ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕೊನೆಗೂ I ವಿಜಯಕ್ಕನ I ಹೋರಾಟ ಫಲಿಸಿತು I
ಕರುನಾಡಿನಲ್ಲಿ ಮಾದರಿಯಾದ ವಿಜಯಲಕ್ಷ್ಮೀ ದರ್ಶನ್ :
ಪತಿಗಾಗಿ ಯಮನೊಂದಿಗೆ ಸೆಣಸಾಡಿ ಕೊನೆಗೂ ಗೆದ್ದು ತನ್ನ ಪತಿಯನ್ನು ಉಳಿಸಿಕೊಂಡ ಚಿತ್ರಾವಳಿಗಳು ಪುರಾಣ ಪುಣ್ಯ ಕತೆಗಳಲ್ಲಿ ಕೇಳುತ್ತೇವೆ ಹಾಗೆಯೇ ಈ ಹೊತ್ತಿನ ದಿನಮಾನದಲ್ಲಿಯೂ ಪತಿಗಾಗಿ, ಪತಿಯ ಆರೋಗ್ಯಕ್ಕಾಗಿ ಹೋರಾಡಿ ಅಪ್ಪಕೊಂಡಿರುವ ಅದೆಷ್ಟೋ ಘಟನೆಗಳು ಬದುಕಿನ ತಿರುವುಗಳಲ್ಲಿ ಕಾಣ ಸಿಗುತ್ತದೆ, ನಟ ದರ್ಶನ್ ತೂಗುದೀಪರವರ ಪ್ರಕರಣ ವಿಶೇಷವಾಗಿದೆ, ಅದೊಂದು ಕೌತುಕದ ಮಜಲಿನಲ್ಲಿತ್ತು, ಸವಾಲುಗಳಿದ್ದವು, ರಾಷ್ಟ್ರ ಸಂವಿಧಾನ ಅಭಿವ್ಯಕ್ತಿಗಳ ಹೆಸರಿನಲ್ಲಿ ಒಂದಷ್ಟು ದೃಶ್ಯ ಮಾದ್ಯಮಿಗಳ ಸುಳ್ಳು, ಅತಿರಂಜನೆಯ ಸುದ್ದಿಗಳು, ಹೋದಡೆ, ಬಂದಡೆಯಲ್ಲಾ ಕ್ಯಾಮೆರಾಗಳನ್ನು ಅವರುಗಳ ಮುಂದಡಿಯೇ ತೂರುವಂತೆ, ಭಯ ಹುಟ್ಟಿಸುವಂತೆ ಪರಿಸ್ಥಿತಿಗಳು ಏರ್ಪಟ್ಟಿದ್ದವು,
ಇನ್ನೇನು ಅಶ್ಲೀಲ ಮೇಸುಜು ರವಾನಿಸುತ್ತಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಿಂದ ಕರುನಾಡಿನ ಮೇರು ನಟ ದರ್ಶನ್ ತೂಗುದೀಪರವರನ್ನು ತೊರೆದು ಬಿಡುತ್ತಾರೆ, ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ, ಎನ್ನುವ ಪಕ್ಕಾ ಫೇಕು ಸುದ್ದಿ ದಾಳಿ ಮಾಡುವ ಹೊತ್ತು ಇದಾಗಿತ್ತು, ಆಕೆಗೆ ತನ್ನ ಪತಿಯನ್ನು ಉಳಿಸಿಕೊಳ್ಳುವ ಅವಸರದಲ್ಲಿದ್ದಳು, ಏನು ಮಾಡಬೇಕು ಎನ್ನುವ ಆಲೋಚನೆಗಳು ಹುದುಗಿ ಹೋಗಿತ್ತು, ಮಗ ವಿನೀಶ್ ಎನ್ನುವ ದೈತ್ಯ ಶಕ್ತಿಯ ಪೋರನ ಒಂದು ಹೇಳಿಕೆ ಇಡೀ ಜನತೆಯನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತು, ಆದಾಗ್ಯೂ ಸುದ್ದಿ ದಾಳಿಗಳು ನಿಲ್ಲಲಿಲ್ಲ, ಬದಲಿಗೆ ಮಗ ವಿನೀಶ್ ಮಾತುಗಳನ್ನು ಇಟ್ಟುಕೊಂಡು ಡಿಬೇಟ್ ನಡೆಸುವ ಹಂತಕ್ಕೆ ಹೋದ ತುರ್ತು ಪರಿಸ್ಥಿತಿಯ ಕಾಲವನ್ನು ಕೂಡ ಸ್ವಾದಿಸಿಕೊಂಡು ಎಲ್ಲಿಯೂ ಮಾತಾಡದೆ ಮೌನವಾಗಿದ್ದುಕೊಂಡೇ ಕಾನೂನಿನ ಯುದ್ದ ಸಾರಿದ ದರ್ಶನ್‌ರವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ರವರು ಟೆಂಪಲ್ ರನ್ ಮಾಡಿದರು, ಪತಿಯ ಬಿಡುಗಡೆಗಾಗಿ ಪ್ರಾರ್ಥಿಸಿದರು, ವಿಶೇಷ ಪೂಜೆ ಸಲ್ಲಿಸಿದರು, ಆ ಪ್ರಸಾದವನ್ನು ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪರವರಿಗೆ ನೀಡಿ ಧೈರ್ಯ ತುಂಬಿದರು, ಹರಿಯುವ ನೀರಿನ ವಿರುದ್ದ ಸೆಣಸಾಡುವುದು ಅಷ್ಟು ಸುಲಭ ಸಾಧ್ಯವಲ್ಲ, ಆದರೆ ಹೆಣ್ಣು ಮಗಳೊಬ್ಬಳು ಯುದ್ದಕ್ಕೆ ನಿಂತರೆ ಗೆದ್ದು ಬೀಗಿ ಬಿಡಬಹುದು ಎನ್ನುವುದಕ್ಕೆ ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಅಂತಹ ದರ್ಶನ್ ಪತ್ನಿ ಇತಿಹಾಸದಲ್ಲಿ ಉದಾಹರಣೆಯಾಗಬಲ್ಲರು.
ನಟ ದರ್ಶನ್ ತೂಗುದೀಪರವರ ಕೋಟಿ, ಕೋಟಿ ಅಭಿಮಾನಿಗಳ ಮಹಾಪೂರವನ್ನು ಕೂಡ ಸಾವಧಾನಿಸಿಕೊಂಡೇ, ಎಲ್ಲಿಯೂ ಪ್ರಚೋದಿಸದೆ ಶಾಂತಿ ಮಂತ್ರ ಹೇಳಿಕೊಟ್ಟ ಮೌನದ ಮನಸಿನಿಂದಲೇ ಕಟಿಬದ್ದತೆಯಲ್ಲಿ ನಿಂತ ವಿಜಯಲಕ್ಷ್ಮೀ ಓರ್ವ ಕರುನಾಡ ಕಂಡ ಗಟ್ಟಿಗಿತ್ತಿ, ಯಾವುದೇ ಸಂದರ್ಭದಲ್ಲಿ ಆದರೂ ಸರಿ ಪತಿಯನ್ನು ರಕ್ಷಸಿಕೊಳ್ಳಲು ಹೇಗೆ ಕಾನೂನಿನ್ವಯವೇ ನಿಲ್ಲಬಹುದು ಎನ್ನುವುದಕ್ಕೆ ಆಕೆ ಮಾತ್ರ ಸಾಕ್ಷೀ ಆಗಿ ನಿಲ್ಲುವುದಕ್ಕೆ ಆರ್ಹಳು, ಹೌದು ವ್ಯಥಾ ಆರೋಪಗಳು, ಸುಳ್ಳು ಸುದ್ದಿಗಳು, ತನ್ನ ಕಲಾ ಜಗತ್ತೇ ಒಕ್ಕರೊಲಿನಿಂದ ದನಿಯಾಗದೇ ಸಬೂಬು ಹೇಳಿ ಸಾಬೂನಿನಿಂದ ಕೈ ತೊಳೆದುಕೊಂಡ ದಿನಮಾನಗಳು ವಿಜಯಲಕ್ಷ್ಮೀ ಪಾಲಿಗೆ ಸವಾಲುಗಳಲ್ಲದೆ ಬೇರೆನು ಇರಲಿಲ್ಲ, ಏನೇ ಆಗಲಿ ದರ್ಶನ್ ರಕ್ಷಿಸಿ ಕೋಟಿ ಕನ್ನಡಿಗರ ಮುಂದಡಿ ನಿಲ್ಲಿಸುವ ಆಕೆಯ ಪ್ರಾರ್ಥನೆ ಕೊನೆಗೂ ಫಲಿಸಿತು.
ಅತೀವ ಬೆನ್ನು ನೋವಿಗೆ ಒಳಗಾಗಿ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದ ವಿಜಯಲಕ್ಷ್ಮೀಯವರಿಗೆ ದೇವರಲ್ಲದೆ ಮತ್ತೇನೂ ತೋಚಿರಲಿಲ್ಲ, ಯಾವಾಗ ಹೈಕೋರ್ಟ್ ಬೆನ್ನು ಸರ್ಜರಿ ಕಾರಣಕ್ಕಾಗಿ, ಮಧ್ಯಂತರ ಜಾಮೀನು ದೊರಕಿತೋ ಅದಾಗ ಅಕೆಯ ಕಣ್ಣಲ್ಲಿ ಬಿಸಿನೀರು ತೊಟ್ಟಿಕ್ಕಿಸುವಂತೆ ಮಾಡಿತ್ತು, ದರ್ಶನ್ ತೂಗುದೀಪರವರ ಕೋಟಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರೀತಿ ಜನತೆ ಕೈ-ಮುಗಿವಂತೆ ಮಾಡಿತು, ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕದ ತರುವಾಯ ಬಳ್ಳಾರಿ ಜೈಲಿಂದ ದರ್ಶನ್ ಬಿಡುಗಡೆಯಾದರು. ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್, ಸಂಬಂಧಿ ಸುಶಾಂತ್ ನಾಯ್ಡು ಜೊತೆಗೆ ಬೆಂಗಳೂರಿಗೆ ಸುದೀರ್ಘ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದಾಸನಿಗೆ ಜೈಕಾರ ಹಾಕಿದರು. ಈ ವೇಳೆ ದರ್ಶನ್ ಅಭಿಮಾನಿಗಳತ್ತ ಕೈ ಬೀಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಬಳ್ಳಾರಿ, ಅನಂತಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಜಗಳಪುರ, ದೇವನಹಳ್ಳಿ, ಹುಣಸಮಾರನಹಳ್ಳಿ, ಹೆಬ್ಬಾಳ, ಮಲ್ಲೇಶ್ವರಂ, ನವರಂಗ್, ಮೈಸೂರು ರೋಡ್ ಮೂಲಕ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ಅಪಾರ್ಟ್ಮೆಂಟ್‌ಗೆ ತೆರಳಿದಾಗ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು, ಅಂದು ಮಗ ವಿನೀಶ್ ಹುಟ್ಟು ಹಬ್ಬ ಕೂಡ ಆಗಿತ್ತು, ವಿಜಯಲಕ್ಷ್ಮೀಯವರಿಗೆ ಒಂದೆಡೆ ದರ್ಶನ್ ಬಿಡುಗಡೆಯಾದ ಸಂತಸವಿದ್ದರೆ ಅದು ಮಗ ವಿನೀಶ್ ಹುಟ್ಟು ಹಬ್ಬದಲ್ಲಿಯೇ ಬಿಡುಗಡೆಯಾಗಿದ್ದು ಸಂತಸ ಇಮ್ಮುಡಿಗೊಳಿಸಿತ್ತು,
ಅಂದು ರಾಜ ರಾಜೇಶ್ವರಿ ನಗರದ ನಿವಾಸಕ್ಕೆ ಬರುತ್ತಾರೆ ಅಂದುಕೊಂಡು ಸೇರಿದ್ದ ಸಾವಿರಾರು ಜನಸ್ತೋಮ ಹೊಸಕೆರೆಹಳ್ಳಿಯತ್ತ ದೌಡಾಯಿಸಿ ಬಂದಿತ್ತು, ಇದನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗದ ಸಂದಿಗ್ಧತೆಯಲ್ಲಿದ್ದಾಗ ದರ್ಶನ್ ಮಗ ವಿನೀಶ್ ಹೊರಗೆ ಬಂದರು ಅಭಿಮಾನಿಗಳ ಮುಂದೆಯೇ ಸಾಗಿ ಕೈಗಳು ಎತ್ತಿ ನಮಸ್ಕರಿಸಿದ ರೀತಿ ಎಂತಹವರಿಗೂ ಹೆಮ್ಮೆ ಎನಿಸುವಂತೆ ಇತ್ತು, ಅದಾಗ ಅಭಿಮಾನಿಗಳನ್ನು ನಾವು ಕಳುಹಿಸುತ್ತೇವೆ ಇವರೆಲ್ಲಾ ನಮ್ಮವರು ಎಂದು ಪೊಲೀಸರಿಗೆ ಹೇಳಿ, ಕೋರ್ಟಿನ ಆದೇಶವನ್ನು ತಿಳಿಸಿ ಅಭಿಮಾನಿಗಳಿಗೆ ಕಳುಹಿಸಿದ್ದು ಇಂದಿಗೂ ಮೆಚ್ಚುವಂತಹದ್ದಾಗಿದೆ. ಹೀಗೆ ತನ್ನ ಪತಿಯನ್ನು ಹೇಳಿದಂತೆಯೇ ಮೌನವಾಗಿದ್ದುಕೊಂಡು ಕೋಟಿ, ಕೋಟಿ ಅಭಿಮಾನಿಗಳ ಮುಂದಡಿ ದರ್ಶನ್ ತೂಗುದೀಪರವನ್ನು ನಿಲ್ಲಿಸಿದ ವಿಜಯಲಕ್ಷ್ಮೀ ದರ್ಶನ್‌ರವರ ಮಾದರಿಯಾಗಿ ಕರುನಾಡಿನಲ್ಲಿ ದರ್ಶಿಸಿದ್ದು ಶ್ಲಾಘನೀಯ.
ಇನ್ನೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರಿಗೆ ಕ್ಷಮೆಯಾಚಿಸುತ್ತಾ… ಮಾದ್ಯಮಿಗಳ ಅಭಿವ್ಯಕ್ತಿ ಎಡವಟ್ಟುಗಳತ್ತ ತಿಳಿಯೋಣ :
ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸಂವಿಧಾನ ಬದ್ದತೆಯ ಹಕ್ಕು ಇದನ್ನು ದುರುಪಯೋಗಪಡಿಸಿಕೊಂಡರೇ ಅದು ಅಪರಾಧ ಎಂದು ಭಾರತೀಯ ದಂಡ ಸಂಹಿತೆ ಹೇಳುತ್ತದೆ, ಹೀಗಾಗಿಯೇ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಗಂಭೀರ ಶಿಕ್ಷಾರ್ಹ ದಂಡ ಸಂಹಿತೆಗಳನ್ನು ಕಾನೂನಿನಲ್ಲಿ ತರಲಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ದೃಶ್ಯ ಮಾಧ್ಯಮಗಳ ನಿರೂಪಕರುಗಳು ತಾವೇ ನ್ಯಾಯಾಂಗದ ಭಾಗವಾಗಿ ವರ್ತಿಸುತ್ತಿದ್ದಾರೆ. ಪೊಲೀಸ್ ಕರ್ತವ್ಯವೂ ನಿರ್ವಹಿಸುತ್ತಿದ್ದಾರೆ. ಅತೀ ಜರೂರಿ ಸಂಗತಿಯಲ್ಲಿ ಸುದ್ದಿಗಳು ಸುದ್ದಿಯಾಗಿರದೆ ಅದರ ಸಮಯದ ವ್ಯಾಪ್ತಿ ಮೀರಿಸಿರುತ್ತಾರೆ, ತಮ್ಮ ನಿಲುವಿನ ವಿರುದ್ದ ಇರುವ ವ್ಯಕ್ತಿಗಳನ್ನು, ಪಕ್ಷಗಳನ್ನು ಮತ್ತು ಘಟನೆಗಳನ್ನು ಇಂತಿವರು ಗುರಿಮಾಡಿಕೊಂಡು ಕಪೋಲಕಲ್ಪಿತ ಹೇರಿಕೆಗಳನ್ನು ಸಾರ್ವಜನಿಕವಾಗಿ ಹೇರುತ್ತಿದ್ದಾರೆ. ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವಂತೆ ದೊಡ್ಡದಾದ ದನಿಯಲ್ಲಿ ಆತಂಕ ಸೃಷ್ಠಿಸುವಂತೆ, ಆಕ್ರೋಶಭರಿತವಾಗಿ, ಪ್ರಚೋಧಿತವಾಗಿ, ವೀಕ್ಷಕ ಸಮುದಾಯದ ನೆಮ್ಮದಿಗೆ ಭಂಗ ತರುವಂತೆ ಅತಿರಂಜನೆಗೊಳಿಸಿದ, ಭಯಬೀತಿ ಹುಟ್ಟಿಸುವ, ಅಸಹ್ಯಗತಿ, ಮುಜುಗರ ತರಿಸುವಂತೆ, ತೇಜೋವಧೆಗೆ ಕಾರಣವಾಗುತ್ತಿರುವ ಖಾಸಗಿ ಟಿವಿ ನಿರೂಪಕರುಗಳ ಮೇಲೆ ಸಂವಿಧಾನ ವಿರೋಧಿ ಪ್ರಕರಣ ದಾಖಲು ಮಾಡಬೇಕು. ಹಾಗೂ ಲೈಂಗಿಕವಾಗಿ, ಹಾಗೂ ಆಯಾ ಘಟಿತ ಘಟನೆಗಳನ್ನು, ಹಾಗೂ ವ್ಯಕ್ತಿ ವಿರೋಧತ್ವವನ್ನು ಅತಿರಂಜನೆಯ ಸುದ್ದಿಗಳಿಂದ ಸಮಯ ವ್ಯಾಪ್ತಿ ಮೀರಿಸುವ ಟಿವಿ ಚಾನೆಲ್ಗಳಿಗೆ ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿಯಿಂದ ನೀಡಲಾಗುವ ಎ (ವಯಸ್ಕರಿಗೆ ಮಾತ್ರ) ಯು (ಎಲ್ಲರಿಗೂ ಅನ್ವಯ) ಯು/ಎ (ಪೋಷಕರ ಮಾರ್ಗದರ್ಶನ) ಸರ್ಟಿಪಿಕೇಟ್‌ಗಳಂತೆಯೇ ನೀಡಬೇಕೆಂದು ದೂರು ನೀಡಲಾಗಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಒಂದಿಷ್ಟು :
ಪ್ರಸ್ತುತ ಪತ್ರಿಕಾಂಗದಲ್ಲಿ ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ನೀರಿನ ಮೇಲೆ ಗುಳ್ಳೆ ಇದ್ದ ಹಾಗೇ… ಹೌದು ಇತ್ತೀಚೆಗೆ ಅತೀ ರಂಜಿತಗೊಳಿಸುತ್ತಿರುವ ದೃಶ್ಯಮಾಧ್ಯಮಗಳು ಹಾಗೂ ಪ್ರೇರಿತ ನಿರೂಪಕರುಗಳು ಕೇವಲ ಟಿಆರ್‌ಪಿಗಾಗಿ (Telivistion Rating Point) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾರಣ ಹೋಮ ಮಾಡುತ್ತಿರುವುದು ಯಾವ ನ್ಯಾಯವಾಗಿದೆ..? ಹೀಗೆ ಭಾರತದ ಸಂವಿಧಾನವನ್ನು ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಪತ್ರಿಕಾಂಗ ನಾಲ್ಕನೇ ಅವಿಭಾಜ್ಯ ಅಂಗವೆಂದು ವಿವರಿಸಿ ಅದರ ಮುಕ್ತತೆಯಿಂದ ಜಗತ್ತನ್ನು ಎಚ್ಚರಿಸಬಹುದು ಜಾತಿ, ವಿಜಾತಿ, ಧರ್ಮಗಳ ಸಂಕೋಲೆಗಳನ್ನು ಮೆಟ್ಟಿ ಒಟ್ಟು ಸಾಮಾಜಿಕ ನ್ಯಾಯ ಬದ್ದತೆಯನ್ನು ಕಾಪಾಡಬಹುದಾಗಿದೆ ಎಂದಿದ್ದರು, ಆದರೆ ಇಂದು ಎನಾಗಿದೆ ಬಹುತೇಕ ಪತ್ರಿಕಾ ವ್ಯವಸ್ಥೆಯ ಮೇಲೆ ಈ ಪ್ರೇರತಿ ವ್ಯವಸ್ಥೆಗಳು ದಾಳಿಗಳಿಕ್ಕಿವೆ, ಇಲ್ಲಿ ಕ್ಷಣ ಕ್ಷಣಕ್ಕೂ ಮುಖವಾಡಿಗಳಾಗಿ ಪಲ್ಲಟಗೊಳಿಸುವ ಕುತಂತ್ರಗಳು ರಾರಾಜಿಸುತ್ತಿವೆ, ಯಾರು ಶೋಷಿತ ಸಮಾಜದಿಂದ ಬಂದು ಒಟ್ಟು ಸಾಮಾಜಕ್ಕಾಗಿ ಸಂವಿಧಾನವನ್ನು ರಚಿಸಿ ಅದುವೇ ಶ್ರೇಷ್ಠ ಗ್ರಂಥ ಎಂದಿದ್ದರೋ ಅದೇ ಸಂವಿಧಾನದ ಪತ್ರಿಕಾಂಗವನ್ನು ಇಂದು ಈ ಬಗೆಯಿಂದ ಉಲ್ಲಂಘಿಸಲಾಗುತ್ತಿದೆ. ಹಾಗೂ ಇಂತಹ ಕಪಟ ಮಾನಸೀಕತೆಯ ಮಾರ್ಗಿಗಳ ಕುಣಿತಕ್ಕೆ ಪತ್ರಿಕಾಂಗ ಬಸವಳಿಯುತ್ತಿದೆ.
ಈ ಮಾನಸೀಕತೆಯ ಸೋಕಾಲ್ಡ್ ಸೋಗಿನ ಪತ್ರಕರ್ತರು ಸಮಾಜಕ್ಕೆ ಮಾರಕರಾಗುತ್ತಾರೆ. ಇಂತಹ ಬಹುತೇಕ ನ್ಯೂನ್ಯತೆಗಳು ಕವಲೊಡೆದ ಹಾದಿಯಲ್ಲಿ ವಿರಾಜಿಸುತ್ತಿರುವುದರಿಂದಲೇ ಪ್ರಸ್ತುತ ಪತ್ರಿಕಾಂಗ ಹಾದಿ ತಪ್ಪಿದೆ ಪ್ರೇರಿತವಾದ ಕಪಿಮುಷ್ಠಿಯಲ್ಲಿ ಟಿಆರ್‌ಪಿ ಗ್ರೇಡ್‌ಗಾಗಿ ಬಹುದೊಡ್ಡ ಕದನವೇ ಏರ್ಪಟ್ಟಿದೆ. ಹೀಗೆ ಸಂವಿಧಾನದ ನಾಲ್ಕನೇ ಅವಿಭಾಜ್ಯ ಅಂಗದ ಮೇಲಿನ ಪತ್ರಿಕಾ ಅಭಿವ್ಯಕ್ತ ಬಾಹಿರಗಳ ಮುಖವಾಡಗಳನ್ನು ಸಾಮಾಜಿಕವಾಗಿ ಬಹಿರಂಗಗೊಳಿಸುವ ಯತ್ನದ ಜರೂರತ್ತಿದೆ.
ಇನ್ನೂ… ಅಶ್ಲೀಲ ಮೇಸುಜು ರವಾನಿಸುತ್ತಿದ್ದ ರೇಣುಕಸ್ವಾಮಿಯ ಕುರಿತ ಮಾದ್ಯಮಿಗಳ ಸುದ್ದಿ :
ದೃಶ್ಯ ಮಾಧ್ಯಮಗಳ ನಿರೂಪಕರುಗಳು ತಾವೇ ನ್ಯಾಯಾಂಗದ ಭಾಗವಾಗಿ ವರ್ತಿಸಿದರು. ಪೊಲೀಸ್ ಕರ್ತವ್ಯವೂ ನಿರ್ವಹಿಸಿದರು. ಅತೀ ಜರೂರಿ ಸಂಗತಿಯಲ್ಲಿ ಸುದ್ದಿಗಳು ಸುದ್ದಿಯಾಗಿರದೆ ಅದರ ಸಮಯದ ವ್ಯಾಪ್ತಿ ಮೀರಿಸಿರುತ್ತಾರೆ, ತಮ್ಮ ನಿಲುವಿನ ವಿರುದ್ದ ಇರುವ ವ್ಯಕ್ತಿಗಳನ್ನು, ಪಕ್ಷಗಳನ್ನು ಮತ್ತು ಘಟನೆಗಳನ್ನು ಇಂತಿವರು ಗುರಿಮಾಡಿಕೊಂಡು ಕಪೋಲಕಲ್ಪಿತ ಹೇರಿಕೆಗಳನ್ನು ಸಾರ್ವಜನಿಕವಾಗಿ ಹೇರಿದರು. ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವಂತೆ ದೊಡ್ಡದಾದ ದನಿಯಲ್ಲಿ ಪುಂಕಾನುಪುಂಕವಾಗಿ ಧ್ವೇಷಿ ಮಿಶ್ರಿತ ಸುದ್ದಿಗಳನ್ನು ಸೃಷ್ಟಿಸಿದ್ದು ಇತಿಹಾಸವಾಗಿತ್ತು.
ಇದಕ್ಕೆ ತಾಜಾ ಸಾಕ್ಷಿ ಎಂಬಂತೆ ನಟ ದರ್ಶನ್ ತೂಗುದೀಪರವರ ಘಟನೆಯೇ ಸಾಕ್ಷೀಯಾಗಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ತಮಗೆ ಬೇಕಾದ ರೀತಿಯಲ್ಲಿ ಚಿತ್ರಿಕರಿಸಿಕೊಂಡು ದೊಡ್ಡದಾದ ದನಿಯಲ್ಲಿ ಬೊಬ್ಬೆ ಇಡುತ್ತಿರುವ ಈ ಖಾಸಗಿ ಟಿವಿ ಚಾನೆಲ್ಗಳ ನಿರೂಪಕರುಗಳು ಘಟನೆ ಮತ್ತು ನಟ ದರ್ಶನ್ ತೂಗುದೀಪರವರನ್ನೇ ಗುರಿಮಾಡಿಕೊಂಡು ಸುದ್ದಿ ಮಾಡುತ್ತಿದೆ. ಇದರಿಂದ ಈ ಘಟನೆಯ ಪ್ರಮುಖ ಹದಿನೇಳು ಆರೋಪಿಗಳಲ್ಲಿರುವ ಎ೭ ಆರೋಪಿಯಾಗಿರುವ ಅನುಕುಮಾರ್ ಎನ್ನುವವನ ತಂದೆ ಅತೀವ ಹೃದಯಘಾತಕ್ಕೆ ಒಳಗಾಗಿ ಮೃತರಾಗಿರುವ ಸುದ್ದಿ ಹೊರಬಿದ್ದಿದ್ದು ಜನತೆಗೂ ಗೊತ್ತಿದೆ.
ಪೊಲೀಸ್ ಆಯುಕ್ತರಾದ ಬಿ.ದಯಾನಂದ್‌ರವರು ಬಹಿರಂಗವಾಗಿ ತಿಳಿಸಿದಂತೆ ಮೊದ ಮೊದಲು ರೇಣುಕಾಸ್ವಾಮಿ ಶವ ನೋಡಿದಾಗ ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು, ಆದರೆ ತನಿಖಿಸುತ್ತಿದ್ದ ಕರ್ತವ್ಯನಿರತ ಅಧಿಕಾರಿಗಳಿಗೆ ಇದು ಕೊಲೆ ಎಂದೇ ಶವದ ಮೇಲಿನ ಗುರುತುಗಳ ನೋಡಿ ದೃಡಪಡಿಸಿಕೊಂಡಿದ್ದಾರೆ, ಅದಾಗಲೇ ಇನ್ನೂ ತಡಮಾಡುವುದು ಸರಿಯಲ್ಲ ಎಂದು ಭಾವಿಸಿದ ಗಿರಿನಗರ ಬಡಾವಣೆಯ ಮೂವರು ಹುಡುಗರು ನಾವುಗಳೇ ಕೊಲೆಗೈದಿದ್ದೇವೆ ಎಂದು ತಪ್ಪೋಪ್ಪಿಗೆ ನೀಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಹಠಾತ್ ಈ ಬದಲಾವಣೆಯನ್ನು ಅನುಮಾನಿಸಿದ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಖಾಕಿ ಡ್ರಿಲ್ ಮಾಡಿದ ತರುವಾಯ ಶರಣಾಗಿದ್ದ ಹುಡುಗರ ಹೇಳಿಕೆ ಬದಲುಗೊಂಡು ಅದು ನಟ ದರ್ಶನ್ ತೂಗುದೀಪರವರನ್ನು ಬೊಟ್ಟು ಮಾಡಿ ತೋರಿಸಿದೆ, ಪೊಲೀಸರು ಕೂಡ ನಟ ದರ್ಶನ್ ಗೆಳತಿ ಪವಿತ್ರ ಗೌಡ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಹಾಕುತ್ತಿದ್ದುದೇ ಈ ಮರ್ಡರ್‌ಗೆ ಕಾರಣವೆಂದು ತಿಳಿದ ಮೇಲೆ ಮೈಸೂರಿನ ಫಾರಂ ಹೌಸ್‌ನಲ್ಲಿದ್ದ ದರ್ಶನ್‌ಗೆ ಪೋನಾಯಿಸಿದ್ದಾರೆ, ಅವರೇ ಖುದ್ದು ಪೊಲೀಸರ ತನಿಖೆಗೆ ಸ್ಪಂದಿಸುತ್ತಿದ್ದಾರೆ.
ಇದು ಘಟಿತ ಘಟನೆಯಾಗಿದೆ ಪೊಲೀಸರು ತನಿಖಿಸುತ್ತಿದ್ದಾರೆ, ಪ್ರಕರಣವೂ ದಾಖಲಿಸಿಕೊಂಡಿದ್ದಾರೆ, ಪ್ರಥಮ ವರ್ತಮಾನ ವರದಿಯಂತೆ ವಿಚಾರಣೆಯು ನಡೆಯುತ್ತಿದೆ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಹದಿಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ, ಇಂತಹದೊಂದು ಘಟನೆಗೆ ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್ ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ, ಇಲ್ಲಿ ವಾದ-ಪ್ರತಿವಾದಗಳು ನಡೆದು ಬಂಧಿಸಿದ, ವಿಚಾರಣೆಗೊಳಪಡಿಸಿದ ಆರೋಪಿಗಳಲ್ಲಿ ಆಪಾದಿತರಾರು..? ಎನ್ನುವುದು ಅಂತಿಮ ತೀರ್ಪು ಈ ನೆಲದ ನ್ಯಾಯ ನೀಡುತ್ತದೆ ಎನ್ನುವುದನ್ನು ಈ ನಿರೂಪಕರುಗಳು ಮೀರಿ ನಡೆದಿದ್ದಾರೆ ಹಾಗೂ ಅದರಂತೆ ಬಿತ್ತರಿಸಿದ್ದು ಒಂದು ಸೇಡಿನ ಸುದ್ದಿಯಲ್ಲದೆ ಬೇರೆನು ಅಲ್ಲ ಎನ್ನುವುದು ಗೊತ್ತು ಮಾಡಿಕೊಟ್ಟಿತ್ತು.
ಆದರೆ ಆಚ್ಚರಿ ಎಂದರೆ ಪೊಲೀಸರು ಹೇಗೆ ಕರ್ತವ್ಯ ನಿರ್ವಹಿಸಬೇಕು, ಹೇಗೆ ತನಿಖೆ ನಡೆಯಬೇಕು..? ನಟ ದರ್ಶನ್‌ರವರನ್ನು ಹೇಗೆ ಕಾನೂನಿನ ಕುಣಿಕೆಯಲ್ಲಿ ಹೆಣೆಯಬೇಕು..?
ದರ್ಶನ್ ತೂಗುದೀಪರವರ ಜೀವನ ಮುಗಿದ ಅಧ್ಯಾಯವೇ ಆಗುವಂತೆ ಅದ್ಯಾಗೆ ಚಾರ್ಜ್‌ಶೀಟ್ ಸಲ್ಲಿಸಬೇಕು..? ಹೀಗೆ ಸರಣಿ ಸಾಲಿಗೆ ಮುಗಿಬಿದ್ದಿರುವ ಬಹುತೇಕ ಪ್ರಸ್ತುತ ದೃಶ್ಯ ಮಾಧ್ಯಮಗಳು ಅತಿರಂಜನೆಯನ್ನು ಡ್ರ್ಯಾಗ್ ಮಾಡುತ್ತಿದೆ, ತರಾತುರಿಯಲ್ಲಿ ದರ್ಶನ್‌ಗೆ ಖೈದಿ ಬಟ್ಟೆ ತೊಡಿಸುವಂತೆ ಭಾರತೀಯ ದಂಡ ಸಂಹಿತೆಯನ್ನು ದಾಖಲಿಸಿ ಎನ್ನುವಂತೆ ಸುದ್ದಿಯನ್ನು ಬಿತ್ತರಿಸುತ್ತಿದೆ, ಸಾಲದಕ್ಕೆ ಮತ್ತೊಂದು ಹೆಜ್ಜೆ ಮುಂದಡಿಯಿಟ್ಟು ನ್ಯಾಯಾಂಗದ ವ್ಯವಸ್ಥೆಯನ್ನು ತಾವೇ ನಿರ್ವಹಿಸುತ್ತಿರುವಂತೆ ಅಂತಿಮ ತೀರ್ಪು ನೀಡುವಂತೆ ನಟ ದರ್ಶನ್‌ಗೆ ಜೀವವಾದಿ ಶಿಕ್ಷೆಯ ಖಾಯಂ ಆಗುತ್ತದೆ ಎಂದು ಬಿಡುವಿಲ್ಲದೆ ಪ್ರೇರಿತ ಸುದ್ದಿಯ ಸದ್ದು ಮಾಡುತ್ತಿರುವುದನ್ನು ತನಿಖೆ ನಡೆಸಬೇಕಿತ್ತು ಆದರೆ ಇದು ಸಾಧ್ಯವಾ..?
ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ರವರನ್ನು ಸಾಧ್ಯವಾದರೆ ನೇಣಿಗೇರಿಸಿ ಬಿಡಿ ಎನ್ನುವಷ್ಟು ಜಿಜ್ಞಾಸೆ, ಅಸೂಯೇ, ಕೋಪಾಧ್ರಿಕ್ತತೆಗಳು ಮಡುಗಟ್ಟಿಸಿಕೊಂಡಿರುವ ಪ್ರಸ್ತುತ ಟಿವಿ ನ್ಯೂಸ್ ನಿರೂಪಕರು, ವರದಿಗಾರರು ಈ ಘಟಿತ ಘಟನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಚಿತ್ರಿಸಿಕೊಂಡು ಒಮ್ಮೆಲೆ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದೆ, ಇನ್ನೊಮ್ಮೆ ನ್ಯಾಯಾಂಗ ವ್ಯವಸ್ಥೆಯ ಅಂತಿಮ ತೀರ್ಪುದಾರರಂತೆ ವರ್ತಿಸುತ್ತಿದ್ದು ಸಾಂವಿಧಾನಿಕ ವಿರೋಧಿ ನಡೆಯಾಗಿದೆ ಎನ್ನುವುದು ಎಂದಿಗೂ ಮರೆಯುವಂತಿಲ್ಲ,
ಕಳೆದ ಮೂರು ವರ್ಷಗಳಿಂದ ನಟ ದರ್ಶನ್ ತೂಗುದೀಪರವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಿ ನಾವು ಕೂಡ ಅವರ ಯಾವುದೇ ಸುದ್ದಿಗಳನ್ನು ಮಾಡುವುದಿಲ್ಲ ಸಂಪೂರ್ಣವಾಗಿ ಬಹಿಷ್ಕರಿಸಿದ್ದೇವೆ ಎಂದು ಹೇಳಿ ಅದರಂತೆ ನಡೆದಿದ್ದ ದೃಶ್ಯ ಮಾಧ್ಯಮದ ನಿರೂಪಕರುಗಳು ಇಂದು ತರಾತುರಿಯಲ್ಲೇಕೆ ನಟ ದರ್ಶನ್ ಕುರಿತಾಗಿ ತಂಡೋಪ ತಂಡವಾಗಿ, ಚಿತ್ರಿಕರಿಸಿ ಸುದ್ದಿ ಸೋಗಿನಲ್ಲಿ ಟಾರ್ಗೆಟ್ ಮಾಡುತ್ತಿದೆ..?
ಇಂತಹದೊಂದು ಪ್ರಶ್ನೆಗೆ ಪೊಲೀಸ್ ಮಹಾನಿರ್ದೇಶಕರ ಬಳಿಯಾಗಲಿ, ರಾಜ್ಯ ಸರ್ಕಾರದ ಬಳಿಯಾಗಲಿ, ನ್ಯಾಯಾಂಗದ ವ್ಯವಸ್ಥೆಯ ಬಳಿಯಾಗಲಿ ಉತ್ತರವಿದಿಯಾ..? ಒಂದು ಘಟನೆಗೆ ಸುದ್ದಿ ಮಾಡುವುದು ತಪ್ಪಲ್ಲ ಆದರೆ ಇದೇ ಘಟನೆ ಕುರಿತು ರೆಕ್ಕೆ-ಪುಕ್ಕಗಳಂಟಿಸಿ, ಅತಿರಂಜಿಸಿ ದಿನದ ಅಷ್ಟು ಸಮಯವನ್ನು ಮೀಸಲಿಡುವುದು, ಬೊಬ್ಬಿಡುವುದು, ಇದು ಪತ್ರಿಕಾ ಕಾಯ್ದೆಯನ್ನು ಉಲ್ಲಂಘಿಸಿದಂತೆ ಎನ್ನುವುದು ಸುದ್ದಿ ಸೋಗಿನಡಿ ಟಾರ್ಗೆಟ್ ಮಾಡಿಕೊಂಡ ನಿರೂಪಕರುಗಳ ಮೇಲೆ ಸಾಂವಿಧಾನಿಕ ವಿರೋಧಿ ಹಾಗೂ ನಾಗರೀಕರ ನೆಮ್ಮದಿಗೆ ಭಂಗ ತರುತ್ತಿರುವ ಇಂತಿವರುಗಳ ಮೇಲೆ ಪ್ರಕರಣ ದಾಖಲಿಸಲು ಪ್ರಜಾಪ್ರಭುತ್ವದಡಿ ಪೊಲೀಸರೇಕು ಮುಂದಾಗಲಿಲ್ಲ ಎನ್ನುವುದು ಆಚ್ಚರಿಯಾಗಿದೆ.
ಇದೇ ಘಟನೆಯನ್ನು ಬಿಂಬಿಸಲೊರಟಿ ನಟ ದರ್ಶನ್ ತೂಗುದೀಪರವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ದೃಶ್ಯ ಮಾಧ್ಯಮದ ನಿರೂಪಕರುಗಳು ತಾವೇ ವಿಧಿಸಿಕೊಂಡಿರುವ ಸಾಮಾಜಿಕ ಬಹಿಷ್ಕಾರದ ವಿರುದ್ದ ಕಾನೂನು ಕೆಲಸ ಮಾಡಲಿಲ್ಲವೇಕೆ..?! ನಟ ದರ್ಶನ್ ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ಚಿತ್ರಗಳನ್ನ ಬೆಳೆಸಿಕೊಂಡಿದ್ದರು. ಇಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಕೂಡ ದೃಶ್ಯ ಮಾಧ್ಯಮಗಳಿಗೆ ಡೌನ್ ಆಗಿತ್ತು, ಹೀಗಾಗಿಯೇ ನಟ ದರ್ಶನ್ ಮೇಲಿನ ಆರೋಪಗಳನ್ನು ಗುರಿಮಾಡಿಕೊಂಡು ಅಪಾದಿತನಾಗಿಸಿರುವುದು ನ್ಯಾಯಾಂಗವನ್ನು ಅಣಕಿಸಿರುವುದು ತಮಗೆ ತಿಳಿಯಲ್ಪಡಿಸುತ್ತೇನೆ, ಯಾರು ತಪ್ಪು ಮಾಡಿದರು ಅದು ತಪ್ಪೇ ಅದಕ್ಕೆ ಕಾನೂನಿನಡಿ ಶಿಕ್ಷೆಗಳಿವೆ, ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಪೊಲೀಸರಿಗೆ ಖಾಸಗಿ ಟಿವಿ ನಿರೂಪಕರುಗಳ ಮಾರ್ಗದರ್ಶನ ಅಗತ್ಯವಿದಿಯಾ..?
ಈ ಘಟನೆಯ ಸುದ್ದಿಯನ್ನು ನಿರಂತರವಾಗಿ ಬಿತ್ತರಿಸುತ್ತಿರುವ ಅತಿರಂಜನೆಗಳಿಂದ, ಸಮಯದ ವ್ಯಾಪ್ತಿಯಿಂದ ನಟ ದರ್ಶನ್ ಕುಟುಂಬವು ತೇಜೋವಧೆಗೆ ಒಳಗಾಗಿದೆ, ಕನ್ನಡದ ಸಾಂಸ್ಕೃತಿಕ ಹೆಜ್ಜೆಗಳನ್ನು ಅಪಮಾನಿಸುವಂತೆ ಜಗತ್ತಿಗೆ ಬಿಂಬಿಸುತ್ತಿದ್ದರು, ದರ್ಶನ್ ಪುತ್ರನು ಕೂಡ ಈ ತೇಜೋವಧೆಯಿಂದ ವಿಚಲಿತನಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತೇಜೋವಧೆ ನಿಲ್ಲಿಸುವಂತೆ ಕೋರಿದ್ದು ಇದು ಮಕ್ಕಳ ಮನಸಿನ ಮೇಲಾದ ದಾಳಿಯೇ ಆಗಿದೆ ಎನ್ನುವುದನ್ನು ಮಕ್ಕಳ ಕಲ್ಯಾಣ ಇಲಾಖೆಯೂ ಯಾವ ಮಾತಿಲ್ಲದೆ ಮೂಲೆಗೆ ಮುದುಡಿಕೊಂಡಿತ್ತು.
ಅಲ್ಲದೆ ಸುದ್ದಿ ಬಿತ್ತರಿಸುವ ವ್ಯಕ್ತಿ ಗುರಿಯಿಂದ ಖಾಸಗಿ ಟಿವಿ ನ್ಯೂಸ್ ನಿರೂಪಕರು ಹಾಗೂ ನಟ ದರ್ಶನ್ ಬೆಂಬಲಿತ ಕನ್ನಡಿಗರಿಂದ ಬಹುದೊಡ್ಡ ಕದನವೇ ಇಂದಿಗೂ ಏರ್ಪಟ್ಟಿದೆ, ಮೇಲಾಗಿ ಈ ನಿರೂಪಕರಗಳ ಬಹು ವಿರೋಧಿ ವರ್ತನೆಯಿಂದ ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾಗೂ ಪತ್ರಿಕಾ ಹಾದಿಗಳ ಮೌಲ್ಯಕ್ಕೆ ಪೆಟ್ಟು ಬಿದ್ದಂತಾಗಿದೆ, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಟ್ರೋಲ್‌ಗಳು ಸಾರ್ವಜನಿಕ ಅಭಿಪ್ರಾಯಗಳು ಕಾರಣವಾಗಿದೆ.











