I ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ I ಶ್ರೀ ಜಾಂಭವ ಭವನದ ಜಾಗ ಒತ್ತುವರಿ I ತೆರವಿಗೆ ಆಗ್ರಹಿಸಿದ ತೇಜಸ್ I
ಶಿವಮೊಗ್ಗ : ನಗರದ ಮಿಳಘಟ್ಟ ಗ್ರಾಮದ ಸರ್ವೆ ನಂ. 3 ರಲ್ಲಿ 0-39 ಗುಂಟೆ ಖಾಲಿ ಜಾಗವನ್ನು ಶಿವಮೊಗ್ಗ ಜಿಲ್ಲಾ ಮಾದಿಗ ಸಮಾಜ, ಶ್ರೀ ಜಾಂಭವ ಭವನ ನಿರ್ಮಾಣಕ್ಕೆ (ಸಮಾಜ ಕಲ್ಯಾಣ ಇಲಾಖೆ) ಸರ್ಕಾರದಿಂದ ಮಂಜೂರು ಮಾಡಿದ್ದು, ಈ ಜಾಗದಲ್ಲಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯವರು, ಸಮಾಜದ ಜಾಗವನ್ನು ಒತ್ತುವರಿ ಮಾಡಿದ್ದು, ತಕ್ಷಣ ತೆರವುಗೊಳಿಸಿ ಕೊಡುವಂತೆ ಕರ್ನಾಟಕ ಮಾದರ ಮಹಾಸಭಾ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು,
ಮನವಿ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ತೇಜಸ್ ಅವರು ಮಾತಾನಾಡಿ ಶಿವಮೊಗ್ಗ ನಗರದ ಮಿಳಘಟ್ಟ ಗ್ರಾಮದ ಸರ್ವೆ ನಂ. 3 ರಲ್ಲಿ ಸರ್ಕಾರವು ನಮ್ಮ ಮಾದಿಗ ಸಮಾಜದವರಿಗೆ ಜಾಂಭವ ಭವನ ನಿರ್ಮಿಸಿಕೊಳ್ಳಲು ಎಂ.ಆರ್. ನಂ. 54/95-96 ರಲ್ಲಿ 0-39 ಗುಂಟೆ ಖಾಲಿ ಜಾಗವನ್ನು ಮಾಡಿರುತ್ತಾರೆ. ಇದರಲ್ಲಿ 0-09 ಗುಂಟೆ ಪ್ರದೇಶವನ್ನು ಪೊಲೀಸ್ ಇಲಾಖೆಗೆ ಮಂಜೂರು ಮಾಡಿದ್ದು, ಇದರ ಎಂ.ಆರ್. ನಂ. 121/2022-23 ರಲ್ಲಿ ಇದರಲ್ಲಿ ಎಂ.ಆರ್. ನಂ. 54/95-96 ರಲ್ಲಿ ಮಂಜೂರು ಮಾಡಿರುವಂತಹ 0-30 ಗುಂಟೆ ಜಮೀನನ್ನು ಮಾದಿಗ ಸಮಾಜಕ್ಕೆ ಜಾಂಭವ ಭವನ ನಿರ್ಮಾಣಕ್ಕಾಗಿ (ಸಮಾಜ ಕಲ್ಯಾಣ ಇಲಾಖೆಗೆ) ಸಂಪೂರ್ಣ ನಿಯಂತ್ರಣ ನೀಡಿ ಜಾಂಭವ ಭವನ ನಿರ್ಮಾಣ ಮಾಡಲು ಜವಾಬ್ದಾರಿಯನ್ನು ನೀಡಿರುತ್ತಾರೆ.
ಈ ಹಿಂದೆ 2023ನೇ ಸಾಲಿನಲ್ಲಿ ಇಲಾಖೆಯಿಂದ ಹದ್ದುಬಸ್ತು ಮಾಡಿಸಿದ್ದು, ಈ ಸಂದರ್ಭದಲ್ಲಿ ಸರ್ವೆ ಇಲಾಖೆಯವರು ಅಳತೆ ಮಾಡಿ ಸ್ಕೆಚ್ ಮಾಡಿಕೊಟ್ಟಿರುತ್ತಾರೆ ಮತ್ತು ದಿನಾಂಕ: 20-1-2020 ರಲ್ಲಿಯೂ ಸಹ ವರದಿ ಸಲ್ಲಿಸಿರುತ್ತಾರೆ ಎಂದು ವಿವರಿಸಿದರು,
ಇದೀಗ ಹಾಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ರಸ್ತೆ, ಶಿಕ್ಷಣ ಇಲಾಖೆಯವರು ಜಾಗವನ್ನು ಒತ್ತುವರಿ ಮಾಡಿದ್ದು, ಇಡೀ ಮಾದಿಗ ಸಮಾಜಕ್ಕೆ ಈ ಜಾಗ ಬಿಟ್ಟರೆ, ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಜಾಗವಾಗಲೀ ಇರುವುದಿಲ್ಲ. ಆದ್ದರಿಂದ ತಾವು ಈ ಮನವಿಯನ್ನು ಪರಿಶೀಲಿಸಿ ಸ್ಥಳ ಪರಿಶೀಲಿಸಿ ಕೂಡಲೇ ನಮ್ಮ ಸಮಾಜದ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ಜಾಂಭವ ಭವನ ನಿರ್ಮಾಣ ಮಾಡಲು ಮಾದಾರ ಮಹಾಸಭಾ, ಶಿವಮೊಗ್ಗ ಜಿಲ್ಲೆ, (ಸಮಾಜ ಕಲ್ಯಾಣ ಇಲಾಖೆ) ಇವರ ಸುಪರ್ದಿಗೆ ಕೊಡಬೇಕೆಂದು ಈ ಮೂಲಕ ಅವರು ಒತ್ತಾಯಿಸಿದ್ದಾರೆ,
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಾಜಿ, ಮುಖಂಡರಾದ ಸತೀಶ್, ನಾಗರಾಜ್ ರವಿಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು
