Thursday, 5 November 2026 — Suryagagana
07:03 AM
ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I
ಸೂರ್ಯಗಗನ

I ಸಾಹಿತಿ ಪದ್ಮಪ್ರಸಾದ್‌ ಅಭಿಮತ I ಬದುಕಿನ ನಂಜು ನುಂಗಿ ಅಮೃತವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ I

I ಸಾಹಿತಿ ಪದ್ಮಪ್ರಸಾದ್‌ ಅಭಿಮತ I ಬದುಕಿನ ನಂಜು ನುಂಗಿ ಅಮೃತವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ I ಶಿವಮೊಗ್ಗ : ಸಾಹಿತ್ಯ ಬದುಕಿನ ನಂಜನ್ನು ಗಂಟಲಲ್ಲಿ ಹಿಡಿದುಕೊಂಡು, ಅದನ್ನು ಅಮೃತವಾಗಿಸುವ ಶಕ್ತಿಯ ಮೂಲಕ ಸಮೂಹಕ್ಕೆ ನೀಡುವುದೇ ಸಾಹಿತ್ಯದ ಉಪಕಾರ ಎಂದು ಡಾ. ಎಸ್.…
I ಸಾಹಿತಿ ಪದ್ಮಪ್ರಸಾದ್‌ ಅಭಿಮತ I ಬದುಕಿನ ನಂಜು ನುಂಗಿ ಅಮೃತವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ I

ಶಿವಮೊಗ್ಗ : ಸಾಹಿತ್ಯ ಬದುಕಿನ ನಂಜನ್ನು ಗಂಟಲಲ್ಲಿ ಹಿಡಿದುಕೊಂಡು, ಅದನ್ನು ಅಮೃತವಾಗಿಸುವ ಶಕ್ತಿಯ ಮೂಲಕ ಸಮೂಹಕ್ಕೆ ನೀಡುವುದೇ ಸಾಹಿತ್ಯದ ಉಪಕಾರ ಎಂದು ಡಾ. ಎಸ್. ಪಿ. ಪದ್ಮಪ್ರಸಾದ್ ವಿವರಿಸಿದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ 20 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮಾತುಗಳನ್ನಾಡಿದರು.
ನನಗಿಂತ ಕಷ್ಟ ಪಟ್ಟವರು ಬಹಳ ಜನರಿದ್ದಾರೆ. ನಮ್ಮ ನೋವ ನುಂಗಿ ಕಂಡದ್ದು, ಉಂಡದ್ದು ಎಲ್ಲಾ ಸೇರಿ ಬದುಕಿನ ಭಾಷೆಯಲ್ಲಿ ಸಾಹಿತ್ಯದ ದ್ರವ್ಯವಾಗಿಸುವ ಕಲೆಯಿದ್ದರೆ ಶ್ರೇಷ್ಠವಾಗುತ್ತೆ . ಬದುಕು, ಭಾಷೆ, ನಂಬಿದ ಮ್ಯೌಲ್ಯಗಳು ಪಲ್ಲಟವಾಗುತ್ತಿವೆ. ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತಿದೆ. ನೆರೆಹೊರೆ, ಅಕ್ಕಪಕ್ಕದವರನ್ನೂ ಸಹಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದೇವೆ. ಆ ಕಾರಣವೆ ಇವತ್ತಿನ ಯುದ್ಧಗಳು, ಬೇರೆಯವರ ಜೀವ ನಗಣ್ಯವಾಗುವುದು ಸರಿಯಲ್ಲ. ಇದನ್ನೆಲ್ಲಾ ಸಾಹಿತ್ಯದ ಮೂಲಕ ಧ್ವನಿಪೂರ್ಣವಾಗಿ ಹೇಳಬೇಕು ಎಂದು ವಿವರಿಸಿದರು.
ನಮ್ಮ ಶಬ್ದಕೋಶ ಮೂಲ ಸತ್ವವನ್ನು ಕಳೆದು ಕೊಳ್ಳುತ್ತಿವೆ. ವಿದೇಶಿ ಪದಗಳು ಪ್ರಭಾವಿಸುತ್ತಿವೆ. ಬರಹಗಾರರು ಸವಾಲು ಸ್ವೀಕರಿಸುತ್ತಲೆ ದೇಶಿಯತೆ ಉಳಿಸಿಕೊಳ್ಳುವ ಅಗತ್ಯವಿದೆ. ನಮಗೆ ಇಷ್ಟವಾಗದವರ ಅಭಿಪ್ರಾಯ ವಿರೋಧಿಸುವಾಗಲೂ ನಾವು ಸಭ್ಯ ಭಾಷೆಯಲ್ಲಿ ಹೇಳಬೇಕು. ಅಸಭ್ಯ, ಇರಟುತನ ತೋರಿದರೆ ನಮ್ಮ ಪರಂಪರೆಯ, ಸಂಸ್ಕೃತಿಯ ಗೌರವ ಉಳಿಸಿದಂತೆ ಆಗದು ಎಂದು ಡಾ. ಎಸ್. ಪಿ. ಪದ್ಮಪ್ರಸಾದ್ ಹಿತನುಡಿದರು.
ಸಮ್ಮೇಳನ ಸರ್ವಾಧ್ಯಕ್ಷರಾದ ವಿಜಯಶ್ರೀ ಮಾತನಾಡಿ, ಎಲ್ಲಾ ಗೋಷ್ಠಿಗಳು ಅರ್ಥಪೂರ್ಣವಾಗಿದ್ದವು. ಭಾಷೆಯ ಬೆಳವಣಿಗೆಗೆ, ನಾವೆಲ್ಲರೂ ಕನ್ನಡವನ್ನು ಬಳಸುವ ಮೂಲಕ ಉಳಿಸುವ ಕಾರ್ಯ ಮಾಡೋಣ. ಸಮ್ಮೇಳನ ಸರ್ವಾಧ್ಯಕ್ಷತೆಯ ಗೌರವವನ್ನು, ನನ್ನೆಲ್ಲಾ ಮಹಿಳೆಯರಿಗೆ ಅರ್ಪಿಸುತ್ತೇನೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಡಿವಿಎಸ್‌ ಮಾಜಿ ಅಧ್ಯಕ್ಷರಾದ ಕೊಳಲೆ ರುದ್ರಪ್ಪ ಮಾತನಾಡಿ, ನೀವು ನೀಡಿದ ಈ ಸನ್ಮಾನ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕನ್ನಡ ಭಾಷೆಯನ್ನು ಮೂಲ ಭಾಷಿಗರೆ ನಿರ್ಲಕ್ಷ ತೋರುವುದು ಸರಿಯಲ್ಲ. ನಮ್ಮ ಶಾಲೆಗಳು ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು. ಕನ್ನಡ ಪುಸ್ತಕ ಓದುವುದನ್ನು ಉತ್ತೇಜಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ. ಮಂಜುನಾಥ ಮಾತನಾಡಿ ಕನ್ನಡ ಉಳಿಸಿ, ಬೆಳೆಸಿ ಬಳಸುವುದರ ಜೊತೆಯಲ್ಲಿ ಪರಿಸರ ಉಳಿಸುವ, ಗಿಡನೆಡುವ ಸ್ವಶ್ಚತೆ ಕಾಪಾಡುವ ಸಂಕಲ್ಪ ಮಾಡೋಣ ಎಂದರು. ಡಾ. ಶ್ರೀಪತಿ ಹಳಗುಂದ ಸ್ವಾಗತಿಸಿ, ಮೋಹನ್ ಕುಮಾರ್, ಶ್ರೀಧರಗೌಡ ನಿರೂಪಿಸಿ, ಶ್ರೀನಿವಾಸ ನಗಲಾಪುರ ವಂದಿಸಿದರು.

ನಾಡು ನುಡಿ ಸೇವೆ ಸಲ್ಲಿಸಿದ ಮಹನೀಯರಿಗೆ ಅಭಿನಂದಿಸಲಾಯಿತು. ಆನವಟ್ಟಿಯ ಕಾರ್ತಿಕ್ ಸಾಹುಕಾರ್, ಡಿ.ವಿ.ಎಸ್. ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷರಾದ ಕೊಳಲೆ ರುದ್ರಪ್ಪಗೌಡರು, ದಾವಣಗೆರೆ ವಿ.ವಿ. ಕುಲಸಚಿವರಾದ ಪ್ರೊ ಸಿ. ಕೆ ರಮೇಶ್, ಭದ್ರಾವತಿಯ ಕಸಾಪ ಕಟ್ಟಡ ಸಮಿತಿ ಅಧ್ಯಕ್ಷರಾದ ಪ್ರೊ ವಿಜಯದೇವಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ರಿಪ್ಪನ್ ಪೇಟೆ ಎಂ. ಎಂ. ಪರಮೇಶ್, ಕೆ. ಎಸ್. ಶಶಿಕಲಾ, ಉಮೇಶ್ ಆರಾಧ್ಯ, ಡಾ. ಜಿ. ಕೆ. ಪ್ರೇಮಾ, ಬಿಇಓ ರಮೇಶ್, ಕೆ. ಎಸ್. ಹುಚ್ಚರಾಯಪ್ಪ, ಯು. ಮಧುಸೂದನ್ ಐತಾಳ್, ನಗರದ ಅಂಬ್ರಯ್ಯಮಠ, ಶಿಕಾರಿಪುರ ಎಂ. ಜಿ. ಪ್ರಕಾಶ್, ಛಲಗಾರ ನಾಗರಾಜ್, ಪುಟ್ಟಸ್ವಾಮಿ, ನಿಸಾರ್ ಖಾನ್, ವಿದೂಷಿ ಉಮಾ ದಿಲೀಪ್, ಶ್ರೀನಿವಾಸ ಬಿ. ಜಿ., ಉಮೇಶ್ ಹಿರೇನಲ್ಲೂರು, ಜಿ. ನಾಗೇಶ್, ಡಾ. ಪ್ರಕಾಶ್ ಕೆ. ನಾಡಿಗ್, ಪತ್ರಕರ್ತ ಆರುಂಡಿ ಶ್ರೀನಿವಾಸ, ಸಿದ್ದೇಶ್, ಸಿದ್ದಪ್ಪ ಅವರನ್ನು ಅಭಿನಂದಿಸಲಾಯಿತು.

Gara

Gara

Leave a comment

error: Content is protected !!