September 23, 2026

I ಮಾತೃಭಾಷೆ ಬದುಕಿಗೆ ಸೃಜನಶೀಲ ಮೆರಗು ನೀಡಲಿದೆ I ಡಿ. ಮಂಜುನಾಥ I

0
IMG-20251109-WA0013
I ಮಾತೃಭಾಷೆ ಬದುಕಿಗೆ ಸೃಜನಶೀಲ ಮೆರಗು ನೀಡಲಿದೆ I ಡಿ. ಮಂಜುನಾಥ I
ಶಿವಮೊಗ್ಗ : ಮಾತೃಭಾಷೆ ಸೃಜನಶೀಲ ಆಲೋಚನೆಗೆ ಪ್ರೇರಣೆ ನೀಡುವ ಶಕ್ತಿಯಾಗಿದ್ದು, ಬದುಕು ರೂಪಗೊಳ್ಳಲು ನಮ್ಮ ನೆಲದ ಭಾಷೆ ಪ್ರೇರಕವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಅಭಿಪ್ರಾಯಪಟ್ಟರು.
ಅವರು ನವೆಂಬರ್ ೮ ರಂದು ಶನಿವಾರ ಸಂಜೆ ಸಾಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಪ್ರತಿ ತಿಂಗಳು ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ  243 ನೇ ತಿಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಕನ್ನಡ ನಮ್ಮ ತಾಯಿ ಭಾಷೆ. ಅಮ್ಮ ಹೇಳಿಕೊಟ್ಟ ಭಾಷೆಯನ್ನು ಕಡೆಗಣಿಸಿದರೆ ಪರಕೀಯರಂತೆ ಬದುಕ ಬೇಕಾಗಬಹುದು. ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಸಾಗಿ ಬಂದ ಸಾಹಿತ್ಯ ಹುಣ್ಣಿಮೆ ಜಿಲ್ಲೆಯ ಸಹೃದಯಿ ಮನಸ್ಸುಗಳು ನೀಡಿದ ಸಹಕಾರದಿಂದ ಸಾಗಿ ಬಂದಿದೆ. ಜಿಲ್ಲೆಯ ಪ್ರತಿಷ್ಠಿತ ಕಾರ್ಯಕ್ರಮವಾಗಿ ಮುಂದುವರಿದಿದೆ. ಸಾವಿರಾರು ಪ್ರತಿಭೆಗಳು ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆ ಬಳಕೆಯಾಗಿದೆ ಎಂದು ಹೆಮ್ಮೆಪಟ್ಟರು.
 ಕನ್ನಡ ನಮ್ಮ ಭಾಷೆ, ವಿಶ್ವದಲ್ಲಿರುವ ಎಲ್ಲಾ ಭಾಷೆಗಳಿಗಿಂತ ನಮ್ಮ ಭಾಷೆ ಪರಿಪಕ್ವವಾಗಿದೆ. ವೈಜ್ಞಾನಿಕ ವಾಗಿದೆ. ನಮ್ಮ ಭಾಷೆಯಬಗ್ಗೆ ನಮಗೆ ಅಭಿಮಾನವಿರಬೇಕು. ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಭಾಷೆಯನ್ನ ಬಳಸಬೇಕು. ಭಾಷೆ ಬರೆಯುವ, ಓದುವ, ಮಾತನಾಡುವ ಮೂಲಕ ಉಳಿಸಬೇಕು ಎಂದು ಹೇಳಿದರು.
ಸಾಹಿತಿಗಳಾದ ವಿ. ಗಣೇಶ್ ಮತ್ತು ಸ್ಟ್ಯಾನಿ ಲೋಪೀಸ್ ಕಥೆ ಹೇಳಿ ಸಭಿಕರನ್ನು ರಂಜಿಸಿದರು. ಕವಿಗಳಾದ ಎಸ್. ಎನ್ ಪಾಲಾಕ್ಷಪ್ಪ, ಅಮಿತ್ ಆನಂದಪುರ, ಯೋಗೀಶ್ ಭಟ್, ಜಗನ್ನಾಥ ಕೆ., ರೇಷ್ಮಾ ಅವರು ಕವನ ವಾಚಿಸಿದರು. ಕೆ. ಎಸ್. ಮಂಜಪ್ಪ, ಡಿ. ಗಣೇಶ್, ಗವಿಯಪ್ಪ ಎಲ್. ಟಿ. ಅವರು ಹನಿಗವನ ವಾಚಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಪ್ರಸನ್ನ ಟಿ., ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಲ. ರಾಘವೇಂದ್ರ ಎಚ್. ಜಿ., ಉದ್ಯಮಿ  ಲ. ಕೀರ್ತಿ ಎಲ್. ಎನ್. ಕಸಾಪ ತಾಲ್ಲೂಕು ಅಧ್ಯಕ್ಷರಾದ ವಿ. ಟಿ. ಸ್ವಾಮಿ, ಕಜಾಪ ತಾಲ್ಲೂಕು ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ, ಕಸಾಸಾಂ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಸದಾನಂದ ಶರ್ಮ, ಆಟೋ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷರಾದ ಸೋಮಶೇಖರ್, ಉಪಾಧ್ಯಕ್ಷರಾದ ಜಿಯಾವುಲ್ಲಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತು ಕಲಾವಿದರು ಜಾನಪದ ಹಾಡು ಹೇಳಿದರು.

Leave a Reply

Your email address will not be published. Required fields are marked *

error: Content is protected !!