I ಕಂದಾಯ ಭೂಮಿ ಒತ್ತುವರಿ I ಲೋಕಾಯುಕ್ತ ದೂರು I
I ಕಂದಾಯ ಭೂಮಿ ಒತ್ತುವರಿ I ಲೋಕಾಯುಕ್ತ ದೂರು I
ಶಿವಮೊಗ್ಗ: ಕಂದಾಯ ಇಲಾಖೆಗೆ ಸೇರಿದ ಯಡೇಹಳ್ಳಿ ಸ.ನಂ. ೨೨ರಲ್ಲಿ ಅಂದಾಜು ೧ ಎಕ್ಕರೆ ೨೦ ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಂ. ಬಸವರಾಜ್ ದೂರಿದ್ದಾರೆ.
ಶಾಲೆಯ ನಿರ್ಮಾಣಕ್ಕೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಜೇಸಿಬಿಯಿಂದ ಗುಡ್ಡದ ಮಣ್ಣು, ಕಲ್ಲು ಅಗೆದು ಟ್ರ್ಯಾಕ್ಟರ್ ನಲ್ಲಿ ಸಾಗಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಲೋಕಾಯುಕ್ತ ದೂರು ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.