Wednesday, 4 November 2026 — Suryagagana
06:40 AM
ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I
ಸೂರ್ಯಗಗನ

I ಇದು ಅಪ್ಪಟ ‘ಹಿಂದೂ ವಿರೋಧಿ’ ಬಜೆಟ್ I ಶಾಸಕ ಚೆನ್ನಬಸಪ್ಪ I

I ಇದು ಅಪ್ಪಟ ‘ಹಿಂದೂ ವಿರೋಧಿ’ ಬಜೆಟ್ I ಶಾಸಕ ಚೆನ್ನಬಸಪ್ಪ I ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ರ ಬಜೆಟ್ ಕರ್ನಾಟಕದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್…

I ಇದು ಅಪ್ಪಟ ‘ಹಿಂದೂ ವಿರೋಧಿ’ ಬಜೆಟ್ I ಶಾಸಕ ಚೆನ್ನಬಸಪ್ಪ I

ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ರ ಬಜೆಟ್ ಕರ್ನಾಟಕದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್ ಚೆನ್ನಬಸಪ್ಪನವರು ತಿಳಿಸಿದ್ದಾರೆ,

ಅವರು ಈ ಕುರಿತಂತೆ ಮಾತಾನಾಡಿ ಕಳೆದ ವರ್ಷದ ರಾಜಸ್ವ ಸಂಗ್ರಹದಲ್ಲೇ ₹15,000 ಕೋಟಿಗಳಷ್ಟು ಭಾರೀ ಹಿನ್ನಡೆ ಅನುಭವಿಸಿರುವ ಈ ಸರ್ಕಾರ, ಈಗ ಯಾವ ನೈತಿಕ ಆಧಾರದ ಮೇಲೆ ₹3.15 ಲಕ್ಷ ಕೋಟಿಯ ಅತಿರೇಕದ ಆದಾಯದ ಗುರಿ ಇಟ್ಟುಕೊಂಡಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ವಾಸ್ತವದಲ್ಲಿ ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದ ಕರ್ನಾಟಕವನ್ನು ಇಂದು ಕೇವಲ ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ತಮ್ಮ ರಾಜಕೀಯ ಉಳಿವಿಗಾಗಿ ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿರುವ ಈ ‘ಬ್ರದರ್ಸ್ ಬಜೆಟ್’ ಜನವಿರೋಧಿಯಾಗಿದೆ ಎಂದು ವಿವರಿಸಿದ್ದಾರೆ,

ಈ ಬಜೆಟ್‌ನ ಭೀಕರತೆಯೆಂದರೆ, ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಯ ಶೇ. 88 ರಷ್ಟು ಭಾಗ ಕೇವಲ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸಲೇ ವ್ಯಯವಾಗುತ್ತಿದೆ. ಅಂದರೆ ಹೊಸ ರಸ್ತೆ, ನೀರಾವರಿ ಅಥವಾ ಮೂಲಸೌಕರ್ಯದಂತಹ ಆಸ್ತಿ ಸೃಜನೆಗೆ ಸರ್ಕಾರದ ಬಳಿ ಬಿಡಿಗಾಸೂ ಇಲ್ಲದಂತಾಗಿದೆ. ಅಚ್ಚರಿಯ ವಿಷಯವೆಂದರೆ, ಸರ್ಕಾರ ₹1.32 ಲಕ್ಷ ಕೋಟಿ ಸಾಲ ಮಾಡಲು ಹೊರಟಿದ್ದರೂ ಸಹ, ಆಸ್ತಿ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವುದು ಕೇವಲ ₹71,924 ಕೋಟಿ ಮಾತ್ರ! ಅಂದರೆ ಮಾಡಿದ ಸಾಲದ ಅರ್ಧದಷ್ಟು ಹಣವನ್ನು ಆಸ್ತಿ ಸೃಜನೆಗೆ ಬಳಸದೆ ದೈನಂದಿನ ಖರ್ಚುಗಳಿಗೆ ಪೋಲು ಮಾಡುತ್ತಿರುವುದು ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಕರಾಳ ಮುನ್ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ,

ದೇಶಾದ್ಯಂತ ಆರ್ಥಿಕ ನಿರ್ವಹಣೆಯ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಕರ್ನಾಟಕದ ಈ ಹದಗೆಟ್ಟ ಸ್ಥಿತಿಯನ್ನು ನೋಡಲಿ. ಜವಾಬ್ದಾರಿಯುತ ಸರ್ಕಾರವು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಆಸ್ತಿ ನಿರ್ಮಾಣಕ್ಕಾಗಿ ಸಾಲ ಮಾಡುತ್ತದೆ, ಆದರೆ ಈ ಸರ್ಕಾರ ಕೇವಲ ಅಧಿಕಾರ ಉಳಿಸಿಕೊಳ್ಳಲು ಸಾಲ ಮಾಡಿ ಮುಂದಿನ ಪೀಳಿಗೆಯ ತೆರಿಗೆದಾರರ ಮೇಲೆ ಭರಿಸಲಾಗದ ಹೊರೆ ಹೊರಿಸುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯವನ್ನು ‘ಆರ್ಥಿಕ ಸಾಹಸ ಪ್ರವೃತ್ತಿ’ಯ ಮೂಲಕ ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಈ ಬಜೆಟ್ ಅನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದರಲ್ಲದೆ ಸಾಲ ಮಾಡಿ ಆಡಳಿತ ನಡೆಸುವುದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ‘ಕರ್ನಾಟಕ ಮಾಡೆಲ್’ ಸಾಧನೆ..!ಆಗಿದೆ ಎಂದು ಅವರು ತಿಳಿಸಿದ್ದಾರೆ.

Gara

Gara

Leave a comment

error: Content is protected !!