I ಕರವೇ ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಕರವೇ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್. ಎಸ್. ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್ ಕೆಬಿ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು ಧ್ವಜಾರೋಹಣದ ನಂತರ ಸಾರ್ವಜನಿಕವಾಗಿ ಸಿಹಿ ಹಂಚಿ ಸಂಭ್ರಮಿಸಲಾಯಿತು ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶಂಕರ್ ಲಿಂಗೇಗೌಡರು ಮಾತನಾಡಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಗ್ಗೂಡಿದ ದಿನ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದರು ಜಿಲ್ಲಾ ಉಪಾಧ್ಯಕ್ಷರು ಮಾತನಾಡಿ ಸೈಯದ್ ಮುಜೀಬ್ ನವಂಬರ್ 1 ನಾಡ ಹಬ್ಬ ಅದ್ದೂರಿಯಾಗಿ ಆಚರಿಸಲು ನಮಗೆ ಹೆಮ್ಮೆ ಎಸ್ ಪುಂಡಾಟಿಕೆಯನ್ನು ಮಟ್ಟ ಹಾಕಬೇಕು ನವಂಬರ್ ಒಂದರಂದು ಕಪ್ಪು ಬಾವುಟ ಪ್ರದರ್ಶನ ಮಾಡಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿರುವ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ ಸಂಘಟನೆಯನ್ನು ನಿಷಿದ್ಧಗೊಳಿಸಬೇಕು ಎಂದರು ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ ಇಂದು ವಿಶೇಷ ದಿನ ನಮ್ಮಲ್ ಒಬ್ಬರಾದ ಹಾಗೂ ಕಾರ್ಯಕರ್ತರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ರವರು ಧ್ವಜಾರೋಹಣ ಮಾಡಿದ್ದು ಹೆಮ್ಮೆ ಹಾಗೂ ರಾಜ್ಯದ್ಯಂತ ಕನ್ನಡ ಶಾಲೆ ಉಳಿವಿಗಾಗಿ ರಾಜ್ಯಾಧ್ಯಕ್ಷರು ಪಿ ಕೃಷ್ಣೇಗೌಡರ ನೇತೃತ್ವದಲ್ಲಿ ಜೈ ಕನ್ನಡ ರಥಯಾತ್ರೆ ಅಭಿಯಾನ ಹಮ್ಮಿಕೊಂಡಿದ್ದಾರೆ ಅದು ಶಿವಮೊಗ್ಗಕ್ಕೆ ಬರುವ ದಿನ ಎಲ್ಲರೂ ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಶಂಕರ್ ಲಿಂಗೇಗೌಡರು ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಜುಬುಲ್ಲ. ಗಂಗಾಧರ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ. ಜಿಲ್ಲಾ ಕಾರ್ಯದರ್ಶಿ ಕರವೇ ಸಾಧಿಕ್. ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲಾ ಖಾನ್. ನಗರ ಅಧ್ಯಕ್ಷ ಜೀವನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ನಗರ ಅಧ್ಯಕ್ಷರಾಧಾ ಗೀತಾ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿವಾರಿ ಅನುಪಮಾ ರೋಸಲಿಯನ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು