Sunday, August 2, 2026
Homeಸೂರ್ಯಗಗನI ಸಮಾಜಮುಖಿಯತ್ತ ಚಿತ್ತವರಿಸಿದ I ಬೆಂಗಳೂರಿನ ಡಾನ್ ಸೈಲೆಂಟ್ ಸುನೀಲ್ I

I ಸಮಾಜಮುಖಿಯತ್ತ ಚಿತ್ತವರಿಸಿದ I ಬೆಂಗಳೂರಿನ ಡಾನ್ ಸೈಲೆಂಟ್ ಸುನೀಲ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಮಾಜಮುಖಿಯತ್ತ ಚಿತ್ತವರಿಸಿದ I ಬೆಂಗಳೂರಿನ ಡಾನ್ ಸೈಲೆಂಟ್ ಸುನೀಲ್ I

ಹೀಗೊಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ರೌಡಿ ಶೀಟ್ ಪಟ್ಟಿಯಲ್ಲಿದ್ದ ವ್ಯಕ್ತಿಗಳನ್ನ ಕೈಬಿಟ್ಟು ಆದೇಶಿಸಿರುವ ಕುರಿತು ಬಹುತೇಕ ವಿಮರ್ಶೆಗಳು ವ್ಯಾಖ್ಯಾನಿಸುತ್ತಿದೆ,
ಉಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರೌಡಿಶೀಟ್ ಪಟ್ಟಿಯಲ್ಲಿ ಮುಂದುವರೆಸಿದ್ದರ ಪರಿಣಾಮದ ವಿರುದ್ಧ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಹಲವು ವ್ಯಕ್ತಿಗಳು ಸಲ್ಲಿಸಿದ್ದ ದೂರುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸಮಗ್ರ ವಿಚಾರಣೆ ನಡೆಸಿ ಕೆಲವು ವ್ಯಕ್ತಿಗಳನ್ನು ರೌಡಿಶೀಟ್ ಪಟ್ಟಿಯಿಂದ ತೆರವುಗೊಳಿಸಿ ಆದೇಶಿಸಲಾಗಿರುವುದರ ಪಟ್ಟಿಯಲ್ಲಿದ್ದ 66 ಆಸಾಮಿಗಳಲ್ಲಿ ಸೈಲೆಂಟ್ ಸುನೀಲ್ ಕೂಡ ಇದ್ದದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ,

    ಮುಂದುವರೆದಂತೆ ಇದು ಸಮಾಜದ ಮಖ್ಯವಾಹಿನಿಗೆ ತರಲಾಗುವ ಈ ಆದೇಶವಾದರು, ಬದಲಾಗುತ್ತಿರುವ ಭೂಗತ ಎಲಿಮೆಂಟರಿಗಳು ಮತ್ತೇಂದಿಗೂ ಭೂಗತಕ್ಕೆ ಮರಳಬಾರದು ಇಂತಹದೊಂದು ಇಚ್ಚಾಶಕ್ತಿ ಅವರುಗಳಲ್ಲಿ ಇರಲೇಬೇಕಾಗಿದೆ, ಈ ಬದಲುಗೊಳ್ಳುವಿಕೆಯ ಪ್ರಯತ್ನದಲ್ಲಿ ಸಮಾಜದ ವಿವಿಧ ರಂಗಗಳು ಕೂಡ ಸ್ವಾಗತಿಸುವ ವಿಚಾರವು ಹೌದಾಗಿದೆ, ನಿಜಕ್ಕೂ ಸೈಲೆಂಟ್ ಸುನೀಲ್ ಕುರಿತಾಗಿ ಉಲ್ಲೇಖಿಸುವಾಗ, ಈ ಹೆಸರು ಸಾಮಾನ್ಯದುದ್ದಲ್ಲ, ಒಮ್ಮೆಲೆ ಎದೆಕಂಪಿಸುವ ವಾತಾವರಣ ಕೂಡ ಅಲ್ಲಿ ಸೃಷ್ಟಿಸುತ್ತದೆ, ಹೀಗಿದ್ದವರು ಹೇಗೆ ಬದಲಾಗುತ್ತಾರೆ, ಎನ್ನುವುದಕ್ಕೆ ಹಲವು ಜೀವಂತ ಉದಾಹರಣೆಗಳಿದೆ,

ಬದಲಾವಣೆಗಾಗಿ ಪರಿತಪಿಸುತ್ತಿರುವ “ಸೈಲೆಂಟ್ ಸುನೀಲ್” ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪ್ರಯತ್ನಗಳು ಇದೀಗಲೂ ಮುಂದುವರೆಸಿದ್ದಾರೆ, ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಜಗದ ಜಗಲಿಯ ಗುರುಗಳಾದಂತಹ “ರವಿಶಂಕರ್ ಗುರೂಜೀ” ಅವರನ್ನು ಬೇಟಿ ಮಾಡಿ ಚರ್ಚಿಸಿ ಆಶೀರ್ವಾದ ಪಡೆದುಕೊಂಡಿರುವುದು ಅತೀವ ಕುತೂಹಲ ಮೂಡಿಸಿದೆ, ಶ್ಲೋಕ : ರಂ, ಕಂ, ಕರೋತಿ, ರಾಜಾನಾಂ, ರಾಜಾನಾಂ ರಂಕ ಮೇವ ಛ ಧನಿಕಂ, ಎನ್ನುವ ಸಾಲಿನಂತೆ ಎಲ್ಲರ ಬದುಕುಗಳಲ್ಲೂ ಬದಲಾವಣೆ ಅತೀಮುಖ್ಯ ಇದೊಂದು ಅರಿವಿನ ಕಾಲಘಟ್ಟವಾಗಿದೆ, ಈ ಅರಿವು ಇರುವುದರಿಂದಲೇ ಈ ಬೇಟಿ ಮಹತ್ವ ಪಡೆದುಕೊಂಡಿದೆ

ಹೀಗೆ ಬಹಿರಂಗ ಹೋರಾಟ ರೂಪಿಯಾಗಿ ನಿಂದಿರುವ ಅನೇಕತೆಯ ಉದಾಹರಣೆಗಳಿದೆ, ಈ ಜೊತೆಗೆ ಒಂದಷ್ಟು ಸೈಲೆಂಟ್ ಬದುಕಿನ ಚಿತ್ರಣದಲ್ಲಿ ಅನಾಹುತಕಾರಿಗಳ ಕುರುಹುಗಳಿದ್ದರು, ಸಮಾಜಸೇವೆಯು ಅದಷ್ಟೆ ಬೆಸೆದುಕೊಂಡಿದೆ, ಇದನ್ನು ತಿಳಿದುಕೊಳ್ಳಬೇಕಾದ ಜರೂರಿಯಿದೆ, ಈ ಬರಹದ ಸಾಲು ಇನ್ನಾವ ಉತ್ಪ್ರೇಕ್ಷಿತಗೊಳಿ ಸುವುದಕ್ಕಲ್ಲವಾಗಿದೆ,

ನೋಡಿ ಭಾರತೀಯ ಕಾನೂನು, ಮುನಷ್ಯ ಸಹಜ ಬದಲಾವಣೆಗೆ, ಕಾನೂನಿನಡಿಯಲ್ಲಿ ಬದುಕುವುದಕ್ಕೆ, ಸಮಾಜದ ಮುಖ್ಯವಾಹಿನಿಯಲ್ಲಿ ಅಭಿವ್ಯಕ್ತಿಸುವುದಕ್ಕೆ ರಹದಾರಿ ಮಾಡಿಕೊಟ್ಟಿರುವಾಗ ಇತ್ತೀಚೆಗಷ್ಟೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ನಡೆದ “ಬೃಹತ್ ರಕ್ತದಾನ ಶಿಬಿರ”  ಹೀಗೊಂದು ಭಾರಿ ಸದ್ದು ಇದೀಗಲೂ ಮಾಡುತ್ತಿದೆ, 1800ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿರುವ ಸೇವಾಮುಖಿಯ ಹಾದಿಯನ್ನು ಸ್ಮರಿಸಲೇಬೇಕು,

ಹೀಗಾಗಿ ಬದಲಾಗುವವರು ಬದಲಾಗಲಿ ಬಿಡಿ, ಬದಲಾಗದಿದ್ದರೆ ಕಾನೂನು ಸುಮ್ಮನೆ ಕೂರುವುದಿಲ್ಲ ಅಲ್ಲವೇ.. “ಇತ್ಯಾದಿ ಪತ್ರಿಕೆ” ಈ ಹಿಂದೆಯೂ ಸೈಲೆಂಟ್ ಸುನೀಲ್ ಕುರಿತಾದ ಕ್ರೈಂ ಹಿಸ್ಟರಿ ಕುರಿತಾಗಿ ಪುಟಗಟ್ಟಲೆ ಬರೆದು ಸಾರ್ವಜನಿಕಗೊಳಿಸಿದೆ, ಇದೀಗಲೂ ಕ್ರೈಂ ಹೆಜ್ಜೆಗಳಿದ್ದರೆ ಯಾವುದೇ ಮುಲಾಜಿಲ್ಲದೆ ಪ್ರಕಟಿಸಲು ಹಿಂಜರಿಯದು, ಆದರೆ ಕಳೆದೆರೆಡು ವರುಷಗಳಿಂದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸನ ಮೇಲಿನ ಸುಫಾರಿ ಹತ್ಯೆಯ ಆರೋಪದಡಿ ಕೇಸು ದಾಖಲಿಸಿಕೊಂಡು ಜೈಲು ಸೇರಿ ಬಂದ ಮೇಲಂತೂ ಆತನ ಕ್ರೈಂ ವರಾತಗಳು ಕೇಳಿ ಬಂದಿಲ್ಲ, ಬದಲಿಗೆ ಆದಷ್ಟು ಜನಾನುಮುಖಿಯಾಗಿ ಕಾಣಿಸಿಕೊಳ್ಳುತ್ತಿರುವುದು ಶ್ಲಾಘನೀಯ,

ಇನ್ನೂ ಸೈಲೆಂಟ್ ಸುನೀಲನ ಕ್ರೈಂ ಕಡತದಲ್ಲಿರುವಂತೆ ಎಲ್ಲಾ ಕೇಸುಗಳು ಬಹುತೇಕ ಖುಲಾಸೆಯಾಗಿದ್ದು ಕೆಲವು ಪ್ರಕರಣಗಳಿಗೆ ಕೋರ್ಟಿನಿಂದ ತಡೆಯಾಜ್ಞೆ ತಂದಿರುವುದರಿಂದ ಬಾಕಿ ಉಳಿದಿದೆ,

ಸೈಲೆಂಟ್ ಸುನೀಲನಲ್ಲೂ ಮಾನವೀಯ ಮೌಲ್ಯಗಳಿವೆ ಬದಲಾಗಿ ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಹರಸಾಹಸ ಪಡುತ್ತಿದ್ದಾನೆ, ಕನ್ನಡ ಸಂಘಟನೆಯ ತಳಹದಿಯಲ್ಲಿ ಸಾಮಾಜಿಕ ಕೆಲಸವು ಮಾಡುತ್ತಿದ್ದಾನೆ ಎನ್ನುವುದಷ್ಟೆ ಅಲ್ಲ ಆತನೊಂದಿಗೆ ಮಾತಾಡಿದವರು ಹೇಳುವಂತೆ ಮನುಷ್ಯ ಕಾಳಜಿ, ಜೀವಪರ ನಿಲುವುಗಳು ಆತನಲ್ಲಿದೆ, ಸಮಾಜ ಆತನ ಬದಲಾವಣೆ ಒಪ್ಪುವುದೇ, ಅಥವಾ ಆತನ ದ್ವೇಷಿಗಳು ಹಾಗೆಯೇ ಬಿಟ್ಟು ಬಿಡಬಲ್ಲರೇ..? ಹೇಳಿ, ಸಾಧ್ಯವಿಲ್ಲ ಸೈಲೆಂಟಾಗಿಯೇ ಇದ್ದು ಒಂದೊಮ್ಮೆ ಸಮಾಜದ ಮುಖ್ಯವಾಹಿನಿಗೆ ಬಂದು ಬಿಡುವ ಆತನ ನಿರ್ಧಾರಗಳು ಸ್ವಾಗತಾರ್ಹವೇ ಹೌದು, ಕಾನೂನಿನಲ್ಲಿ ಬದಲಾವಣೆಗೆ, ಸಮಾಜದ ಮುಖ್ಯವಾಹಿನಿಗೆ ಕರೆತರಲು ಅವಕಾಶಗಳಿವೆ ಅದಕ್ಕೆ ಮುಕ್ತತೆ ಇರಬೇಕು,

ಒಂದಂಶದ ಸಂಗತಿ ಎಂದರೆ ಓರ್ವ ರೌಡಿ, ರೌಡಿಯಾಗಿಯೇ ಸಾಯಬೇಕೆ..? ಆತ ಸಮಾಜದ ಮುಖ್ಯವಾಹಿನಿಗೆ ಬರಬಾರದೇ, ಆತ ಯಾವುದಾದರು ಪಕ್ಷಕ್ಕೆ ಸೇರ್ಪಡೆಯಾಗಿ ಜನಪ್ರತಿನಿಧಿಯಾಗ ಬಯಸಿದರೆ ತಪ್ಪೇನು..? ಎಲ್ಲಾ ಕೇಸುಗಳಿಂದ ಮುಕ್ತನಾಗಿರುವ ಸೈಲೆಂಟ್ ಸುನೀಲನಿಗೆ ಸಾಂವಿಧಾನಿಕವಾಗಿ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಹಕ್ಕುಗಳಿವೆ, ಆತನಿಗೂ ಅಭಿವ್ಯಕ್ತಿ ಇದೆ ಜನಪರವಾಗಿ ದನಿಯಾಗುತ್ತಾನೆ, ಆತ ಭಾರತೀಯ ಸಂವಿಧಾನದ ಚೌಕಟ್ಟಿಗೆ ಒಳಪಡುವ ಎಲ್ಲಾ ಅರ್ಹತೆಗಳಿದೆ ಎಂದ ಮೇಲೆ ರೌಡಿಸಂ ತ್ಯಜಿಸಿ ಚುನಾವಣೆಗೆ ಸ್ಪರ್ಧಿಸಿ ಜನಪ್ರತಿನಿಧಿಯಾಗಲಿ, ಶ್ರೀ-ಸಾಮಾನ್ಯ ಒಪ್ಪಿಕೊಂಡು ಆಯ್ಕೆ ಮಾಡಿದ ಬಹಳಷ್ಟು ರೌಡಿಗಳು ಸಮಾಜಮುಖಿಯಾಗಿ ಬದಲಾಗಿದ್ದಾರಲ್ಲದೆ ಇಂದು ಶಾಸಕರು, ಸಚಿವರು, ಜನಪ್ರತಿನಿಧಿಯಾಗಿದ್ದಾರೆ ಅಲ್ಲವೇ ಎಂದಾದರೆ ಸೈಲೆಂಟ್ ಸುನೀಲ್ ಜನಪ್ರತಿನಿಧಿಯಾಗಲು ಯಾರ ಪ್ರಮಾಣಪತ್ರ ಬೇಕಿದೆ..?

ಶ್ರೀ-ಸಾಮಾನ್ಯ ಒಪ್ಪಿ ಆಯ್ಕೆ ಮಾಡುವ ತೀರ್ಪುದಾರ ಅಲ್ಲವೇ..? ಸೈಲೆಂಟ್ ಸುನೀಲ್ ಭೂಗತ ಲೋಕ ತ್ಯಜಿಸಿ ಬದಲಾಗುವುದಾದರೆ ಬದಲಾಗಲಿ, ಆತನಿಗೆ ಪೊಲೀಸರು ಕಾನೂನಾತ್ಮಕ ಅವಕಾಶಗಳು ನೀಡಲಿ, ಸಮಾಜದ ಮುಖ್ಯ ವಾಹಿನಿಗೆ ರೌಡಿಗಳು ತಮ್ಮ ಕರಾಳ ಜೀವನವನ್ನು ತ್ಯಜಿಸಲಿ ಬದಲಾದವರಿಂದ ಸಮಾಜದಲ್ಲಿ ಕ್ರಾಂತಿ ಸಾಧನೆಗೈದು ಶಾಸನವಾದ ಅನೇಕ ಉದಾಹರಣೆಗಳು ಇತಿಹಾಸದ ಪುಟಗಳೇ ಹೇಳುತ್ತದೆ, ಅಂಗುಲಿಮಾಲ ಏನಾಗಿದ್ದ ಏನಾದ, ಆತನಿಗೆ ಯಾವ ಅರಿವು ಬದಲು ಮಾಡಿತ್ತು, ಹೀಗೆ ಪುರಾಣ ಪುಣ್ಯ ಕತೆಗಳಲ್ಲೂ ಬದಲಾವಣೆಯಾದ ಪುಟಗಳು ಇಂದಿಗೂ ಮಾದರಿಯಾಗಿದೆ ಅಲ್ಲವೇ..? ಹೀಗೆ ಹೇಳುತ್ತಲೇ ಹೋದರೆ ಸಾಲು ಸಗಟುಗಳಾಗುತ್ತವೆ ಎನ್ನುವುದಕ್ಕೆ ಇಲ್ಲಿಯೇ ನಿಲ್ಲಿಸಿ ಸೈಲೆಂಟ್ ಸುನೀಲನ ಮೈನ್ ಸ್ಟ್ರೀಟ್ ವಾಕ್ ಸ್ವಾತಂತ್ರ್ಯವನ್ನು ಸ್ವಾಗತಿಸಲಿಚ್ವಿಸುವ ಮನಸುಗಳು ಕಾನೂನಾತ್ಮಕವಾಗಿ ಚಿತ್ತವರಿಸಿದೆ ಎನ್ನುವುದನ್ನು ಹೇಳಬಹುದಾಗಿದೆ,

ಭಾರತೀಯ ಕಾನೂನಿನ್ವಯ ಸಾಂವಿಧಾನಿಕ ಬದುಕು ನಡೆಸುವ ಯಾರೇ ಆಗಲಿ ಆತನಿಗೆ ಪೂರ್ಣ ಸಾಂವಿಧಾನಿಕ ಹಕ್ಕುಗಳು ಇದೆ, ಹಾಗೆಯೇ ಮನುಷ್ಯಜೀವನಕ್ಕೆ ಮರಳುವ ವ್ಯವಸ್ಥೆಗಳಿಗೂ ಕಾನೂನಿನಡಿ ಅವಕಾಶಗಳಿವೆ ಎನ್ನುವುದನ್ನು ಟೀಕಿಸುವವರು ಹಾಗೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರು ಗಮನಹರಿಸಬೇಕಾದ ಜರೂರತ್ತಿದೆ, 

ಒಟ್ಟಿನಲ್ಲಿ ಸಮಾಜಮುಖಿಯಾಗಿ ಬದಲುಗೊಳ್ಳುವ ಡೆಮಾಕ್ರಟಿಕ್ ಅವಕಾಶವನ್ನು ಯಾರು ಕೂಡ ಕಸಿದುಕೊಳ್ಳಲು ಸಾದ್ಯವಿಲ್ಲವಾಗಿದೆ, ಈ ಹೊತ್ತಿಗೆ ಬದುಕಿನ ಪಥ ಬದಲಾವಣೆಗೆ ಸೈಲೆಂಟ್ ಸುನೀಲ್ ಮುಂದಾಗಿರುವುದು ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಬಹುದಾದರೆ, ಹೊಸತೊಂದು ಬದುಕಿನ ಅಧ್ಯಾಯದ ಪುಟಗಳು ತೆರೆದಿಡುವ ಸೈಲೆಂಟ್ ಸುನೀಲ್ ರವರ ಬದುಕಿಗೆ ಸಾಮಾಜಿಕ ಸ್ವಾಗತ ಈ ಬರಹ ಬಯಸುತ್ತದೆ ಎನ್ನುವುದು ಈ ಲಗತ್ತಿನ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I