- ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗ ವಕೀಲರ ಸಂಘದ ಚುನಾವಣೆಯಲ್ಲಿ ಗೀತಾ ಮಾನೆ ಅವರ ಸದ್ದು I
ದಿನಮಾನ ಬದಲಾವಣೆಯಾಗುತ್ತಿದೆ, ಸಮಾನತೆ, ಪ್ರಾತಿನಿಧ್ಯ ಸಾಂಗತ್ಯಗಳು ಎಲ್ಲಾ ಕ್ಷೇತ್ರಗಳಲ್ಲೂ ಬಲಗೊಳ್ಳುತ್ತಿದೆ, ಅದರಂತೆ ವಕೀಲ ವಲಯದಲ್ಲಿಯೂ ಇದೆ, ಅಂದಿನ ಪುರುಷ ಪ್ರಧಾನತೆ ಎನ್ನುವ ಹೆಜ್ಜೆಗಳು ಇದೀಗ ಹುಸಿಯಾಗಿದೆ ಮಹಿಳಾ ವಕೀಲರು ಪ್ರಗತಿಯನ್ನು ಸಾಧಿಸಿದ್ದಾರೆ, ಅತೀ ಗಂಭೀರತೆಯ ಕಾನೂನಾತ್ಮಕವಾದ ಸಂಗತಿಯ ಮುಖ್ಯವಾಹಿನಿಯಲ್ಲಿ ಸದ್ದು ಮಾಡುತ್ತಿರುವ ಮಹಿಳಾ ವಕೀಲರು, ನ್ಯಾಯದೀಶರಾಗಿಯೂ ಅಗ್ರಮುಖಿಯಲ್ಲಿ ಮೊಹರೊತ್ತಿದ್ದಾರೆ, ಇಂತಹದೊಂದು ಟಿಪ್ಪಣಿ ಅಕ್ಷರಶಃ ಇಲ್ಲಿ ವಿಸ್ತೃತಗೊಳಿಸಿ ವಿಸ್ತಾರವಾಗಿ ಈ ಲೇಖನದ ಸಾಲುಗಳನ್ನು ತಮ್ಮಗಳ ಮುಂದಿಡುತ್ತಿದ್ದೇನೆ,
ಶಿವಮೊಗ್ಗ ಎಂದರೆ ಅದೊಂದು ವೈಬ್ ಇರುವ ನೆಲೆ, ಸಾಹಿತ್ಯ, ಸಾಂಸ್ಕೃತಿಕವಾದ ನೆಲೆಗಟ್ಟು, ಹೋರಾಟ, ರಾಜಕೀಯದಲ್ಲಿ ಮೊದಲ ಸ್ಥಾನದಲ್ಲಿದೆ, ಹೀಗಿರುವ ಕಾರಣ ಮಾತ್ರದಿ ಮಹಿಳಾ ವಕೀಲರಾದ ಗೀತಾ ಮಾನೆ ಅವರ ಹೆಸರು ಕಲಾಪದಲ್ಲಷ್ಟೆ ಅಲ್ಲ ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತದೆ,
ಮಾನವ ಹಕ್ಕುಗಳ ಸಂರಕ್ಷಣೆ, ಕಾನೂನಾತ್ಮಕ ಅರಿವು, ಮಹಿಳಾ ಜಾಗೃತಿಗಳ ವೇದಿಕೆಗಳಲ್ಲಿ ವಕೀಲರಾದ ಗೀತಾಮಾನೆ ಅವರ ಮುಖ್ಯ ಭಾಷಣಗಳು ಗಮನ ಸೆಳೆದಿವೆ, ಕಾನೂನು ಈ ನೆಲದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿರಬೇಕು, ಅದು ಭಯಮುಕ್ತತೆಯಲಿ ಅವರವರ ಬದುಕಿನಲಿ ಅನುಭವಿಸುವ ಅರಿವು ಇರಬೇಕು ಹೀಗಿದ್ದಾಗಲೇ ಅದು ಸಾಂವಿಧಾನಿಕ ನ್ಯಾಯಾಂಗ ವ್ಯವಸ್ಥೆಗೆ ಕೊಡುವ ಸಾಮಾಜಿಕ ನ್ಯಾಯವಾಗಿದೆ,
ನ್ಯಾಯಾಂಗ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆ, ಬಲವಾದ ಆಶಯ, ಗೌರವಗಳಿಂದಾಗಿಯೇ ಗೀತಾ ಮಾನೆ ಅವರು ತಮ್ಮ ಮಕ್ಕಳಾದ ರೇಕೇಶ್ ಮಾನೆ, ಯೋಗೀಶ್ ಮಾನೆ ಅವರಿಗೂ ವಕೀಲ ಶಿಕ್ಷಣಕ್ಕೆ ಸೇರಿಸಿ ವಕೀಲರನ್ನಾಗಿಸಿದ್ದಾರೆ, ಈಗಾಗಲೇ ರೇಕೇಶ್ ಮಾನೆ ಅವರು ತಮ್ಮ ವೃತ್ತಿ ಜೀವನ ಶಿವಮೊಗ್ಗ ಕೋರ್ಟಿನಲ್ಲಿ ಆರಂಭಿಸಿ ಶಿವಮೊಗ್ಗದ ಬಾರ್ ಕೌನ್ಸಿಲ್ ಗಮನ ಸೆಳೆದಿದ್ದಾರೆ, ಸಾರ್ವಜನಿಕ ಸ್ಪಂದನೆಗಳಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿರುವುದು ಶ್ಲಾಘನೀಯ,
ಓರ್ವ ತಾಯಿಯಾಗಿ, ಕಾನೂನಾತ್ಮಕವಾದ ಬದುಕಿನ ಗೈಡರ್ ಆಗಿರುವ ಗೀತಾಮಾನೆ ಅವರು ಬಹುತೇಕ ತಮ್ಮ ಬಳಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ, ಈ ಕಾರಣ ಮಾತ್ರದಿಂದಲೇ ಅವರೆಂದರೆ ಭರವಸೆಯಾಗಿಸಿದೆ, ಇನ್ನೂ ಕಾನೂನು ಕ್ಷೇತ್ರವೆಂದರೆ ಅದೊಂದು ಜನ ನಂಬಿಕೆಯ ಕ್ಷೇತ್ರ, ಪದವೀದರರ ಕ್ಷೇತ್ರ, ಪ್ರಬುದ್ದತೆಯ ವಲಯ, ಇಲ್ಲಿ ಯಾವುದೇ ಮತ-ಪಂಥಗಳ ಬೇದಕ್ಕೆ ರಹದಾರಿಗಳಿಲ್ಲ ಎನ್ನುವ ಮಾತು ಶಿವಮೊಗ್ಗ ವಕೀಲರ ಸಂಘ ಪ್ರಸ್ತುತವಾಗಿ ಕಾಪಿಟ್ಟುಕೊಂಡಿದೆ,
ಅಸಮಾಧಾನ, ಬಿಗುಮಾನ ಏನೇ ಇರಲಿ ಶಿವಮೊಗ್ಗ ಬಾರ್ ಕೌನ್ಸಿಲ್ ಏಕತೆ ಇಡೀ ಭಾರತದ ಬಾರ್ ಕೌನ್ಸಿಲ್ ಗೆ ಗೊತ್ತು ಮಾಡಿಕೊಂಡಿದೆ, ಇದು ಮತ್ತೊಮ್ಮೆ ಸಾಬೀತುಗೊಳಿಸಿದೆ, “ಹೈಕೋರ್ಟ್ ಸರ್ಕ್ಯೂಟ್ ಬೇಂಚ್” ಶಿವಮೊಗ್ಗಕ್ಕೆ ಬೇಕು ಎನ್ನುವ ಹೋರಾಟ, ಧರಣಿ ತಮ್ಮ ಪ್ರ್ಯಾಕ್ಟೀಸ್ ನಡುವೆಯೂ ಅಚ್ಚುಕಟ್ಟಾಗಿ ನಿರ್ವಹಿಸಿದೆ, ಮಲೆನಾಡಿನ ಜನತೆಗೂ ಶಿವಮೊಗ್ಗದ ಆತಂಕದ ಸಂಗತಿಗಳಲ್ಲಿ ವಕೀಲರು ಕಾನೂನಾತ್ಮಕವಾದ ದನಿಗೂಡಿಸಿ ಸುರಕ್ಷತೆ, ಭದ್ರತೆ ಒದಗಿಸುತ್ತಾರೆ ಎನ್ನುವ ನಂಬಿಕೆಗಳು ಗಟ್ಟಿಯಾಗಿದೆ, ಇಂದು ವಕೀಲರ ದನಿ ಜನದನಿಯಾಗಿ ಬದಲುಗೊಳ್ಳುವುದಕ್ಕೆ “ಶಿವಮೊಗ್ಗ ಬಾರ್ ಕೌನ್ಸಿಲ್” ಕಾರಣವಾಗಿದೆ ಇದು ಶಿವಮೊಗ್ಗದ ಜನತೆಗೆ ರಾಜಕೀಯದ ಹೊರತಾಗಿ ದರ್ಶಿಸುವ ಭರವಸೆಯಾಗಿದೆ,
ಇನ್ನೂ ಶಿವಮೊಗ್ಗದಲ್ಲಿ ಈ ಎಲ್ಲಾ ವಿದ್ಯಮಾನಗಳ ನಡುವೆ ಮತ್ತೊಮ್ಮೆ “ವಕೀಲರ ಸಂಘ” ದ ಚುನಾವಣೆಯ ಹೆಜ್ಜೆಗಳು ಬಿರುಸುಗೊಂಡಿದೆ, ವಕೀಲರ ನಡುವಿನ ಮತ ಕೇಳುವ ಪರಿಗಳು ಅತ್ಯಂತ ಪ್ರಬುದ್ದತೆಯಿಂದ ಕೂಡಿದೆ, ಸಾಂವಿಧಾನಿಕ ಚುನಾವಣೆ ಎಲ್ಲಾ ರಂಗದಲ್ಲೂ ಹೀಗಿಯೇ ಇರಬೇಕು, ಮತ-ಪಂಥೀಯ ವಾದಗಳಲ್ಲಿ ಸಿಲುಕಬಾರದು ಅದೊಂದು ಸ್ವಚ್ಚಂದತೆಯ ಸ್ವಾತಂತ್ರ್ಯದ ಹಕ್ಕಿ ಆಗಿರಬೇಕು, ಇಲ್ಲಿ ಅಕ್ಷರಶಃ ಕಂಡು ಬಂದಿದೆ,
ಈ ಮೊದಲ ವಾಕ್ಯದಲ್ಲಿ ಹೇಳಿರುವಂತೆ ಮಹಿಳಾ ಪ್ರಾಧನ್ಯತೆ, ಸಮಾನತೆಗಳು ಸಾಮಾಜಿಕ ಭದ್ರತೆಗೆ, ಸುಧಾರಣೆಗೆ, ನಾಯಕತ್ವಕ್ಕೆ ಕೊಡುವ ಗೌರವವಾಗಿದೆ, ಇಲ್ಲಿ ಗೀತಾಮಾನೆ ಅವರು ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದ್ದಾರೆ, ಅನೇಕ ಸಂಘಟನೆಗಳ ವೇದಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸುವ ಮಹಿಳಾ ದನಿಯಾಗಿದ್ದಾರೆ, ರಂಗಕರ್ಮಿಗಳು ಆಗಿರುವ ಗೀತಾಮಾನೆ ಅವರು ಬಹುತ್ವ ಭಾವದಡಿ ಬಹುಮುಖಿಯಾಗಿದ್ದಾರೆ, ವಕೀಲರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಖ್ಯವಾಗಿ ಭಾಗವಹಿಸುವ ಪರಿಪೂರ್ಣತೆ ಅವರಲ್ಲಿದೆ, ಇದು ಯಾವ ಉತ್ಪ್ರೇಕ್ಷೆಯ ಉವಾಚಗಳಿಲ್ಲವಾಗಿದೆ, ಇರುವ ಸಂಗತಿಗಳ ಸಾಂಗತ್ಯ ಈ ಲೇಖನ ಬರಹದ ಕೊಂಡಿಯಾಗಿದೆ ಎಂದೇಳಬಹುದು,
ಗೀತಾ ಮಾನೆ ಅವರು ಶಿವಮೊಗ್ಗ ವಕೀಲರ ಸಂಘಕ್ಕೆ ನಿರ್ದೇಶಕರ ಸ್ಥಾನಕ್ಕೆ ಸ್ಪರ್ದಿಸುತ್ತಿದ್ದಾರೆ ಎಂದು ಗೊತ್ತಾದಾಗ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಬೇಕಾದ ಜರೂರತ್ತಿದೆ ಎಂದು ಈ ಸಾಲುಗಳ ಉಲ್ಲೇಖ ಮಾಡಲಾಗಿದೆ, ಚುನಾವಣೆ, ಚುನಾವಣೆಯ ಸೋಲು, ಗೆಲುವು ಮುಖ್ಯವಲ್ಲ ಪ್ರಬುದ್ದ, ಪ್ರೌಡಿಮೆಯಾಗಿ ಸ್ಪರ್ಧಿಸುವುದು ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಗೀತಾ ಮಾನೆ ಅವರಿಗೆ ಈ ಬರಹದ ಲೇಖನದ ಮೂಲಕ ಶುಭವಷ್ಟೆ ಕೋರಲಾಗುತ್ತಿದೆ,
ಮತಗಳು ವಿದ್ಯಾವಂತ, ಕಾನೂನು ಪದವೀದರರಾದ ವಕೀಲರುಗಳ ಹಕ್ಕುಗಳಾಗಿದೆ, ಅವರಿಗೆ ಮನವಿ ಮಾಡುವಷ್ಟು, ಅಥವಾ ಓರ್ವರ ಪರವಾಗಿ ಮತ ಕೇಳುವಷ್ಟರ ಮಟ್ಟಿಗೆ ಅನ್ಯರಂಗದವರು ತೆರಳಬಾರದು, ನ್ಯಾಯಯುತವಾದ ನಿರ್ಣಯ, ವಿವೇಚನೆಗಳು ಶಿವಮೊಗ್ಗ ವಕೀಲರುಗಳ ಚಿತ್ತದಲ್ಲಿದೆ, ಎಂದಷ್ಟೆ ಹೇಳಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ಬಹುಮುಖಿ ಗೀತಾಮಾನೆ ಅವರಿಗೆ Best Of luck ತಿಳಿಸಿ ಈ ಬರಹದ ಸಾಲಿನಿಂದ ವಿರಮಿಸುವೆ ಎನ್ನುವುದಷ್ಟೆ ಅಂಬೋಣ.

