September 23, 2026

I ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತವನ್ನಾಗಿಸುವ I ಸಂಕಲ್ಪ ಮಾಡೋಣ I ಸಚಿವ ಮಧುಬಂಗಾರಪ್ಪ I

0
5fd1e359be6441beabc2a54f27ab2da7

I ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತವನ್ನಾಗಿಸುವ I ಸಂಕಲ್ಪ ಮಾಡೋಣ I ಸಚಿವ ಮಧುಬಂಗಾರಪ್ಪ I

ಸೊರಬ: ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತವನ್ನಾಗಿಸುವ ಸಂಕಲ್ಪ ಮಾಡೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ಕರೆ ನೀಡಿದರು.


ಸೊರಬ ತಾಲೂಕಿನ ಗಿಣಿವಾಲ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿಯಲ್ಲಿ ತಾಲೂಕಿನ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಕಾಲುಬಾಯಿ ರೋಗ ತಡೆಗಟ್ಟಲು ಎಲ್ಲಾ ರೈತ ಬಾಂದವರು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಆರ್ಥಿಕ ನಷ್ಟ ತಡೆಯುವಂತೆ ಮನವಿ ಮಾಡಿದರು.

ಲಸಿಕಾದಾರರು ನಿಮ್ಮ ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ರೈತರು ನಿರ್ಲಕ್ಷ್ಯವಹಿಸದೇ ಅವರಿಗೆ ಸಹಕರಿಸಿ ರೋಗ ಬಾರದಂತೆ ಜಾನುವಾರುಗಳನ್ನು ರಕ್ಷಿಸಿಸುವಂತೆ ಹೇಳಿದರು.
ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ ಕಾಯಿಲೆಯಾಗಿದೆ. ಹೀಗಾಗಿ ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಹೇಳಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್, ಪ್ರಸನ್ ಕುಮಾರ್ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಗಣಪತಿ ಹುಲ್ತಿಕೊಪ್ಪ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ .ಪಿ. ರುದ್ರಗೌಡ್ರು ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಮೇಶ ಶಂಕರಘಟ್ಟ ಹಾಪ್ ಕಾಮ್ಸ್ ನಿರ್ದೇಶಕರಾದ ಕೆ. ವಿ. ಗೌಡ್ರು, ರುದ್ರಗೌಡ ಪಾಟೀಲ್, ಬಗರ್ ಹುಕುಂ ಸಮಿತಿ ಅಧ್ಯಕ್ಷರಾದ ಶೇಖರ್ ಎಂ. ಡಿ. ಪ್ರಭಾಕರ್ ಚಿಕ್ಕಸವಿ ನಾಗರಾಜ್, ಪ್ರಕಾಶ್ ಎನ್.ಜಿ ನಾಗರಾಜ್, ಆರ್. ಮಂಜುನಾಥ್, ಸುರೇಶ್, ನಾಗಪ್ಪ ಮಾಸ್ಟ್ರು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳಾದ ಎನ್ ಆರ್ ಪ್ರದೀಪ್ ಕುಮಾರ್ ಡಾಕ್ಟರ್ ಹನುಮಂತ ರಾವ್ ಡಾಕ್ಟರ್ ಮನೋಜ್ ಎಚ್. ಕೆ. ಬಿ.ಎಸ್. ಪ್ರಕಾಶ್, ಎಸ್, ರಂಗಪ್ಪ ಜನಪ್ರತಿನಿಧಿಗಳು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!