I ಮಧು ಬಂಗಾರಪ್ಪನವರ ಹೇಳಿಕೆ ತಿರುಚಿದ I ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಮನವಿ I
ಶಿವಮೊಗ್ಗ : ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಸಿಗಂಧೂರು ದೇವಾಲಯದ ಹೇಳಿಕೆಯನ್ನು ತಿರುಚಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎಂ ರಮೇಶ್ ಶಂಕರಘಟ್ಟ ಇವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ಜಿ.ಡಿ. ಮಂಜುನಾಥ್, ಭಾಸ್ಕರ್,ಶರತ್ ಮರಿಯಪ್ಪ, ಕುರುವಳ್ಳಿ ನಾಗರಾಜ್, ನವಿಲೆ ಮಂಜುನಾಥ್, ಬಸವರಾಜ್ ಪ್ರವೀಣ್ ಲಕ್ಷ್ಮೀಕಾಂತ್, ಉಮೇಶ್, ಗಿತೇಂದ್ರ, ಶಿವು,ರಘು, ರಾಘವೇಂದ್ರ, ಮಹೇಂದ್ರ, ಮೋಹನ್,ವಿನೋದ್, ಲೋಕೇಶ್, ಅನಸೂಯಮ್ಮ, ಮಂಜುನಾಥ್,ಮತ್ತಿತರರು ಇದ್ದರು.