September 23, 2026

I ಹೆಚ್.ಸಿ ಯೋಗೇಶ್ ಅವರಿಂದ ವಿನೂತನ ಪಥ I ನೂರು ಜನ ರಕ್ತದಾನಿಗಳೊಂದಿಗೆ 75ನೇ ಭಾರಿಗೆ ರಕ್ತದಾನ I

0
IMG_20251101_161504_301

I ಹೆಚ್.ಸಿ ಯೋಗೇಶ್ ಅವರಿಂದ ವಿನೂತನ ಪಥ I ನೂರು ಜನ ರಕ್ತದಾನಿಗಳೊಂದಿಗೆ 75ನೇ ಭಾರಿಗೆ ರಕ್ತದಾನ I

ಶಿವಮೊಗ್ಗ :  ನೂರು ಜನ ರಕ್ತಧಾನಿಗಳೊಂದಿಗೆ 75 ನೆ ಬಾರಿ ರಕ್ತದಾನ ಮಾಡಿ. ಕೃತಜ್ಞತೆ ಸಲ್ಲಿಸಿದ ಹೆಚ್ ಸಿ ಯೋಗೇಶ್ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ಇಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು,

ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಗರದ ಸಾರ್ವಜನಿಕರು ಸದಾ ನಮ್ಮ ಜೊತೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇವತ್ತಿನ ರಕ್ತದಾನ ಶಿಬಿರವೇ ಸಾಕ್ಷಿ . ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ನಮ್ಮ ಕರೆಗೆ ಸ್ಪಂದಿಸಿ. ನೂರು ಜನರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾಗಿದ್ದಾರೆ ಎಂದು ನುಡಿದ ಅವರು ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಮನುಕುಲದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು,

ಇದೇ ಸಂದರ್ಭದಲ್ಲಿ ಎಲ್ಲಾ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆ ಗಳನ್ನು ನೀಡಿ . ಗೌರವಿಸಿದರು ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು

Leave a Reply

Your email address will not be published. Required fields are marked *

error: Content is protected !!