I ಸಾನಿಧ್ಯ ಸಂಭ್ರಮದಲ್ಲಿ I ಸಮಾಜಮುಖಿ ಕಟ್ಟಾಳು I ಕಟ್ಟೆ ಪ್ರವೀಣ್ರವರಿಗೆ I ಸನ್ಮಾನ I
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಾಧವ ಮಾಂಗಲ್ಯ ಮಂದಿರದಲ್ಲಿ ಸಾನಿಧ್ಯ ಸಂಭ್ರಮ ಮೀಡಿಯಾದ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖೇನ ಉದ್ಘಾಟಿಸಿದ ಶಾಸಕರಾದ ಆರಗ ಜ್ಞಾನೇಂದ್ರರವರು, ಮಾಧ್ಯಮದ ಹಾದಿ ಬಲು ಕ್ಲಿಷ್ಟಕರ, ಆದರೂ ಸವಾಲಿನ ನಡುವೆ ಒಂದು ವರ್ಷದ ವಾರ್ಷಿಕ ಸಂಭ್ರಮವನ್ನು ಸಾಮಾಜಿಕವಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು, ಹಾಗೂ ಸಾನಿಧ್ಯ ಸಂಭ್ರಮ ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸೊಗಡಿತ್ತು, ಜನಾನುರಾಗಿಯಾಗಿ ಸೇವೆ ಸಲ್ಲಿಸಿದ ಸಾಧಕರಿಗೆ ಸಾಧಕ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಈ ಸಂದರ್ಭದಲ್ಲಿ ತೀರ್ಥಹಳ್ಳಿಯ ತಾಲ್ಲೂಕಿನ ಹೋಬಳಿಯಲ್ಲಿ ವಾಸವಾಗಿರುವ ಕಟ್ಟೆ ಪ್ರವೀಣ್ರವರು ಹೋರಾಟದ ನೆಲೆ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬಹುತ್ವ ಹಾದಿಯೊಳು ಸೇವೋನ್ಮುಖಿಯಾಗಿ ಯುವ ಸಮುದಾಯ ಕಟ್ಟಾಳು ಆಗಿರುವ ಅವರನ್ನು ಗುರುತಿಸಿ ಸಾನಿಧ್ಯ ಸಂಭ್ರಮದಲ್ಲಿ ಸನ್ಮಾನಿಸಿರುವುದು ಶ್ಲಾಘನೀಯ,
ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಹಾಗೂ ಕಾಂಗ್ರೆಸ್ ರಾಜ್ಯ ನಾಯಕರು ಎಂ,ಎ,ಡಿ,ಬಿ. ಅಧ್ಯಕ್ಷರಾದ ಆರ್.ಎಂ ಮಂಜುನಾಥ ಗೌಡ ಸೇರಿದಂತೆ ಸಾನಿಧ್ಯ ಮೀಡಿಯಾದ ಸಂಪಾದಕೀಯ ಮಂಡಳಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

