Sunday, August 2, 2026
HomeಅಂಕಣI ಟ್ರಾಫಿಕ್ ದೇವರಾಜ್‌ರವರ I ಸಂಚಾರಿ ಸರ್ಜಿಕಲ್ ಡ್ಯೂಟಿ I

I ಟ್ರಾಫಿಕ್ ದೇವರಾಜ್‌ರವರ I ಸಂಚಾರಿ ಸರ್ಜಿಕಲ್ ಡ್ಯೂಟಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಟ್ರಾಫಿಕ್ ದೇವರಾಜ್‌ರವರ I ಸಂಚಾರಿ ಸರ್ಜಿಕಲ್ ಡ್ಯೂಟಿ I

ಹೀಗೊಂದು ಸುದ್ದಿ ಇತ್ತು, ಶಿವಮೊಗ್ಗದಲ್ಲಿ ಪ್ಲೆಕ್ಸಿ ಹಾವಳಿ ಅತಿರೇಖಕ್ಕೇರಿದ್ದು, ಇದರಿಂದ ನಗರೀಕರಣದ ಸ್ವಚ್ಚತೆ ಹಾಳಾಗುತ್ತಿದೆ, ಸುಗಮ ಸಂಚಾರಕ್ಕೆ ಅಡ್ಡಿ, ಅಪಘಾತಕ್ಕೆ ಕಾರಣ, ಸೌಹಾರ್ದತೆಗೆ ದಕ್ಕೆ, ವ್ಯಕ್ತಿ ಹಾಗೂ ಗುಂಪು ದ್ವೇಷದ ಸಂಘರ್ಷಕ್ಕೆ ಅಣಿಯಾಗುತ್ತಿದೆ, ಪೌರಕಾರ್ಮಿಕರ ಶ್ರಮ ದುರುಪಯೋಗ, ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗೆ ಆರ್ಥಿಕ ಹೊರೆಯಾಗುವಿಕೆಯಾಗುತ್ತಿರುವ ಈ ಪ್ಲೆಕ್ಸಿ ಅಳವಡಿಕೆ ನಿಷೇಧಿಸಿ, ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿ ವೈಜ್ಞಾನಿಕವಾದ ಹಂಪ್ಸ್ ನಿರ್ಮಾಣ ಜರೂರಿ ಇದೆ, ಎನ್ನುವ ಚರ್ಚೆಗಳು ನಗರದಲ್ಲಿ ಗ್ರಾಸವಾಗಿತ್ತು, ಏಕೆಂದರೆ ಕಳೆದ ಮಾಹೆಗಳಲ್ಲಿ ಇಂತಹುದೇ ಅವೈಜ್ಞಾನಿಕವಾದ ಹಂಪ್ಸ್‌ಗಳಿಂದ ಅಪಘಾತವಾಗಿ ಜೀವಕಳೆದುಕೊಂಡು ಉದಾಹರಣೆಗಳಿದೆ. ಈ ಹಂಪ್‌ಗಳೇ ಅಪಘಾತ ವಲಯವಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರ ವಿರುದ್ದವಾಗಿ ಜನಮಾತುಗಳು ಕೇಳಿಬಂದಿದ್ದವು ಇಂತಿವುಗಳ ಅಸಲಿ ಕಾರಣ ಮಾತ್ರದಿ ಇದಕ್ಕೊಂದು ಶಾಶ್ವತ ಪರಿಹಾರ ಹಾಗೂ ಸುಗಮ ಸಂಚಾರ ನಿರ್ಮಾಣದ ಅಗತ್ಯವಿದೆ ಎಂದು ಭಾವಿಸಿ ಫೀಲ್ಡ್‌ಗೆ ಇಳಿದಿದ್ದು ಸಂಚಾರಿ ಠಾಣಾ ಪೊಲೀಸರು,

ಸುಗಮ ಸಂಚಾರಕ್ಕಾಗಿ ನಗರದಲ್ಲಿನ ಪೂರ್ವ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ, ಅಕ್ಬರ್ ಮುಲ್ಲಾ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ, ಸ್ವಪ್ನ ಅವರುಗಳ ಕರ್ತವ್ಯ :

ಹೌದು ಇಲಾಖೆಗಳ ಸಹಯೋಗದಲ್ಲಿ ರಾತ್ರಿ-ಹಗಲೆನ್ನದೆ ಸಾರ್ವಜನಿಕರ ಜೀವರಕ್ಷಣೆಗಾಗಿ, ಸುಗಮ ಸಂಚಾರಕ್ಕಾಗಿ ನಗರದಲ್ಲಿನ ಪೂರ್ವ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಅಕ್ಬರ್ ಮುಲ್ಲಾ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸ್ವಪ್ನ ಸೇರಿದಂತೆ ಎರಡು ಠಾಣೆಯ ಸಿಬ್ಬಂದಿಗಳೊಂದಿಗೆ ಸಂಚಾರಿ ವೃತ್ತದ ವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಟ್ರಾಫಿಕ್ ದೇವರಾಜ್‌ರವರ ಸಂಚಾರಿ ಸರ್ಜಿಕಲ್ ಡ್ಯೂಟಿಗೆ ನಾಗರೀಕರು ಫಿದಾ ಆಗಿದ್ದಾರೆ. ರಸ್ತೆ ಸುರಕ್ಷತಾ ಸಪ್ತಾಹಗಳು, ನಾಗರೀಕ ಸಂಚಾರಿ ಜಾಗೃತಿ ಕಾರ್ಯಕ್ರಮಗಳು, ಎಲ್ಲವೂ ಜರುಗತ್ತಿದ್ದರೂ ಟ್ರಾಫಿಕ್ ಪೊಲೀಸರನ್ನು ನಿಂದಿಸುವುದು ತಪ್ಪಲಿಲ್ಲ, ಎಲ್ಲಿಯವರೆಗೂ ಶ್ರೀ ಸಾಮಾನ್ಯರು ಇದು ನಮ್ಮ ಜೀವ-ಜೀವನದ ಕಾಪಿಟ್ಟುಕೊಳ್ಳುವುದಕ್ಕಾಗಿಯೇ ಎನ್ನುವ ಅರಿವಿನೊಂದಿಗೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಾರೋ..? ಅದಾಗ ಮಾತ್ರವೇ ಇಂತಹ ಸರ್ಜಿಕಲ್ ಡ್ಯೂಟಿಗಳಿಗೆ ಗೌರವಿಸದಂತಾಗುತ್ತದೆ.

ಅವೈಜ್ಞಾನಿಕ ಹಂಪ್ಸ್‌ಗಳ ತೆರವು :

ರಸ್ತೆ ಅಸುರಕ್ಷಿತವಾಗಿಸಿಕೊಂಡರೆ ಅದೊಂದು ಅಪಘಾತ ವಲಯವೂ ಆಗುತ್ತದೆ ಮನೆಯಿಂದ ಹೊರಟವರು ಅಪಘಾತದಂತಹ ಘಟಾನುವಳಿಗಳಲ್ಲಿ ಸಿಲುಕಿ ಜೀವಹಾನಿ ಮಾಡಿಕೊಳ್ಳುತ್ತಾರೆ, ಹೀಗಾಗಿಯೇ ಜೀವಹಾನಿ ಆಗಬಾರದು ಅವರ ಕುಟುಂಬಗಳು ಬೀದಿ ಪಾಲಾಗಿ, ಸೂರಿನಲ್ಲಿ ಸೂತಕದ ಛಾಯೇ ಆವರಿಸಿಕೊಳ್ಳಬಾರದು, ಎನ್ನುವ ಅಸಲಿ ಸಂಗತಿಗಳಿಂದಾಗಿಯೇ ಮೊದಲು ನಗರದ ಎರಡು ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಗರೀಕರನ್ನು ಕಾಡುತ್ತಿದ್ದ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿ ವೇಗತಡೆಗಳನ್ನು ಮಾಡಲು ಅನುಕೂಲವಾಗುವಂತೆ ವೈಜ್ಞಾನಿಕವಾದ ಹಂಪ್ಸ್‌ಗಳು ಶಿವಮೊಗ್ಗದಲ್ಲಿ ದರ್ಶಿಸಿಕೊಳ್ಳುವುದಕ್ಕೆ ಇದೇ ಟ್ರಾಫಿಕ್ ದೇವರಾಜ್‌ರವರ ಸಂಚಾರಿ ಸರ್ಜಿಕಲ್ ಡ್ಯೂಟಿಗೆ ಶ್ಲಾಘನೆ ವ್ಯಕ್ತಪಡಿಸುವಂತಹದ್ದಾಗಿದೆ.

ಹಂಪ್ಸ್‌ಗಳ ವೈಜ್ಞಾನಿಕವಾದ ವಿಸ್ತೀರ್ಣದ ಅಳತೆಗಳು ವೈಟ್ ಅಂಡ್ ಬ್ಲಾಕ್ ಬಣ್ಣದ ಜೀಬ್ರಾ ಸ್ಟ್ರಿಪ್ಸ್‌ಗಳು

ನಿಜಕ್ಕೂ ರಾತ್ರಿ ವೇಳೆಯಲ್ಲಿ ಪತ್ರಿಕೆಯು ಎಲ್ಲೆಲ್ಲಿ ಹಂಪ್ಸ್ ನಿರ್ಮಾಣವಾಗಿದಿಯೋ ಅಲ್ಲಲ್ಲಿ ಖುದ್ದು ಧ್ವಿ-ಚಕ್ರ ವಾಹನದಲ್ಲಿ ರನ್ ಅಫ್ ಮಾಡಿ ಬಂದಿದೆ, ಹಂಪ್ಸ್‌ಗಳ ವೈಜ್ಞಾನಿಕವಾದ ವಿಸ್ತೀರ್ಣದ ಅಳತೆಗಳು ಅದರ ಮೇಲೆ ಸಾರ್ವಜನಿಕ ಚಾಲಕರಿಗೆ ಅನುಕೂಲವಾಗಲು ವೈಟ್ ಅಂಡ್ ಬ್ಲಾಕ್ ಬಣ್ಣದ ಜೀಬ್ರಾ ಸ್ಟ್ರಿಪ್ಸ್‌ಗಳು ಬಳಿಯಲಾಗಿದೆ, ಸ್ಪೀಡ್ ಬ್ರೇಕರ್‌ಗಾಗಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ ಇದು ರಾತ್ರಿಗಳ ಹೊತ್ತಿನಲ್ಲೂ ಸ್ಪಷ್ಟವಾಗಿ ಕಾಣುವಂತಿದೆ. ಇಂತಹ ಕೆಲಸಗಳನ್ನು ಟ್ರಾಫಿಕ್ ದೇವರಾಜ್‌ರವರು ತಮ್ಮ ಸಿಬ್ಬಂದಿಗಳ ತಂಡದೊಂದಿಗೆ ರಾತ್ರಿ ಮಡುಗಟ್ಟುವ ವೇಳೆಯಾದರೂ ಬೆಂಬಿಡದೆ ಶಿವಮೊಗ್ಗದಲ್ಲಿ ವೈಜ್ಞಾನಿಕವಾದ ಹಂಪ್ಸ್‌ಗಳ ನಿರ್ಮಾಣ ಮಾಡುವಲ್ಲಿ ನೋಡಿಕೊಂಡಿರುವುದು ಅವರಲ್ಲಿ ಜನಸ್ನೇಹಿ ಪೊಲೀಸ್ ಕರ್ತವ್ಯ ಕಾಣಬಹುದಾಗಿದೆ.

ಇಂದು ನಿಟ್ಟುಸಿರು ಬಿಟ್ಟ ಅಪಘಾತ ವಲಯವೇ ಆಗಿದ್ದ ರಸ್ತೆಗಳು :

ಹಂಪ್ಸ್‌ಗಳು ಸರಿಯಾದ ನಿಯಮಗಳನ್ನು ಪಾಲಿಸದಿದ್ದರೆ ಖಂಡಿತವಾಗಿ ಏನೆಲ್ಲಾ ಅಚಾತುರ್ಯಗಳಿಗೆ ವಾಹನಗಳು ಅದರ ಸವಾರರು ಅನುಭವಿಸುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಶಿವಮೊಗ್ಗದಲ್ಲಿ ಆಗಿರುವ ಘಟನೆಗಳು ಸಾಕ್ಷೀಕರಿಸುತ್ತದೆ, ಇವೆಲ್ಲವನ್ನು ಮನಗಂಡಿಯೇ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ, ತಿರುವುಗಳಲ್ಲಿ ಹೆಚ್ಚು ಸಂಭವಿಸುತ್ತಿದ್ದ ಅಪಘಾತ ವಲಯವೇ ಆಗಿದ್ದ ರಸ್ತೆಗಳು ಇಂದು ನಿಟ್ಟುಸಿರು ಬಿಟ್ಟಿದೆ, ಹಾಗೆಯೇ ಇದಕ್ಕೆ ಪೂರಕವಾಗಿ ಸಾರ್ವಜನಿಕರು ಸ್ಪಂಧಿಸಿದರೆ ನಿಜಕ್ಕೂ ನಮ್ಮ ರಸ್ತೆಗಳು ಅಫಘಾತದಿಂದ ಮುಕ್ತವಾಗುತ್ತದೆ ಎಂಬುದಾಗಿದೆ, ಘಟನೆ ಘಟಿಸಿದಾಗ ಹೇಗೆ ಇದೇ ಟ್ರಾಫಿಕ್ ಪೊಲೀಸರನ್ನು ನಿಂದನೆ ಮಾಡಲು ಮುಂದಾಗುವ ಜನತೆ, ಸಂಘಟನೆಗಳು ರಾತ್ರಿ ಹಗಲೆನ್ನದೆ ಹಂಪ್ಸ್‌ಗಳ ನಿರ್ಮಾಣಕ್ಕೆ ಶ್ರಮಿಸಿದ ಸಂಚಾರಿ ವೃತ್ತದ ಟ್ರಾಫಿಕ್ ದೇವರಾಜ್ ಹಾಗೂ ಪಿಎಸ್‌ಐ ಅಕ್ಬರ್ ಮುಲ್ಲಾ, ಸ್ವಪ್ನ ಸೇರಿದಂತೆ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಮುಂದಾಗಬೇಕಾಗಿದೆ, ಅಂತಹದೊಂದು ಕರ್ತವ್ಯ ಶಿವಮೊಗ್ಗದಲ್ಲಿ ಆಗಿದೆ.

ಜೀಬ್ರಾ ಕ್ರಾಸಿಂಗ್, ಒನ್‌ವ್ಹೆ, ನೋ ಎಂಟ್ರಿ, ಹಾರ್ನ್ ನಿಷೇದದಂತಹ ಫಲಕಗಳು :

ಇನ್ನೂ ಪಾದಚಾರಿಗಳಿಗೆ ಅನುವು ಆಗುವಂತೆ ನಿರ್ಮಿಸಿರುವ ಜೀಬ್ರಾ ಕ್ರಾಸಿಂಗ್, ಒನ್‌ವ್ಹೆ, ನೋ ಎಂಟ್ರಿ, ಹಾರ್ನ್ ನಿಷೇದದಂತಹ ಫಲಕಗಳು ನಗರದ ಸೌಂದರ್ಯವನ್ನು ಹೆಚ್ಚಿಸಿದೆ ಜನಸಾಮಾನ್ಯರ ಜೀವಹಾನಿಗಳನ್ನು ತಡೆಗಟ್ಟುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ನಾವುಗಳು ತಿಳಿದಕೊಳ್ಳಬೇಕಾದ ಸಾಂದರ್ಭಿಕತೆಗಳು ನಿಜಕ್ಕೂ ಅತ್ಯಗತ್ಯವಾಗಿದೆ,

ಮಲೆನಾಡಿನ ನಗರಿಯಲ್ಲಿ ಸದ್ದಿಟ್ಟ ಸರ್ಜಿಕಲ್ ಡ್ಯೂಟಿ :

ಒಟ್ಟಾರೆ ಟ್ರಾಫಿಕ್ ದೇವರಾಜ್‌ರವರ ಸಂಚಾರಿ ಸರ್ಜಿಕಲ್ ಡ್ಯೂಟಿ ಮಲೆನಾಡಿನ ನಗರಿಯಲ್ಲಿ ಸದ್ದಿಟ್ಟಿದೆ, ಯುವ ಮನಸಿನ ಎಸ್ಪಿ ನಿಖಿಲ್‌ರವರ ಮಾರ್ಗದರ್ಶನ ಪಡೆದು, ಚರ್ಚಿಸಿ ನಗರದಲ್ಲಿ ಕಾಡುತ್ತಿರುವ ಪ್ಲೆಕ್ಸಿ ಹಾವಳಿಗಳನ್ನು ತಡೆಗಟ್ಟಿದರೆ ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯ ನಾಮಾಂಕಿತಗೊಂದು ಹಿರಿಮೆ ಎನ್ನುವುದಾಗಿದೆ, ಹೇಗೆ ಅವೈಜ್ಞಾನಿಕವಾಗಿ ನಗರದ ರಸ್ತೆಗಳನ್ನು ಕಾಡುತ್ತಿದ್ದ ಹಂಪ್ಸ್‌ಗಳನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ನಿರ್ಮಾಣವಾಗಲು ಸಂಚಾರಿ ಪೊಲೀಸರ ಕರ್ತವ್ಯದ ಶ್ರಮ, ಜನಸ್ನೇಹಿ ಕರ್ತವ್ಯ ಕಾರಣವಾಗಿದಿಯೋ.. ಹಾಗೆಯೇ ಪ್ಲೆಕ್ಸಿ ಹಾವಳಿಗಳನ್ನು ತಡೆಗಟ್ಟಲು ಮುಂದಾಗಬೇಕು ಎನ್ನುವುದು ಈ ಬರಹದ ಅಂಬೋಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I