Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

I ವಾದಿರಾಜ್ -ಕಣ್ಣಪ್ಪ, ಶ್ರೀಕಾಂತ್ ಭಟ್ ಅವರಿಗೆ I ಕೆಯುಡಬ್ಲೂಜೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ I

I ವಾದಿರಾಜ್ -ಕಣ್ಣಪ್ಪ, ಶ್ರೀಕಾಂತ್ ಭಟ್ ಅವರಿಗೆ I ಕೆಯುಡಬ್ಲೂಜೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ I ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ಜಿ. ವಾದಿರಾಜ ಕಮರೂರು, ಪತ್ರಿಕೋದ್ಯಮಿ ಕಣ್ಣಪ್ಪ ಭದ್ರಾವತಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2025 ನೇ ಸಾಲಿನ…

I ವಾದಿರಾಜ್ -ಕಣ್ಣಪ್ಪ, ಶ್ರೀಕಾಂತ್ ಭಟ್ ಅವರಿಗೆ I ಕೆಯುಡಬ್ಲೂಜೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ I

ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ಜಿ. ವಾದಿರಾಜ ಕಮರೂರು, ಪತ್ರಿಕೋದ್ಯಮಿ ಕಣ್ಣಪ್ಪ ಭದ್ರಾವತಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2025 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2025 ನೇ ಸಾಲಿನ “ಶ್ರೀ.ಎಂ ನಾಗೇಂದ್ರರಾವ್ ದತ್ತಿ ಪ್ರಶಸ್ತಿ” ಗೆ ಹಿರಿಯ ಪತ್ರಿಕೋದ್ಯಮಿ ಭದ್ರಾವತಿಯ ಕಣ್ಣಪ್ಪ ಮತ್ತು “ಎಸ್ ಹೆಚ್ ರಂಗಸ್ವಾಮಿ ದತ್ತಿ ಪ್ರಶಸ್ತಿ” ಗೆ ಹೊಸದಿಗಂತ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಜಿ.ವಾದಿರಾಜ್ ಕಮರೂರು ಅವರನ್ನು ಆಯ್ಕೆ ಮಾಡಲಾಗಿದೆ.

“ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿಗೆ” ವಿಜಯವಾಣಿ ಪತ್ರಿಕೆಯ ಬೆಂಗಳೂರು ಮುಖ್ಯವರದಿಗಾರ ಶಿವಮೊಗ್ಗ ಮೂಲದ ಶ್ರೀಕಾಂತ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಖ್ಯಾತ ಪತ್ರಕರ್ತರೂ, ಏಚ್ಚರಿಕೆ ಕನ್ನಡ ದಿನಪತ್ರಿಕೆ ಸ್ಥಾಪಕರೂ ಅಗಿದ್ದ ದಿವಂಗತ ಎಂ ನಾಗೇಂದ್ರ ರಾವ್, ನಾವಿಕ ಕನ್ನಡ ದಿನಪತ್ರಿಕೆಯ ಸಂಸ್ಥಾಪಕರಾದ ದಿವಂಗತ ಎಸ್ ಹೆಚ್ ರಂಗಸ್ವಾಮಿ ಹಾಗೂ ಖ್ಯಾತ ಹಿರಿಯಪತ್ರಕರ್ತರಾದ ಮಿಂಚು ಶ್ರೀನಿವಾಸ್ ಅವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಮಟ್ಟದ ದತ್ತಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಜಿ. ವಾದಿರಾಜ್ ಕಮರೂರು: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಶಿವಮೊಗ್ಗ ಜಿಲ್ಲೆಯ ಖ್ಯಾತ ನಾವಿಕ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ. ಕಳೆದ ೧೭ ವರ್ಷಗಳಿಂದ ಹೊಸದಿಗಂತ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ, ಉಪಸಂಪಾದಕರಾಗಿ, ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ಎಸ್ ಎಚ್ ರಂಗಸ್ವಾಮಿ ದತ್ತಿಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

ಶ್ರೀಕಾಂತ್ ಭಟ್: ಶಿವಮೊಗ್ಗ ಜಿಲ್ಲೆಯಿಂದ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಶ್ರೀಕಾಂತ್ ಭಟ್ ರಾಜ್ಯಮಟ್ಟದಲ್ಲಿ ಗಮನಸೆಳೆದ ಕ್ರಿಯಾಶೀಲ ಪತ್ರಕರ್ತ, ಜಿಲ್ಲೆಯ ಹಲವಾರುದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದು, ಬೆಂಗಳೂರಿನಲ್ಲಿ ಕನ್ನಡ ಪ್ರಭ ಸೇರಿದಂತೆ ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವೃತ್ತಿಕೌಶಲ್ಯ ತೋರಿದ್ದಾರೆ. ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ರಾಜಕೀಯ ವಿಭಾಗದ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೃತ್ತಿಬದ್ದತೆ ಮತ್ತು ಸೇವೆಯನ್ನು ಪರಿಗಣಿಸಿ ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಣ್ಣಪ್ಪ: ಜಿಲ್ಲೆಯ ಕಂಠೀರವ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ವೃತ್ತಿ ಆರಂಭಿಸಿದ್ದು, ಕಳೆದ ೩೫ ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಸ್ತುತ ಉಷಾಮಹಿ ಕನ್ನಡ ದಿನಪತ್ರಿಕೆ ಯ ಸುದ್ದಿ ಸಂಪಾದಕರೂ ಆಗಿದ್ದಾರೆ. ಪತ್ರಿಕಾ ಸಂಘಟನೆಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಭದ್ರಾವತಿ ಪ್ರೆಸ್ ಟ್ರಸ್ಟ್ ನ ನಾಯಕತ್ವ ವಹಿಸಿಕೊಂಡು ಪತ್ರಕರ್ತರ ಕ್ಷೇಮಾಭಿವೃದ್ದಿಗೆ ದುಡಿಯುತ್ತಾ ಬಂದಿದ್ದಾರೆ. ಸಾಮಾಜಿಕ ಸಂಘಟನೆಗಳಲ್ಲೂ ಇವರ ಸೇವೆ ಅನನ್ಯವಾದುದ್ದು, ಪತ್ರಿಕೋದ್ಯಮದಲ್ಲಿ ಇವರ ಸೇವೆಯನ್ನು ಗುರುತಿಸಿ ಎಂ .ನಾಗೇಂದ್ರ ರಾವ್ ದತ್ತಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಫಲಕ ಹೊಂದಿದೆ. ಜುಲೈ 25ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮಾರಂಭದಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ದತ್ತಿಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನಕಾರ್ಯದರ್ಶಿ ಜಿ.ಸಿ ಲೋಕೇಶ್ ತಿಳಿಸಿದ್ದಾರೆ.

Gara Srinivas

Gara Srinivas

Leave a comment

error: Content is protected !!