು,

ಸಮಾಜದಲ್ಲಿಯು ಶಿಕ್ಷಣ ಹಾಗೂ ಆರೋಗ್ಯ ಜನಸಾಮಾನ್ಯರಿಗೆ ಅನಾಯಾಸವಾಗಿ ದೊರಕುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಅದರಲ್ಲೂ ಒತ್ತಡದಲ್ಲಿರುವ ಪತ್ರಕರ್ತರಿಗೆ ವಿಶೇಷವಾಗಿ ದೊರಕುವಂತೆ ಆಡಳಿತ ವ್ಯವಸ್ಥೆಯೊಂದಿಗೆ ಮಾತಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಿಕ್ಷಣವು ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಬಹು ಜವಾಬ್ದಾರಿಯಾಗಿದೆ, ಚಿಂತನೆಗಳು ಸಮಾಜದಲ್ಲಿ ಆರೋಗ್ಯಕರವಾಗಿದ್ದರೆ ಅದೊಂದು ಉತ್ತಮ, ಎಂದು ಅವರು ವಿವರಿಸಿದರು,


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಬೂಡಾ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಅವರು ಮಾತನಾಡಿ, ಆರೋಗ್ಯ ಶಿಬಿರದಲ್ಲಿ ಉತ್ತಮ ಪರಿಣಿತ ಹಾಗೂ ಸಮಾಜಮುಖಿ ವೈದ್ಯರ ತಂಡವಿದೆ, ಈ ತಂಡದ ಚಾವಣಿಯಡಿ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರ ಆರೋಗ್ಯ ತಪಾಸಣೆ ಎನ್ನುವುದು ಯಶಸ್ವಿ ಆಗುತ್ತದೆ ಎಂದು ಹೇಳಿದರು,

ಹಣ ಎಷ್ಟಿದ್ದರು ಅದರಿಂದ ಆರೋಗ್ಯ ವೃದ್ದಿಯಾಗುವುದಿಲ್ಲ, ಆರೋಗ್ಯ ಕಾಪಾಡುವುದಕ್ಕೆ ಇಂತಹ ವಿಶೇಷ ಶಿಬಿರಗಳು ಸಹಾಯವಾಗುತ್ತದೆ, ಕರೋನಾ ಕಾಲಮಾನದಲ್ಲಿಯು ಕೂಡ ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಪತ್ರಕರ್ತರು ಹಾಗೂ ಆರೋಗ್ಯ ವಲಯದ ದಾದಿಯರು ಕೆಲಸ ಮಾಡಿರುವುದು ಶ್ಲಾಘನೀಯವಾದುದ್ದು ಎಂದು ವಿವರಿಸಿದರು, ರಾಜ್ಯದಲ್ಲಿ ಸರ್ಕಾರದ ವೆಚ್ಚದಿಂದ ಭದ್ರತೆಗಳಿಲ್ಲದ ಪತ್ರಿಕಾ ವೃತ್ತಿ ನಿರತರಿಗೆ ವಿಮಾ ಸೌಲಭ್ಯಗಳನ್ನು ನೀಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ನಾವು ಕೂಡ ಮನವಿ ಮಾಡಿಕೊಳ್ಳುತ್ತೇವೆ ಎಂದು ಸ್ಬೂಡಾ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಅವರು ತಿಳಿಸಿದರು.
ಈ ಶಿಬಿರಗಳನ್ನು ಮಾಡುವುದರ ಮುಖೇನ, ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ತಪಾಸಣೆಯೊಂದಿಗೆ ಅಗತ್ಯ ಔಷದಗಳನ್ನು ನೀಡುವತ್ತ ಚಿತ್ತವರಿಸಲಿ ಎಂದು ಕಿವಿಮಾತು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ ಶಿವಕುಮಾರ್ ಅವರು ಮಾತನಾಡಿ, ಆರೋಗ್ಯ ಶಿಬಿರಗಳು ಪತ್ರಕರ್ತರ ಕುಟುಂಬಗಳಿಗೆ ಅಗತ್ಯವಾಗಿ ಬೇಕಾಗಿದೆ, ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಯಾವುದೇ ರೋಗಗಳು ಉಲ್ಬಣಿಸದಂತೆ ಮುಂಜಾಗ್ರತೆ ವಹಿಸಿಕೊಳ್ಳಲು, ಸಹಕಾರಿಯಾಗುತ್ತದೆ ಎಂದರು. ಈಗಾಗಲೇ ಹಲವು ವರುಷಗಳಿಂದ ಹೋರಾಟ, ಮನವಿಗಳ ನಡುವೆ ನೆನೆಗುದಿಗೆ ಬಿದ್ದಿದ್ದ ಗ್ರಾಮೀಣಾ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಾರಣಾಂತರಗಳಿಂದ ಮುಂದೂಡುತ್ತಲೇ ಇತ್ತು, ಇದೀಗ ಪ್ರಸ್ತುತ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಿರುವುದಕ್ಕೆ ಪತ್ರಕರ್ತರ ಸಂಘ ಧನ್ಯವಾದ ತಿಳಿಸುತ್ತದೆ, ಹಾಗೆಯೇ ಪತ್ರಕರ್ತರಿಗಾಗಿ ಮೀಸಲಿದ್ದ ಜರ್ನಲಿಸ್ಟ್ ಕಾಲೋನಿಯ ಕೆಹೆಚ್‌ಬಿ ನಿವೇಶನ ಹಂಚಿಕೆ ಕೊನೆ ಹಂತದಲ್ಲಿದ್ದು ಕಳೆದ ಮೂರು ವರುಷಗಳಿಂದ ಸಣ್ಣ-ಸಣ್ಣ ತೊಡಕುಗಳಿಂದ ಹಂಚಿಕೆಯಾಗದಿರುವುದು ಬಲು ಖಂಡನೀಯ, ಈ ವೇದಿಕೆಯಿಂದ ಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನುರವರಿಗೆ ಒತ್ತಾಯಿಸುತ್ತೇನೆ, ಕೆಹೆಚ್‌ಬಿ ನಿವೇಶನ ಹಂಚಿಕೆ ಸಂಗತಿಯಲ್ಲಿ ಮಧ್ಯೆ ಪ್ರವೇಶಿಸಿ ಹಂಚಿಕೆ ಪ್ರಕ್ರಿಯೇಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕೊಡಲು ಗಮನಹರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು,

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನು, ಸ್ಬೂಡಾ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್, ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ ಶಿವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್.ಮೋಹನ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವಿ.ಟಿ ಅರುಣ್, ಹಾಗೂ ತಜ್ಞಾ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್, ಡಾ, ನಾಗಮಣಿ ರವರುಗಳು ಉಪಸ್ಥಿತರಿದ್ದರು. ಆರೋಗ್ಯ ಶಿಬಿರದಲ್ಲಿ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬ ವರ್ಗದವರು ಭಾಗವಹಿಸಿದ್ದರು.

Gara Srinivas

Gara Srinivas

Leave a comment

error: Content is protected !!