Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಶಿವಮೊಗ್ಗ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ I ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ I
ಸೂರ್ಯಗಗನ

I ತುಂಗಾ ಹೊಳೆಯ ಸೇತುವೆ ನಿರ್ಮಾಣ I ಲೋಕೋಪಯೋಗಿ ಸಚಿವರಿಂದ ಭರವಸೆ I ಹೆಚ್.ಸಿ ಯೋಗೇಶ್ I

I ತುಂಗಾ ಹೊಳೆಯ ಸೇತುವೆ ನಿರ್ಮಾಣ I ಲೋಕೋಪಯೋಗಿ ಸಚಿವರಿಂದ ಭರವಸೆ I ಹೆಚ್.ಸಿ ಯೋಗೇಶ್ I ಶಿವಮೊಗ್ಗ : ನಗರದ ತುಂಗಾ ಹೊಳೆಯ ಸೇತುವೆ ನಿರ್ಮಾಣದ ಕಾಮಗಾರಿ ಯೋಜನೆಗೆ ಮುಂದಾಗಬೇಕೆಂದು ಕಾಂಗ್ರೆಸ್ ಮುಖಂಡರಾದ ಹೆಚ್.ಸಿ ಯೋಗೇಶ್‌ರವರ ನೇತೃತ್ವದಲ್ಲಿ ನಿಯೋಗ ತೆರಳಿ…

I ತುಂಗಾ ಹೊಳೆಯ ಸೇತುವೆ ನಿರ್ಮಾಣ I ಲೋಕೋಪಯೋಗಿ ಸಚಿವರಿಂದ ಭರವಸೆ I ಹೆಚ್.ಸಿ ಯೋಗೇಶ್ I

ಶಿವಮೊಗ್ಗ : ನಗರದ ತುಂಗಾ ಹೊಳೆಯ ಸೇತುವೆ ನಿರ್ಮಾಣದ ಕಾಮಗಾರಿ ಯೋಜನೆಗೆ ಮುಂದಾಗಬೇಕೆಂದು ಕಾಂಗ್ರೆಸ್ ಮುಖಂಡರಾದ ಹೆಚ್.ಸಿ ಯೋಗೇಶ್‌ರವರ ನೇತೃತ್ವದಲ್ಲಿ ನಿಯೋಗ ತೆರಳಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿತು,

ಈ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ತುಂಗಾ ಹೊಳೆ ಸೇತುವೆಯ ವಿಚಾರವಾಗಿ, ಶಿವಮೊಗ್ಗ ನಗರದ ತುಂಗಾ ನದಿ ಸೇತುವೆ ನಿರ್ಮಿತಗೊಂಡು ಸುಮಾರು ನೂರು ವರ್ಷಗಳಾಗಿದ್ದು ಈ ಒಂದು ಸೇತುವೆಗೆ ಇದರದ್ದೇ ಆದ ಇತಿಹಾಸವು ಇದೆ, ಅಂದಿನ ಮಹಾರಾಜರುಗಳಿಂದ ಹಿಡಿದು ಈಗಲೂ ಸಹ ಸುಮಾರು ಕೋಟ್ಯಂತರ ಜನರು ಈ ಸೇತುವೆ ಮೇಲೆ ಓಡಾಡಿದ್ದಾರೆ, ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಅನಾಹುತಗಳು ಸಹ ಆಗಿರುವುದಿಲ್ಲ. ಶಿವಮೊಗ್ಗ ನಗರದಲ್ಲಿನ ತುಂಗಾ ಹೊಳೆಯನ್ನು ದಾಟಿ ಬೇರೆ ಬೇರೆ ನಗರಗಳಿಗೆ ಸಂಪರ್ಕ ಒದಗಿಸಿ ಪ್ರಯಾಣಿಸಲು ಅನುಕೂಲವಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.

ಹಾಗೂ ಮಳೆಗಾಲದಲ್ಲಿ ಬಾಗಿನ ಬಿಡುವುದು ಪೂಜೆಗಳನ್ನು ನೆರವೇರಿಸಿದ್ದು ಸಹ ಇದೆ. ೨೦೧೯ರ ಸಂದರ್ಭದಲ್ಲಿ ಆದಂತಹ ಭಾರಿ ಮಳೆಗೆ ಈ ಸೇತುವೆಗೆ ಬಹಳಷ್ಟು ಭಾಗ ತೊಂದರೆಯಾಗಿದ್ದು ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾಮಗಾರಿ ಮಾಡಿರುತ್ತಾರೆ. ಶಿವಮೊಗ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ನೂತನ ಉದ್ಯಮಗಳು ಪ್ರಾರಂಭವಾಗಿದ್ದು ಜನರ ಹೋರಾಟವು ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಈ ಸೇತುವೆ ಮೇಲೆ ಓಡಾಡಲು ತೊಂದರೆಯಾಗುತ್ತಿದ್ದು. ೨೦೨೬-೨೭ನೇ ಸಾಲಿನಲ್ಲಿ ಸುಮಾರು ೨,೦೦೦ ಕೋಟಿ ರೂಪಾಯಿಗಳನ್ನು ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣತೆಂದು ಇಟ್ಟಿರುವ ಹಣದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು ೪೦ ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು ಈ ಹಣವನ್ನು ಬಿಡುಗಡೆಗೊಳಿಸಿ ತಕ್ಷಣ ಈ ಕಾಮಗಾರಿಗೆ ಚಾಲನೆ ನೀಡಬೇಕಾಗಿ ಹಾಗೂ ಪ್ರಮುಖ ಆದ್ಯತೆಯನ್ನು ನೀಡಿ ಭಾರಿ ವಾಹನಗಳು ಈ ಸೇತುವೆಯಲ್ಲಿ ಓಡಾಡಲು ಸಾಧ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು ಇದರ ವಿಚಾರವಾಗಿ ಮನವಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ,

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ಅವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನಾರ್ ಪಾಷರವರು, ಹಾಗೂ ಯುವ ಮುಖಂಡರಾದ ಯಾಹ್ಯ ಸೇರಿದಂತೆ ಮಧುಸೂದನ್ ರವರು ಉಪಸ್ಥಿತರಿದ್ದರು.

Gara Srinivas

Gara Srinivas

Leave a comment

error: Content is protected !!