Saturday, 31 October 2026 — Suryagagana
12:59 AM
ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I
ಸೂರ್ಯಗಗನ

     I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I

     I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I            ಶಿವಮೊಗ್ಗ :  . ಅವರ ಕನಸುಗಳು ನನಸಾಗಿಸಲು ಹಾಗೂ ಅವರ ಭವಿಷ್ಯ ಉಜ್ವಲಗೊಳಿಸಲು, ಮಕ್ಕಳ ಮೇಲಿನ…
     I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I
           ಶಿವಮೊಗ್ಗ :  . ಅವರ ಕನಸುಗಳು ನನಸಾಗಿಸಲು ಹಾಗೂ ಅವರ ಭವಿಷ್ಯ ಉಜ್ವಲಗೊಳಿಸಲು, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟುವ ಸದುದ್ದೇಶದಿಂದ ಸುರಕ್ಷಿತ್‌ಬಚಪನ್‌ಎಂಬ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಎಲ್ಲ ಮಕ್ಕಳಿಗೂ ಕಾನೂನು ಅರಿವು ನೀಡಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ಜಿ.ಎ. ಅವರು ಹೇಳಿದರು. ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪೊಲೀಸ್‌ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ  ಸುರಕ್ಷಿತ್‌ಬಚಪನ್‌ಎಂಬ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
           ಮಕ್ಕಳ ರಕ್ಷಣೆ ಕೇವಲ ಪೋಷಕರಿಗೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಕರು, ನೆರೆಹೊರೆಯವರು ಸೇರಿದಂತೆ ಸಮಾಜದ ಹೊಣೆಗಾರಿಕೆಯೂ ಇದೆ ಎಂದ ಅವರು, 18ವರ್ಷದೊಳಗಿನ ಮಕ್ಕಳು ಕ್ಷೇಮ ಹಾಗೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಮನುಷ್ಯನ ವಾಂಛೆಗಳು ಎಲ್ಲೆ ಮಿತಿಯಲ್ಲಿರಬೇಕು. ಎಲ್ಲರೂ ಮಾನವೀಯ ಸಂಬಂಧಗಳನ್ನು ಪರಸ್ಪರ ಗೌರವಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ಮಗುವಿನ ಬೆಳವಣಿಗೆ ಕಂಡು ಪೋಷಕರು ಸಂಭ್ರಮಿಸುವಂತಿರಬೇಕು. ಪ್ರತಿ ಮಗುವೂ ಯಾವುದೇ ಹಿಂಜರಿಕೆಯಿಲ್ಲದೆ ಸರಿದಾರಿಯಲ್ಲಿ ಧೈರ್ಯವಾಗಿ ಮುನ್ನಡೆಯಬೇಕು. ತಮಗಿರುವ ಸೌಲಭ್ಯಗಳನ್ನು ಅರಿತು, ಅಗತ್ಯಗಳಿಗೆ ಬಳಸಿಕೊಳ್ಳಬೇಕು. ಆ ಮೂಲಕ ಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದು ಎಲ್ಲಾ ಸಾಧನೆಗೂ ಅಡಿಪಾಯವಾಗಿರಲಿದೆ ಎಂದ ಅವರು ಅದಕ್ಕಾಗಿ ಎಲ್ಲರೂ ಸಂಕಲ್ಪ ಮಾಡುವಂತೆ ಸಲಹೆ ನೀಡಿದರು.
             ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ, ಶೋಷಣೆ, ನಿರ್ಲಕ್ಷ್ಯ ಮತ್ತು ಅಪಾಯಕಾರಿ ಪರಿಸ್ಥಿತಿಗಳಿಂದ ರಕ್ಷಿಸುವುದು. “ಸುರಕ್ಷಿತ್ ಬಚಪನ್” ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಅಲ್ಲದೇ ಮಕ್ಕಳ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಶೋಷಣೆ ವಿರುದ್ಧ ಜನರನ್ನು ಒಗ್ಗೂಡಿಸುವುದೂ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ನಿಖಿಲ್‌ಅವರು ಮಾತನಾಡಿ, ಫೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿವಮೊಗ್ಗ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಜಾಲತಾಣಗಳ ಪರಿಚಯದ ನಂತರ ಮಕ್ಕಳು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದು, ಅನವಶ್ಯಕ ವಿಷಯಗಳತ್ತ ಗಮನಹರಿಸುತ್ತಿರುವುದನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಮಕ್ಕಳ ಬೆಳವಣಿಗೆ ದೇಶದ ಉನ್ನತಿಗೆ ಕೊಂಡಿಯಾಗಿರಲಿದೆ. ಮಕ್ಕಳು ಪೋಷಕರ ಮಾತನ್ನು ಆಲಿಸಿ, ಅನುಸರಿಸಬೇಕು. ಪೋಷಕರ ಪ್ರತಿ ಕನಸು, ಆಸೆ ಮಕ್ಕಳೇ ಆಗಿರುತ್ತಾರೆ. ಪೋಷಕರು ಮಾತ್ರ ಮಕ್ಕಳಿಗೆ ನಿಜವಾದ ಪ್ರೀತಿ ತೋರಿಸಬಲ್ಲರು ಎಂದ ಅವರು ಮಕ್ಕಳು ಓದಿನ ವಿಷಯವನ್ನು ಬಿಟ್ಟು ಮನಸ್ಸನ್ನು ಚಂಚಲ ಮಾಡಿಕೊಳ್ಳದೆ ಹತೋಟಿಯಲ್ಲಿಟ್ಟುಕೊಳ್ಳುವ ಮೂಲಕ ಸುರಕ್ಷತೆಯ ಗೋಡೆ ನಿರ್ಮಿಸಿಕೊಳ್ಳಬೇಕು ಎಂದರು.
• ಶಿಕ್ಷಕರು ಶಾಲೆಗೆ ನಿರಂತರ ಗೈರಾಗುತ್ತಿರುವ ಮಕ್ಕಳು, ಅಪ್ರಾಪ್ತ ಮಕ್ಕಳ ವಿವಾಹ, ಬಾಲಕಾರ್ಮಿಕ ಮತ್ತಿತರ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಬಾಲ್ಯವನ್ನು ರಕ್ಷಿಸಬೇಕು. ಶಿಕ್ಷಣ ವಂಚಿತ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವಲ್ಲಿ ಶ್ರಮಿಸಬೇಕು. ಮಂಜುನಾಥಸ್ವಾಮಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌ಎಂ.ಎಸ್.‌ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುರಕ್ಷಿತ ಬಚಪನ್‌ಜಾಗೃತಿ ಅಭಿಯಾನವು ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ, ಮಕ್ಕಳ ಸುರಕ್ಷತೆಗಾಗಿಯೇ ಇರುವ ಫೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ಮತ್ತು ಮೊಬೈಲ್‌ಸದ್ಬಳಕೆ ಕುರಿತು ಅರಿವು ಮೂಡಿಸಲಿದೆ ಎಂದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ತಾಲೂಕಿನ 364 ಶಾಲೆಗಳು ಸೇರಿದಂತೆ ಜಿಲ್ಲೆಯ 2000ಕ್ಕೂ ಹೆಚ್ಚಿನ ಶಾಲೆಗಳ ವಿದ್ಯಾರ್ಧಿಗಳಿಗೆ  ಈ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌ನಾಯ್ಕ್‌, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು, ನಗರದ ಎಲ್ಲಾ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Gara

Gara

Leave a comment

error: Content is protected !!