September 23, 2026

I ರಸ್ತೆ ನಿಯಮಗಳನ್ನು I ಕಡ್ಡಾಯವಾಗಿ ಪಾಲಿಸಿ I ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ I

0
6e35c990-7782-4fed-8efa-723532ad0341

I ರಸ್ತೆ ನಿಯಮಗಳನ್ನು I ಕಡ್ಡಾಯವಾಗಿ ಪಾಲಿಸಿ I ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ I

ಶಿವಮೊಗ್ಗ : ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಲೇಬೇಕು ಆದ್ದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಈಗಾಗಲೇ ರಸ್ತೆ ಅಪಘಾತದಿಂದ ಸಾಕಷ್ಟು ಜನ ರಸ್ತೆಯಲ್ಲಿ ಪ್ರಾಣವನ್ನು ಬಿಡುತ್ತಿದ್ದಾರೆ. ವೇಗವಾಗಿ ಚಲಿಸುವುದು. ಹೆಲ್ಮೆಟ್ ಹಾಕದೇ ಇರುವುದು. ಸೀಟ್ ಬೆಲ್ಟ್ ಧರಿಸದೆ ಇರುವುದು. ಮತ್ತು ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಜೀವಕ್ಕಿಂತ ಅಮೂಲ್ಯವಾದ ವಸ್ತು ಬೇರೆ ಇಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲನೆ ಮಾಡಲೇಬೇಕು ಎಂದು ಎಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ನುಡಿದರು.

ಅವರು ನಗರದ ಉಷಾ ನರ್ಸಿಂಗ್ ಹೋಮ್, ಬಳಿ, . ಅಕ್ಕಮಹಾದೇವಿ ವೃತ್ತ. ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು ಇದೇ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್  ಯೋಗೇಶ್ ಅವರು ಮಾತನಾಡುತ್ತಾ. ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ. ಬೆಂಬಲ ನೀಡಿದ್ದು ಇದರಿಂದ ಬಹಳ ಉತ್ತಮವಾದ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ನಾಗರೀಕರ ಪರವಾಗಿ ಬಳ್ಳೇಕೆರೆ ಸಂತೋಷ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್. ತಿರುಮಲೇಶ್. ನವೀನ್ ಮಠಪತಿ ಹಾಗೂ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆಆರ್ ಸೋಮನಾಥ್. ದಿನೇಶ್ ಶೆಟ್, ರಾಜೇಂದ್ರ. ಹರೀಶ್. ಗಿರಿರಾಜ್. ಗೋಪಾಲ ಹಾಗೂ ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!