I ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯುತ ಬಳಕೆ I ಅರ್ಥಪೂರ್ಣ ಸಂವಾದ I
ಶಿವಮೊಗ್ಗ : ನಗರದ ಶಾಂತಿ, ಸುಭದ್ರತೆ ಹಾಗೂ ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯುತ ಬಳಕೆಯ ಕುರಿತು ಇಂದು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ (SP Office) ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಶಾಸಕರಾದ ಎಸ್.ಎನ್ ಚೆನ್ನಬಸಪ್ಪನವರು ಪಾಲ್ಗೊಂಡರು,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ. ನಿಖಿಲ್, ಐಪಿಎಸ್, ಅನವರತ ಫೌಂಡೇಶನ್‌ನ ಸದಸ್ಯರು ಹಾಗೂ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರಮುಖ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ಸಮ್ಮುಖದಲ್ಲಿ ಈ ಅರ್ಥಪೂರ್ಣ ಸಂವಾದ ನಡೆಯಿತು.
ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿಯ ಪ್ರಸಾರವು ಅತ್ಯಂತ ವೇಗವಾಗಿದ್ದು, ಸಕಾರಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಇನ್‌ಫ್ಲುಯೆನ್ಸರ್‌ಗಳ ಪಾತ್ರ ದೊಡ್ಡದಿದೆ. ಸಾರ್ವಜನಿಕ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವ ಕುರಿತು ಸಭೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಯಿತು. ನಮ್ಮ ಯುವ ಕಂಟೆಂಟ್ ಕ್ರಿಯೇಟರ್‌ಗಳ ಸೃಜನಶೀಲತೆ ಶಿವಮೊಗ್ಗದ ಸರ್ವತೋಮುಖ ಏಳಿಗೆಗೆ ಪೂರಕವಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಎಸ್.ಎನ್ ಚೆನ್ನಬಸಪ್ಪನವರು ತಿಳಿಸಿದ್ದಾರೆ


