Sunday, August 2, 2026
Homeಸೂರ್ಯಗಗನI ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ I ವಿವಿಧ ಸಂಘಟನೆಗಳ ಆಶ್ರಯದಲ್ಲಿ I ವಕೀಲರ...

I ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ I ವಿವಿಧ ಸಂಘಟನೆಗಳ ಆಶ್ರಯದಲ್ಲಿ I ವಕೀಲರ ಸಂಘದ ಚಳುವಳಿ ಜಾಥ I

I ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ I ವಿವಿಧ ಸಂಘಟನೆಗಳ ಆಶ್ರಯದಲ್ಲಿ I ವಕೀಲರ ಸಂಘದ ಚಳುವಳಿ ಜಾಥ I

ಶಿವಮೊಗ್ಗ : ಹೈಕೋರ್ಟ್ ಸಂಚಾರಿ ಪೀಠ ವಿಚಾರವನ್ನು ಮುಕ್ತ ಚರ್ಚೆಯ ಮೂಲಕ ಪರಿಹರಿಸಿ: ಮುರುಘರಾಜೇಂದ್ರ ಸ್ವಾಮೀಜಿ
ಶಿವಮೊಗ್ಗ:ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಯನ್ನು ರಾಜ್ಯ ಸರ್ಕಾರ ಮುಕ್ತ ಚರ್ಚೆಯ ಮೂಲಕ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ ಎಂದು ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಜಿಲ್ಲಾ ವಕೀಲರ ಸಂಘದ ವತಿಯಿಂದ ಶನಿವಾರ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗಾಗಿ ಆಯೋಜಿಸಿದ್ದ ಬೃಹತ್ ಜಾಥಾ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

 

ಬಸವಕೇಂದ್ರದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಶಿವಮೊಗ್ಗವು ಹೈಕೋರ್ಟ್ ಸಂಚಾರಿ ಪೀಠಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಧ್ಯವರ್ತಿ ಕೇಂದ್ರವಾಗಿರುವುದರ ಜೊತೆಗೆ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಜನಸಂಖ್ಯೆ ಹಾಗೂ ನ್ಯಾಯಾಂಗ ಸೇವೆಗಳ ಅಗತ್ಯವನ್ನು ಪರಿಗಣಿಸಿ ಶಿವಮೊಗ್ಗದಲ್ಲೇ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಗೋಪಿನಾಥ ಮಾತನಾಡಿ, ಹೈಕೋರ್ಟ್ ಪೀಠ ಜನರಿಗೆ ಅನುಕೂಲಕರ ಸ್ಥಳದಲ್ಲಿರಬೇಕು. ಶಿವಮೊಗ್ಗದಿಂದ ಮಂಗಳೂರಿಗೆ ಸಂಚಾರ ಸುಲಭವಲ್ಲ. ಒಂದೇ ದಿನದಲ್ಲಿ ತೆರಳಿ ಮರಳುವುದು ಕಷ್ಟಕರವಾಗಿರುವುದರಿಂದ ಶಿವಮೊಗ್ಗದಲ್ಲೇ ಪೀಠ ಸ್ಥಾಪನೆಗೆ ಹೆಚ್ಚಿನ ಒತ್ತಡ ತರಬೇಕಾಗಿದೆ ಎಂದು ಹೇಳಿದರು.

ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್ ಮಾತನಾಡಿ, ಮಂಗಳೂರಿಗಿಂತ ಶಿವಮೊಗ್ಗದಲ್ಲೇ ಸಂಚಾರಿ ಪೀಠ ಸ್ಥಾಪನೆಯಾಗಬೇಕು. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಜನಪರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಅಶೋಕ್ ಭಟ್ ಮಾತನಾಡಿ, ಶಿವಮೊಗ್ಗವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದು ಸೂಕ್ತವಲ್ಲ. ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಹೈಕೋರ್ಟ್‌ಗೆ ತೆರಳುವ ಪ್ರಕರಣಗಳ ಸಂಖ್ಯೆಯನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು. ಶಿವಮೊಗ್ಗದೊಂದಿಗೆ ಇನ್ನೂ ಕೆಲವು ಜಿಲ್ಲೆಗಳನ್ನು ಸೇರಿಸಿದರೆ ಪ್ರಕರಣಗಳ ಸಂಖ್ಯೆ ಮತ್ತು ಜನಸಂಖ್ಯೆ ಎರಡೂ ಹೆಚ್ಚಾಗಿ ಪೀಠ ಸ್ಥಾಪನೆಗೆ ಬಲವಾದ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಸಭೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ, ಎಚ್.ಸಿ. ಯೋಗೇಶ್, ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಸೇರಿದಂತೆ ಹಲವು ಗಣ್ಯರು ಮಾತನಾಡಿ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿದರು.
ಹಿರಿಯ ವಕೀಲ ಬಸಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕೆ.ಪಿ. ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಜಿಲ್ಲಾ ನ್ಯಾಯಾಲಯ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಥಾ ನಡೆಯಿತು. ೧೫ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I