ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಎಸ್ಪಿ ನಿಖಿಲ್‌ರವರೇ I ನಿಮಗೊಂದು ಬಹಿರಂಗ ಪತ್ರ I
ಹೋರಾಟದ ನಗರಿ ಮಲೆನಾಡಿನ ಹೆಬ್ಬಾಗಿಲಿಗೆ, ವರ್ಗಾವಣೆಗೊಂಡು ಬಂದ ಅದೆಷ್ಟೋ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿ ಚರಿತ್ರೆಯು ಮಾಡಿದ್ದಾರೆ, ಬಾನಗಡಿ ಎಬ್ಬಿಸಿ ಕೋಟಿ ಕಂತೆಗಳ ಕಾಸಿನಲಿ ದುಂಡಗಾಗಿಯೂ ಇದ್ದಾರೆ, ಇದು ಮುಂದುವರೆದಂತೆ ಚರಿತ್ರೆ-ಬಾನಗಡಿ ಎಂಬುವ ತಲೆಬರಹವೇ ಇಲ್ಲದೇ ಕೇವಲ ಜಾತಿ – ಸ್ವಜನ ಪಕ್ಷಪಾತಗಳಲ್ಲಿ ಮಿಂದು ಕೊನೆಯಲ್ಲಿ ಹೇಳುವುದಕ್ಕೆ ವಿಳಾಸವೇ ಇಲ್ಲದೇ ಪೇರಿ ಕಿತ್ತಿರುವುದು ಕೂಡ ಈ ನೆಲದಲ್ಲಿ ಜೀವಂತ ಉದಾಹರಣೆಗಳಿವೆ,
ಇಂತಹದೊಂದು ಟಿಪ್ಪಣಿ ತಮ್ಮ ಮುಂದೆ ವಿಸ್ತೃತಗೊಳಿಸಿ, ಮುಖವಾಡಿ ಹೈಪ್ರೋಪೈಲ್ ಪೆನ್ನಿಗರ ಪರಿಚಯವನ್ನು ಇಲ್ಲಿ ಅನಾವರಣಗೊಳಿಸದೇ ಕಪಟಿಗಳ ವಿಕೃತವಾದ ದುರ್ನಡತೆಗಳನ್ನು ಬೆತ್ತಲುಗೊಳಿಸಿ ಬಯಲಾಗಿಸುವುದಕ್ಕೆ ಪೆನ್ನಿಗರ ಅನಾಹುತಕಾರಿ ಮುಖವಾಡಗಳು ಎಂದು ದಾಖಲೆಗಳ ಸಹಿತವಾದ ಪುಸ್ತಕವೇ ಮುದ್ರಿಸಬೇಕಾದೀತು..! ಈಗಾಗಲೇ ತಮಗೆ ತಿಳಿಮಾತುಗಳಲಿ ಪೋನಾಯಿಸಿರಬಹುದು, ಅವರು ಅಸಲಿ, ಇಂತಿವರು ನಕಲಿ, ನಾವುಗಳು ಜೆನ್ಯೂನಿಟಿಸ್‌ಗಳು, ಇಂತಹ ಒಂದಿಷ್ಟು ಮಾನಸೀಕತೆಗಳಲ್ಲಿ ಓರ್ವನ ಮೇಲೆ ಬಿಭತ್ಸಕರವಾದ ಕ್ರೂರ ಕೊಲೆಗಳ ಘಟನೆಗಳಿವೆ, ಈ ಸಂಭಂದಿಸಿದಂತೆ ದಾಖಲೆಗಳು ಬೇಕೆ..? ನೂರು ಕೋಟಿ ದಾಟುವ ಕೆಹೆಚ್ಬಿ ನಿವೇಶನ ಹಗರಣಗಳಿವೆ ಇದರ ದಾಖಲೆಗಳು ಬೇಕೆ..? ಮಂತ್ಲಿ ಮಾಮೂಲಿಗಳಿವೆ, ಕೋಟಿ, ಕೋಟಿ ಕಂತೆಗಳಿಗೆ ತೂಗುವ ಭಾರಿ ಕಟ್ಟಡಗಳಿವೆ..! ಇಲ್ಲೀಗಲ್ ಟ್ರಸ್ಟ್ ರಚಿಸಿಕೊಂಡು ಲಾಭದ ಗುಂಪುಗಳನ್ನಾಗಿ ಮಾಡಿಕೊಂಡಿರುವುದಲ್ಲದೆ ಅದೇ ಇಲ್ಲೀಗಲ್ ಹಾದಿಗಳಿಂದ ಕೋಟಿ ಅನುದಾನಗಳನ್ನು ಎತ್ತುವಳಿ ಮಾಡಲಾಗಿದೆ ಇದನ್ನು ಸ್ಥಳೀಯ ಪ್ರಾಧಿಕಾರದಲ್ಲಿ ಪ್ರಶ್ನಿಸಲಾಗಿದೆ, ಮುಂದುವರೆದಂತೆ ದ್ವಿ ಪತ್ನಿತ್ವ ಹಾಗೂ ತ್ರಿ ಪತ್ನಿತ್ಬದ ಹೊಲಸುಗಳಿವೆ, ಅಲ್ಲದೆ ಭೂಗತರೊಂದಿಗೆ ಎಲ್ಲಾ ಬಗೆಯ ಸಮಾಜ ವಿದ್ರೋಹಿಗಳ ಜೊತೆ ಶಾಮೀಲಾಗಿರುವುದು ನಿಮ್ಮ ಗುಪ್ತಚರ ಅಧಿಕಾರಿಗಳಿಂದ ಮಾಹಿತಿಗಳು ಸಿಗಬಹುದು…? ಲ್ಯಾಂಡ್ ಮಾಫಿಯಾ ಮರಳು ಮಾಫಿಯಾದೊಂದಿಗೆ ಶಾಮೀಲಾಗಿ ಮುಂಚೂಣಿಯಲ್ಲಿರುವ ಅಧಮ ಪೆನ್ನಿಗರೇ ಇಂದು ಪತ್ರಕರ್ತರ ವೇದಿಕೆಗಳಲ್ಲಿ ಕಾಣಿಸಿಕೊಂಡು ಪತ್ರಿಕಾ ಅಭಿವ್ಯಕ್ತಿ ಹಾಗೂ ಅದರ ಮೌಲ್ಯಗಳನ್ನು ಪುಂಕಾನುಪುಂಕವಾಗಿ ವದರಿ ಬಿಡುತ್ತಾರೆ.
ಇನ್ನೂ ಗುತ್ತಿಗೆ ಗ್ಯಾಂಗ್‌ಗಳಿದೆ ಇದರಲ್ಲಿ ಪ್ರಮುಖವಾಗಿ ಪಂಥಿಯವಾದಗಳನ್ನು ಮೇಳೈಸಿಕೊಂಡು ಸಾಮಾಜಿಕ ಸೋಗು, ಅಸಮಾನತೆ, ಸೌಹಾರ್ದತೆ ಎಂದು ಬೊಗಳೆ ಬಿಡುವ ಗ್ಯಾಂಗ್‌ನಲ್ಲಿ ಅನೇಕತೆಯ ಡೀಲಿಂಗ್‌ಗಳಿವೆ, ಇವು ಲ್ಯಾಂಡ್ ಮಾಫಿಯಾದ ವೈಟ್ ಕಾಲರ್ ಬೂಟು ನೆಕ್ಕುತ್ತಿದೆ, ಹೀಗೆ ಪುಟಗಟ್ಟಲೇ ವಾಸ್ತವ ಘಟನೆಗಳಲ್ಲಿ ಬೆರಳಣಿಕೆಯ ಉದಾಹರಣೆಗಳಷ್ಟೆ ಇದನ್ನು ಇಲ್ಲಿ ದಾಖಲಿಸುವ ಯತ್ನವನ್ನು ಇದೀಗ ವರ್ಗವಾಗಿ ಬಂದಿರುವ ಅಧಿಕಾರಿಗಳು ಖಾಲಿ ಉಪನ್ಯಾಸ ಎಂದು ಕೊಂಡರೆ ಅದೊಂದು ವಾಸ್ತವದ ಕಾಲಘಟ್ಟಕ್ಕೆ ಎಸಗಿದ ತಾತ್ಸಾರತೆ ಎಂದು ಭಾವಿಸುತ್ತೇನೆ, ಪ್ರತಿ ಬರಹಗಾರ ಯಾವತ್ತಿಗೂ ತನ್ನ ವಿವೇಚನೆ ಕಳೆದುಕೊಳ್ಳದೆ ಎಚ್ಚರಿಸುವ ಕೆಲವಷ್ಟೆ ತನ್ನ ಸಾಂವಿಧಾನಿಕ ಅಭಿವ್ಯಕ್ತಿ ಎಂದು ಅರ್ಥೈಸಿ ವಿವರಿಸುತ್ತಾನೆಯೇ ಹೊರತು ಅನ್ಯತಾ ಉದ್ದೇಶದಿಂದಲ್ಲ..?
ಹೀಗೆ ವಾಸ್ತವದ ಬೆಳ್ಳಿಪರದೆಯನ್ನೊಮ್ಮೆ ನೋಡಿದರೆ ಗೊತ್ತಾಗುವುದು ಪತ್ರಕರ್ತರ ಸೋಗಿನ ಸಿನಿಮಾದಲ್ಲಿರುವ ಪಾತ್ರದಾರಿಗಳ ಮುಖವಾಡಗಳು..! ಸಿನಿಮಾ ನೋಡದೇ ಸ್ವಜನತೆ, ರಾಜಕೀಯ, ಹೈ ಪ್ರೋಪೈಲ್ ಪತ್ರಕರ್ತರು ಸೋಗುಗಳು ಎನ್ನುವ ಪಕ್ಷಪಾತ ತೊರೆದರೆ ಇಲ್ಲೊಂದು ಬಹುದೊಡ್ಡ ಪ್ರಮಾದವೇ ತಮ್ಮಗಳ ದಕ್ಷ ಕರ್ತವ್ಯಕ್ಕೆ ಚ್ಯುತಿ ತರಬಹುದು ಹೀಗಾಗಿ ಸಾರ್ವಜನಿಕವಾಗಿ ಕರ್ತವ್ಯ ನಿಭಾಯಿಸಬೇಕಾದ ಅಧಿಕಾರಿಗಳು ಯಾವುದೇ ಜಾತಿ-ಧರ್ಮ-ಸಿದ್ದಾಂತಗಳಿಗೆ ಮಾರು ಹೋದರೆ ಪರಮಾವಧಿತನ, ದಾಷ್ಟ್ಯತನವಾಗುತ್ತದೆ, ಇದರ ಅರಿವು ಇರಲೇಬೇಕಾಗುತ್ತದೆ,
ಇದಕ್ಕೊಂದು ಜೀವಂತ ಉದಾಹರಣೆ ಎಂದರೇ ೨೦೦೯ರಲ್ಲಿ ಇದೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮಾನ್ಯ ಯಡಿಯೂರಪ್ಪನವರಿಗೂ ಸ್ವಜನ ಪಕ್ಷಪಾತ ಡಿ-ನೋಟಿಪಿಕೇಷನ್ ಪ್ರೇರಣಾ ಹಗರಣ ಇತ್ಯಾದಿ ಹಗರಣಗಳ ದಾಖಲೆಗಳು ಬೆಂಬಿಡದೇ ಸದನದಲ್ಲಿ ಕಾಡಿತು, ಕೋರ್ಟ್ ಮೆಟ್ಟಿಲೇರಿತು, ಸಾರ್ವಜನಿಕ ವಲಯದಲ್ಲೂ ಅಸಮಾಧಾನಕ್ಕೆ ಗುರಿಯಾಯಿತು, ನಂತರ ಅನಿವಾರ್ಯವಾಗಿ ಪದಚ್ಯುತಿಯೂ ಅನುಭವಿಸಬೇಕಾಗದ ಪರಿಸ್ಥಿತಿಗಳು ಎದುರಾಯಿತು.. ಇದೊಂದು ರಾಜಕೀಯ ಪಾಠವೇ ಕಲಿಸಿತು, ಇಂತಹ ಆಡಳಿತಾತ್ನಕವಾದ ಪದವಿಗಳಿಲ್ಲದ್ದೆ ಜೈಲು ಸೇರಬೇಕಾದ ಪ್ರಸಂಗಗಳು ಇರುವಾಗ ಇನ್ನೂ ಉಳಿದವರದ್ದೇನು ಗತಿ ಅಲ್ಲವೇ..?
ಹೀಗೆಯೇ ರಾಜಕೀಯ ಓಲೈಕೆಯ ಹಪಾಹಪಿತನದಿ, ಕೆಲ ಪತ್ರಕರ್ತರ ಪೋನ್ ಕಂಗ್ಲಿಷ್‌ಗೊಳಗಾಗಿ, ಮತ-ಪಂಥಗಳ ತುಲನೆಯಲಿ, ಸ್ವಜನಪಕ್ಷಪಾತದಿ ಏನನ್ನು ಕೂಡ ಸಾಧಿಸಲಾಗದೆಂದು ಒಂದಿಷ್ಟು ಘಟನೆಗಳು ಎಚ್ಚರಿಸುತ್ತದೆ, ಎಂಬುದು ವರ್ಗಾವಣೆಗೊಂಡು ಬಂದ ಅಧಿಕಾರಿಗಳು ಮನನ ಮಾಡಿಕೊಳ್ಳುವ ಜರೂರತ್ತಿದೆ, ಯಾಕೆ ಹೀಗೆಲ್ಲಾ….ವಿಸ್ತ್ರತಗೊಳಿಸುವ ಅಗತ್ಯತೆ ಇತ್ತೇ..? ಎನ್ನುವುದು ತಮ್ಮಲ್ಲಿ ಪ್ರಶ್ನಿಸಿಕೊಂಡರೇ ಶಿವಮೊಗ್ಗದ ಕೆಲ ಪತ್ರಕರ್ತರ ಮೂಲ ಸಿನಿಮಾ ನೀವು ನೋಡಲೇಬೇಕಾಗುತ್ತದೆ, ಸಿನಿಮಾ ನೋಡದೇ ಹೋದರೆ ಅನರ್ಥವಾದೀತು..! ಎಂದು ಅಂಬೋಣಿಸಿ ಇನ್ನೊಂದು ಉದಾಹರಣೆ ಸಹಿತ ಮುಂದಡಿಯಿಟ್ಟು ಮಂಗಳೂರಿನಿಂದ ವರ್ಗವಾಗಿ ಬಂದಿದ್ದ ಮುರುಗನ್ ಎಂಬುವ ಕುಡುಕನ ಮೇಜಿನಲ್ಲಿ ಮೋಜು ಮಾಡುತ್ತಿದ್ದ ಇದೇ ಪಾಕಂಡಿ ಪೆನ್ನಿಗರ ಬೆಂಬಲವಿದೆ ಎನ್ನುವ ಹುಂಬುತನದಿ ಅಕ್ರಮ ಮರಗಳ ಕಳ್ಳ ಸಾಗಣೆ ಮಾಡಿಸಿ ನೇರವಾಗಿ ಎಸ್ಪಿ ನಿವಾಸದಲ್ಲೇ ದಾಸ್ತಾನು ಮಾಡಿಕೊಂಡಿದ್ದನ್ನು ಉಳಿದ ಪತ್ರಕರ್ತರು ಅರಣ್ಯ ಇಲಾಖಾಧಿಕಾರಿಗಳ ಮುಖೇನ ದಾಳಿ ಮಾಡಿಸಿ ಲಕ್ಷಾಂತರ ರೂ ಮೌಲ್ಯದ ಮರದ ದಿಣ್ಣೆಗಳನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಲು ಕಾರಣವಾಗಿದ್ದರು. ಇದೊಂದು ಉದಾಹರಣೆಯಷ್ಟೆ ಆಗಿದೆ,
ಪತ್ರಿಕಾ ಬಯಲಿನಲ್ಲಿ ಅಡಗಿರುವ ಒಂದಷ್ಟು ಸತ್ಯವನ್ನು ಮುಂದಿಡುತ್ತಾ ಕೊನೆಯದಾಗಿ ಇದೀಗಷ್ಟೆ ವರ್ಗವಾಗಿ ಬಂದಿರುವ ಎಸ್ಪಿ ನಿಖಿಲ್‌ರವರು ಮತ, ಪಂಥ, ಸ್ವಜನ ಪಕ್ಷಪಾತ ತಳೆಯದೆ, ದಕ್ಷತೆಯನ್ನು ಬಿಂಬಿಸುವ ಅಧಿಕಾರಿಯಾಗಿ ನೇರ-ನಿಷ್ಟುರತೆ ಪರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವ ನಾಗರೀಕ ನಂಬಿಕೆ ಇದೆ ಇದು ಎಂದಿಗೂ ಹುಸಿಯಾಗದಿರಲಿ ಎಂದು ಅಭಿಪ್ರಾಯಿಸುತ್ತಿದ್ದೇನೆ. ಅಲ್ಲದೆ ಮೊನ್ನೆಯ ಡ್ರೋಣ್ ಕಾರ್ಯಾಚರಣೆ ಶ್ಲಾಘನೀಯವಾದುದ್ದಾಗಿದೆ, ಇದೇ ಮಾದರಿ ಶಿವಮೊಗ್ಗ ನಗರದ ಆಯಕಟ್ಟಿನಲ್ಲಿ ಡ್ರೋಣ್ ತಿರುಗಿಸಿದರೆ ನೂರಾರು ಕೋಟಿ ಮೌಲ್ಯದ ಸರ್ಕಾರಿ ಆಸ್ತಿಗಳಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಅಕ್ರಮವಾಗಿ ಪೋರ್ಜರಿ ದಾಖಲೆಗಳಿಂದ ಬೇಲಿ ಸುತ್ತಿರುವ ಎಲಿಮೆಂಟ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಾಗೂ ಪ್ರೈವೆಟ್ ಮಲ್ಟಿನ್ಯಾಷನಲ್ ಬ್ಯಾಂಕ್‌ಗಳಲ್ಲಿ ಕೋಟಿ, ಕೋಟಿ ಸಾಲ ಸೌಲಭ್ಯವನ್ನು ಪಡೆದು ವಂಚಿಸಿರುವುದು ಬೆತ್ತಲಾಗುತ್ತದೆ ಎನ್ನುವುದು ಸಧ್ಯದ ಅಂಬೋಣವಾಗಿದೆ.
“ನಗರದಲ್ಲಿ ಪೋರ್ಜರಿಸ್ಟ್ ಜಾಲ”
ಪೋರ್ಜರಿ ಜಾಲದ ದಾಖಲೆಗಳು,
ರೆವಿನ್ಯೂ ಇಲಾಖೆಗಳ ಕಡತಗಳಲಿ ಅಸ್ತೆಂದು,
ಸಬ್ ರಿಜಿಸ್ಟ್ರಾರ್ ಕಛೇರಿನಲಿ ಮೊಹರೊತ್ತಿ
ಬ್ಯಾಂಕ್ ಖಾತೆಗಳಲಿ ಕೋಟಿ ಸಾಲ ಪಡೆಯಿತು.!
ಇದುವೆ ಭೂ ಮಾಫಿಯಾ..?!
ಶಿವಮೊಗ್ಗದಲ್ಲಿ ಇದಕ್ಕಿಲ್ಲದ ಕಡಿವಾಣ,
ಆತಂಕದಲ್ಲಿರುವ ಬಡವರ ಆಸ್ತಿಗಳು,
ಸಾವಿರಕ್ಕೂ ಹೆಚ್ಚಿನ ದಲ್ಲಾಳಿಗಳು,
ನೂರಕ್ಕೂ ಅಧಿಕ ಸಂಖ್ಯೆಯ ಡಿಎಸ್ ಎಗಳು,
ಹೆಗ್ಗಿಲ್ಲದ ಮಸಣದ ಕಸಾಯಿಗಳು..?!
ಗೊತ್ತೇನು..? ಖಾಕಿಗಳೇ, ಖಾದಿಗಳೇ..?!
ಹಾಡುಹಗಲೇ ಬೇಲಿ ಸುತ್ತುವ ಎಲಿಮೆಂಟರಿಗಳು,
ಸಿವಿಲ್ ಮ್ಯಾಟರ್ ಎನ್ನುವ ಅಧಿಕಾರಿಗಳು,
ಡ್ರಾಮಿಸ್ಟ್ ಅಂದಣದೊಳು ನಾಗರೀಕ ಮೌನ,
ವೈಟ್ ಕಾಲರ್ಸ್ ಗಳ ಇಂತಿವ ದುಡಿಮೆಗಳು,
ಪೋರ್ಜರಿ ಬ್ರೋಕರ್ ಗಳಿಟ್ಟ ದಾಂಗುಡಿಗಳು,
ಸಾಂವಿಧಾನಿಕ ನ್ಯಾಯಾಂಗದ ತನಿಖೆ ಎಲ್ಲಿದೆ..?!
ಪತ್ರಿಕಾಂಗದ ಅಭಿವ್ಯಕ್ತಿಯು ಕಾಣೆಯಾಗಿದೆ,
ಪೊಲೀಸ್ ಕಾನ್ಸಟೇಬಲ್ ಮೆಹಬೂಬ್ ಸಾಬ್ ಬಿಲ್ಲಳ್ಳಿಯ ಕಥಾನಕ
ಇನ್ನೂ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಹೋಬಳಿಯ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಕಳೆದ ಐದು ವರುಷಗಳಿಂದ ಬ್ಲಾಕ್ ಡ್ಯೂಟಿ, ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸಟೇಬಲ್ ಮೆಹಬೂಬ್ ಸಾಬ್ ಬಿಲ್ಲಳ್ಳಿಯ ಕಥಾನಕಗಳು ದಾಂಗುಡಿಯಿಕ್ಕಿದೆ, ಈತನೋರ್ವ ಶಿವಮೊಗ್ಗದ ಟ್ರಾಫಿಕ್‌ನಿಂದ ವರ್ಗಾವಾಗಿ ಎಸ್‌ಬಿ ಡ್ಯೂಟಿನೇ ಬೇಕೆಂದು ರಾಜಕೀಯದ ಒತ್ತಡದ ಮೇರೆಗೆ ಇಲ್ಲಿಗೆ ಬಂದವನು, ಉನ್ನತಮಟ್ಟದ ಅಧಿಕಾರಿಗಳಿಗೆ ಹಾಗೂ ಠಾಣೆಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸುವ ಬದಲು, ಈ ವ್ಯಾಪ್ತಿಯಲ್ಲಿ ಮರಳು ಕ್ವಾರಿಗಳು, ತೆರಿಗೆ ಹಾಗೂ ಎಪಿಎಂಸಿಯ ಸೆಸ್ಸುಗಳಿಲ್ಲದೆ ಅಕ್ರಮ ಸಾಗಾಟ ನಡೆಸುವ ಅಡಿಕೆ ಕಳ್ಳ ಸಾಗಣಿಕೆಗಳ ಮಾಫಿಯಾದೊಂದಿಗೆ ಈತನ ಕರಿನೆರಳಿನ ಕಾವಣವಿರುವುದು ನರ್ತನವಿಟ್ಟಿದೆ, ಇನ್ನೂ ಈತನ ಕರೆನ್ಸಿ ಬಾರಬಂಗಡಿಯಲ್ಲಿ ಕೋಟಿ, ಕೋಟಿ ಮೌಲ್ಯದ ಆಸ್ತಿಗಳು ಶಿವಮೊಗ್ಗದಲ್ಲಿ ತೂಗುತ್ತಿದೆ, ಅಕ್ರಮ ದಂಧೆಕೋರರ ನಡುವೆ ಸೇತುವೆ ಆಗಿರುವ ಅನೇಕರಿಗೆ ಪೀಡಕನಾಗಿದ್ದಾನೆ, ಅಕ್ರಮದ ಉಸ್ತುವಾರಿಯ ವಿರುದ್ದ ಯಾರು ಮಾತನಾಡುವಂತಿಲ್ಲ, ಸಾಲದಕ್ಕೆ ಈತನ ಅಕ್ರಮ ಕನೆಕ್ಟ್ ವಿರುದ್ದ ಕಮ್ಯೂನಲ್ ಕ್ಲ್ಯಾಷ್ ಆಗಿ ಉನ್ನತಮಟ್ಟದ ಅಧಿಕಾರಿಗಳು ಅಮಾನತ್ತುಗೊಳಿಸಿ ಕೈ ತೊಳೆದುಕೊಳ್ಳುವ ಮುನ್ನದಿ ಈತನ ಮೇಲೆ ಡಿಪಾರ್ಮೆಂಟ್ ವಿಚಾರಣೆ ನಡೆಸಲಿ ಎನ್ನುವುದು ಈ ಬರಹದ್ದಾಗಿದೆ.

