I ತಮಿಳುನಾಡಿಗೆ ಕಾವೇರಿ ನದಿ ನೀರು I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I
ಶಿವಮೊಗ್ಗ : ನಗರದಲ್ಲಿ ತಮಿಳುನಾಡಿಗೆ ನಾಲ್ಕು ಟಿಎಂಸಿ ಕಾವೇರಿ ನದಿ ನೀರನ್ನು ಹರಿಸುವ ಆದೇಶ ಅವೈಜ್ಞಾನಿಕವಾಗಿದ್ದು, ಮಳೆಗಾಲದ ಮಳೆ ಇಲ್ಲದೇ ರೈತ ಕೃಷಿಗಳಿಗೆ ತೊಂದರೆಯಾಗಿರುವ ಈ ಸಂದರ್ಭದಲ್ಲಿ ಆದೇಶ ಹೊರಡಿಸಿರುವ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ಜರುಗಿತು,
ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಕಿರಣ್ ಅವರು ಸಿಡಬ್ಲ್ಯೂಆರ್ ಸಿ ಆದೇಶ ದ ಪ್ರಕಾರ ತಮಿಳುನಾಡಿಗೆ ನಾಲ್ಕು ಟಿಎಂಸಿ ನೀರು ಹರಿಯ ಬಿಡಬೇಕೆಂಬ ಆದೇಶವು ಸಂಪೂರ್ಣ ರೈತ ವಿರೋಧಿ ಆದೇಶವಾಗಿದ್ದು, ಈಗಾಗಲೇ ಡ್ಯಾಮಿನಲ್ಲಿ ನೀರು ಇಲ್ಲದೆ ಇರುವುದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಹರಿಸಕೂಡದು ಎಂದು ಹಾಗೂ ಸಂಪೂರ್ಣದ ಬರದ ಛಾಯೆ ಆವರಿಸಿದ್ದು ಈಗ ಯಾವುದೇ ಚಾನಲ್ಗಳಿಗೆ ನೀರು ಹರಿಸದೆ ಇರುವುದರಿಂದ ಸುಮಾರು 168 ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿದೆ ಕೆಲವು ವಲಯ ಸಂಪೂರ್ಣವಾಗಿ ಬರದಿಂದ ತತ್ತರಿಸಿದ್ದು ಈ ಕೂಡಲೇ ತಮಿಳುನಾಡಿಗೆ ಹರಿಯುವ ನೀರನ್ನು ಸಂಪೂರ್ಣವಾಗಿ ತಡೆಹಿಡಿದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ ಹಾಗೇನಾದರೂ ನೀರು ಹರಿದರೆ ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಕರವೇ ಸ್ವಾಭಿಮಾನಿ ಬಣ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತದೆ, ಎಂದು ತಿಳಿಸಿದರು,
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್ ಎಸ್ ಜಿಲ್ಲಾ ಸಂಚಾಲಕ ಶಿವಕುಮಾರ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಏ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲ ಕಾನ್ ಯುವ ಅಧ್ಯಕ್ಷ ಸಂತೋಷ್ ಪರಮೇಶ್ ಸತೀಶ್ 26ನೇ ವಾರ್ಡ್ ಅಧ್ಯಕ್ಷ ವಿಕಾಸ್ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಹಾಜರಿದ್ದರು

