September 22, 2026

I ನಗರ ಬಿಜೆಪಿಯಿಂದ ತುಂಗಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ I ಜಿಲ್ಲೆಯ ಸಮೃದ್ಧಿಗಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಪ್ರಾರ್ಥನೆ I

0
IMG-20260804-WA0131

I ನಗರ ಬಿಜೆಪಿಯಿಂದ ತುಂಗಾ ನದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಣೆ I ಜಿಲ್ಲೆಯ ಸಮೃದ್ಧಿಗಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಪ್ರಾರ್ಥನೆ I

ಶಿವಮೊಗ್ಗ : “ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ ಮೈದುಂಬಿ ಹರಿಯುತ್ತಿರುವ ಜೀವನದಾಯಿನಿ ತಾಯಿ ತುಂಗಾ ನದಿಗೆ ಬಾಗಿನ ಅರ್ಪಿಸುವುದು ನಮ್ಮ ನಾಡಿನ ಪವಿತ್ರ ಪರಂಪರೆ ಮತ್ತು ಕೃತಜ್ಞತೆಯ ಸಂಕೇತವಾಗಿದೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದರು.

ಇಂದು ಭಾರತೀಯ ಜನತಾ ಪಾರ್ಟಿ ಶಿವಮೊಗ್ಗ ನಗರ ಘಟಕದ ವತಿಯಿಂದ, ಕೋಟೆ ರಸ್ತೆಯ ಐತಿಹಾಸಿಕ ಶ್ರೀ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ಮೈದುಂಬಿ ಹರಿಯುತ್ತಿರುವ ತಾಯಿ ತುಂಗೆಗೆ ಭಕ್ತಿಪೂರ್ವಕವಾಗಿ ಬಾಗಿನ ಸಮರ್ಪಿಸಿ, ಶಾಸಕರು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ತಾಯಿ ತುಂಗೆಯ ಅನಂತ ಕೃಪೆಯಿಂದ ನಮ್ಮ ಶಿವಮೊಗ್ಗ ನಗರ ಹಾಗೂ ಇಡೀ ಜಿಲ್ಲೆಯಲ್ಲಿ ಸದಾ ಸುಭಿಕ್ಷೆ, ಸಮೃದ್ಧಿ ನೆಲೆಸಲಿ. ನಮ್ಮ ಭಾಗದ ಅನ್ನದಾತರ ಮೊಗದಲ್ಲಿ ನಿರಂತರ ಮಂದಹಾಸ ಮೂಡಿ, ಪ್ರತಿಯೊಬ್ಬ ನಾಗರಿಕನಿಗೂ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಸೌಹಾರ್ದತೆ ಸಿಗಲಿ,” ಎಂದು ಶ್ರದ್ಧೆಯಿಂದ ಪ್ರಾರ್ಥಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಗರ ಅಧ್ಯಕ್ಷರಾದ  ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಹಾಗೂ ಬಿಜೆಪಿ ಶಿವಮೊಗ್ಗ ಜಿಲ್ಲಾ ಮತ್ತು ನಗರ ಘಟಕದ ಪದಾಧಿಕಾರಿಗಳು, ಪ್ರಮುಖ ಮುಖಂಡರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ  ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!