I ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಜಿ.ಹೆಚ್ ಸತ್ಯನಾರಾಯಣ್ ಮುಂದುವರಿಕೆ I ಡಾ.ಮೈತ್ರಿ ಮೇಡಂಗೆ ಕುರ್ಚಿ ಇಲ್ಲದೆ ಚಡಪಡಿಕೆ I
ಶಿವಮೊಗ್ಗ : ರಾಜಕೀಯ ದಾಳವೋ..?! ಅಧಿಕಾರಿಗಳ ಪ್ರತಿದಾಳವೋ..?! ಎನ್ನುವಂತೆ ಶಿವಮೊಗ್ಗದ ಉಪವಿಭಾಗಾಧಿಕಾರಿಗಳ ವರ್ಗಾವಣೆಯ ಸುದ್ದಿ ಸದ್ದಿಟ್ಟಿದೆ,
ಉಪವಿಭಾಗಾಧಿಕಾರಿಯಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಹೆಚ್. ಸತ್ಯನಾರಾಯಣ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾಯಿಸಲಾಗಿತ್ತು. ತೆರವಾದ ಅವರ ಜಾಗಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದ ಡಾ. ಮೈತ್ರಿ ಅವರನ್ನು ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ನೇಮಕದ ಅಧಿಕೃತ ಆದೇಶ ಹೊರಬಿದ್ದಿತ್ತು
ಆದರೆ ಈ ಆದೇಶದ ಹಿಂದೆಯೇ ಮತ್ತೊಂದು ಆದೇಶದ ಪ್ರತಿ ಬಿರುಸಿನಲಿ ಕಡತದಲ್ಲಿದೆ, ಈ ಆದೇಶದನ್ವಯ ಸತ್ಯನಾರಾಯಣ ಅವರ ವರ್ಗಾವಣೆ ಆದೇಶ ಹಿಂಪಡೆಯಲಾಗಿದೆ, ಅಲ್ಲದೆ ಅವರನ್ನೇ ಶಿವಮೊಗ್ಗದ ಉಪವಿಭಾಗಾಧಿಕಾರಿಯಾಗಿ ಮುಂದುವರೆಸಲಾಗಿದೆ ಎನ್ನುವ ನಿಖರತೆಗಳಿದೆ,
ಡಾ.ಮೈತ್ರಿಯವರು ಅಧಿಕಾರ ಸ್ವೀಕರಿಸುವ ಮೊದಲೇ ಈ ಆದೇಶ ಹೊರಬಿದ್ದಿದ್ದು ಅವರಿಗೆ ವರ್ಗಾವರ್ಗಿಯ ಬದಲಾವಣೆಗೆ ಚಡಪಡಿಕೆ ಶುರುವಾಗಿದೆ ಅಲ್ಲದೆ ಅವರಿಗೆ ಕುರ್ಚಿ ಖಾಲಿ ಇಲ್ಲ ಎನ್ನುವ ಆದೇಶದ ಪ್ರತಿ ಹೊರಬಿದ್ದಿದೆ ಎನ್ನುವುದು ಉನ್ನತ ಮಟ್ಟದ ಅಧಿಕಾರಿಗಳ ವಲಯದಿಂದ ತಿಳಿದು ಬಂದಿದೆ ಇನ್ನೂ ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನವನ್ನು ನಿರ್ವಹಿಸುತ್ತಿರುವ ಸತ್ಯನಾರಾಯಣ ಅವರು ಜನಸಂಘಟಿತ ಭರವಸೆಯಲ್ಲಿ ತಮ್ಮ ಕರ್ತವ್ಯದಲ್ಲಿರುವುದು ಕೂಡ ಅವರ ವರ್ಗಾವಣೆಗೆ ಸಧ್ಯಕ್ಕೆ ತಡೆಯಾಗಿದೆ,
ಡಾ. ಮೈತ್ರಿಯವರಿಗೆ ಇದೀಗ ಕುರ್ಚಿ ಖಾಲಿ ಇಲ್ಲದೆ ರಾಜ್ಯ ಸರ್ಕಾರದ ಮತ್ತೊಂದು ಆದೇಶಕ್ಕೆ ಕಾಯಬೇಕಾದ ಸನ್ನಿವೇಶ ಎದುರಾಗಿದೆ