I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I
ಬೆಂಗಳೂರು: ನಟೋರಿಯಸ್ ಡಾನ್ ವಿಲ್ಸನ್ ಗಾರ್ಡನ್ ನಾಗನಿಗೆ (Wilson Garden Naga) ನ್ಯಾಯಾಲಯ ಜಾಮೀನು ನೀಡಿದೆ, ನಾಗನಿಗೆ ಜಾಮೀನು ಸಿಗುತ್ತಿದ್ದಂತೆ ಆತನ ಸಹಚರರು ಸಂಭ್ರಮಿಸಿದ್ದಾರೆ, ಕೆಲವರು ಸನ್ಮಾನಿಸಲು ಸಜ್ಜಾಗಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ,
ಇನ್ನೂ ವಿಲ್ಸನ್ ಗಾರ್ಡನ್ ನಾಗನ ಎಂಟ್ರಿಗೆ ಮತ್ತೊಂದು ಸುತ್ತು ಭೂಗತಲೋಕದಲ್ಲಿ ಚಟುವಟಿಕೆಗಳು ಗರಿಗೆದರಿದೆ, ಸೈಲೆಂಟ್ ಸುನೀಲನೇ ಡೆಡ್ಲಿ ವಿರೋಧಿಯಾಗಿರುವ ಕಾರಣಕ್ಕಾಗಿ ಇವರಿಬ್ಬರ ನಡುವಿನ ಕೋಲ್ಡ್ ವಾರ್, ಯಾಮಾರಿದರೆ ಹಾಟ್ ವಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಅವರವರ ಸಹಚರರು ಕೂಡ ಗುಮಾನಿಯ ಮೇಲೆ ಓಡಾಡುವಂತಹ ಪರಿಸ್ಥಿತಿ ಸೃಷ್ಟಿ ಆಗಿರುವ ಮಾತ್ರದಲ್ಲಿ ಶಿವಮೊಗ್ಗದ ಮೂಲದವನೊಬ್ಬ ಸೈಲೆಂಟ್ ಸುನೀಲನ ಜೊತೆಗೆ ಗುರುತಿಸಿಕೊಂಡ ಗುಮಾನಿನಲ್ಲಿ ಓಡಾಡಿಕೊಂಡಿರುವ ವಾಸ್ತವವಿದೆ,
ಏನೇ ಆಗಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಲ್ಲಾ ಸಿಂಡಿಕೇಟ್ ಗಳ ಕಪ್ಪು ನೆರಳನ್ನು ಬಳುವಳಿಯಾಗಿ ಹೊತ್ತು ತಂದಿರುವ ಕೀರ್ತಿ ಇದೇ ಶಿವಮೊಗ್ಗದ ವೈಟ್ ಕಾಲರ್ ಗೆ ಸೇರಿದ್ದಾಗಿದೆ, ಭೂಗತ ಲೋಕ ಎನ್ನುವುದೇ ಹೀಗೆ ತನ್ನ ರಕ್ಷಣೆಯ ಕಾಪಿಟ್ಟುಕೊಳ್ಳುವುದಕ್ಕೆ ಇನ್ನೋರ್ವರ ಬಲಿ ಅನಿವಾರ್ಯ ಎನ್ನುವಂತೆ ಚಟುವಟಿಕೆ ಕಟ್ಟಿಕೊಳ್ಳುವ ಈ ಮಾನಸೀಕತೆಯಲ್ಲಿ ಬೀದಿ ಹೆಣದ ಹರಣ ಆಗುವುದು ಮಾತ್ರ ಎಲಿಮೆಂಟರಿ ಕಯ್ಯಾಲಿಯ ಪೇಚಿಗೆ ಬಿದ್ದ ಯುವಕರು ಮಾತ್ರವಾಗಿದೆ.

