Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಬ್ರಾಹ್ಮಣ ಸಮುದಾಯದ ಮಹಿಳೆಯರಿಂದ ತಯಾರಿಕೆಯ ಆಹಾರ ಮತ್ತು ವಸ್ತುಗಳು I ಮಾರಾಟ ಪ್ರದರ್ಶನ-ವಿಪ್ರ ಬ್ಯುಸಿನೆಸ್ ಪೋರಂ 

I ಬ್ರಾಹ್ಮಣ ಸಮುದಾಯದ ಮಹಿಳೆಯರಿಂದ ತಯಾರಿಕೆಯ ಆಹಾರ ಮತ್ತು ವಸ್ತುಗಳು I ಮಾರಾಟ ಪ್ರದರ್ಶನ-ವಿಪ್ರ ಬ್ಯುಸಿನೆಸ್ ಪೋರಂ I ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ವಿಪ್ರ ಬ್ಯುಸಿನೆಸ್ ಪೋರಂ ವತಿಯಿಂದ ಮಾತೃ ವೈಭವ ಕಾರ್ಯಕ್ರಮ ಬ್ರಾಹ್ಮಣ…

I ಬ್ರಾಹ್ಮಣ ಸಮುದಾಯದ ಮಹಿಳೆಯರಿಂದ ತಯಾರಿಕೆಯ ಆಹಾರ ಮತ್ತು ವಸ್ತುಗಳು I ಮಾರಾಟ ಪ್ರದರ್ಶನ-ವಿಪ್ರ ಬ್ಯುಸಿನೆಸ್ ಪೋರಂ I

ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ವಿಪ್ರ ಬ್ಯುಸಿನೆಸ್ ಪೋರಂ ವತಿಯಿಂದ ಮಾತೃ ವೈಭವ ಕಾರ್ಯಕ್ರಮ ಬ್ರಾಹ್ಮಣ ಸಮುದಾಯದ ಮಹಿಳೆಯರ ತಯಾರಿಕೆ ಮಾಡಿದ ಆಹಾರ ಮತ್ತು ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ, ವಿಪ್ರ ಬ್ಯುಸಿನೆಸ್ ಪೋರಂ ಅಧ್ಯಕ್ಷರಾದ ಆನಂದ್ ರವರು,ಕಾರ್ಯದರ್ಶಿ ವಿಜಯರಾವ್, ವಿಪ್ರ ಸಮಾಜದ ವಸುಧ, ಪದ್ಮ ಶೇಷಾದ್ರಿರವರು ದೀಪ ಬೆಳಗಿಸಿ ಉದ್ಘಾಟನೆ, ನಂತರ ಪ್ರದರ್ಶನ ಮಾರಾಟ ಮಳಿಗೆಯನ್ನು ಉದ್ಘಾಟಸಿದರು.

*ಅಸಗೋಡು ಜಯಸಿಂಹರವರು* ಮಾತನಾಡಿ ಬ್ರಾಹ್ಮಣರು ಸರ್ವೇ ಜನಾಃ ಸುಖಿನೋ ಭವಂತು ಎಂದು ಎಲ್ಲರ ಹಿತವನ್ನು ಕಾಪಾಡುತ್ತಾರೆ. ಬ್ರಾಹ್ಮಣರು ಸಮಾಜಕ್ಕೆ ಅನಿವಾರ್ಯ. ಸಂಸ್ಕಾರ ಮತ್ತು ಮಾನವೀಯತೆ ಮುಖ್ಯ. ಸರಿಯಾದ ದಾರಿಯಲ್ಲಿ ಸಾಗಬೇಕು. ತಂದೆ, ತಾಯಿಗೆ ಮಕ್ಕಳು ಗೌರವ ಕೊಡಬೇಕು. ಮಕ್ಕಳಿಗೆ ಸಂಸ್ಕರ ಕೊಡಿಸಬೇಕು. ಸಮಾಜದಲ್ಲಿ ಹಣ ಇರಬೇಕು, ಹಣದ ವ್ಯಾಮೋಹಕ್ಕೆ ಬೀಳಬಾರದು. ಬ್ರಾಹ್ಮಣರು ಅಲ್ಪತೃಪ್ತರು. ಬ್ರಾಹ್ಮಣರು ತಯಾರಿಸಿದ ಆಹಾರ ಪದಾರ್ಥಗಳಿಗೆ ಉತ್ತಮ ಬೇಡಿಕೆ ಇದೆ.

ಬ್ರಾಹ್ಮಣ ಮಹಿಳೆಯರು ಸ್ವಾವಲಂಭಿ, ಸ್ವಾಭಿಮಾನಿಯಾಗಿ ಬದುಕಲು ಸ್ವಂತ ವ್ಯಾಪಾರ ಉದ್ಯಮಿ ಪ್ರಾರಂಭ ಮಾಡಿ ನಮ್ಮ ಅಭಿವೃದ್ಧಿ ಮಂಡಳಿಯಿಂದ ಸುಲಭ ಸಾಲ, ಸೌಲಭ್ಯ ಸಿಗಲಿದೆ. ಮಂಡಳಿಯಿಂದ ಪ್ರತಿಯೊಬ್ಬ ಮಹಿಳೆಗೆ 2ಲಕ್ಷ ಸಾಲ ಸೌಲಭ್ಯ ಸಿಗಲಿದೆ. ಇದುವರಗೆ 1116 ಜನರಿಗೆ ತಲಾ 2ಲಕ್ಷ ಸಾಲ ನೀಡಲಾಗಿದೆ ಇದರಲ್ಲಿ 376 ಹೆಣ್ಣು ಮಕ್ಕಳು ಇದರಲ್ಲಿ ಫಲಾನುಭವಿಗಳು ಇದ್ದಾರೆ.

ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50ಕೋಟಿ ಅನುದಾನ ನೀಡಿದ್ದರು. ಆರ್.ವಿ.ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ರವರ ಸಹಕಾರ ಮರೆಯುವಂತಿಲ್ಲ. ಮಂಡಳಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನಗದು ಪುರಸ್ಕಾರ ನೀಡಲಾಗುತ್ತಿದೆ. ಮೆಡಿಕಲ್, ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದು ಹೇಳಿದರು.

*ಅಧ್ಯಕ್ಷರಾದ ಆನಂದ್ ರವರು* ಮಾತನಾಡಿ ಮಾತೃ ವೈಭವ ಎಂದರೆ ನಮ್ಮ ವಿಪ್ರ ಸಮುದಾಯದವರು ಸ್ವಾವಲಂಭಿ ಮತ್ತು ಸ್ವಯಂ ಉದ್ಯೋಗದಿಂದ ತಯಾರಿಕೆ ಮಾಡಿದ ಆಹಾರ ಪದಾರ್ಥಗಳು ಮತ್ತು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ.

ಮಹಿಳೆಯರು ತಾಯಿ, ತಂಗಿ ಅಕ್ಕನಾಗಿ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುವಳು ಅವರಿಗೆ ಗೌರವ ಸಲ್ಲಿಸಬೇಕಾಗಿದ್ದು ನಮ್ಮ ಕರ್ತವ್ಯ ಎಂದು ಹೇಳಿದರು. 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶನ ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಹಯೋಗ ನೀಡಿತು.

Gara Srinivas

Gara Srinivas

Leave a comment

error: Content is protected !!