I ರೈತರ ಭೂಮಿ ಉಳಿಯಲು I ಸರ್ಕಾರ ಸ್ವಾಧೀನ ಪ್ರಕ್ರಿಯೆ ಬಿಡಲಿ I ನಟ ಪ್ರಕಾಶ್ ರಾಜ್ I
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಎದ್ದೇಳು ಕರ್ನಾಟಕ ಸಾಮಾಜಿಕ ಸಂಘಟನೆ ವತಿಯಿಂದ ದೇವನಹಳ್ಳಿಯಲ್ಲಿ ಡಿಫೆನ್ಸ್ ಆಂಡ್ ಏರೋಸ್ಪೇಸ್ 1770 ಎಕರೆ ರೈತರ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಖಂಡಿಸಿ ಪತ್ರಿಕಾಗೋಷ್ಟಿ ಕರೆಯಲಾಗಿತ್ತು,
ನಟ ಪ್ರಕಾಶ್ ರಾಜ್ ರವರು, ತಾರರಾವ್ ಯೂಸೂಫ್ ಕನ್ನಿ, ಎನ್.ವೆಂಕಟೇಶ್, ವೀರಸಂಗಯ್ಯ, ಕೆ.ಎಲ್.ಅಶೋಕ್ ರವರು ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಪ್ರಕಾಶ್ ರಾಜ್ ರವರು ಮಾತನಾಡಿ ಗೆಲ್ಲುವವರೆಗೆ ಪಕ್ಷ ನಂತರ ಸರ್ಕಾರ, ಸರ್ಕಾರವನ್ನು ಪ್ರಶ್ನೆ ಮಾಡಬೇಕಾದವರು ಸಾರ್ವಜನಿಕರು ಎಂದು ತಿಳಿಸಿದರು
ದೇವನಹಳ್ಳಿ 1700ಎಕರೆ ಪ್ರದೇಶ ಸ್ವಾಧಿನ ಪಡಿಸಿಕೊಳ್ಳಬಾರದು ಎಂದು ಪ್ರತಿಭಟನೆ ಮಾಡಿದ ರೈತರಿಗೆ ಅಂದು ಸಿದ್ದರಾಮಯ್ಯರವರು ರೈತರಿಗೆ ನಮ್ಮ ಸರ್ಕಾರ ಬಂದರೆ ಸ್ವಾಧೀನ ಕೈ ಬಿಡುತ್ತೇವೆ ಎಂದು ಹೇಳಿದರು. ಫೈನಲ್ ನೋಟಿಫೀಕೇಷನ್ ಆಗುತ್ತದೆ ಮುಖ್ಯಮಂತ್ರಿಗಳು ಗಮನಕ್ಕೆ ಬಂದರು ಯಾಕೆ ತಡೆಹಿಡಿಯಲ್ಲಿಲ. ಪ್ರತಿಭಟನೆ ನಿರತರನ್ನು ಬಂಧಿಸಿದರು, ಇದರ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತರ ಮಾತುಗಳನ್ನು ಕೇಳಿ ಎಂದು ಮನವಿ ಮಾಡಿದರು.
10ದಿನಗಳ ಕಾಲವಕಾಶ ಹೇಳುತ್ತಾರೆ, ಕಾನೂನು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದರು. ಎಂ.ಬಿ.ಪಾಟೀಲ್ ಹಠಕ್ಕೆ ಬೀದಿದ್ದಾರೆ. ಕಾನೂನು ತೊಡಕು ಅಂತ ಹೇಳಿ ದೆಹಲಿಗೆ ಹೋಗಲು ಕಾರಣವೇನು. ಕೆಲವು ಮಂದಿ ರೈತರು ಢೀಡರನೆ ಹುಟ್ಟಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.ಎಕರೆ 3.5ಕೋಟಿ ಪರಿಹಾರ ನೀಡಲು ಸಾಧ್ಯವೆ..? ಎಂದು ಪ್ರಶ್ನಿಸಿದರು
ರೈತರ ನಡುವೆ ಒಡಕು ಹುಟ್ಟಿಸಲು ಷಡ್ಯಂತ್ರ ಮಾಡುತ್ತಿದ್ದಾರೆ, ಕೆಲವು ದಲ್ಲಾಳಿಗಳನ್ನು ನೇಮಿಸಿದ್ದಾರೆ. ದೇವನಹಳ್ಳಿ ರೈತರ ಬೆಂಬಲಕ್ಕೆ ದೇಶ ಹಲವಾರು ಸಂಘಟನೆ ಬೆಂಬಲ ನೀಡುತ್ತಿದ್ದಾರೆ ನಿಮ್ಮ ಹಿಂದೆ ಇರುವವರು ಯಾರು ಎಂದು ತಿಳಿಸಬೇಕು. ಸಂವಿಧಾನ ಪ್ರಕಾರ ಹಸಿರುವಲಯ ವನ್ನು ಪರಿವರ್ತವೆ ಮಾಡದೇ ಅಕ್ರಮಿಸಿಕೊಳ್ಳಲು ಬರುವುದಿಲ್ಲ, ಹಳದಿ ವಲಯ ಪರಿಶೀಲನೆ ಮಾಡಿ ಮಾಡಬೇಕು ಎಂದು ವಿವರಿಸಿದರು,
ದಾರಿ ತಪ್ಪಿಸುವ ಕೆಲಸ ಮಾಡೇಬೇಡಿ, ದೇವನಹಳ್ಳಿ ರೈತರ ಕುರಿತು ಅಭಿಮಾನವಿರಲಿ ಕಾನೂನು ತೊಡಕು ಕುರಿತು ಮಾತುಕತೆ ಅಷ್ಟೆ, ಪರಿಹಾರವಲ್ಲ. 2013ರ ಅಕ್ಟ್ ಪ್ರಕಾರ ಎಂದು ಹೇಳಿದ್ದಾರೆ 13ಹಳ್ಳಿ ಸ್ಥಳಾಂತರ ಕುರಿತು ಅಧ್ಯಯನ ಮಾಡಬೇಕು, ಕೃಷಿ ಭೂಮಿಯನ್ನ ಕಟ್ಟಡ ಕಟ್ಟಿದರೆ ಹೊಟ್ಟೆಗೆ ಏನು ತಿನ್ನುತ್ತಿರ. ಭೂಮಿ ಸ್ವಾಧೀನ ಪಡೆಸಿಕೊಳ್ಳುವುದು ಬೇಡವೆಂದರೆ ತಡೆಯಲು ಯಾರಿಂದಲು ಸಾಧ್ಯವಿಲ್ಲ.ರಾಜ್ಯ ಸರ್ಕಾರ ಇಚ್ಚಾಶಕ್ತಿ ಪ್ರದರ್ಶನ ಮಾಡಬೇಕು.
ಮುಖ್ಯಮಂತ್ರಿಗಳ ಕುರಿತು ಗೌರವವಿದೆ. ಮೂರು ವರ್ಷಗಳ ಸತತ ಹೋರಾಟ ರೈತರು ಮಾಡುತ್ತಿದ್ದಾರೆ ಬಿಜೆಪಿ, ಜೆಡಿಎಸ್ ಪಕ್ಷದವರು ಮೌನವಾಗಿದ್ದಾರೆ ಶಾಸಕ ಸಂಸದರು ಚುನಾವಣೆ ಸಂದರ್ಭದಲ್ಲಿ ಓಟು ಹೇಳಲು ಬರುತ್ತಾರೆ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವುದಿಲ್ಲ. ಅಕ್ರಮ ಭೂಮಿ ಕಬಳಿಕೆ ವಿರುದ್ದ ಚಳುವಳಿ, ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದು ಹೇಳಿದರು.


