Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

I ನಗರದ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ನಡೆದ I ಮೂರು ದಿನಗಳ ಕಾಲದ I ಪೂಜ್ಯ ಚಾರಿಜಿ ಮಹಾರಾಜರ ೯೯ನೇ ಜನ್ಮ ದಿನಾಚರಣೆ I

I ನಗರದ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ನಡೆದ I ಮೂರು ದಿನಗಳ ಕಾಲದ I ಪೂಜ್ಯ ಚಾರಿಜಿ ಮಹಾರಾಜರ ೯೯ನೇ ಜನ್ಮ ದಿನಾಚರಣೆ I ಶಿವಮೊಗ್ಗ : ನಗರದ ಶ್ರೀ ರಾಮಚಂದ್ರ ಮಿಷನ್ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ಪೂಜ್ಯ ಚಾರಿಜಿ ಮಹಾರಾಜರ…

I ನಗರದ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ನಡೆದ I ಮೂರು ದಿನಗಳ ಕಾಲದ I ಪೂಜ್ಯ ಚಾರಿಜಿ ಮಹಾರಾಜರ ೯೯ನೇ ಜನ್ಮ ದಿನಾಚರಣೆ I

ಶಿವಮೊಗ್ಗ : ನಗರದ ಶ್ರೀ ರಾಮಚಂದ್ರ ಮಿಷನ್ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ಪೂಜ್ಯ ಚಾರಿಜಿ ಮಹಾರಾಜರ ೯೯ ನೇ ಜನ್ಮದಿನವನ್ನು ವಿಶೇಷವಾಗಿ ವಿವಿದೆಡೆ ನಿರಂತರವಾಗಿ ಮೂರು ದಿನಗಳ ಕಾಲ ಆಚರಿಸಲಾಯಿತು,

ಪೂಜ್ಯ ಚಾರಿಜಿ ಮಹಾರಾಜರ ಆಧ್ಯಾತ್ಮಿಕ ಪಯಣ, ಸಂದೇಶಗಳು, ವಿಶ್ವ ಪ್ರಾರ್ಥನೆಗಳನ್ನು ಮನುಷ್ಯ ಮತದ ಶಾಂತಿ ಮತ್ತು ವೃದ್ಧಿಗೆ ಹಾರ್ಟ್‌ಪುಲ್‌ನೆಸ್ ಪಾತ್ರವನ್ನು ತಿಳಿಸಿಕೊಡಲು ಸಂಸ್ಥೆಯ ನಿರ್ದೇಶಕರಾದ ಪ್ರೊ. ಡಾ. ಮೋಹನ್ ದಾಸ್ ಹೆಗ್ಡೆ ಅವರು ಧ್ಯಾನ ಕೇಂದ್ರಕ್ಕೆ ಆಗಮಿಸಿದ್ದರು, ಈ ಧ್ಯಾನದ ಪರಿಯು ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿದ್ದು, ಹೃದಯದ ಮೇಲಿನ ಗಮನವನ್ನು ಕೇಂದ್ರೀಕರಿಸಿ ಆಂತರಿಕ ಪಯಣದಲ್ಲಿ ಚಲಿಸುವ ಸರಳ ಆಧ್ಯಾತ್ಮಿಕ ಮಾರ್ಗವಾಗಿರುವ ಸಹಜ ಮಾರ್ಗದಲ್ಲಿ ಶಿವಮೊಗ್ಗ ಸೇರಿದಂತೆ ಭದ್ರಾವತಿ, ನ್ಯಾಮತಿ ಭಾಗಗಳಿಂದ ಅಭ್ಯಾಸಿಗಳು ಮೂರು ದಿನದ ಭಂಡಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

ಹಾರ್ಟ್‌ಪುಲ್‌ನೆಸ್ ಧ್ಯಾನವೆಂದರೆ : ಹೃದಯದಲ್ಲಿ ದೈವಿಕ ಬೆಳಕಿದೆ ಎಂದು ಭಾವಿಸಿ ಮಾಡುವ ಸರಳ ಧ್ಯಾನ. ಶುದ್ಧೀಕರಣ ಇಡೀ ದಿನದ ಒತ್ತಡ, ಆತಂಕ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಸಂಜೆಯ ವೇಳೆ ಹೊರಹಾಕುವ ಪ್ರಕ್ರಿಯೆ.ಪ್ರಾರ್ಥನೆ, ಮಲಗುವ ಮುನ್ನ ಆಂತರಿಕ ಸಂಪರ್ಕವನ್ನು ಬಲಪಡಿಸಿಕೊಳ್ಳಲು ಮಾಡುವ ಪ್ರಾರ್ಥನೆ.ಪ್ರಾಣಾಹುತಿ ತರಬೇತುದಾರರ ಮೂಲಕ ಹರಿಯುವ ಸೂಕ್ಷ್ಮ ಶಕ್ತಿ, ಇದು ಧ್ಯಾನವನ್ನು ಹೆಚ್ಚು ಆಳವಾಗಿಸುವ ಮಾರ್ಗವಾಗಿರುವ ಈ ಧ್ಯಾನದಲ್ಲಿ ಶಿವಮೊಗ್ಗದಲ್ಲಿ ಬಹುತೇಕ ಅಭ್ಯಾಸಿಗಳಿದ್ದಾರೆ,

ಮೂರು ದಿನಗಳ ಕಾಲ ಆಧ್ಯಾತ್ಮಿಕ ಪಯಣ : ಜುಲೈ.೨೩ರಂದು ಆರಂಭವಾದ ಕಾರ್ಯಕ್ರಮದಲ್ಲಿ ಮೊದಲು ಅಪರಾಹ್ನ ಪಶುವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಧ್ಯಾನ ಅದರ ಅವಧಿಗಳು ಮತ್ತು ಜ್ಞಾನೋದಯದ ಬಗ್ಗೆ ಹಾಗೂ ಒತ್ತಡ ನಿರ್ವಹಣೆ ಕುರಿತಾಗಿ ಪ್ರೊ. ಡಾ. ಮೋಹನ್ ದಾಸ್ ಹೆಗ್ಡೆ ತಿಳಿಸಿಕೊಟ್ಟರು, ವೇದಿಕೆಯಲ್ಲಿ ಡಾ.ಪ್ರಕಾಶ್ ನಡೂರು, ನಟರಾಜ್, ಡಾ. ಅರುಣ್ ಖರಾಟೆ, ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾರ್ಟ್‌ಪುಲ್ ನೆಸ್ ಧ್ಯಾನದ ಪ್ರಾತ್ಯಕ್ಷಿಕೆ ಹೇಳಿಕೊಟ್ಟರು, ಸಂಜೆ ೬ ಗಂಟೆಗೆ ಪ್ರಶಿಕ್ಷಕಿಯಾದ ಸರಸ್ವತಿ ಸಹೋದರಿಯ ನಿವಾಸದಲ್ಲಿರುವ ಧ್ಯಾನ ಕೇಂದ್ರದಲ್ಲಿ ಜರುಗಿತು, ಈ ನಂತರ ನಗರದಲ್ಲಿ ಸಂಕಲ್ಪ ಯಾತ್ರೆಯನ್ನು ಮಾಡಲಾಯಿತು,

 

ಮುಂದುವರೆದಂತೆ ಜುಲೈ.೨೪ರಂದು ಬೆಳಿಗ್ಗೆ ೭ರಿಂದ ಜಿಲ್ಲಾರಕ್ಷಣಾಧಿಕಾರಿಗಳಾದ ನಿಖಿಲ್ ಅವರ ಅಣತಿಯಂತೆ ಪೊಲೀಸ್ ಸಮುದಾಯ ಭವನದಲ್ಲಿ ಹೃದಯಪೂರ್ಣತೆಯ ಹಸ್ತಕ್ಷೇಪದೊಂದಿಗೆ ಒತ್ತಡ ನಿರ್ವಹಣೆ ಕುರಿತಾಗಿ ಪ್ರೊಜೆಕ್ಟರ್ ಬಳಸಿ ಉಪನ್ಯಾಸವನ್ನು ಮಾಡಿದರು, ಈ ಸಂದರ್ಭದಲ್ಲಿ ನೆರೆದಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಧ್ಯಾತ್ಮಿಕತೆಯ ಆಂತರಿಕ ಸ್ಥಿತಿಗಳನ್ನು ಸ್ವಾದಿಸಲು ಹಾಗೂ ಸ್ವ-ಅನುಭವ ಉಂಟಾಗಲು ಸಾಧ್ಯವಾಗಲು ವಿಶ್ರಾಂತಿ ವಿಧಾನವನ್ನು ಮಾಡಿಸಿದರು, ಈ ಸಂದರ್ಭದಲ್ಲಿ ಪ್ರಶಿಕ್ಷಕರಾದ ಡಾ.ವಿನಯ್ ಅವರು ತ್ರಿ-ಸಿಟ್ಟಿಂಗ್ ತೆಗೆದುಕೊಳ್ಳುವುದು ಹಾಗೂ ಪ್ರತಿ ಭಾನುವಾರ ಬೆಳಿಗ್ಗೆ ಹಾಗೂ ಬುಧವಾರ ಸಂಜೆ ಧ್ಯಾನ ಕೇಂದ್ರದಲ್ಲಿ ಸತ್ಸಂಗದ ನಿರಂತರತೆಯ ಬಗ್ಗೆ ಮಾಹಿತಿ ತಿಳಿಸಿದರು, ಈ ತರುವಾಯ ಪ್ರೊ. ಡಾ. ಮೋಹನ್ ದಾಸ್ ಹೆಗ್ಡೆ ಅವರಿಗೆ ಜಿಲ್ಲಾ ಪೊಲೀಸ್ ವಲಯದಿಂದ ಗೌರವಿಸಲಾಯಿತು,

ಈ ನಂತರ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಾರ್ಟ್‌ಪುಲ್‌ನೆಸ್ ಧ್ಯಾನದ ಅಭ್ಯಾಸಿಗಳಿಗೆ ಭಂಡಾರ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕರಾದ ಪ್ರೊ. ಡಾ. ಮೋಹನ್ ದಾಸ್ ಹೆಗ್ಡೆ ಅವರು ನೆರವೇರಿಸಿದರು, ವೇದಿಕೆಯಲ್ಲಿ ಪ್ರಶಿಕ್ಷಕರಾದ ಸರಸ್ವತಿ ಸಿಸ್ಟರ್, ಆರ್.ಮಂಜುನಾಥ್ ಬ್ರದರ್, ನ್ಯಾಮತಿ ಮಲ್ಲಿಕಾರ್ಜುನ್, ರಾಧ ಪ್ರಭು ಅವರುಗಳು ಉಪಸ್ಥಿತರಿದ್ದರು, ನಿರೂಪಣೆಯನ್ನು ಡಾ.ವಿದ್ಯಾ ಅವರು ಮಾಡಿದರು,

ಜುಲೈ.೨೫ರ ಇಂದು ಬೆಳಿಗ್ಗೆ ೭.೩೦ಕ್ಕೆ ಹೃದಯಪೂರ್ವಕ ಧ್ಯಾನದ ಸತ್ಸಂಗ ಜರುಗಿತು, ನಿರಂತರ ಮೂರು ದಿನಗಳ ಕಾಲ ವಿವಿದೆಡೆ ಉಪನ್ಯಾಸ, ಸತ್ಸಂಗ, ಸಂಕಲ್ಪ ಯಾತ್ರೆಯನ್ನು ಸಂಪನ್ನಗೊಳ್ಳಲು ನೇತೃತ್ವ ವಹಿಸಿದ್ದ ಪ್ರೊ. ಡಾ. ಮೋಹನ್ ದಾಸ್ ಹೆಗ್ಡೆ ಅವರಿಗೆ ಶಿವಮೊಗ್ಗದ ಶ್ರೀ ರಾಮಚಂದ್ರ ಮಿಷನ್ ಹೃದಯಪೂರ್ವಕ ಧ್ಯಾನ ಕೇಂದ್ರದಿಂದ ಗೌರವಿಸಿ ಬೀಳ್ಕೊಡಲಾಯಿತು,

Gara Srinivas

Gara Srinivas

Leave a comment

error: Content is protected !!