I ಕರವೇ ಸ್ವಾಭಿಮಾನಿ ಬಣದಿಂದ ಕನ್ನಡ ರಾಜ್ಯೋತ್ಸವ ಆಚರಣೆ I ಮಕ್ಕಳಿಗೆ ಸಿಹಿ ಹಾಗೂ ಹಣ್ಣು ವಿತರಣೆ I
I ಕರವೇ ಸ್ವಾಭಿಮಾನಿ ಬಣದಿಂದ ಕನ್ನಡ ರಾಜ್ಯೋತ್ಸವ ಆಚರಣೆ I ಮಕ್ಕಳಿಗೆ ಸಿಹಿ ಹಾಗೂ ಹಣ್ಣು ವಿತರಣೆ I
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿರುವ ಶಾಶ್ವತ ಕನ್ನಡ ದ್ವಜ ಸ್ಥಂಭದ ಧ್ವಜಾರೋಹಣ ನೆರವೇರಿಸುವುದರ ಮುಖೇನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾನೂನು ಸಲಹೆಗಾರರಾದ ಅನಿಲ್ ಕುಮಾರ್ ಟಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಧ್ವಜಾರೋಹಣ ನೆರವೇರಿಸಿದರುನಂತರ ಸಾರ್ವಜನಿಕವಾಗಿ ಸಿಹಿ ವಿತರಿಸಲಾಯಿತು ಹಾಗೂ ವಿದ್ಯಾನಗರದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಹಣ್ಣು ಹಂಪಲುಗಳನ್ನು ರಾಜ್ಯೋತ್ಸವದ ಪ್ರಯುಕ್ತ ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ ಎಚ್ ಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಉಮೇಶ್ ಗದ್ದೆ ಮನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜನಾರ್ಧನ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ಜೈ ಕೃಷ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇಶವ ಜಿಲ್ಲಾ ಖಜಂಚಿ ಗಣೇಶ್ ನಗರಾಧ್ಯಕ್ಷರಾದ ಜೀವನ್ ಡಿ ನಾಗರಾಜ್ ಮಹಮ್ಮದ್ ಶಫಿ ಪ್ರವೀಣ್ ಕುಮಾರ್ ಪ್ರದೀಪ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಕವಿತಾ ಸಿ ಉಪಾಧ್ಯಕ್ಷರಾದ ಪದ್ಮ ಹಾಗೂ ಮಾಲತಿ ಪ್ರಧಾನ ಕಾರ್ಯದರ್ಶಿಯಾದ ಆರತಿ ತಿವಾರಿ ಮಹಿಳಾ ಘಟಕದ ಘಟಕದ ಪದಾಧಿಕಾರಿಗಳು ಜಿಲ್ಲಾ ಘಟಕದ ಪದಾಧಿಕಾರಿಗಳು ನಗರ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು,
