Saturday, August 1, 2026
Homeಸೂರ್ಯಗಗನI ನಾಳೆ ಹಸಿವು ಮುಕ್ತ ಸಮಾಜಕ್ಕಾಗಿ I ನವ್ಯಶ್ರೀ ಅನ್ನದಾನಂನ ೧೦೦ನೇ ಕಾರ್ಯಕ್ರಮ I

I ನಾಳೆ ಹಸಿವು ಮುಕ್ತ ಸಮಾಜಕ್ಕಾಗಿ I ನವ್ಯಶ್ರೀ ಅನ್ನದಾನಂನ ೧೦೦ನೇ ಕಾರ್ಯಕ್ರಮ I

I ನಾಳೆ ಹಸಿವು ಮುಕ್ತ ಸಮಾಜಕ್ಕಾಗಿ I ನವ್ಯಶ್ರೀ ಅನ್ನದಾನಂನ ೧೦೦ನೇ ಕಾರ್ಯಕ್ರಮ I

ಶಿವಮೊಗ್ಗ: ಹಸಿವುಮುಕ್ತ ಸಮಾಜಕ್ಕಾಗಿ ರೂಪುಗೊಂಡ ನವ್ಯಶ್ರೀ ಈಶ್ವರವನ ಚಾರಿಟೇಬಲ್ ಟ್ರಸ್ಟ್ ಎಂಟು ವರ್ಷಗಳಿಂದ ‘ನವ್ಯಶ್ರೀ ಅನ್ನದಾನಂ’ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ನ. ೪ರಂದು ೧೦೦ರ ಗಡಿ ತಲುಪಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ ೧೨.೩೦ಕ್ಕೆ ಮೆಗ್ಗಾನ್‌ನ ಚೌಡೇಶ್ವರಿ ದೇವಸ್ಥಾನ ಬಳಿ ನವ್ಯಶ್ರೀ ಅನ್ನದಾನಂ- ೧೦೦ರ ಸಂಭ್ರಮ’ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಸೋಮವಾರ ನೀಡಿದ ನವ್ಯಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನವ್ಯಶ್ರೀ ನಾಗೇಶ್, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿವಗಂಗಾ ಯೋಗ ಕೇಂದ್ರದ ಯೋಗ ಗುರು ಸಿ.ವಿ. ರುದ್ರಾರಾಧ್ಯ, ವಿಧಾನ ಪರಿಷತ್ ಸದಸ್ಯ ಡಾ, ಧನಂಜಯ ಸರ್ಜಿ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ರೋಟರಿ ಝೋನ್ ೧೦ರ ಅಸಿಸ್ಟೆಂಟ್ ಗವರ್ನರ್ ಕೆ.ಪಿ.ಶೆಟ್ಟಿ, ನವ್ಯಶ್ರೀ ಟ್ರಸ್ಟ್‌ನ ನವ್ಯಶ್ರೀ ನಾಗೇಶ್ ಆಗಮಿಸುವರು ಎಂದರು.

ಮೆಗ್ಗಾನ್ ಆಸ್ಪತ್ರೆಗೆ ಬಡವರು, ಆರ್ಥಿಕವಾಗಿ ಅಶಕ್ತರೇ ಹೆಚ್ಚಾಗಿ ಬರುತ್ತಾರೆ. ಇಲ್ಲಿ ದಾಖಲಾಗುವ ಒಳ ರೋಗಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಊಟ ದೊರೆಯುತ್ತದೆ. ಆದರೆ ಅವರ ಅವಲಂಬಿತರಿಗೆ ಹಾಗೂ ದೊರೆಯುವುದಿಲ್ಲ. ಎಷ್ಟೋ ಬಾರಿ ಭೇಟಿಯಾಗಲು ಬಂದವರಿಗೆ ಊಟ ಅವರು ಆ ಸಂದರ್ಭಗಳಲ್ಲಿ ಊಟವಿಲ್ಲದೇ ಪರದಾಡುವುದನ್ನು ಗಮನಿಸಿ ಅವರ ಹಸಿವು ನೀಗಿಸುವ ಸದುದ್ದೇಶ ಹೊತ್ತು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ವತಿಯಿಂದ ೨೦೨೪ರ ನವೆಂಬರ್ ೧೧ ರಂದು ನವ್ಯಶ್ರೀ ಅನ್ನದಾನಂ ಯೋಜನೆ ಪ್ರಾರಂಭಿಸಿದೆ ಎಂದು ಇತಿಹಾಸ ನೆನಪಿಸಿದ ಅವರು, ಅಂದಿನಿಂದ ಈವರೆಗೂ ಹಸಿದವರಿಗೆ ಅನ್ನದಾನದ ಸೇವಾ ಕಾರ್ಯವನ್ನು ನಿರಂತರವಾಗಿ ಪ್ರತಿ ಮಂಗಳವಾರ ಹಾಗೂ ಶನಿವಾರಗಳಂದು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

‘ನವ್ಯಶ್ರೀ ಅನ್ನದಾನಂ’ ಸೇವಾ ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ದಾನಿಗಳು ನಗದು ಅಥವಾ ಆಹಾರ ಪದಾರ್ಥಗಳ ರೂಪದಲ್ಲಿ ನೆರವು ನೀಡುತ್ತಿದ್ದಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಕುಟುಂಬದ ಅಗಲಿದವರ ಪುಣ್ಯ ಸ್ಮರಣೆ ಸೇರಿದಂತೆ ಹಸಿವುಮುಕ್ತ ಸಮಾಜಕ್ಕಾಗಿ ಕೈಜೋಡಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಇತ್ತೀಚೆಗೆ ಈ ಆಚರಣೆಗಳ ದಿಕ್ಕು ಈ ರೀತಿಯ ಅನ್ನದಾನಗಳ ಮೂಲಕ ನಡೆಯುತ್ತಿರುವುದು ಒಂದು ಉತ್ತಮ ಬೆಳವಣಿಗೆ ಯಾಗಿದೆ ಎಂದರು.

ಯುವಜನರು ಕೂಡ ತಮ್ಮ ಹುಟ್ಟು ಹಬ್ಬಗಳನ್ನು ಇಲ್ಲಿ ಅನ್ನದಾನದ ಮೂಲಕ ಆಚರಿಸಿಕೊಳ್ಳುತ್ತಿರುವುದು ವಿಶೇಷ ಎನಿಸಿದೆ. ಈ ಸತ್ಕಾರ್ಯಕ್ಕೆ ಸೇವೆ ಸಲ್ಲಿಸುವ ಮನಸ್ಸು ಹೊಂದಿರುವ ಯಾವುದೇ ವ್ಯಕ್ತಿಗಳಿಗೆ ತೆರೆದ ವೇದಿಕೆ ಇದೆ. ಪ್ರಸ್ತುತ ೪೦೦ರಷ್ಟು ಜನರಿಗೆ ಊಟ ಕೊಡಲಾಗುತ್ತಿದೆ. ಆಹಾರ ಪದಾರ್ಥ ಅಥವಾ ನಗದು ರೂಪದಲ್ಲಿ ಸಹಾಯ ಮಾಡುವವರು ೯೮೪೪೨೮೨೫೦೪, ೯೪೪೮೧೩೯೨೭೧ ಇಲ್ಲಿಗೆ ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯರಾದ ನಾಗರಾಜ ಶೆಟ್ಟರ್, ಪೊಲೀಸ್ ಪುಟ್ಟಯ್ಯ, ಸಂತೋಷ್, ಸುಬ್ರಹ್ಮಣ್ಯ ಮೊದಲಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I