I ಬಿಎನ್ಎಸ್ ಆಕ್ಟ್ ಉಲ್ಲಂಘನೆ I ಪೊಲೀಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಕೆ I
ಶಿವಮೊಗ್ಗ : ರಾಷ್ಟ್ರೀಯ ಗುಪ್ತದಳವಾದ ರಾ ಇಂಟಲಿಜೆನ್ಸ್ ( Raw Agent ) ಕುರಿತಾಗಿ ಓರ್ವ ಜುಗಾರಿ ಅಮ್ಜದ್ನನ್ನು ಹೋಲಿಸಿರುವ ಸುದ್ದಿಗಳು ಅಪಹಾಸ್ಯ ಮಾಡುವಂತಾಗಿದ್ದು ಅಲ್ಲದೆ ಇದೊಂದು ವ್ಯಕ್ತಿಗತವಾದ ಜುಗಾರಿ, ಮಟ್ಕಾ ದಂಧೆಗಳ ಅಸಲಿ ಮಾಹಿತಿಯನ್ನು ಮುಚ್ಚಿ ಹಾಕುವ ಪ್ರಯತ್ನ ಇದಾಗಿದೆ
ಈ ಬೆಳವಣಿಗೆಯು ದೇಶದ ಗುಪ್ತದಳದ ಭದ್ರತಾ ಸಂಗತಿಯಲ್ಲಿ ಆತಂಕಕಾರಿಯಾಗಿದೆ, ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ವ್ಯಾಪ್ತಿಯಲ್ಲಿನ ಮಾರ್ನಾಮಿಬೈಲಿನಲ್ಲಿ ಅಕ್ಚೋಬರ್ ೦೨ ರಂದು ಹಲ್ಲೆಗೊಳಗಾಗಿ ಮೃತನಾದ ಜುಗಾರಿ ಅಮ್ಜದ್ ಕೊಲೆ ಕೇಸಿನಲ್ಲಿ ಕೆಲ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುದ್ರಿತವಾದ ಹೇಳಿಕೆಗಳು, ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ರವಿ ಪಾಟೀಲ್ರವರುಗಳ ಹೇಳಿಕೆಗಳ ಆಧಾರದಲ್ಲಿಯೇ ಪ್ರಕಟಿತವಾಗಿರುವುದಕ್ಕೆ ಈ ದೂರಿನ ದಿನಾಂಕದ ಇದುವರೆಗೂ ಯಾವುದೇ ತಕರಾರುಗಳಿಲ್ಲದೆ, ನಿಖರವಾದ ಸ್ಪಷ್ಟೀಕರಣಗಳಿಲ್ಲದೆ ಮೌನವಹಿಸಿರುವುದೇ ಇಂತಿವರುಗಳು ಹತನಾದ ಜುಗಾರಿ ಅಮ್ಜದ್ನನ್ನು ಉದ್ಯಮಿ, ಸ್ಕ್ರ್ಯಾಪ್ ಉದ್ಯಮಿ, ಶಿವಮೊಗ್ಗದ ಪೊಲೀಸರಿಗೆ ರಾ-ಏಜೆಂಟ್ ಎಂಬುವ ಅನುಮಾನಿತ ಹುದ್ದೆಗಳ ಹೆಸರುಗಳಿಗೆ ಕಾರಣವಾಗಿದೆ
ಹೀಗಾಗಿ ಇದನ್ನು ತನಿಖಿಸಬೇಕು ರಾ ಏಜೆಂಟ್ ಎನ್ನುವುದು ದೇಶದ ಪರಮೋಚ್ಚ ಗುಪ್ತದಳವಾಗಿದ್ದು ಈ ವ್ಯವಸ್ಥೆಯನ್ನು ಓರ್ವ ಜುಗಾರಿ ಪ್ರಕರಣಕ್ಕಾಗಿ ಬಳಸಿಕೊಂಡಿರುವುದು ಇಂತಿವರುಗಳ ಹೇಳಿಕೆಗಳು ಸಾಕ್ಷೀಕರಿಸುತ್ತಿರುವುದರಿಂದ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಪೂರ್ವ ಐಜಿಪಿ ವಲಯದಿಂದ ತನಿಖಾ ತಂಡವನ್ನು ರಚಿಸುವಂತೆ ಆದೇಶಿಸಬೇಕೆಂದು ದೂರು ಅರ್ಜಿ ಸಲ್ಲಿಕೆಯಾಗಿದೆ.
ಕಳೆದ ದಿನಾಂಕ ೦೭-೧೦-೨೦೨೫ ರಂದು ಸಂಜೆ ಶಿವಮೊಗ್ಗದ ಡಿವೈಎಸ್ಪಿ ಅವರ ಕಛೇರಿನಲ್ಲಿ ಅಡಿಷನಲ್ ಡಿಎಸ್ಪಿ ಅವರ ಸಮ್ಮುಖದಲ್ಲಿಯೇ ಶಿವಮೊಗ್ಗದ ಸ್ಕ್ರ್ಯಾಪ್ ಉದ್ಯಮಿಗಳನ್ನು ಕರೆದು ವಿಚಾರಣೆ ನಡೆಸಿದಾಗ ಪ್ರಾಥಮಿಕ ಹಂತದಲ್ಲಿಯೇ ಆತನೊಬ್ಬ ಜುಗಾರಿ ಆಗಿದ್ದು ಸ್ಕ್ರ್ಯಾಪ್ ಉದ್ಯಮದಲ್ಲಿರಲಿಲ್ಲ, ಹಾಗೂ ಸ್ಕ್ರ್ಯಾಪ್ ಉದ್ಯಮಿಗಳ ಅಸೋಸಿಯೇಷನ್ನಲ್ಲಿ ಸದಸ್ಯನೂ ಅಲ್ಲವಾಗಿದೆ ಎಂದು ಹೇಳಿರುವ ಕುರಿತಾಗಿ ಸ್ಪಷ್ಟನೆ ಪೊಲೀಸರಿಗೆ ಲಭಿಸಿದೆ, ಹೀಗಿದ್ದರೂ ಇಂತಹ ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಉದ್ಯಮಿ, ಸ್ಕ್ರ್ಯಾಪ್ ಉದ್ಯಮಿ, ಶಿವಮೊಗ್ಗದ ಪೊಲೀಸರಿಗೆ ರಾ ಏಜೆಂಟ್ ಎಂದು ತರಾತುರಿಯಲ್ಲಿ ಪ್ರಚುರತೆ ಮಾಡಿಸಲಾಗಿದೆ ಎನ್ನುವುದು ಆಚ್ಚರಿಯಾಗಿದೆ,
ಜುಗಾರಿ ಅಮ್ಜದ್, ಶಣ್ಣು, ಹಾಗೂ ನದೀಮ್ ಎಂಬುವ ಮೂವರುಗಳ ಪಾಲುದಾರಿಕೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಸಿ ( ಮಟ್ಕಾ ) ನಡೆಸಲಾಗುತ್ತಿದೆ, ಹಾಗೂ ಶಿವಮೊಗ್ಗದ ಬೈ ಪಾಸ್ನಲ್ಲಿರುವ ಎಸ್ಎಫ್ ಬ್ಯಾಟರಿ ಷಾಪ್ ಕಟ್ಟಡದಲ್ಲಿ ಕೇರಂ ಕ್ಲಬ್ ( ಜೂಜು ), ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆ ಬಸ್ಸ್ಟಾಪ್ ಮಾಂಡವಿ ಬಾರ್ ಕಟ್ಟಡದ ಮೇಲೆ ಪಾಲುದಾರಿಕೆಯಲ್ಲಿ ಇಸ್ಪೀಟ್ ಅಡ್ಡೆ ನಡೆಸಲಾಗುತ್ತಿದೆ, ಇದಕ್ಕೆಲ್ಲಾ ಕಿಂಗ್ಪಿನ್ ಜುಗಾರಿ ಅಮ್ಜದ್ ಮೇಲೆ ೨೦೨೩ ರಲ್ಲಿ ಡೌಟ್ ಡಕಾಯಿತಿ, ೨೦೨೪ ರಲ್ಲಿ ಗಡಿಪಾರು ಮಾಡಿರುವ ಅಸಲಿ ಸಂಗತಿಗಳಿದ್ದರೂ ಅದ್ಯಾಗೆ ಈ ವ್ಯಕ್ತಿ ಉದ್ಯಮಿ, ಸ್ಕ್ರ್ಯಾಪ್ ಉದ್ಯಮಿ, ಶಿವಮೊಗ್ಗದ ಪೊಲೀಸರಿಗೆ ರಾ ಏಜೆಂಟ್ ಆಗುತ್ತಾನೆ ಎನ್ನುವುದು ತಾವುಗಳೇ ಪರಿಶೀಲಿಸಬೇಕಾಗಿದೆ, ಅಥವಾ ಐಜಿಪಿ ವಲಯದಿಂದ ತನಿಖೆಯು ಮಾಡಿಸಬೇಕಾಗಿರುವ ಅತೀ ಜರೂರತ್ತಿದೆ ಎಂದು ದೂರು ಅರ್ಜಿಯಲ್ಲಿ ತಿಳಿಸಲಾಗಿದೆ,
ಆ ಹೊತ್ತಿನ ಭಾರತೀಯ ದಂಡ ಸಂಹಿತೆ ಹಾಗೂ ಈ ಹೊತ್ತಿನ ಭಾರತೀಯ ನಾಗರೀಕ ಸಂಹಿತೆಗಳ ನಿಯಮಗಳನ್ನು ಉಲ್ಲಂಘಿಸಿ ಸಮಾಜಬಾಹಿರ ಹಾಗೂ ಕಾನೂನು ಬಾಹಿರವಾಗಿ ಹಾಗೂ ಒಂದಕ್ಕಿಂತ ಹೆಚ್ಚು ಕೇಸುಗಳಿಗೆ ಅಂದರೆ ೫೦೦ ಕ್ಕೂ ಹೆಚ್ಚು ಪೊಲೀಸ್ ಮೊದಲ ವರ್ತಮಾನ ವರದಿಗಳಿಗೆ ಪಂಚನಾಮೆ ಹಾಗೂ ಮಹಜರ್ಗಳಿಗೆ ದಂಧೆ ನಡೆಸುತ್ತಿದ್ದ ಮೃತ ಅಮ್ಜದ್ನನ್ನು ಕರೆಯಿಸಿ ಸಹಿ ಹಾಕಿಸಿಕೊಂಡು ಪೊಲೀಸ್ ಕ್ಯಾಮೆರಗಳಿಗೆ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ ಎಂದರೆ ಇದು ಉದ್ದೇಶಪೂರಿತವಾಗಿರುವುದು ಈ ಹೇಳಿಕೆಗಳು, ಪ್ರಸ್ತುತ ಮಾಹಿತಿಗಳಿಂದ ಧೃಡಪಡುತ್ತದೆ,
ಈ ಅಂಶಗಳನ್ನು ಪರಿಗಣಿಸಿ ಅಧಿಕಾರ ದುರುಪಯೋಗದಡಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ರವಿ ಪಾಟೀಲ್ರವರುಗಳ ಮೇಲೆ ಭಾರತೀಯ ನಾಗರೀಕ ಸಂಹಿತೆಯಂತೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲು ಪತ್ರಕರ್ತ, ಲೇಖಕ ಗಾರಾ.ಶ್ರೀನಿವಾಸ್ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕೋರಿದ್ದಾರೆ.