Wednesday, September 16, 2026
Homeಸೂರ್ಯಗಗನI ಪತ್ರಿಕಾ ವಿತರಕರು ಜಗತ್ತಿನ ವಿದ್ಯಮಾನಗಳನ್ನು ಹೊತ್ತು ಸಾಗುವ ರಾಯಭಾರಿಗಳು I ವಸಂತ್ ಹೋಬಳಿದಾರ್ I

I ಪತ್ರಿಕಾ ವಿತರಕರು ಜಗತ್ತಿನ ವಿದ್ಯಮಾನಗಳನ್ನು ಹೊತ್ತು ಸಾಗುವ ರಾಯಭಾರಿಗಳು I ವಸಂತ್ ಹೋಬಳಿದಾರ್ I

I ಪತ್ರಿಕಾ ವಿತರಕರು ಜಗತ್ತಿನ ವಿದ್ಯಮಾನಗಳನ್ನು ಹೊತ್ತು ಸಾಗುವ ರಾಯಭಾರಿಗಳು I ವಸಂತ್ ಹೋಬಳಿದಾರ್ I

ಶಿವಮೊಗ್ಗ : ದಿನಪತ್ರಿಕೆಯ ಜತೆಗೆ ನಿತ್ಯ ಜ್ಞಾನವನ್ನು ಹಂಚುವ ಶ್ರಮಜೀವಿಗಳಾದ ಪತ್ರಿಕಾ ವಿತರಕರು ಸಮಾಜ ಮತ್ತು ಸುದ್ದಿಯ ನಡುವಿನ ಜೀವಂತ ಕೊಂಡಿ ಅಸಂಘಟಿತ ಕಾರ್ಮಿಕರಾಗಿರುವ ಪತ್ರಿಕಾ ವಿತರಕರು, ಕೆಲಸದಲ್ಲಿ ಅಭದ್ರತೆ ಕಾಡಿದರೂ ಪತ್ರಿಕೆಯೊಂದಿಗಿನ ಒಡನಾಟ ಕಳೆದುಕೊಂಡಿಲ್ಲ. ಇವರು, ಜಗತ್ತಿನ ವಿದ್ಯಮಾನಗಳನ್ನು ಹೊತ್ತು ಸಾಗುವ ರಾಯಭಾರಿಗಳು ಮಾತ್ರವಲ್ಲ; ಬೆವರ ಹನಿಯ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೂ ಆಧಾರವಾಗಿದ್ದಾರೆ ಎಂದು ಚುನಾಯಿತ ಜಿಲ್ಲಾ ರೋಟರಿ ಗವರ್ನರ್ ವಸಂತ್ ಹೋಬಳಿದಾರ್ ಅವರು ಅಭಿಪ್ರಾಯಪಟ್ಟರು

ನಗರದ ರೋಟರಿ ಈಸ್ಟ್ ಶಾಲೆ ರಾಜೇಂದ್ರ ನಗರ ದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ ” ವಿಶ್ವ ಪತ್ರಿಕಾ ವಿತರಕರ ದಿನ 2026 ಸಭೆಯಲ್ಲಿ ಭಾಗವಹಿಸಿ ನೆರಿದಿದ್ದ ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದರು

ಕೊರೆಯುವ ಚಳಿ, ಸುರಿಯುವ ಮಳೆ, ಬೀಸುವ ಗಾಳಿ ಏನೇ ಇದ್ದರೂ ಮನೆ–ಮನೆಗೆ ತೆರಳಿ ಬೆಳಕು ಹರಿಯುವ ಮುನ್ನ ಜಗತ್ತಿನ ವಿದ್ಯಮಾನಗಳನ್ನು ಓದುಗರ ಕೈಗಿಡುವ ಪತ್ರಿಕಾ ವಿತರಕ ಕಾಯಕ ಮಾತ್ರ ನಿಲ್ಲದು. ಮನೆಯಲ್ಲಿ ಯಾವ ಸಮಾರಂಭ ಇದ್ದರೂ ತಪ್ಪದೇ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುತ್ತಾರೆ ಪತ್ರಿಕೆಯನ್ನು ಮುದ್ರಣಾಲಯದಿಂದ ಓದುಗರಿಗೆ ತಲುಪಿಸುವ ಜವಾಬ್ದಾರಿ ವಿತರಣಾ ವಿಭಾಗದ ಮೇಲಿದೆ ಮತ್ತು ವಿತರಣಾ ಹುಡುಗರು ಮತ್ತು ಏಜೆಂಟರು ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ ಎಂದರು

ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಅವರು,. ಪತ್ರಿಕಾ ವಿತರಣೆಯಲ್ಲಿ ತೊಡಗಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ಕಚೇರಿ ಕೆಲಸಕ್ಕೆ ತೆರಳುವವರು, ವಾಹನಗಳ ಚಾಲಕರು, ಇಳಿವಯಸ್ಸಿನವರೂ ಇದ್ದಾರೆ. ಬೀದಿ ನಾಯಿಗಳ ಕಾಟ, ಗುಂಡಿ ಬಿದ್ದು ಕೆಸರುಮಯವಾದ ರಸ್ತೆಗಳನ್ನು ದಾಟಿಕೊಂಡು ಓದುಗರಿಗೆ ಬೆಳಗಿನ ಚಹಾದೊಂದಿಗೆ ಸುದ್ದಿಯ ಉಡುಗೊರೆ ನೀಡುತ್ತಾರೆ.. ತಿಳಿಸಿದರು.

ಈ ಸಂದಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ವತಿಯಿಂದ ಕಳೆದ 31 ವರ್ಷದಿಂದ ಪತ್ರಿಕೆ ವಿತರಿಸುತ್ತಿರುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್, ಕಳೆದ 20 ವರ್ಷದಿಂದ ಪತ್ರಿಕೆ ವಿತರಿಸುತ್ತಿರುವ ಉಪಾಧ್ಯಕ್ಷರಾದ ರಾಮು, ಜಿ, ಕಳೆದ 40 ವರ್ಷದಿಂದ ಪತ್ರಿಕೆ ವಿತರಿಸುತ್ತಿರುವ ಪ್ರಧಾನ ಕಾರ್ಯದರ್ಶಿ ಮುಕ್ತರ್ ಅಹ್ಮದ್ (ನಜಿರ್) ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು

ಈ ಸಂದಭದಲ್ಲಿ ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ ವಿಜಯ್ ಕುಮಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ ,ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ ವಿಜಯ್ ಕುಮಾರ್ ಮಾಜಿ ಅಧ್ಯಕ್ಷರಾದ, ಎಚ್ ಬಿ ಗಣೇಶ್, ಎಸ್, ಶ್ರೀಕಾಂತ್ ಎನ್ ಎಚ್ , ಡಾ ಪರಮೇಶ್ವರ್ ಶಿಗ್ಗಾವ್, ಅರುಣ್ ದೀಕ್ಷಿತ್, ಕೃಷ್ಣಮೂರ್ತಿ ,ಬಿ , ನಿಕಟಪೂರ್ವ ಅಧ್ಯಕ್ಷರಾದ ಡಿ ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ ಆರ್ ಧನಂಜಯ್ , ರಕ್ತದಾನಿ ಧರಣೇಂದ್ರ ದಿನಕರ್, ಕೇಶವಪ್ಪ , ಶಶಿಕಾಂತ್ ನಾಡಿಗ್, ಜಿ ಸುನಿಲ್ ಕುಮಾರ್ ರವಿಪ್ರಕಾಶ್ ಕಾಳಾಚಾರ್, ಕಾಸಲ ವಿ ಸುರೇಂದ್ರ ಶ್ರೀನಿವಾಸ್ ಗೌಡ, ಡಾ ಅರುಣ್ ಎಂ , ಗಂಗಪ್ಪ, ಜಗದೀಶ್ , ಕೆ ಟಿ ಗುರುಮೂರ್ತಿ , ರಾಜೇಶ್ ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಆನ್ಸ್ ,ಇನ್ನರ್ ವಿಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news