September 23, 2026

I ಸಿಗಂದೂರಿಗೆ ಬೆಳಕಾದ ಸೇತುಬಂಧ I ಏಳು ದಶಕಗಳ ಕನಸು ಸಾಕಾರ I ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ I

0
FB_IMG_1752489878121

I ಸಿಗಂದೂರಿಗೆ ಬೆಳಕಾದ ಸೇತುಬಂಧ I ಏಳು ದಶಕಗಳ ಕನಸು ಸಾಕಾರ I ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ I

ಶಿವಮೊಗ್ಗ :  ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು ಕೇಬಲ್ ಆಧಾರಿತ ಸೇತುವೆಯ ಭವ್ಯ ಲೋಕಾರ್ಪಣೆಯ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗುವ ಸುವರ್ಣಾವಕಾಶ ನನಗೆ ದೊರೆಯಿತು ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ ತಿಳಿಸಿದರು,

ದೇಶದ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ — ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆಯ ಲೋಕಾರ್ಪಣೆಯ ಮೂಲಕ, ದೀರ್ಘಕಾಲದಿಂದ ಬೆಳಕಿಗೆ ಕಾಯುತ್ತಿದ್ದ ಅಣೆಕಟ್ಟಿನ ಸುತ್ತಮುತ್ತಲಿನ ಊರುಗಳಿಗೆ ಇಂದು ನಿಜಾರ್ಥದಲ್ಲಿ ಬೆಳಕು ಸಿಕ್ಕಂತಾಗಿದೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪನವರು ಸೂರ್ಯಗಗನಕ್ಕೆ ವಿವರಿಸಿದರು

ಏಳು ದಶಕಗಳ ಕನಸು ಇಂದು ಸಾಕಾರಗೊಂಡಿದ್ದು, ಇದಕ್ಕೆ ಕಾರಣವಾಯಿತಾದ ಪ್ರಮುಖ ನಾಯಕತ್ವಗಳ ಸ್ಪಷ್ಟ ದೃಷ್ಟಿ ಮತ್ತು ಸಂಕಲ್ಪ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೃಢ ಹಠ, ಸಂಸದರಾದ ಬಿ.ವೈ. ರಾಘವೇಂದ್ರ ಅವರ ನಿರಂತರ ಪರಿಶ್ರಮ, ಹಾಗೂ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಬಲದೊಂದಿಗೆ, ಈ ಮಹತ್ತ್ವದ ಯೋಜನೆಗೆ ಕೇವಲ ಅನುಮೋದನೆಯಷ್ಟೇ ಅಲ್ಲದೆ, ವೇಗದ ಕಾಮಗಾರಿಯ ಮೂಲಕ ನವಜೀವನ ದೊರೆತಿದೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ ಹೇಳಿದರು

ಇನ್ನಷ್ಟು ಮಹತ್ವವಾಗಿ, ಈ ಯೋಜನೆ ಕೇಂದ್ರ ಭೂ ಸಾರಿಗೆ ಸಚಿವರಾದ  ನಿತಿನ್ ಗಡ್ಕರಿಜಿಯವರ ಮಾರ್ಗದರ್ಶನದ ಫಲವಾಗಿದೆ. ಇದು ಕೇವಲ ಸಿಗಂದೂರು-ಅಂಬಾರಗೋಡ್ಲು ಪ್ರದೇಶದ ಸಂಪರ್ಕವರ್ಧನೆಯಷ್ಟೇ ಅಲ್ಲ, ಮುಂದಿನ ಭವಿಷ್ಯದ ದಿಕ್ಕು ತೋರಿಸುವ ಬದಲಾವಣೆಯ ಆರಂಭವಾಗಿದೆ. ಜೊತೆಗೆ, ನವೋದ್ಯಮ, ಕೃಷಿ, ಪ್ರವಾಸೋದ್ಯಮ ಹಾಗೂ ಶಿಕ್ಷಣದ ರೀತಿಯಲ್ಲಿ ಹೊಸ ಆಯಾಮಗಳ ಬಾಗಿಲನ್ನು ತೆರೆದು, ಈ ಭಾಗದ ಆರ್ಥಿಕತೆಯನ್ನು ಉತ್ತೇಜಿಸಲು ದಿಕ್ಕು ನೀಡಲಿದೆ ಎಂದರು

ಈ ಸಂದರ್ಭದಲ್ಲಿ ಈ ಮಹತ್ವದ ಯೋಜನೆಗೆ ಶಕ್ತಿ ತುಂಬಿದ ಪ್ರತಿಯೊಬ್ಬರಿಗೂ ಶಿವಮೊಗ್ಗ ನಗರದ ಜನತೆಯ ಪರವಾಗಿ ಅಭಿನಂದನೆಗಳು ಹಾಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪ ತಿಳಿಸಿದರು

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಷಿ ಅವರು, ಮುತ್ಸದ್ದಿ ರಾಜಕಾರಣಿ  ಕಾಗೋಡು ತಿಮ್ಮಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ  ವಿಜಯೇಂದ್ರಪ್ಪ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಮತ್ತು ಡಾ. ಧನಂಜಯ್ ಸರ್ಜಿ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಶರಾವತಿ ಜನರ ಭವಣೆ ತಪ್ಪಿಸಲು ಸೇತುವೆ ಬೇಕೆಂದು ಹೋರಾಟ ನಡೆಸಿದ ಪ್ರಸನ್ನ ಕರೆಕೈ ಸೇರಿದಂತೆ ಅನೇಕ ಗಣ್ಯರು, ಸ್ಥಳೀಯ ಮುಖಂಡರು, ಅಂಬಾರಗೋಡ್ಲು – ಕಳಸವಳ್ಳಿ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!