September 23, 2026

I ಗ್ರಾಮೀಣ ಬ್ಯಾಂಕ್‌ I ನೌಕರರ I ಪ್ರತಿಭಟನೆ I

0
ಬ್ಯಾಂಕ್_

I ಗ್ರಾಮೀಣ ಬ್ಯಾಂಕ್‌ I ನೌಕರರ I ಪ್ರತಿಭಟನೆ I

ಶಿವಮೊಗ್ಗ: ಗ್ರಾಮೀಣ ಬ್ಯಾಂಕ್‌ ನೌಕರರ ಒಕ್ಕೂಟವು 17 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಮುಷ್ಕರದಲ್ಲಿ ಪಾಲ್ಗೊಂಡಿತ್ತು. ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ವಲಯವಾರು ಅಖಿಲ ಭಾರತ ಒಕ್ಕೂಟಗಳ ಜಂಟಿ ವೇದಿಕೆಯ ಕರೆಯಂತೆ ಮುಷ್ಕರದಲ್ಲಿ ಭಾಗವಹಿಸಲಾಗಿತ್ತು.

ಐಪಿಓ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಗ್ರಾಮೀಣ ಬ್ಯಾಂಕುಗಳ ಖಾಸಗಿಕರಣ ಬೇಡ. ಪ್ರಾಯೋಜಕ ಬ್ಯಾಂಕ್‌ಗಳಿಂದ ಬೇರ್ಪಡಿಸಬೇಕು ಮತ್ತು ರಾಷ್ಟ್ರೀಯ ಗ್ರಾಮೀಣ ಬ್ಯಾಂಕನ್ನು ಸ್ಥಾಪಿಸಿ ಅದರ ಮಾರ್ಗದರ್ಶನದಲ್ಲಿ ಎಲ್ಲಾ 28 ರಾಜ್ಯ ಮಟ್ಟದ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 30000 ಕೂ ಹೆಚ್ಚು ಹುದ್ದೆಗಳನ್ನು ತಕ್ಷಣವೇ ನೇಮಕಾತಿ ಮಾಡಬೇಕು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತೆ ಸಮನಾಗಿ ಬಡ್ತಿ ನೀತಿಯನ್ನು ಜಾರಿಗೊಳಿಸಬೇಕು.  ಅಗತ್ಯತೆಗೆ ತಕ್ಕಂತೆ ಮಾನವಶಕ್ತಿ ನೀತಿ ಮತ್ತು ವರ್ಗಾವಣೆ ನೀತಿಯನ್ನು ರೂಪಿಸಬೇಕು. ಕ್ಯಾಶುವಲ್,ಅರೆಕಾಲಿಕ, ಹೊರಗುತ್ತಿಗೆ , ದೈನಂದಿನ ಕೂಲಿ ನೌಕರರನ್ನು ಖಾಯಂಗೊಳಿಸಬೇಕೆಂಬ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರಾದ ಆರ್. ರಾಜಶೇಖರ್ ಮತ್ತು ಮಹಾಬಲಶ್ವರಪ್ಪ, ಕೆ ಎಸ್ ದೇವರಾಜ್, ಜಗದೀಶ್ ಹೆಚ್. ಆರ್, ವಿಘ್ನೇಶ್ವರ ಹೆಗಡೆ ಮತ್ತಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!