September 23, 2026

 I ನಗರದಲ್ಲಿ I ಕಮರ್ಷಿಯಲ್ ಕಟ್ಟಡಗಳ I ಸೆಟ್ ಬ್ಯಾಕ್ ಉಲ್ಲಂಘನೆ I ತೆರವುಗೊಳಿಸಲು I ಕದಂಬ ಕನ್ನಡ ವೇದಿಕೆ ಆಗ್ರಹ I

0
IMG-20250715-WA0039

 I ನಗರದಲ್ಲಿ I ಕಮರ್ಷಿಯಲ್ ಕಟ್ಟಡಗಳ I ಸೆಟ್ ಬ್ಯಾಕ್ ಉಲ್ಲಂಘನೆ I ತೆರವುಗೊಳಿಸಲು I ಕದಂಬ ಕನ್ನಡ ವೇದಿಕೆ ಆಗ್ರಹ I

ಶಿವಮೊಗ್ಗ :  ಕದಂಬ ಕನ್ನಡ ವೇದಿಕೆ  ವತಿಯಿಂದ ಇಂದು ನಗರದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ಬಗಳು ಸೇರಿದಂತೆ ಬಹುತೇಕ ಕಟ್ಟಡಗಳು ಸೆಟ್ ಬ್ಯಾಕ್ ನಿಯಮಗಳು ಉಲ್ಲಂಘಿಸಿದ್ದು ಸಂಚಾರ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ, ತಕ್ಷಣವೇ ಅಂತಹ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಬೇಕು, ಹಾಗೂ ತೆರವುಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಅರ್ಪಿಸಲಾಯಿತು,

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ವಿಶ್ವನಾಥ ಗೌಡ ಅವರು ಸೆಟ್ ಬ್ಯಾಕ್ ನಿಯಮಗಳು, ಗ್ರಾಹಕರಿಗಾಗಿ, ನಾಗರೀಕ ಅನುಕೂಲಕ್ಕಾಗಿ, ಹಾಗೂ ಸಂಚಾರ ವ್ಯವಸ್ಥೆಯ ಪಾಲನೆಗಾಗಿ ಕಟ್ಟಡ ನಿಯಮಗಳು ವಿಧಿಸಲಾಗಿದೆ, ಆದರೆ ಕಟ್ಟಡ ಮಾಲೀಕರ ದುರಾಸೆಗಳಿಂದ ಇಂದು ಲಘು ವಾಹನಗಳ ನಿಲುಗಡೆಗೆ ಮೀಸಲಾಗಿರುವ ಪ್ರದೇಶ ವ್ಯಾಪ್ತಿಗಳನ್ನು ಕಮರ್ಷಿಯಲ್ ಆಗಿ ಪರಿವರ್ತಿಸಿಕೊಂಡಿರುವುದು ಸಂಪೂರ್ಣವಾಗಿ ಸೆಟ್ ಬ್ಯಾಕ್ ಉಲ್ಲಂಘನೆಗೆ ಸಾಕ್ಷೀಯಾಗಿದೆ ಎಂದು ವಿವರಿಸಿದರು,

ಈ ಕೂಡಲೇ ತಾವುಗಳು ಖುದ್ದು ಪರಿಶೀಲಿಸಿ ನೋಟಿಸ್ ಜಾರಿಗೊಳಿಸಬೇಕು, ಸೆಟ್ ಬ್ಯಾಕ್ ನಿಯಮಗಳ ಉಲ್ಲಂಘಿಸಿದ ಕಟ್ಟಡಗಳನ್ನು ಲಾಕ್ ಔಟ್ ಮಾಡಿ ದಂಡ ವಿಧಿಸಬೇಕೆಂದು ಅವರು ಆಯುಕ್ತರಿಗೆ ಆಗ್ರಹಿಸಿದ್ದಾರೆ

ಪ್ರತಿಭಟನಾ ಮನವಿಯಲ್ಲಿ ಕದಂಬ ಕನ್ನಡ ಸೇನೆಯ ವಿಶ್ವನಾಥ್ ಗೌಡ, ನವೀನ್, ರಾಘವೇಂದ್ರ, ಗಂಗಾಧರ್, ಲಕ್ಷ್ಮೀಶ್, ಯೋಗೇಶ್ ರುದ್ರೇಶ್, ಶಿವಣ್ಣ ಸೇರಿದಂತೆ ಮಧು ಮುಂತಾದವರಿದ್ದರು

 

 

Leave a Reply

Your email address will not be published. Required fields are marked *

error: Content is protected !!