Saturday, August 1, 2026
Homeಅಂಕಣಎಸ್.ಎಲ್ ಭೈರಪ್ಪನವರ ಕೃತಿಗಳು ಕೆಲವು ಮಾನಸೀಕರಿಗೆ ಯಾಕೆ ವಿವಾದಿತವಾಗಿ ದರ್ಶಿಸುತ್ತವೆ ಗೊತ್ತೇ..?!

ಎಸ್.ಎಲ್ ಭೈರಪ್ಪನವರ ಕೃತಿಗಳು ಕೆಲವು ಮಾನಸೀಕರಿಗೆ ಯಾಕೆ ವಿವಾದಿತವಾಗಿ ದರ್ಶಿಸುತ್ತವೆ ಗೊತ್ತೇ..?!

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಎಸ್.ಎಲ್ ಭೈರಪ್ಪನವರ ಕೃತಿಗಳು ಕೆಲವು ಮಾನಸೀಕರಿಗೆ ಯಾಕೆ ವಿವಾದಿತವಾಗಿ ದರ್ಶಿಸುತ್ತವೆ ಗೊತ್ತೇ..?!

ಅಕ್ಷರಲೋಕ ಯಾವುದನ್ನು ಆಯ್ದುಕೊಳ್ಳುತ್ತಿದೆ, ಯಾವುದನ್ನು ಆಸ್ವಾದಿಸಿಕೊಳ್ಳುವುದಿಲ್ಲ ಎನ್ನುವ ತರ್ಕಗಳು ಸಹಜ ಗುಣವಾಗಿ ಈ ಹೊತ್ತಿನ ದಿನಮಾನದಲ್ಲಿ ಅರ್ಥೈಸಿಕೊಳ್ಳಬೇಕಾದ ಅತೀ ಜರೂರತ್ತಿದೆ, ಆದೆ ವಾಸ್ತವದಲ್ಲಿ ಅಕ್ಷರಲೋಕ ಎಲ್ಲವನ್ನು ಸ್ವೀಕರಿಸುತ್ತದೆ ಯಾವುದನ್ನು ವರ್ಗಿಕರಿಸುವುದಿಲ್ಲ, ಆಯಾ ವಿಷಯಾಧರಿತವಾಗಿ ಆಸ್ವಾದಿಸಿಕೊಳ್ಳುತ್ತಲೇ ಬೇರ್ಪಡುತ್ತದೆ ವಿನಃ ಯಾವುದೋ ಒಣ ಸಿದ್ದಾಂತಗಳಿಗನುಗುಣವಾಗಿ ಅಲ್ಲವಾಗಿದೆ, ಹೌದು ಇಂತಹದ್ದೊಂದು ಅಸತ್ಯಗಳ ಮಾರಕಗಳು ಅಕ್ಷರಲೋಕವನ್ನು ಅವರವರ ಸಿದ್ದಾಂತಗಳ ಜಗಲಿಗೆ ಎಳೆದೊಯ್ದು ಇದೇ ಅಂತಿಮ ಎನ್ನುವ ತೀರ್ಪು, ಅದೆಷ್ಟು ಅಕ್ಷರ ಸಂಗಾತಿಗಳು ಒಪ್ಪಿಕೊಂಡಾರು…? ಹೀಗೆ ಎಡ ಮತ್ತು ಬಲ ಎಂದು ವ್ಯಕ್ತಿಗತ ಚಿಂತನೆಗಳಿಗೆ ಅಕ್ಷರಲೋಕವನ್ನು ಬಲಿಗೊಡುತ್ತಿರುವುದು ನಾವುಗಳು ನಿತ್ಯವೂ ಕಾಣತ್ತಿದ್ದೇವೆ,

ಹಾಗಾದರೆ ಯಾವುದು ಸತ್ಯ.. ಯಾವುದು ಮಿಥ್ಯ..? ಎನ್ನುವ ಸಹಜಮಾತಿನ ಪ್ರಶ್ನಾವಳಿಗಳು ನಮ್ಮಗಳ ಮುಂದಡಿ ಬಂದು ಬಿಡುತ್ತದೆ, ಇಂತಹ ಬೆಳವಣಿಗೆಗಳ ಅನಾವರಣಗಳು ಸಾಹಿತ್ಯ ವೇದಿಕೆಗಳ ಅನೇಕತೆಗಳಲ್ಲಿ ದರ್ಶಿಸುತ್ತಲೇ ಇರುತ್ತದೆ, ಇತ್ತೀಚೆಗೆ ನಡೆದ ಸಾಹಿತ್ಯ ಸಮ್ಮೇಳನದ ಮುನ್ನದಿ ನಡೆದ ತಾತ್ವಿಕ ವಿರೋದ ಭಾಸಗಳು, ಕೆಲವರ ಬಿಗಿಪಟ್ಟುಗಳು ಸಾಹಿತ್ಯ ಸಮ್ಮೇಳನಕ್ಕೆ ನಾವುಗಳು ಬರುವುದಿಲ್ಲ ಎನ್ನುವ ವಾದ, ಸಭೆ ನಡೆದಿದ್ದು ಕೂಡ ಇಂತಹುದೇ ಸಿದ್ದಾಂತಗಳಿಗನುಗುಣವಾಗಿರುವ ವಿರೋಧಬಾಸಗಳಿಂದಲೇ ಈ ಹೊತ್ತಿನ ಭಾವುಕತೆಯ ವೇದಿಕೆಗಳು ಸೊರಗಿ ಕಳೆಗುಂದುತ್ತಿವೆ, ಒಂದೆಡೆ ನಿಶ್ಚಲ ಮನಸಿನ ಸ್ವಚ್ಚಂದತೆಯ ಮುಗಿಲ ಹಕ್ಕಿಯಂತೆ, ಯಾವ ಅಡೆತಡೆಗಳಿರದ ಬರಹದ ವೇದಿಕೆಗಳು ಸಲ್ಲದ ರಾಜಕಾರಣಕ್ಕಾಗಿ, ಒಣ ಸಿದ್ದಾಂತಗಳಿಗಾಗಿ, ಪಂಥೀಯ ವಾದಗಳಿಗಾಗಿ, ಅಸಂಬದ್ದತೆ, ಅಪ್ರುಬುದ್ದತೆಗಳಿಗಾಗಿ ಬಲಿಗೊಡುತ್ತಿರುವುದು ಅಲ್ಲದೆ ಇದನ್ನೇ ತುಷ್ಠೀಕರಣ, ಸಮರ್ಥನೆಗಳಂತಹ ಅನಾಹುತ ಮಾನಸೀಕತೆಯನ್ನು ಹೊಂದಿರುವವರು ಬರಹದ ವೇದಿಕೆಗಳತ್ತ ನುಸುಳಿ ನಂಜುಕಾರುತ್ತಿರುವುದು ಸಾಹಿತ್ಯ ವೇದಿಕೆಗಿದು ತರವಲ್ಲವಾಗಿದೆ.

ಕೆಲ ಸಿದ್ದಾಂತದ ಪರಮಾವಧಿಯಲ್ಲಿರುವವರಿಗೆ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರ ಮತ್ತು ಲೇಖಕರಾದ ಎಸ್.ಎಲ್. ಭೈರಪ್ಪನವರು ಆಗಿಬರುವುದಿಲ್ಲ, ಹೀಗೆಯೇ ಇದೇ ಹೆಜ್ಜೆಗಳ ತುಳಿದವರಿಗೆ ರಾಷ್ಟ್ರಕವಿ ಕುವೆಂಪುರವರೇ ಆಗಲಿ ಅವರ ನಿಜದ ವೈಚಾರಿಕತೆಯ ಮಜಲುಗಳಾಗಲಿ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ, ಹೀಗಾಗಿ ಮೊನ್ನೆಯ ಪಠ್ಯ ಪುಸ್ತಕಗಳಲ್ಲಿಯು ಬೆಂಬಿಡದೆ ತಮ್ಮ ಸೇಡಿನ ಭಾವವನ್ನು ಪ್ರದರ್ಶಿಸಿಕೊಂಡಿದ್ದು ಆಗಿದೆ.ಇದಕ್ಕೆ ವ್ಯಾಪಕ ವಿರೋಧವು ವ್ಯಕ್ತವೂ ಆಗಿದೆ.

ತಮಾಷೆ ಎಂದರೆ ಎಸ್.ಎಲ್ ಭೈರಪ್ಪನವರ ಕೃತಿಗಳಲ್ಲಿ ಯಾವುದೋ ಸಿದ್ದಾಂತಗಳನ್ನು ತೂರಿಸಲಾಗಿದೆ, ಅದು ಬಲಪಂಥೀಯ ವಾದವನ್ನು ಸಾರುತ್ತದೆ, ಅವರ ನಿಲುವುಗಳಿಂದ ಹಾಗೂ ಅವರು ಕಾದಂಬರಿಗಳನ್ನು ಬರೆಯಲು ಆಯ್ಕೆ ಮಾಡುವ ವಿಷಯಗಳು ವಿವಾದಾತ್ಮಕ ಎನ್ನುವುದೇ ಎಡಪಂಥಿಯ ವಾದಿಗಳಿಗೆ ವಿರೋದವಾಗಿ ಕಂಡು ಬಂದಿದೆ, ಅವರ ಕವಲು, ಆವರಣ, ಯಾನ, ಅಂಚುಗಳಂತಹ ಕಾದಂಬರಿಗಳಲ್ಲಿ ಅಡಕಗೊಂಡಿರುವ ಕುರಿತಾಗಿ ಕೆಲವರಿಗೆ ಅಸಹನೆಯಿದ್ದ, ಅಸಹಿಸುವಿಕೆ ಇದ್ದ ಮಾತ್ರಕ್ಕೆ ಭೈರಪ್ಪನವರು ಓರ್ವ ಜೀವ ವಿರೋದಿ ಲೇಖಕರಾಗಿ ಬಿಡುತ್ತಾರೆಯೇ..?

ಯಾರಿಗೆ ಅವರ ಸಾಲುಗಳ ವ್ಯಾಖ್ಯಾನಗಳು ಇಷ್ಟವೆನಿಸುವುದಿಲ್ಲವೋ ಅವರುಗಳು ಅವರಿಷ್ಟದ ಸಾಲುಗಳು ಬರೆದು ಪುಸ್ತಕವನ್ನಾಗಿಸಲಿ ಓದುಗ ಜಗತ್ತು ಇವೆರೆಡರ ವಿಶ್ಲೇಷಣೆ ಮಾಡಿಕೊಳ್ಳುತ್ತದೆ..ಇಂತಹ ವಿಶ್ಲೇಷಣೆಯ ಮುನ್ನವೇ ಬೈರಪ್ಪನವರ ಯಾವುದೇ ಕೃತಿಗಳಿಗೆ ವಿರೋಧ ವ್ಯಕ್ತಪಡಿಸುವುದು ಎಡಪಂಥಿಯವರಿಗೆ ಸಾಮಾನ್ಯ ಎನ್ನುವುದಾದರೇ ಎಡದವರು ಹೇಳಿದ್ದನ್ನೆ ಓದುಗ ಜಗತ್ತು ಒಪ್ಪಿಕೊಳ್ಳಬೇಕೆ…? ಇಂತಹ ಮಾನಸೀಕತೆಯವರು ಅಕ್ಷರಲೋಕವನ್ನು ಗುತ್ತಿಗೆ ಪಡೆದಿದ್ದಾರೆಯೇ..? ಎನ್ನುವುದು ಕೇಳುವ ಮನಸುಗಳು ಬರಹದ ಲೋಕದಲ್ಲಿದೆ ಎನ್ನುವುದು ಮರೆಯಬಾರದು.

ಬರಹವನ್ನು ಬರಹದ ರೂಪದಲ್ಲಿಯೇ ನೋಡುವುದು, ಓದುವುದು, ಗ್ರಹಿಸಿಕೊಳ್ಳುವುದು ಸೂಕ್ತವಲ್ಲವೇ..? ಬರಹ ಸರಿಯಲ್ಲ ಎನ್ನುವ ವಾದಗಳು, ತೀರ್ಪುಗಳನ್ನು ನೀಡುವವರು ಸಾರಸ್ವತ ಲೋಕದ ಪಿತಾಮಹರೇ..? ಅಥವಾ ಅವರುಗಳ ಪಿರ್ತಾರ್ಜಿತವೇ..? ಇಂತಹ ದುರಂತ ಪಾತ್ರಗಳು ಭಾವುಕತೆಯ ವೇದಿಕೆಯಲ್ಲಿ ಮೊಕ್ಕಾಂ ಹೂಡಿವೆ ಎನ್ನುವುದೇ ಆತಂಕವಾಗಿದೆ.

ಕಳೆದ ಹದಿನಾಲ್ಕು ವರುಷಗಳ ಕಾಲದಿಂದಲೂ ಅನುಭವಕ್ಕೆ ಬಂದಂತೆ ಅಕ್ಷರಲೋಕದ ಒಳಹರಿವುಗಳಿಗೆ ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ಇದುವೇ ಮುಖ್ಯ ಇನ್ನುಳಿದವುಗಳು ಅಮುಖ್ಯ ಎನ್ನುವ ವಿತಂಡವಾದಗಳನ್ನು ಕಣ್ಣಾರೆ ನೋಡಿದ್ದೇನೆ ಅಲ್ಲದೆ ಗಮನಿಸಿದ್ದೇನೆ ಹೀಗಾಗಿ ಭೈರಪ್ಪನವರ ಕುರಿತಾದ ಈ ಲೇಖನದ ಉದ್ದೇಶ ಅವರನ್ನು ತೆಗಳುವುದು, ಹೊಗಳುವುದು ಅಲ್ಲ. ತೆಗಳಿದರೆ ಪುಕ್ಕಟೆ ಪ್ರಚಾರ ಪ್ರಿಯನೆಂದೋ ಹೊಗಳಿದರೆ ಮನುವಾದಿ ಎಂದೋ ಹಣೆ ಪಟ್ಟಿ ಕಟ್ಟಿದರೇ ಅದಕ್ಕೆ ನಾ ಸಂಬಂಧಿತ ವ್ಯಕ್ತಿಯೂ ಅಲ್ಲ, ಯಾಕೆಂದರೇ ನಾನು ಮಾನವತಾವಾದಿ, ಎಲ್ಲಿ ಮನುಷ್ಯತ್ವ ಇದಿಯೋ ಅಲ್ಲಿ ಮಾತ್ರವೇ ವ್ಯಕ್ತಿ ಜೀವನ ಎಂದು ನಂಬಿರುವವ, ಹೀಗಾಗಿ ಯಾವ ಪಂಥಿಯ ವಾದಿಗಳಾದರು ಸರಿಯೇ.. ಈ ಲೇಖನದ ಸಾಲು ಓದಿ ಕೊಂಡು ಯಾವ ಗೊಡ್ಡು ಪಂಥಿಯಗಳಿಗೆ ಹೋಲಿಸದಿರಲಿ ಎನ್ನುವುದು ಈ ಮನದ ಕೋರಿಕೆಯೂ ಆಗಿದೆ.

ಮುಂದುವರೆದಂತೆ ಈ ಧಾವಂತವನ್ನು ತಮ್ಮೊಂದಿಗೆ ವಿಸ್ತ್ರತಗೊಳಿಸುತ್ತಾ..ಎಸ್ ಎಲ್ ಭೈರಪ್ಪನವರನ್ನು ಅನ್ವೇಷಣೆಯ ಸಾಹಿತಿ, ಲೇಖಕನೆಂದು ಸಂಬೋಧಿಸಲೇ ಬೇಕಾಗುತ್ತದೆ ಅವರ ಕೃತಿಗಳ ಕಲೆಹಾಕಿ ಮನನ ಮಾಡಿಕೊಂಡ ತರುವಾಯ ವಿಮರ್ಶಾತ್ಮಕ ಪುಸ್ತಕವೊಂದು ಹೊರ ಬರಲಿ ಎಂದು ಆಶಿಸುತ್ತೇನೆ,

ಒಟ್ಟಾರೆಯಾಗಿ ಬರಹದ ಬೇರ್ಪಡುವಿಕೆ, ತೀರ್ಪುದಾರರ ಅವಿವೇಕತನದ ಪರಮಾವಧಿಗಳು, ಗೊಡ್ಡು ಸಿದ್ದಾಂತಗಳತ್ತ ಚಿತ್ತವರಿಸಿಯೇ ಅನ್ವೇಷಣೆಯ ಲೇಖಕರಾದ ಎಸ್.ಎಲ್ ಭೈರಪ್ಪನವರನ್ನು ಕುರಿತಾಗಿ ಉದಾಹರಿಸಿದ್ದೇನೆ ಇನ್ನೂ ಪಂಥಿಯವಾದಗಳಿಗಿಳಿದವರ ಮಾನಸೀಕತೆ ಬದಲಾಗಬೇಕಿದೆ ಜೀವಪರ ನಿಲುವು ಎಂದವರಿಗೆ ಪಂಥಿಯ ವಾದಗಳು ಸಲ್ಲದಾಗಿದೆ, ಒಂದೆಡೆ ಮನುಷ್ಯ ಪ್ರೀತಿ ಬಯಸಿ ವ್ಯಕ್ತಿಗತ ವಿರೋದಭಾಸದ ವಿಮರ್ಶೆಗಳನ್ನು ಬರೆದೋ.. ಅಥವಾ ಅವರನ್ನು ಅವರ ಬರಹಗಳನ್ನು ಇನ್ನೊಂದು ವರ್ಗಕ್ಕೆ ಪಲ್ಲಟಗೊಳಿಸಿಯೋ..? ವಿರೋಧಿಸುವುದರಿಂದ ಅಕ್ಷರಲೋಕದ ಒಟ್ಟು ಮೌಲ್ಯಗಳಿಗೆ ದಕ್ಕೆಯುಂಟು ಮಾಡಿದಂತೆ ಎನ್ನುವುದು ಅರಿತು, ಬರಹಗಳ ಆಸ್ವಾದನೆಗಳತ್ತ ಚಿತ್ತವರಿಸಿ ಎಂದು ವಿರೋಧಿಸುವವರಿಗೆ ಒತ್ತಾಯವೇರದೆ ಮೌನವಾಗಿ ಯಾವುದು ಸರಿ ಅನ್ನಿಸುತ್ತದೋ ಅದನ್ನು ಓದುಗರ ಜಗತ್ತಿಗೆ ಕೊಂಡೊಯ್ಯುವತ್ತ ಗಮನಹರಿಸಿದರೆ ವಿರೋಧಿಸುವವರ ಕುರುಹುಗಳಾದರು ಮುಂದಿನ ಪೀಳಿಗೆಗೆ ಸಿಗಲಿ,

ಇಲ್ಲವಾದೊಡೆ ಸದಾ ವಿರೋಧಿ ವಿರೋಧತ್ವದ ಮಾನಸೀಕತೆಯಿಂದಲೇ ಇರುವ ಕಾಲಾವಧಿಯನ್ನು ಕಳೆದುಕೊಂಡು ಸಮಾಧಿಯಾದರೆ ಮತ್ಯಾವ ಚಿಂತನೆಗಳನ್ನು ಪೀಡಿತ ಸಮಾಜಕ್ಕೆ ಕೊಟ್ಟಂತಾಗುತ್ತದೆ ಅಲ್ಲವೇ … ಒಮ್ಮೆಲೆ ಚಿಂತನೆಗಳಿರಲಿ ಕನ್ನಡದ ಬರಹಗಳನ್ನು ವಿರೋಧಿಸದೇ, ವ್ಯಂಗ್ಯಿಸದೇ ಉತ್ತೇಜಿಸಿ, ಯಾವುದೇ ಕಾರಣಕ್ಕೂ ಪಂಥಿಯ ವಾದಗಳನ್ನು, ಹಾಗೂ ಸಿದ್ದಾಂತಗಳನ್ನು ಲೇಪಿಸದಿರಿ ಎನ್ನುವುದು ಅಂಬೋಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I